ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’

Date: 23-02-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕದ ವಿಡಿಯೋ ಆರ್ಟ್ ಕಲಾವಿದ ವಿಲಿಯಂ ಬಿಲ್ ವಿಯೊಲಾವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ವಿಲಿಯಂ ಬಿಲ್ ವಿಯೊಲಾ (Bill Viola)
ಜನನ: 25 ಜನವರಿ, 1951
ಶಿಕ್ಷಣ: ಸಿರಾಕೂಸ್ ಯೂನಿವರ್ಸಿಟಿ, ನ್ಯೂಯಾರ್ಕ್, ಅಮೆರಿಕ
ವಾಸ: ನ್ಯೂಯಾರ್ಕ್
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ವೀಡಿಯೊ ಆರ್ಟ್

ಬಿಲ್ ವಿಯೋಲಾ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಬಿಲ್ ವಿಯೋಲಾ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಮೊದಲ ಬಾರಿಗೆ ವೀಡಿಯೊ ಕ್ಯಾಮರಾ ಕೈಗೆ ಬಂದದ್ದು 1970ರ ಹೊತ್ತಿಗೆ. ಆಗ ಕಪ್ಪು ಬಿಳುಪು ಚಿತ್ರಗಳನ್ನು ರೆಕಾರ್ಡ್ ಮಾಡಲು ಇದ್ದ ಒಂದು ಕೆಂಪು ಬಟನ್ ಒತ್ತಿದರೆ ಸಾಕಿತ್ತು. ಅಲ್ಲಿಂದ ಆರಂಭವಾದ ಪಯಣವೊಂದು ಕಣ್ಣಿಗೆ ಕಾಣದ-ಅನುಭವಕ್ಕೆ ಬಾರದ ಸಂಗತಿಗಳಿಗೆ ದೃಶ್ಯರೂಪ ಕೊಡುವ ಆಧುನಿಕ ಮಹಾಕಾವ್ಯವಾಗಿ ರೂಪುಗೊಂಡ ಪಯಣದ ಹಾದಿ ಅನನ್ಯ. ಹುಟ್ಟು, ಸಾವು, ಪ್ರೀತಿ.. ಹೀಗೆ ಭಾವನೆಗಳನ್ನು ಗೃಹಿಸುವ ಮೂಲಕವೇ ಒಳಗನ್ನು ಅರಿಯುವ ಪ್ರಯತ್ನಗಳಿವು. ಝೆನ್, ಸೂಫಿಯಿಸಂ, ಮಿಸ್ಟಿಸಿಸಂಗಳಿಂದ ದಟ್ಟವಾಗಿ ಪ್ರಭಾವಿತವಾಗಿರುವ ವಿಯೋಲಾ ಅವರ ವೀಡಿಯೊ ಕಲಾಕೃತಿಗಳು ತಂತ್ರಜ್ಞಾನ, ಶಬ್ದ, ಸಂಗೀತ ಎಲ್ಲವೂ ಮಿಳಿತವಾಗಿ ಬಹುಮಾಧ್ಯಮ ಅನುಭವವೊಂದನ್ನು ಕಟ್ಟಿಕೊಡುತ್ತವೆ. ತಂತ್ರಜ್ಞಾನ ಬೆಳೆದಂತೆ ಅದರೊಂದಿಗೆ ಒಂದು ಹೆಜ್ಜೆ ಮುಂದಕ್ಕೆ ವೀಡಿಯೊ ಕಲೆಯನ್ನು ಕೊಂಡೊಯ್ದದ್ದು ಅವರ ಹೆಚ್ಚುಗಾರಿಕೆ.

ತಮ್ಮ ಕ್ಯಾಮರಾ ಜಗತ್ತು ವಿಸ್ತರಿಸಿಕೊಂಡದ್ದನ್ನು ಅವರು ಹೀಗೆ ವಿವರಿಸುತ್ತಾರೆ : "It was a time of intense experimentation in all sorts of ways; technological and also in terms of looking at the self, and the video camera played into that. It was not just a matter of pointing it at something. It was about self-knowledge, and the camera could fracture the self. You realise there are two dimensions: what you see and what you feel, and that was a huge area to explore." (ದಿ ಗಾರ್ಡಿಯನ್ ಸಂದರ್ಶನ, ಮೇ, 2014).

ನ್ಯೂಯಾರ್ಕಿನಲ್ಲಿ ಜನಿಸಿದ ಬಿಲ್ ವಿಯೋಲಾ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತರು. ಬಹಳ ನಾಚಿಕೆ ಸ್ವಭಾವದ ಬಾಲಕ ಬಿಲ್‌ ಆರು ವರ್ಷ ವಯಸ್ಸಿದ್ದಾಗ ಒಮ್ಮೆ ಅಕಸ್ಮಾತ್ ಆಗಿ ದೋಣಿಯಿಂದ ನೀರಿಗೆ ಬಿದ್ದು ಬದುಕಿ ಉಳಿದಿದ್ದರು. ಆಗ, ಆದ ಅನುಭವ ಬಿಲ್‌ಗೆ ಬಲುದೊಡ್ಡ ಅನುಭವವಾಗಿ ಉಳಿದುಕೊಂಡಿತು ಮತ್ತು ಅವರ ವೀಡಿಯೊ ಕಲಾಕೃತಿಗಳಲ್ಲಿ ಇಂದಿಗೂ ನೀರು ಬಹಳ ಮುಖ್ಯ ವಸ್ತು. ಕಲೆಯಲ್ಲಿ ಆಸಕ್ತಿ ಇದ್ದುದರಿಂದಾಗಿ ಕಲಾ ಶಾಲೆಯಲ್ಲಿ ಕಲಿಯಲು ಹೋಗಬೇಕೆಂದಿದ್ದ ಬಿಲ್, ತಂದೆಯ ಒತ್ತಾಯದ ಕಾರಣ ಸಾಂಪ್ರದಾಯಿಕವಾದ ಲಿಬರಲ್ ಮಾನವಿಕಗಳ ಅಧ್ಯಯನಕ್ಕಾಗಿ ಸಿರಾಕೂಸ್ ವಿವಿಗೆ ಸೇರುತ್ತಾರೆ.

1969ರಲ್ಲಿ ಅವರು ಕಲಿಯುತ್ತಿದ್ದ ಹೈಸ್ಕೂಲಿಗೆ ದಾನಿಗಳೊಬ್ಬರು ಕೊಟ್ಟ ಕಪ್ಪು ಬಿಳುಪು ವೀಡಿಯೊ ಕ್ಯಾಮರಾ ಮೂಲಕ ವೀಡಿಯೊಗಳ ಬಗ್ಗೆ ಆಸಕ್ತಿ ತಳೆದ ಬಿಲ್‌ಗೆ ಸಿರಾಕೂಸ್ ವಿವಿಯ ಟೆಕ್ನಾಲಜಿ ಕುರಿತ ಆಸಕ್ತಿ ವರವಾಯಿತು. ಅಲ್ಲಿನ ಕಲಿಕೆಗಳ ಫಲಾವಾಗಿ 1972ರಲ್ಲಿ ಅವರ ಮೊದಲ ಕಲಾಕೃತಿ Tape I ಹೊರಬಂತು. ಮುಂದೆ 1974ರಿಂದ ಸುಮಾರು ಎರಡು ವರ್ಷ ಇಟಲಿಯಲ್ಲಿರುವ ಅವಕಾಶ ಅವರಿಗೆ ದೊರೆಯಿತು. ಈ ಅವಧಿಯಲ್ಲಿ ಪ್ರಮುಖ ಸಮಕಾಲೀನ ಕಲಾವಿದರಾದ ರಿಚರ್ಡ್ ಸೆರಾ, ನಾಮ್ ಜುನ್ ಪಾಕ್, ಬ್ರೂಸ್ ನೌಮನ್ ಮೊದಲಾದವರ ಒಡನಾಟ ಅವರಿಗೆ ದೊರೆಯಿತು. ಅವರಿಗೆ ಮೊದಲ ಪ್ರಮುಖ ಅವಕಾಶ ದೊರೆತದ್ದು 1987ರಲ್ಲಿ MoMaದಲ್ಲಿ ಪ್ರದರ್ಶನಾವಕಾಶ ಸಿಗುವ ಮೂಲಕ. ಆ ಬಳಿಕ ಅವರು ಜಗತ್ತಿನ ಎಲ್ಲ ಪ್ರಮುಖ ಗ್ಯಾಲರಿಗಳಲ್ಲಿ ತಮ್ಮ ವೀಡಿಯೊ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.

1977ರಲ್ಲಿ ಭೇಟಿ ಆದ ಆಸ್ಟ್ರೇಲಿಯಾದ ಲಾ ತ್ರೋಬ್ ವಿವಿಯ ಕಲಾವಿಭಾಗದ ನಿರ್ದೇಶಕಿ ಕಿರಾ ಪೆರೋವ್ ಅವರನ್ನು ಮುಂದೆ ಮದುವೆ ಆದ ಬಳಿಕ ಸ್ವಲ್ಪ ಕಾಲ ಅವರು ಜಪಾನಿನಲ್ಲಿ ನೆಲೆಸಿದ್ದರು. 1981ರಲ್ಲಿ ಅಲ್ಲಿಂದ ಹಿಂದಿರುಗಿದ ಬಳಿಕ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ದಂಪತಿ ಅಲ್ಲಿಂದ ಜಗತ್ತಿನಾದ್ಯಂತ ವೀಡಿಯೋ ಕಲಾಕೃತಿಗಳ ಪ್ರದರ್ಶನ, ಪ್ರಯೋಗಗಳಲ್ಲಿ ನಿರತರಾಗಿದ್ದಾರೆ.

ಬಿಲ್ ಅವರ ತಾಯಿಯ ಸಾವು ವಸ್ತುವಾಗಿರುವ Nantes Triptych (1992), Hatsu-Yume (First Dream) (1981), Heaven and Earth (1992), Eternal Return (2000), Witness (2001), Going Forth By Day (2002), Passions (2003), Martyrs (2014), ಬಿಲ್ ಅವರ ಪ್ರಮುಖ ಕಲಾಕೃತಿಗಳು.

ತಾಂತ್ರಿಕತೆಯ ದೃಷ್ಟಿಯಿಂದ ದೊಡ್ಡಗಾತ್ರದ, ಅಂದದ, ವೈಭವೋಪೇತವಾದ, ತನ್ನ ನಿಧಾನ ಚಲನೆಯಿಂದಾಗಿ ವೀಕ್ಷಕನನ್ನು ಪೂರ್ಣವಾಗಿ ಒಳಗೊಳ್ಳುವಂತೆ ಮಾಡುವ, ಕೆಲವೊಮ್ಮೆ “ಅತಿ” ಅನ್ನಿಸುವ ವಿಯೋಲಾ ಅವರ ವೀಡಿಯೊ ಕಲಾಕೃತಿಗಳು ಅದರ ಜೊತೆಗೇ ಕೌಟುಂಬಿಕ ಆಪ್ತತೆಯನ್ನೂ ಬಿಚ್ಚಿಟ್ಟ ಕಾರಣಕ್ಕಾಗಿ ಮತ್ತು ವೀಡಿಯೋ ತಂತ್ರಜ್ಞಾನದ ಬೆಳವಣಿಗೆಯ ಜೊತೆಜೊತೆಗೇ ಅದರ ಸಾಧ್ಯತೆಗಳನ್ನು ಅರಸುತ್ತಾ ಬಂದದ್ದರಿಂದಾಗಿ ಮುಂದಿನ ತಲೆಮಾರಿನ ವೀಡಿಯೊ ಕಲಾವಿದರಿಗೆ ತಮ್ಮ ಮಾಧ್ಯಮ ಕಲೆ ಹೌದು ಎಂದು ಸಮರ್ಥಿಸಿಕೊಳ್ಳುವ ಕಷ್ಟವನ್ನು ತಪ್ಪಿಸಿ, ಹೊಸ ಹೊಸ ಪ್ರಯೋಗಗಳಿಗೆ ನೇರವಾಗಿ ಒಡ್ಡಿಕೊಳ್ಳಲು ಪ್ರೇರಣೆಯಾಯಿತು ಎಂಬುದು ಅವರ ಹೆಚ್ಚುಗಾರಿಕೆ.

ಬಿಲ್ ವಿಯೋಲಾ ಕುರಿತ ಡಾಕ್ಯುಮೆಂಟರಿ ದಿ ರೋಡ್ ಟು ಸೈಂಟ್ ಪೌಲ್ಸ್:

BILL VIOLA - THE ROAD TO ST. PAUL'S | Documentary: Gerald Fox | ARTHAUS MUSIK from Arthaus Musik GmbH on Vimeo.

ಬರ್ಕಲೆ ವಿವಿಯಲ್ಲಿ ಬಿಲ್ ವಿಯೋಲಾ ಉಪನ್ಯಾಸ:


ಬಿಲ್ ವಿಯೋಲಾ ಅವರ Nantes Triptych (1992)-

ಬಿಲ್ ವಿಯೋಲಾ ಅವರ Heaven and Earth (1992)

ಬಿಲ್ ವಿಯೋಲಾ ಅವರ Eternal Return (2000),

ಬಿಲ್ ವಿಯೋಲಾ ಅವರ Going Forth By Day (2002)

ಬಿಲ್ ವಿಯೋಲಾ ಅವರ Martyrs (2014)

ಈ ಅಂಕಣದ ಹಿಂದಿನ ಬರೆಹಗಳು

ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್

ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...