ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ

Date: 09-08-2023

Location: ಬೆಂಗಳೂರು


ಕನ್ನಡ ವಾಕ್ಯಗಳಲ್ಲಿ ಬಹುಮುಕ್ಯವಾಗಿ ಕಾಣಿಸುವ ಒಪ್ಪಂದ ಎಂದರೆ ಕರ‍್ತ್ರು ಮತ್ತು ಕ್ರಿಯಾಪದಗಳ ನಡುವೆ ಕಾಣಿಸುವಂತದ್ದಾಗಿದೆ. ಅಂದರೆ, ಕನ್ನಡದಲ್ಲಿ ವಾಕ್ಯದ ಕರ‍್ತ್ರು ಪದ ಮತ್ತು ಕ್ರಿಯಾಪದ ಪರಸ್ಪರ ನೇರ ಸಂಬಂದವನ್ನು ಹೊಂದಿವೆ ಮತ್ತು ಕರ‍್ತ್ರುವಿನ ಗುಣಸ್ವಬಾವಗಳನ್ನು ಕ್ರಿಯಾಪದ ಹೊತ್ತುಕೊಳ್ಳುತ್ತದೆ,” ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ' ವಿಚಾರದ ಕುರಿತು ಬರೆದಿದ್ದಾರೆ.

ವಾಕ್ಯದಲ್ಲಿ ಮೂಲಬೂತವಾದ ಮೂರು ಗಟಕಗಳು ಇರುತ್ತವೆ. ಈ ಗಟಕಗಳ ನಡುವೆ ಪರಸ್ಪರ ಸಂಬಂದ ಇರುತ್ತದೆ. ಅದಲ್ಲದೆ ಪರಸ್ಪರ ಗಟಕಗಳ ನಡುವೆ ಒಪ್ಪಂದವೂ ಇರುತ್ತದೆ. ಈ ಒಪ್ಪಂದವು ಒಟ್ಟು ವಾಕ್ಯರಚನೆಯನ್ನು ನಿರ‍್ದರಿಸುತ್ತಿರುತ್ತದೆ ಮತ್ತು ವಾಕ್ಯರಚನೆಯ ಬಾಗವಾಗಿ ಇರುತ್ತದೆ. ಒಂದು ವಾಕ್ಯದಲ್ಲಿ ಪರಸ್ಪರ ಗಟಕಗಳ ನಡುವಿನ ನಂಟು ಹೊಂದಿರುವುದನ್ನು ಮತ್ತು ವಾಕ್ಯದಲ್ಲಿನ ಒಂದು ಗಟಕಕ್ಕೆ ತಕ್ಕ ಹಾಗೆ ಇನ್ನೊಂದು ಗಟಕವು ವ್ಯಾಕರಣ ರಚನೆಯನ್ನು ತೋರಿಸುವುದನ್ನು ಮತ್ತು ಬದಲಾಯಿಸುವುದನ್ನು ಒಪ್ಪಂದ ಎಂದು ಕರೆಯಲಾಗುವುದು. ಅಂದರೆ, ಒಂದು ವಾಕ್ಯದಲ್ಲಿ ಒಂದು ಗಟಕದ ಲಿಂಗ ಮತ್ತು ವಚನ ಇಂತ ನಿರ‍್ದಿಶ್ಟ ವ್ಯಾಕರಣದ ಲಕ್ಶಣಗಳನ್ನು ಆ ವಾಕ್ಯದ ಇನ್ನೊಂದು ಗಟಕವು ಹೊಂದಿರುತ್ತದೆ ಇಲ್ಲವೆ ಅದಕ್ಕೆ ತಕ್ಕಂತೆ ರಚನೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಒಪ್ಪಂದ ಎನ್ನುವುದು ಪ್ರತ್ಯಯಗಳು ಬಳಕೆಯಲ್ಲಿ ಇರುವ ಬಾಶೆಗಳಲ್ಲಿ ಕಂಡುಬರುತ್ತದೆ. ಇಲ್ಲಿ ಒಂದು ವಾಕ್ಯದಲ್ಲಿ ಇರುವ ಎರಡು ಗಟಕಗಳು ಪರಸ್ಪರ ರಾಚನಿಕ ಒಂದುತನವನ್ನು ತೋರಿಸುತ್ತಿರುತ್ತವೆ ಅಂದರೆ ಪರಸ್ಪರ ಒಪ್ಪಂದದಲ್ಲಿ ಇರುತ್ತವೆ. ಕನ್ನಡದಲ್ಲಿ ಪ್ರತ್ಯಯಗಳು ಬಳಕೆಯಲ್ಲಿದ್ದು ಕನ್ನಡ ವಾಕ್ಯ ರಚನೆಯಲ್ಲಿ ಈ ಬಗೆಯ ಒಪ್ಪಂದಗಳನ್ನು ಕಾಣಬಹುದು.

ಕನ್ನಡ ವಾಕ್ಯಗಳಲ್ಲಿ ಬಹುಮುಕ್ಯವಾಗಿ ಕಾಣಿಸುವ ಒಪ್ಪಂದ ಎಂದರೆ ಕರ‍್ತ್ರು ಮತ್ತು ಕ್ರಿಯಾಪದಗಳ ನಡುವೆ ಕಾಣಿಸುವಂತದ್ದಾಗಿದೆ. ಅಂದರೆ, ಕನ್ನಡದಲ್ಲಿ ವಾಕ್ಯದ ಕರ‍್ತ್ರು ಪದ ಮತ್ತು ಕ್ರಿಯಾಪದ ಪರಸ್ಪರ ನೇರ ಸಂಬಂದವನ್ನು ಹೊಂದಿವೆ ಮತ್ತು ಕರ‍್ತ್ರುವಿನ ಗುಣಸ್ವಬಾವಗಳನ್ನು ಕ್ರಿಯಾಪದ ಹೊತ್ತುಕೊಳ್ಳುತ್ತದೆ. ಕರ‍್ತ್ರುವಿನ ಲಿಂಗ, ವಚನ ಇಂತ ವ್ಯಾಕರಣಾತ್ಮಕ ಲಕ್ಶಣಗಳನ್ನು ಆ ವಾಕ್ಯದ ಕ್ರಿಯಾಪದ ಸಣ್ರೂಪದಲ್ಲಿ ಹೊತ್ತುಕೊಳ್ಳುತ್ತದೆ. ಇದನ್ನೆ ವ್ಯಾಕರಣದಲ್ಲಿ ಒಪ್ಪಂದ ಎಂದು ಕರೆಯುವುದು. ಕೆಳಗಿನ ವಾಕ್ಯವನ್ನು ಗಮನಿಸಿ,

ಅವಳು ಊರಿಗೆ ಹೋದಳು

ಇಲ್ಲಿ ‘ಅವಳು’ ಎಂಬುದು ವಾಕ್ಯದ ಕರ‍್ತ್ರು ಆಗಿದೆ. ಈ ನಾಮಪದವು ಸ್ತ್ರೀಲಿಂಗವಾಗಿದೆ ಮತ್ತು ಏಕವಚನವಾಗಿದೆ. ಈ ಎರಡೂ ಕರ‍್ತ್ರು ಗಟಕದ ಗುಣಗಳಾಗಿದ್ದು ಈ ಎರಡೂ ಗುಣಗಳನ್ನು ವಾಕ್ಯದ ಕೊನೆಯಲ್ಲಿ ಬಂದಿರುವ ಕ್ರಿಯಾಪದವು ಹೊತ್ತುಕೊಂಡಿರುವುದನ್ನು ಕಾಣಬಹುದು. ‘ಹೋದಳು’ ಎಂಬ ಕ್ರಿಯಾಪದದಲ್ಲಿ ಸ್ತ್ರೀಲಿಂಗವೂ ಇದೆ ಮತ್ತು ಏಕವಚನವೂ ಇದೆ. ಇದು ವಾಕ್ಯದ ಗುಣಸ್ವಬಾವವನ್ನು ಹೊತ್ತುಕೊಂಡಿದೆ ಎನ್ನುವುದನ್ನು ಸ್ಪಶ್ಟಪಡಿಸಿಕೊಳ್ಳುವುದಕ್ಕೆ ವಾಕ್ಯದ ಕರ‍್ತ್ರುವನ್ನು ಬದಲಿಸಿ ನೋಡಬಹುದು. ಮೇಲೆ ಕೊಟ್ಟಿರುವ ವಾಕ್ಯದಲ್ಲಿ ಕರ‍್ತ್ರುವನ್ನು ಬದಲಿಸಿ ಕೆಳಗೆ ಕೊಟ್ಟಿದೆ.

ಅವಳು ಊರಿಗೆ ಹೋದಳು
ಅವನು ಊರಿಗೆ ಹೋದನು

ಮೇಲೆ ‘ಅವಳು’ ಎಂಬ ಕರ‍್ತ್ರುವಿನ ಜಾಗದಲ್ಲಿ ‘ಅವನು’ ಎಂಬ ಇನ್ನೊಂದು ನಾಮಪದವನ್ನು ಹಾಕಿದೆ. ಇದು ಪುಲ್ಲಿಂಗ ಏಕವಚನವಾಗಿದೆ. ಈಗ ಇದ್ದಕಿದ್ದ ಹಾಗೆ ವಾಕ್ಯದ ಕ್ರಿಯಾಪದವೂ ತನ್ನ ಮೇಲೆ ಬಂದಿರುವ ಪ್ರತ್ಯಯಗಳನ್ನು ಬದಲಿಸಿಕೊಳ್ಳುತ್ತದೆ. ಅಂದರೆ, ಕರ‍್ತ್ರು ಪುಲ್ಲಿಂಗವಾಗಿರುವುದರಿಂದ ಕ್ರಿಯಾಪದವೂ ಪುಲ್ಲಿಂಗ ಪ್ರತ್ಯಯವನ್ನು ಪಡೆದುಕೊಳ್ಳುತ್ತದೆ. ಆದರೆ, ಈ ಬದಲಾವಣೆ ಮಾಡದೆ, ಅಂದರೆ ಕರ‍್ತ್ರುವಿನಲ್ಲಿ ಮಾತ್ರ ಬದಲಾವಣೆ ಮಾಡಿ ಕ್ರಿಯಾಪದದಲ್ಲಿ ಬದಲಾವಣೆ ಮಾಡಿದರೆ ಏನಾಗುತ್ತದೆ? ಈ ವಾಕ್ಯವನ್ನು ಗಮನಿಸಿ,

*ಅವನು ಊರಿಗೆ ಹೋದಳು

ಕನ್ನಡ ಮಾತಾಡುವ ಯಾರೂ ಈ ವಾಕ್ಯವನ್ನು ವ್ಯಾಕರಣಾತ್ಮಕ ವಾಕ್ಯ ಎಂದು ಒಪ್ಪಿಕೊಳ್ಳಲಾರರು. ಅಂದರೆ, ಇಲ್ಲಿ ಸ್ಪಶ್ಟವಾಗುವ ಅಂಶವೆಂದರೆ, ಕರ‍್ತ್ರುವಿನ ಲಿಂಗ ಮತ್ತು ವಚನಗಳನ್ನು ಕ್ರಿಯಾಪದ ಹೊತ್ತುಕೊಳ್ಳುತ್ತದೆ. ಅದರಂತೆಯೆ, ಕನ್ನಡದಲ್ಲಿ ಸಾದ್ಯವಿರುವ ಇತರ ಲಿಂಗ ಮತ್ತು ವಚನಗಳನ್ನು ಬದಲಿಸಿ ಇದೆ ವಾಕ್ಯವನ್ನು ಕೆಳಗೆ ಪಟ್ಟಿಸಿದೆ.

ಅವಳು ಊರಿಗೆ ಹೋದಳು
ಅವನು ಊರಿಗೆ ಹೋದನು
ಅದು ಊರಿಗೆ ಹೋಯಿತು
ಅವರು ಊರಿಗೆ ಹೋದರು
ಅವು ಊರಿಗೆ ಹೋದವು

ಕರ‍್ತ್ರುವಿನ ಲಿಂಗ-ವಚನಗಳು ಬದಲಾಗುತ್ತಿದ್ದಂತೆ ಕ್ರಿಯಾಪದದ ರೂಪವೂ ಬದಲಾಗುತ್ತಿರುವುದನ್ನು ಇಲ್ಲಿ ಸ್ಪಶ್ಟವಾಗಿ ಕಾಣಬಹುದು. ಈ ಮೇಲೆ ಹೇಳಿದಂತೆ ಮುಕ್ಯವಾಗಿ ಈ ಬಗೆಯ ಲಿಂಗ, ವಚನ ಇಂತ ವ್ಯಾಕರಣ ಲಕ್ಶಣಗಳಲ್ಲಿ ಪರಸ್ಪರ ಒಪ್ಪಂದದಲ್ಲಿ ಇರುವುದನ್ನು ಒಪ್ಪಂದ ಎಂದು ವ್ಯಾಕರಣದಲ್ಲಿ ಕರೆಯಲಾಗುತ್ತದೆ.

ಇಲ್ಲಿ ಪುರುಶ ಕೂಡ ಒಪ್ಪಂದದಲ್ಲಿ ಬರುವುದನ್ನು ಕಾಣಬಹುದು. ಕನ್ನಡದಲ್ಲಿ ಲಿಂಗ ಮತ್ತು ವಚನ ಪ್ರತ್ಯಯವು ಬರುವಾಗ ಪುರುಶಕ್ಕೆ ತಕ್ಕಂತೆ ಬದಲಾಗುತ್ತದೆ. ಕೆಳಗೆ ಬಿನ್ನ ಪುರುಶಗಳ ಬಳಕೆಗಳನ್ನು ಕೊಟ್ಟಿದೆ.

ನಾನು ಊರಿಗೆ ಹೋದೆನು
ನಾವು ಊರಿಗೆ ಹೋದೆವು
ನೀನು ಊರಿಗೆ ಹೋದೆ
ನೀವು ಊರಿಗೆ ಹೋದಿರಿ
ಅವಳು ಊರಿಗೆ ಹೋದಳು
ಅವನು ಊರಿಗೆ ಹೋದನು
ಅದು ಊರಿಗೆ ಹೋಯಿತು
ಅವರು ಊರಿಗೆ ಹೋದರು
ಅವು ಊರಿಗೆ ಹೋದವು

ಇಲ್ಲಿ ಪ್ರತಿ ವಾಕ್ಯವು ಬಿನ್ನ ಪುರುಶದಲ್ಲಿ ಬಿನ್ನ ಲಿಂಗ-ವಚನಗಳನ್ನು ಪಡೆದುಕೊಂಡು ಬಳಕೆಯಾಗಿದೆ. ಕರ‍್ತ್ರು ಬದಲಾಗುತ್ತಿದ್ದಂತೆ ಕ್ರಿಯಾಪದದ ಮೇಲೆ ಬರುವ ಈ ವ್ಯಾಕರಣ ಲಕ್ಶಣಗಳು ಅದಕ್ಕೆ ತಕ್ಕಂತೆ ಬದಲಾಗುತ್ತವೆ.

ಕೆಲವು ಬಾಶೆಗಳಲ್ಲಿ ವಿಬಕ್ತಿ ಪ್ರತ್ಯಯಗಳ ಬಳಕೆಯಲ್ಲಿ ಕೂಡ ಕೆಲವು ಬಗೆಯ ಒಪ್ಪಂದಗಳು ಕಂಡುಬರುತ್ತವೆ.

ಸಾಮಾನ್ಯವಾಗಿ ಈ ಒಪ್ಪಂದವು ಮುರಿಯುವುದಕ್ಕೆ ಅವಕಾಶ ಇರುವುದಿಲ್ಲ. ಇಲ್ಲವೆ, ಈ ಒಪ್ಪಂದವು ಇಲ್ಲದೆ ವಾಕ್ಯ ರಚನೆಯನ್ನು ಮಾಡಲು ಬರುವುದಿಲ್ಲ. ಈ ಒಪ್ಪಂದವನ್ನು ಬಹುತೇಕ ಮಕ್ಕಳಿಗೆ ಯಾರೂ ಹೇಳಿಕೊಡುವುದಿಲ್ಲ. ಬದಲಿಗೆ ಎಲ್ಲರೂ ಅವರವರ ಅಂತಶಕ್ತಿಯ ಸಹಾಯದಿಂದ ಈ ರಚನೆಯನ್ನು ಕಲಿಯುತ್ತಾರೆ. ಬಾಶೆಯ ಎಲ್ಲ ರಚನೆಗಳನ್ನೂ ಹೀಗೆಯೆ ಮಕ್ಕಳು ಕಲಿಯುವುದು.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...