ವಾಕ್ಯದ ಅನುಕ್ರಮ

Date: 17-07-2023

Location: ಬೆಂಗಳೂರು


''ಜಗತ್ತಿನ ಬಾಶೆಗಳಲ್ಲಿ ಇರುವ ವಾಕ್ಯರಚನೆಯನ್ನು ಗಮನಿಸಿ ಅವುಗಳನ್ನು ಜಟಿಲ ವಾಕ್ಯರಚನೆ ಬಾಶೆಗಳು ಮತ್ತು ಸಡಿಲ ವಾಕ್ಯರಚನೆ ಬಾಶೆಗಳು ಎಂದು ಸ್ತೂಲವಾದ ಎರಡು ಗುಂಪುಗಳಾಗಿ ಮಾಡುತ್ತಾರೆ. ಜಟಿಲ ವಾಕ್ಯರಚನೆ ಬಾಶೆಗಳು ಎಂದರೆ, ಆ ಬಾಶೆಯಲ್ಲಿ ವಾಕ್ಯರಚನೆ ಜಟಿಲವಾಗಿರುತ್ತದೆ,” ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ವಾಕ್ಯದ ಅನುಕ್ರಮ' ವಿಚಾರದ ಕುರಿತು ಬರೆದಿದ್ದಾರೆ.

ವಾಕ್ಯವೊಂದನ್ನು ಕಟ್ಟುವುದಕ್ಕೆ ವಿವಿದ ಗಟಕಗಳನ್ನು ಬಳಸುತ್ತೇವೆ, ಅಂದರೆ ವಿವಿದ ಪದಗಳನ್ನು ಬಳಸಿಕೊಂಡು ಅವುಗಳನ್ನು ಒಂದು ಅನುಕ್ರಮದಲ್ಲಿ ಹೊಂದಿಸಿ ವಾಕ್ಯವನ್ನು ಮಾಡುತ್ತೇವೆ. ಇಲ್ಲಿ ಪ್ರಶ್ನೆಯೆಂದರೆ ಯಾವ ಅನುಕ್ರಮ? ಯಾವುದು ಅನುಕ್ರಮ? ಯಾವ ಪದವನ್ನು ಮೊದಲು ತರಬೇಕು, ಯಾವುದು ಆನಂತರ, ಯಾವುದರ ನಂತರ ಯಾವುದು ಬರಬೇಕು ಎಂಬ ಮೊದಲಾದ ವಿಚಾರಗಳು ಮುಕ್ಯವಾಗುತ್ತವೆ. ಈಗಾಗಲೆ ನೋಡಿದಂತೆ ವಾಕ್ಯವೊಂದನ್ನು ಕಟ್ಟುವುದಕ್ಕೆ ಮೂರು ಮೂಲಬೂತವಾದ ಗಟಕಗಳು ಬೇಕು, ಕರ‍್ತ್ರು, ಕರ‍್ಮ ಮತ್ತು ಕ್ರಿಯೆ. ಹಾಗಾದರೆ, ಇವುಗಳನ್ನು ಯಾವ ಅನುಕ್ರಮದಲ್ಲಿ ಹೊಂದಿಸಿ ವಾಕ್ಯವನ್ನು ಕಟ್ಟಬಹುದು ಎಂಬುದನ್ನು ತುಸು ಗಮನಿಸೋಣ.

ಈಗ ವಾಕ್ಯದಲ್ಲಿ ಇರುವುದು ಮೂರು ಗಟಕಗಳು ಎಂದಾದರೆ ಈ ಮೂರು ಗಟಕಗಳನ್ನು ಬಳಸಿಕೊಂಡು ಎಶ್ಟು ಬಗೆಯ ಅನುಕ್ರಮಗಳನ್ನು ಮಾಡಲು ಸಾದ್ಯ ಎಂಬುದನ್ನು ಮೊದಲು ವಿಚಾರಿಸೋಣ. ಇದು ನಮಗೆ ಕನ್ನಡ ವಾಕ್ಯ ರಚನೆಯನ್ನು ಅರಿತುಕೊಳ್ಳುವುದಕ್ಕೆ ಹೆಚ್ಚು ಸಹಾಯ ಮಾಡುತ್ತದೆ. ಕರ‍್ತ್ರು, ಕರ‍್ಮ ಮತ್ತು ಕ್ರಿಯೆ ಇವುಗಳನ್ನು ಈ ಕೆಳಗಿನಂತೆ ಆರು ಬಗೆಯ ಅನುಕ್ರಮದಲ್ಲಿ ಹೊಂದಿಸಬಹುದು, ಗಮನಿಸಿ,

1. ಕರ‍್ತ್ರು ಕರ‍್ಮ ಕ್ರಿಯೆ
2. ಕರ‍್ತ್ರು ಕ್ರಿಯೆ ಕರ‍್ಮ
3. ಕರ‍್ಮ ಕರ‍್ತ್ರು ಕ್ರಿಯೆ
4. ಕರ‍್ಮ ಕ್ರಿಯೆ ಕರ‍್ತ್ರು
5. ಕ್ರಿಯೆ ಕರ‍್ತ್ರು ಕರ‍್ಮ
6. ಕ್ರಿಯೆ ಕರ‍್ಮ ಕರ‍್ತ್ರು

ಇವುಗಳಲ್ಲದೆ ಬೇರೆ ಅನುಕ್ರಮ ಸಾದ್ಯವಿಲ್ಲ. ಹಾಗಾದರೆ, ವಾಕ್ಯವೊಂದನ್ನು ಮಾಡುವುದಕ್ಕೆ ಈ ಆರು ಅನುಕ್ರಮಗಳನ್ನು ಬಳಸಿಕೊಳ್ಳಬಹುದು ಎಂದಾಯಿತು. ಜಗತ್ತಿನ ವಿವಿದ ಬಾಶೆಗಳು ಈ ವಿವಿದ ಅನುಕ್ರಮಗಳಲ್ಲಿ ಒಂದನ್ನು ಅನುಸರಿಸುತ್ತಿವೆ. ಆದರೆ, ಬಾಶೆಗಳು ಈ ಎಲ್ಲ ಅನುಕ್ರಮಗಳನ್ನು ಬಳಸುವುದಿಲ್ಲ. ಬದಲಿಗೆ ಇವುಗಳಲ್ಲಿ ಒಂದು ಅನುಕ್ರಮವನ್ನು ಬಳಸುತ್ತವೆ. ಇವುಗಳಲ್ಲಿ ಹೆಚ್ಚಿನ ಬಾಶೆಗಳಲ್ಲಿ ಕಂಡುಬರುವ ಅನುಕ್ರಮವೆಂದರೆ ಕರ‍್ತ್ರು ಮೊದಲಿಗೆ ಬರುವ ಅನುಕ್ರಮ. ಅಂದರೆ ಮೇಲಿನ ಪಟ್ಟಿಯಲ್ಲಿನ ಮೊದಲ ಎರಡು ಅನುಕ್ರಮಗಳು. ಈ ಮೊದಲ ಎರಡು ಅನುಕ್ರಮಗಳಲ್ಲಿ ಮೊದಲಿಗೆ ಕರ‍್ತ್ರು ಬಂದಿದೆಯಾದರೂ ಎರಡನೆ ಜಾಗದಲ್ಲಿ ಒಂದರಲ್ಲಿ ಕರ‍್ಮ ಇದ್ದರೆ ಇನ್ನೊಂದರಲ್ಲಿ ಕ್ರಿಯೆ ಇದೆ. ಕನ್ನಡ ಮತ್ತು ಇಂಗ್ಲೀಶಿನ ವಾಕ್ಯ ರಚನೆಯ ಅನುಕ್ರಮವನ್ನು ಅವಲೋಕಸಿದಾಗ ಕರ‍್ತ್ರು ಮೊದಲಿರುವ ಮೊದಲ ಮತ್ತು ಎರಡನೆ ಅನುಕ್ರಮಗಳನ್ನು ಈ ಎರಡು ಬಾಶೆಗಳು ಬಳಸುತ್ತಿರುವುದನ್ನು ಕಾಣಬಹುದು. ಕೆಳಗಿನ ವಾಕ್ಯಗಳನ್ನು ಗಮನಿಸಿ,

ಅವಳು ಕಚೇರಿಗೆ ಹೋಗುವಳು
ಕರ‍್ತ್ರು ಕರ‍್ಮ ಕ್ರಿಯೆ
ಶಿ ವಿಲ್ ಗೋ ಟು ದ ಆಪೀಸ್
ಕರ‍್ತ್ರು ಕ್ರಿಯೆ ಕರ‍್ಮ

ಹೀಗೆ ಜಗತ್ತಿನ ಹೆಚ್ಚಿನ ಬಾಶೆಗಳಲ್ಲಿ ಈ ಎರಡು ಅನುಕ್ರಮಗಳು ವಾಕ್ಯರಚನೆಯಲ್ಲಿ ಕಂಡುಬರುತ್ತವೆ. ಇನ್ನು ಕರ‍್ಮ ಮೊದಲಿಗೆ ಬರುವ ವಾಕ್ಯರಚನೆಗಳು ಕಡಿಮೆ ಬಾಶೆಗಳಲ್ಲಿ ಕಂಡುಬರುತ್ತವೆ. ಕ್ರಿಯೆ ಮೊದಲಿಗೆ ಬರುವ ವಾಕ್ಯರಚನೆ ಇನ್ನೂ ಕಡಿಮೆ ಬಾಶೆಗಳಲ್ಲಿ ಕಂಡುಬರುತ್ತವೆ.

ಜಗತ್ತಿನ ಬಾಶೆಗಳಲ್ಲಿ ಇರುವ ವಾಕ್ಯರಚನೆಯನ್ನು ಗಮನಿಸಿ ಅವುಗಳನ್ನು ಜಟಿಲ ವಾಕ್ಯರಚನೆ ಬಾಶೆಗಳು ಮತ್ತು ಸಡಿಲ ವಾಕ್ಯರಚನೆ ಬಾಶೆಗಳು ಎಂದು ಸ್ತೂಲವಾದ ಎರಡು ಗುಂಪುಗಳಾಗಿ ಮಾಡುತ್ತಾರೆ. ಜಟಿಲ ವಾಕ್ಯರಚನೆ ಬಾಶೆಗಳು ಎಂದರೆ, ಆ ಬಾಶೆಯಲ್ಲಿ ವಾಕ್ಯರಚನೆ ಜಟಿಲವಾಗಿರುತ್ತದೆ. ಅಂದರೆ, ವಾಕ್ಯದಲ್ಲಿ ಹೊಂದಿಸಿರುವ ಗಟಕಗಳನ್ನು ಹಿಂದುಮುಂದಾಗಿಸಿ ವಾಕ್ಯವನ್ನು ಮಾಡುವುದಕ್ಕೆ ಬರುವುದಿಲ್ಲ. ಆದರೆ, ಇದಕ್ಕೆದುರಾಗಿ ಸಡಿಲ ವಾಕ್ಯರಚನೆ ಬಾಶೆಗಳೆಂದರೆ ಆ ಬಾಶೆಯಲ್ಲಿ ವಾಕ್ಯರಚನೆ ಸಡಿಲವಾಗಿರುತ್ತದೆ. ಅಂದರೆ, ಆ ಬಾಶೆಯಲ್ಲಿ ವಾಕ್ಯದಲ್ಲಿರುವ ಗಟಕಗಳನ್ನು ಹಿಂದುಮುಂದು ಮಾಡಿ ಅರ‍್ತಪೂರ‍್ಣವಾದ ವಾಕ್ಯವನ್ನು ಮಾಡಬಹುದು. ಇಲ್ಲಿ ಮತ್ತೆ ನಾವು ಕನ್ನಡ ಮತ್ತು ಇಂಗ್ಲೀಶಿನ ವಾಕ್ಯವೊಂದನ್ನು ಮಾತುಕತೆಗೆ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಅದರಿಂದ ವಿಶಯ ಸ್ಪಶ್ಟವಾಗಬಹುದು. ಇಂಗ್ಲೀಶಿನಲ್ಲಿ ವಾಕ್ಯದ ಗಟಕಗಳನ್ನು ಹಿಂದುಮುಂದು ಮಾಡುವುದಕ್ಕೆ ಬರುವುದಿಲ್ಲ. ಕೆಳಗಿನ ಉದಾಹರಣೆ ಗಮನಿಸಿ,

ಶಿ ವಿಲ್ ಕಮ್ ಟು ದ ಆಪೀಸ್
ಕರ‍್ತ್ರು ಕ್ರಿಯೆ ಕರ‍್ಮ

ಈ ವಾಕ್ಯದ ಅನುಕ್ರಮವನ್ನು ಹಿಂದುಮುಂದಾಗಿಸಿದರೆ ಅರ‍್ತಪೂರ‍್ಣವಾದ ವಾಕ್ಯವನ್ನು ಮಾಡುವುದಕ್ಕೆ ಸಾದ್ಯವಿಲ್ಲ. ಅದಕ್ಕಾಗಿ ಇದನ್ನು ಜಟಿಲ ಅನುಕ್ರಮ ಎಂದು ಕರೆಯಲಾಗುವುದು.

ಇನ್ನು ಕನ್ನಡ ಬಾಶೆಯ ವಾಕ್ಯರಚನೆಯನ್ನು ಗಮನಿಸಬಹುದು. ಕನ್ನಡವು ಸಡಿಲ ವಾಕ್ಯರಚನೆಯನ್ನು ಹೊಂದಿರುವ ಬಾಶೆಯಾಗಿದೆ. ಕನ್ನಡದ ವಾಕ್ಯದಲ್ಲಿ ಇರುವ ಗಟಕಗಳನ್ನು ಹಿಂದುಮುಂದಾಗಿ ಮಾಡಿ ಅರ‍್ತಪೂರ‍್ಣವಾದ ವಾಕ್ಯವನ್ನು ಉಚ್ಚರಿಸಲು ಸಾದ್ಯ. ಕೆಳಗಿನ ವಾಕ್ಯವನ್ನು ವಿಬಿನ್ನ ಅನುಕ್ರಮದಲ್ಲಿ ತೋರಿಸಿದೆ, ಗಮನಿಸಿ

ಅವಳು ಕಚೇರಿಗೆ ಹೋದಳು
ಕರ‍್ತ್ರು ಕರ‍್ಮ ಕ್ರಿಯೆ
ಅವಳು ಹೋದಳು ಕಚೇರಿಗೆ
ಕರ‍್ತ್ರು ಕ್ರಿಯೆ ಕರ‍್ಮ
ಕಚೇರಿಗೆ ಅವಳು ಹೋದಳು
ಕರ‍್ಮ ಕರ‍್ತ್ರು ಕ್ರಿಯೆ
ಕಚೇರಿಗೆ ಹೋದಳು ಅವಳು
ಕರ‍್ಮ ಕ್ರಿಯೆ ಕರ‍್ತ್ರು
ಹೋದಳು ಅವಳು ಕಚೇರಿಗೆ
ಕ್ರಿಯೆ ಕರ‍್ತ್ರು ಕರ‍್ಮ
ಹೋದಳು ಕಚೇರಿಗೆ ಅವಳು
ಕ್ರಿಯೆ ಕರ‍್ಮ ಕರ‍್ತ್ರು

ಈ ಎಲ್ಲ ಬಗೆಯ ಅನುಕ್ರಮಗಳನ್ನು ಕನ್ನಡದಲ್ಲಿ ಮಾಡುವುದು ಸಾದ್ಯ. ಇವು ಅರ‍್ತಪೂರ‍್ಣವಾದ ರಚನೆಗಳಾಗಿವೆ. ಆದರೆ ಬಳಕೆಯಲ್ಲಿ ಈ ಎಲ್ಲ ಅನುಕ್ರಮಗಳನ್ನು ಸಾಮಾನ್ಯವಾಗಿ ಕಾಣುವುದಿಲ್ಲ, ಕಡಿಮೆ ಪ್ರಮಾಣದಲ್ಲಿ ಕೇಳಿಸುತ್ತವೆ.

ಮೊದಲ ಅನುಕ್ರಮ ಅತ್ಯಂತ ಸಹಜ. ಬಿನ್ನ ಅನುಕ್ರಮಗಳನ್ನು ಬಳಸುವುದಕ್ಕೆ ಬಾಶೆಯಲ್ಲಿ ಹಲವು ಕೆಲಸಗಳು, ಕಾರಣಗಳು ಇರಬಹುದು. ವಾಕ್ಯದ ವಿವಿದ ಗಟಕಗಳನ್ನು ವಿಶಯವಾಗಿಸುವ ಪ್ರಯತ್ನದಲ್ಲಿ ಮತ್ತು ಯಾವುದೊ ಒಂದು ನಿರ‍್ದಿಶ್ಟ ಗಟಕಕ್ಕೆ ಒತ್ತು ಕೊಡುವಾಗ ಇಂತಾ ರಚನೆಗಳನ್ನು ಕಾಣಬಹುದು.

ಈಗ ಒಂದು ಪ್ರಶ್ನೆ ಎದುರಾಗಬಹುದು. ಹೀಗೆ ಕನ್ನಡದಲ್ಲಿ ಮಾತ್ರ ವಿಬಿನ್ನ ಅನುಕ್ರಮಗಳನ್ನು ಬಳಸಲು ಸಾದ್ಯವಾಗುತ್ತದೆ ಮತ್ತು ಇಂಗ್ಲೀಶಿನಲ್ಲಿ ಇದು ಯಾಕೆ ಸಾದ್ಯವಾಗುವುದಿಲ್ಲ? ಇದಕ್ಕೆ ಮುಕ್ಯವಾದ ಕಾರಣವೆಂದರೆ ಕನ್ನಡ ವಾಕ್ಯರಚನೆಯ ಕೆಲವು ನಿಯಮಗಳು. ಮೊದಲನೆಯದಾಗಿ ಕನ್ನಡದಲ್ಲಿ ಪ್ರತ್ಯಯಗಳು ಬಳಕೆಯಲ್ಲಿವೆ. ಇವು ಸ್ವತಂತ್ರ ಆಕ್ರುತಿಮಾಗಳ ಅಂದರೆ ಪದಗಳ ಮೇಲೆ ಬಂದು ಅವುಗಳೊಂದಿಗೆ ಬೆರೆತು ಬಳಕೆಯಾಗುತ್ತವೆ. ಪ್ರತ್ಯಯಗಳು ಬೆರೆತ ರೂಪವು ಪದರೂಪವಾಗಿ ಬಳಕೆಯಾಗುತ್ತದೆ. ಹೀಗಾಗಿ ಪದಕ್ಕೆ ಪ್ರತ್ಯಯ ಸೇರಿದ ಗಟಕವೊಂದನ್ನು ಇಡಿಯಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಾಕಲು ಸಾದ್ಯವಾಗುತ್ತದೆ. ಆದರೆ ಇದು ಇಂಗ್ಲೀಶಿನಲ್ಲಿ ಸಾದ್ಯವಾಗುವುದಿಲ್ಲ. ಈ ರೀತಿಯ ಸಡಿಲವಾದ ಅನುಕ್ರಮ ಇರುವುದಕ್ಕೆ ಇನ್ನೊಂದು ಮುಕ್ಯವಾದ ಕಾರಣವಿದೆ. ಇಂಗ್ಲೀಶಿನಂತ ಕೆಲವು ಬಾಶೆಗಳಲ್ಲಿ ವಾಕ್ಯದಲ್ಲಿ ಪದಗಳು ಬಳಕೆಯಾಗಿರುವ ಜಾಗದ ಆದಾರದ ಮೇಲೆ ಅವುಗಳ ವ್ಯಾಕರಣಾತ್ಮಕ ಕೆಲಸವನ್ನು ತಿಳಿದುಕೊಳ್ಳಲಾಗುತ್ತದೆ. ಅಂದರೆ, ಪದದ ಮೊದಲಿಗೆ ಬಂದರೆ ಅದು ಕರ‍್ತ್ರು, ಕೊನೆಯಲ್ಲಿ ಬಂದರೆ ಅದು ಕರ‍್ಮ ಎಂದು. ಆದರೆ, ಕನ್ನಡದಲ್ಲಿ ಹೀಗಿಲ್ಲ. ಕನ್ನಡದಲ್ಲಿ ಪದಗಳಿಗೆ ಹತ್ತುವ ಪ್ರತ್ಯಯಗಳು ಪದಗಳ ವ್ಯಾಕರಣಾತ್ಮಕ ಕೆಲಸವನ್ನು ತಿಳಿಸುವುದರಿಂದ ಪದಗಳನ್ನು ಹಿಂದುಮುಂದು ಮಾಡಿದರೂ ಅವುಗಳ ವ್ಯಾಕರಣಾತ್ಮಕತೆ ಹಾಗೆಯೆ ಉಳಿಯುತ್ತದೆ. ಕೆಳಗೆ ಕನ್ನಡದ ಎರಡು ವಾಕ್ಯವನ್ನು ಕೊಟ್ಟಿದೆ ಗಮನಿಸಿ,

ಅವಳು ಅವನನ್ನು ಹೊಡೆದಳು
ಅವಳನ್ನು ಅವನು ಹೊಡೆದನು

ಮೇಲಿನ ವಾಕ್ಯಗಳಲ್ಲಿ ಮೊದಲನೆಯದರಲ್ಲಿ ವಾಕ್ಯದ ಮೊದಲಲ್ಲಿ ಇರುವ ‘ಅವಳು’ ಇದು ಕರ‍್ತ್ರು, ಇದು ವಾಕ್ಯದಲ್ಲಿರುವ ‘ಹೊಡೆಯುವ’ ಕೆಲಸವನ್ನು ಮಾಡುತ್ತಿದೆ. ಆದರೆ, ಎರಡನೆಯ ವಾಕ್ಯದಲ್ಲಿ ಮೊದಲಲ್ಲಿ ಇರುವ ‘ಅವಳು+-ಅನ್ನು’ ಗಟಕವು ಕರ‍್ಮವಾಗಿದೆ. ಬದಲಿಗೆ, ಆನಂತರ ಬಂದಿರುವ ‘ಅವನು’ ಇದು ಕರ‍್ತ್ರುವಾಗಿದೆ. ಯಾಕೆಂದರೆ, ವಾಕ್ಯದಲ್ಲಿರುವ ಕೆಲಸವನ್ನು ‘ಅವನು’ ಎನ್ನುವುದು ಮಾಡುತ್ತಿದೆ. ಇದು ನಮಗೆ ಪದಗಳ ಮೇಲೆ ಬಂದಿರುವ ಪ್ರತ್ಯಯಗಳ ಸಹಾಯದಿಂದ ತಿಳಿಯುತ್ತದೆ. ಇಂಗ್ಲೀಶಿನಲ್ಲಿ ಹೀಗೆ ಪ್ರತ್ಯಯಗಳು ಪದಗಳಿಗೆ ಅಂಟಿಕೊಳ್ಳುವುದಿಲ್ಲವಾದ್ದರಿಂದ ಹೀಗೆ ಅರ‍್ತ ಮಾಡಿಕೊಳ್ಳಲು ಸಾದ್ಯವಾಗುವುದಿಲ್ಲ. ಅಲ್ಲಿ, ವಾಕ್ಯದಲ್ಲಿ ಪದ ಬಳಕೆಯಾಗಿರುವ ಜಾಗವೆ ಅದನ್ನು ನಿರ‍್ದರಿಸುತ್ತದೆ. ಕೆಳಗಿನ ವಾಕ್ಯಗಳನ್ನು ಗಮನಿಸಿ

ಶಿ ಹಿಟ್ಸ್ ಹಿಮ್ ಹಿ ಹಿಟ್ಸ್ ಹರ್

ಇವೆರಡರಲ್ಲಿಯೂ ವಾಕ್ಯದಲ್ಲಿ ಮೊದಲ ಸ್ತಾನದಲ್ಲಿ ಬಂದಿರುವ ಗಟಕಗಳು ಕರ‍್ತ್ರುವಾಗಿವೆ. ಅವುಗಳ ಸ್ತಾನಪಲ್ಲಟವಾಗುತ್ತಿದ್ದಂತೆ ಅವು ಕರ‍್ಮವಾಗಿಬಿಡುತ್ತವೆ.

ಇದರಿಂದಾಗಿ ಕನ್ನಡವು ಸಡಿಲವಾದ ವಾಕ್ಯರಚನೆಯ ಅನುಕ್ರಮವನ್ನು ಹೊಂದಿರುವ ಬಾಶೆಯಾಗಿ ಮತ್ತು ಇಂಗ್ಲೀಶು ಜಟಿಲವಾದ ವಾಕ್ಯ ಅನುಕ್ರಮವನ್ನು ಹೊಂದಿರುವ ಬಾಶೆಯಾಗಿ ಕಾಣಿಸುತ್ತವೆ.

ಇಂತಾ ಬಿನ್ನ ರಚನೆಗಳು ಯಾವುದೆ ಬಾಶೆಗೆ ಹೆಚ್ಚುಗಾರಿಕೆಯನ್ನೊ ಕಡಿಮೆತನವನ್ನೊ ತಂದುಕೊಡುವುದಿಲ್ಲ, ಬದಲಿಗೆ ಅವು ಬಿನ್ನ ರಚನೆಗಳು ಮಾತ್ರ ಆಗಿರುತ್ತವೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...