Date: 25-03-2023
Location: ಬೆಂಗಳೂರು
''ಸಾಮಾನ್ಯವಾಗಿ ಇವುಗಳನ್ನು ದೂರ ಎಂಬ ಪರಿಕಲ್ಪನೆಯ ಮೇಲೆ ಕನ್ನಡದಲ್ಲಿ, ದ್ರಾವಿಡದಲ್ಲಿ ರೂಪಿಸಿಕೊಂಡಿದೆ. ಸಮೀಪ ತೋರುಗ ಎಂದರೆ ಸಮೀಪ ಇರುವಂತದ್ದು, ದೂರ ತೋರುಗ ಎಂದರೆ ದೂರ ಇರುವಂತದ್ದು. ಈ ಮತ್ತು ಆ ಎಂಬ ರೂಪಗಳ ಬಳಕೆಯಲ್ಲಿ ಇದು ಸ್ಪಶ್ಟವಾಗುತ್ತದೆ,” ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ತೋರುಗವೆಂಬ ಮಾಯಕ' ಎಂಬ ವಿಚಾರಗಳ ಕುರಿತು ಬರೆದಿದ್ದಾರೆ.
ಪಾರಂಪರಿಕ ವ್ಯಾಕರಣಗಳಲ್ಲಿ ಸಾಮಾನ್ಯವಾಗಿ ದರ‍್ಶಕ ಸರ‍್ವನಾಮಗಳು ಎಂದು ವಿವರಿಸಲಾಗಿರುವ ಒಂದು ಸಣ್ಣ ಆಕ್ರುತಿಮಾ ಗುಂಪು ಬಾಶೆಯಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿರುತ್ತದೆ. ಇದನ್ನು ‘ಅದು’, ‘ಇದು’ ಎಂಬ ಮೊದಲಾದ ರಚನೆಗಳಲ್ಲಿ ಕಾಣಬಹುದು. ಸರ‍್ವನಾಮ ಎಂಬ ತುಂಬಾ ಚಿಕ್ಕದಾದ ಆದರೆ ಬಹು ಸಂಕೀರ‍್ಣವಾದ ಗುಂಪೊಂದರಲ್ಲಿ ಇದನ್ನು ವಿವರಿಸಲಾಗಿದೆ.
ಮೂಲಬೂತವಾಗಿ ತೋರಿಸುವ ಕೆಲಸವನ್ನು ಮಾಡುವ ಈ ಗಟಕ ಅತ್ಯಂತ ಚಿಕ್ಕದು. ಜಗತ್ತಿನ ಹೆಚ್ಚಿನ ಬಾಶೆಗಳಲ್ಲಿ ಎರಡು ಇಲ್ಲವೆ ಮೂರು ತೋರುಗ ಪದಗಳು ಇವೆ. ಆದರೆ ಕೆಲವು ಬಾಶೆಗಳಲ್ಲಿ ಎಂಟತ್ತು ವಿಬಿನ್ನ ಬಗೆಯ ತೋರುಗಗಳೂ ಇರಬಹುದು. ಈ ಗಟಕ ಮನುಶ್ಯರಲ್ಲಿ ಬಾಶೆ ಬೆಳೆಯುವ ಹೊತ್ತಿಗೆ ಮೊದಮೊದಲು ಬೆಳೆದಿರುವ ರಚನೆಗಳಲ್ಲಿ ಒಂದು. ಇಲ್ಲಿ - ಅಲ್ಲಿ ಎಂಬ ಜಾಗದ ಪರಿಕಲ್ಪನೆಯನ್ನು ಇದು ತೋರಿಸುತ್ತದೆ. ಮನುಶ್ಯಪ್ರಾಣಿಗೆ ಜಾಗದ ಪರಿಕಲ್ಪನೆ ಬೆಳೆದ ನಂತರ ಬಾಶೆಯ ಬೆಳವಣಿಗೆ ಹೇಗೆ ತಿರುವುಗಳನ್ನು ಪಡೆದುಕೊಳ್ಳುತ್ತ ಬಂದಿರಬೇಕು ಎಂಬುದನ್ನು ಅರಿತುಕೊಳ್ಳುವುದಕ್ಕೆ ಇವು ಸಹಾಯ ಮಾಡಬಲ್ಲವು.
ಸಾಮಾನ್ಯವಾಗಿ ಇವುಗಳನ್ನು ದೂರ ಎಂಬ ಪರಿಕಲ್ಪನೆಯ ಮೇಲೆ ಕನ್ನಡದಲ್ಲಿ, ದ್ರಾವಿಡದಲ್ಲಿ ರೂಪಿಸಿಕೊಂಡಿದೆ. ಸಮೀಪ ತೋರುಗ ಎಂದರೆ ಸಮೀಪ ಇರುವಂತದ್ದು, ದೂರ ತೋರುಗ ಎಂದರೆ ದೂರ ಇರುವಂತದ್ದು. ಈ ಮತ್ತು ಆ ಎಂಬ ರೂಪಗಳ ಬಳಕೆಯಲ್ಲಿ ಇದು ಸ್ಪಶ್ಟವಾಗುತ್ತದೆ. ಇವುಗಳೊಟ್ಟಿಗೆ ದೂರವೂ ಸಮೀಪವೂ ಅಲ್ಲದ ನಡುವಿನ ಸ್ತಿತಿಯನ್ನು, ಅಂತರವನ್ನು ಹೇಳುವ ಇನ್ನೊಂದು ನಡುತೋರುಗ ಹಳಗನ್ನಡದಲ್ಲಿ ಇದ್ದಿತು. ಇಲ್ಲಿ ಒಂದು ಪ್ರಶ್ನೆ ಬರುತ್ತದೆ. ದೂರ ಎಂದರೆ ಏನು? ಯಾವುದನ್ನು ದೂರ ಎನ್ನಬಹುದು? ಯಾವುದನ್ನು ಸಮೀಪ ಎನ್ನಬಹುದು? ಅದಕ್ಕೆ ಏನು ಆದಾರ? ಕಲಬುರಗಿಯಲ್ಲಿ ಇರುವ ಒಬ್ಬರಿಗೆ ಕಲಬುರಗಿಯ ಪಕ್ಕದ ಕಡಗಂಚಿ ಸಮೀಪ ಆಗಬಹುದು, ಇನ್ನು ಕೆಲವರಿಗೆ ಬಳ್ಳಾರಿ ಸಮೀಪವಾಗಬಹುದು, ಮತ್ತೂ ಕೆಲವರಿಗೆ ಬೆಂಗಳೂರು ಸಮೀಪವಾಗಬಹುದು. ದೆಹಲಿಗೆ ಹೋಲಿಸಿ ಮಾತಾಡುವವರಿಗೆ ಬೆಂಗಳೂರು ಸಮೀಪವೆ ಅಲ್ಲವೆ? ಹೀಗೆ ಅಂತರ ಎಂಬುದು ಬವುತಿಕ ಅಂತರ ಇಲ್ಲವೆ ಬವುತಿಕ ದೂರ ಅಲ್ಲ. ಬದಲಿಗೆ ಅದು ಮಾನಸಿಕ ದೂರ. ಎಶ್ಟೊ ಬಾರಿ ಎದುರಿಗೆ ಕೂತಿರುವ ಇಬ್ಬರಲ್ಲಿ ಒಬ್ಬರಿಗೆ ‘ಇವಳು’ ಎಂದು ಇನ್ನೊಬ್ಬರಿಗೆ ‘ಅವಳು’ ಎಂದು ಕರೆಯುವುದು ಕಾಣಿಸುತ್ತದೆ. ಇಬ್ಬರೂ ಮಾತಾಡುವವರಿಂದ ಒಂದೆ ಅಂತರದಲ್ಲಿ ಇದ್ದಾಗಲೂ ಈ ರೀತಿಯ ಬಳಕೆ ಸಹಜ. ಇದಕ್ಕೆ ಮುಕ್ಯ ಕಾರಣ ಮಾತಾಡುವ ಪರಿಸರದಲ್ಲಿ, ಆ ನಿರ‍್ದಿಶ್ಟ ಮಾತಿನ ವಲಯದಲ್ಲಿ ಪರಿಗಣಿಸುವ ದೂರ.
ಇಲ್ಲಿ ದೂರ ಎಂದರೆ ಬವುತಿಕ ನೆಲೆಯಲ್ಲಿ ನಿರ‍್ದಿಶ್ಟ ನೆಲೆಯಿಂದ ಇನ್ನೊಂದು ನಿರ‍್ದಿಶ್ಟ ಬವುತಿಕ ನೆಲೆಯವರೆಗಿನ ಅಂತರ ಎಂದು ಅರ‍್ತವಾಗುತ್ತದೆ. ಆದರೆ, ಹೀಗೆ ದೂರದ ಅಂತರವನ್ನು ಮಾತ್ರ ಇದರಲ್ಲಿ ಪರಿಗ್ರಹಿಸಿಕೊಳ್ಳಬೇಕಿಲ್ಲ. ಏಕೆಂದರೆ, ಈ ರಚನೆ ಹಲವು ಬಾಶೆಗಳಲ್ಲಿ ಬಹು ಸಂಕೀರ‍್ಣವಾಗಿದೆ. ಕನ್ನಡದಲ್ಲಿಯೆ ಇಂದು ಎರಡು ತೋರುಗಗಳ ಬಳಕೆ ಇದ್ದರೂ ಬಹುಹಿಂದೆ ಕನ್ನಡದಲ್ಲಿ ಮೂರು ತೋರುಗಗಳು ಇದ್ದವು. ದೂರವನ್ನು ಹೇಳುವ ಆ, ಅದು, ಸಮೀಪವನ್ನು ಹೇಳುವ ಈ, ಇದು ಮತ್ತು ಇವುಗಳ ಜೊತೆಗೆ ದೂರವೂ ಸಮೀಪವೂ ಅಲ್ಲದ ನಡುವನ್ನು, ನಡುವಿನ ಅಂತರವನ್ನು ಹೇಳುವುದಕ್ಕೆ ಊ, ಉದು ಇವು ಬಳಕೆಯಲ್ಲಿದ್ದವು. ಜಗತ್ತಿನ ಹೆಚ್ಚಿನ ಸಂಕೆಯ ಬಾಶೆಗಳಲ್ಲಿ ಎರಡು ತೋರುಗ ಪದಗಳು ಇದ್ದರೆ, ಕೆಲವು ಬಾಶೆಗಳಲ್ಲಿ ಮೂರು ಅಂತರಗಳನ್ನು ಹೇಳುವುದಕ್ಕೆ ತೋರುಗ ಪದಗಳು ಇವೆ. ಇನ್ನು ಕೆಲವು ಬಾಶೆಗಳಲ್ಲಿ ನಾಲ್ಕು ಮತ್ತು ಅಯ್ದು ಅಂತರಗಳನ್ನು ಹೇಳುವುದಕ್ಕೆ ತೋರುಗಗಳು ಇವೆ.
ಈ ಅಂತರಗಳಲ್ಲಿ ನೆಲೆ ಎಂಬುದು ಮುಕ್ಯ ಗ್ರಹಿಕೆಯಾಗಿ ಇರುತ್ತದೆ. ಅಂದರೆ, ಮಾತಾಡುತ್ತಿರುವ ವ್ಯಕ್ತಿಯ ನೆಲೆ ಮತ್ತು ಮಾತುಗ ಉಲ್ಲೇಕಿಸುತ್ತಿರುವ ಜಾಗ ಈ ಎರಡು ನೆಲೆಗಳು ಮುಕ್ಯವಾಗುತ್ತವೆ. ಮಾತುಗರ ನೆಲೆಗೆ ಹತ್ತಿರ, ದೂರ, ಇಲ್ಲವೆ ತುಸು ದೂರ ಎಂಬುದು ಪರಿಕಲ್ಪನೆ. ಆದರೆ, ಕೆಲವು ಬಾಶೆಗಳಲ್ಲಿ ಇದು ಆಡುಗರಿಗೆ ಹತ್ತಿರ-ದೂರ ಮತ್ತು ಕೇಳುಗರಿಗೆ ಹತ್ತಿರ-ದೂರ ಎಂಬುದೂ ಆಗಿರಬಹುದು. ಇನ್ನು ಕೆಲವು ಬಾಶೆಗಳಲ್ಲಿ ಕಾಣುವ ಮತ್ತು ಕಾಣದ ಎಂಬ ಅಂತರವೂ ಆಗಿರಬಹುದು. ಕನ್ನಡದ ಹಾಗೆ ದೂರದ ಅಂತರವನ್ನು ಹೇಳುವುದಕ್ಕೆ ತೋರುಗ ಪದಗಳು ಹೆಚ್ಚಿನ ಬಾಶೆಗಳಲ್ಲಿ ಇವೆಯಾದರೂ ಕೆಲವು ಬಾಶೆಗಳಲ್ಲಿ ಎತ್ತರವನ್ನು ಹೇಳುವುದಕ್ಕೆ ತೋರುಗ ಪದಗಳು ಇವೆ. ಕನ್ನಡದಲ್ಲಿ ಎತ್ತರವನ್ನು ಹೇಳುವುದಕ್ಕೆ ‘ಮೇಲೆ’ ಎಂಬ ಒಂದೆ ಪದ ಇದೆ. ಆದರೆ, ಎತ್ತರದ ಅಂತರವನ್ನು ಹೇಳುವುದಕ್ಕೆ ಬಿನ್ನ ಪದಗಳಿಲ್ಲ. ಆದರೆ, ಕೆಲವು ಬಾಶೆಗಳಲ್ಲಿ ಪದಗಳಿವೆ. ಹಿಮಾಲಯದಂತ ಎತ್ತರದ ಗುಡ್ಡಸಾಲಿನಲ್ಲಿ ಬದುಕಿರುವ ಕಾಸಿಯಂತ ಬಾಶೆಗಳಲ್ಲಿ ಇದನ್ನು ಕಾಣಬಹುದು.
ಇರಲಿ, ನಾವೀಗ ಕನ್ನಡದ ತೋರುಗ ಪದಗಳ ರಚನೆಯನ್ನು ಗಮನಿಸೋಣ.
ಇಂದಿನ ಕನ್ನಡದಾಗ ಇಲ್ಲಿ, ಅಲ್ಲಿ ಎಂಬ ಎರಡು ತೋರುಗ ರೂಪಗಳು ಇವೆ. ಇವುಗಳ ಮೂಲರೂಪ *-ಇ/*-ಈ ಮತ್ತು *-ಅ/*-ಆ ಎಂಬುವಾಗಿವೆ. ಹಳಗನ್ನಡದಾಗ ಈ ಮೇಲೆ ಹೇಳಿದಂತೆ ಉಲ್ಲಿ ಎಂಬ ಇನ್ನೊಂದು ರೂಪವೂ ಇದ್ದಿತು. ಇದು ಆನಂತರ ಬಿದ್ದುಹೋಗಿದೆ. ಇದರ ಮೂಲ ರೂಪ *-ಉ/*-ಊ. ಅಂದರೆ ಕನ್ನಡದಲ್ಲಿ ಮೊದಲು ಮೂರು ತೋರುಗ ಪದಗಳು ಇದ್ದವು. ಇವುಗಳನ್ನು ಕ್ರಮವಾಗಿ ಸಮೀಪ ತೋರುಗ, ನಡುತೋರುಗ ಮತ್ತು ದೂರ ತೋರುಗ ಎಂದು ಕರೆಯಲಾಗುತ್ತದೆ.
ಆ ಮನೆ ಈ ಮನೆ
ಅದು ನನ್ನ ಮನೆ ಇದು ನನ್ನ ಮನೆ
ಈ ತೋರುಗಪದಗಳು ವಿವಿದ ವ್ಯಾಕರಣ ರೂಪಗಳ ಬೆಳವಣಿಗೆಗೆ ಮೂಲವಾಗಿವೆ. ಇವುಗಳನ್ನು ಇಲ್ಲಿ ತೋರಿಸಲಾಗಿದೆ.
ಸರ‍್ವನಾಮ ರೂಪಗಳು: ಕನ್ನಡದ ಪ್ರತಮ ಪುರುಶ ಸರ‍್ವನಾಮಗಳಲ್ಲಿ ಎರಡು ವಚನಗಳು ಮತ್ತು ಮೂರು ಲಿಂಗಗಳು ಇದ್ದು ಅವುಗಳಿಗೆ ಒಟ್ಟು ಅಯ್ದು ರೂಪಗಳು ಇವೆ. ಪ್ರತಮ ಪುರುಶದಲ್ಲಿ ಮಾತ್ರ ಲಿಂಗ-ವಚನ ವ್ಯತ್ಯಾಸ ಇದ್ದು ಉತ್ತಮ ಮತ್ತು ಮದ್ಯಮ ಪುರುಶಗಳಲ್ಲಿ ಲಿಂಗ-ವಚನ ವ್ಯತ್ಯಾಸ ಇಲ್ಲ. ಹಾಗಾಗಿ ಪ್ರತಮ ಪುರುಶದಲ್ಲಿ ತೋರುಗದಿಂದ ರೂಪಗಳು ಬೆಳೆದಿವೆ.
ಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗ
ಏಕವಚನ *-ಇ/*-ಈ ಇವನು, ಈತ, ಇತ ಇವಳು, ಈಕೆ, ಇಕಿ ಇದು
ಏಕವಚನ *-ಉ/*-ಊ ಉವನ್, ಊತನ್ ಉವಳ್, ಊಕೆ ಉದು
ಏಕವಚನ *-ಅ/*-ಆ ಅವನು, ಆತ, ಅತ ಅವಳು, ಆಕೆ, ಅಕಿ ಅದು
ಬಹುವಚನ *-ಇ/*-ಈ ಇವರು ಇವು
ಬಹುವಚನ *-ಉ/*-ಊ ಉವರ್ ಉವು
ಬಹುವಚನ *-ಅ/*-ಆ ಅವರು ಅವು
ಜಾಗವನ್ನು ಹೇಳುವ ರೂಪಗಳು:
*-ಇ/*-ಈ ಇಲ್ಲಿ
*-ಉ/*-ಊ ಉಲ್ಲಿ
*-ಅ/*-ಆ ಅಲ್ಲಿ
ಸಮಯವನ್ನು ಹೇಳುವ ರೂಪಗಳು:
*-ಇ/*-ಈ ಈಗ>ಇವಾಗ
*-ಉ/*-ಊ ? (ಈ ರೂಪದ ಬಳಕೆ ಬಗೆಗೆ ನನಗೆ ಮಾಹಿತಿ ಇಲ್ಲ)
*-ಅ/*-ಆ ಆಗ>ಅವಾಗ
ಅಳತೆಯನ್ನು ಮತ್ತು ಎಣಿಕೆಯನ್ನು ಹೇಳುವ ರೂಪಗಳು: ಶಿಶ್ಟಕನ್ನಡದಾಗ ಮತ್ತು ತೆಂಗನ್ನಡ, ಪಡುಗನ್ನಡಗಳಲ್ಲಿ ಅಳತೆ ಮತ್ತು ಎಣಿಕೆಯನ್ನು ಹೇಳುವುದಕ್ಕೆ ಒಂದೆ ರೂಪ ಬಳಕೆಯಲ್ಲಿದ್ದರೆ, ಬಡಗನ್ನಡಗಳಲ್ಲಿ ಅಳತೆಗೆ ಮತ್ತು ಎಣಿಕೆಗೆ ಎರಡು ಬೇರೆ ಬೇರೆ ರೂಪಗಳು ಬಳಕೆಯಲ್ಲಿವೆ. ಅವುಗಳನ್ನು ಕೆಳಗೆ ತೋರಿಸಿದೆ.
*-ಇ/*-ಈ ಇಶ್ಟು, ಬಡಗನ್ನಡಗಳಲ್ಲಿ ಈಟು, ಇಟ್ಟು, ಈಸು, ಇಸ್ಸು
*-ಉ/*-ಊ ? (ಈ ರೂಪದ ಬಳಕೆ ಬಗೆಗೆ ನನಗೆ ಮಾಹಿತಿ ಇಲ್ಲ)
*-ಅ/*-ಆ ಅಶ್ಟು, ಬಡಗನ್ನಡಗಳಲ್ಲಿ ಆಟು, ಅಟ್ಟು, ಆಸು, ಅಸ್ಸು
ಇವುಗಳ ಜೊತೆಗೆ ಬೆಳೆದ ರೂಪಗಳು ಸೇರಿ ಆದ ಹಲವು ಸಮಾಸರೂಪಗಳು ವಿವಿದ ಬಗೆಯ ವ್ಯಾಕರಣ ಕೆಲಸಗಳ ಅಬಿವ್ಯಕ್ತಿಗೆ ಬಳಕೆಯಾಗುತ್ತವೆ. ಉದಾಹರಣೆಗೆ, ಗಡಿಯನ್ನು ಹೇಳುವುದಕ್ಕೆ ಬಳಕೆಯಲ್ಲಿರುವ ರೂಪಗಳನ್ನು ಗಮನಿಸಬಹುದು. ಜಾಗದ ಗಡಿಯನ್ನು ಹೇಳುವುದಕ್ಕೆ ಇಲ್ಲಿಯವರೆಗೆ, ಸಮಯದ ಗಡಿಯನ್ನು ಹೇಳುವುದಕ್ಕೆ ಈವರೆಗೆ ಮೊದಲಾದವನ್ನ ಗಮನಿಸಬಹುದು. ಈ ರಚನೆಯನ್ನು ಕೆಳಗೆ ಕೊಟ್ಟಿದೆ.
ಜಾಗದ ಗಡಿಯನ್ನು ಹೇಳುವ ರೂಪಗಳು
*-ಇ/*-ಈ ಇಲ್ಲಿ + ವರೆಗೆ= ಇಲ್ಲಿವರೆಗೆ
*-ಉ/*-ಊ ಉಲ್ಲಿ ? (ಈ ರೂಪದ ಬಳಕೆ ನನಗೆ ಕಾಣಿಸಿಲ್ಲ)
*-ಅ/*-ಆ ಅಲ್ಲಿ + ವರೆಗೆ= ಅಲ್ಲಿವರೆಗೆ
ಸಮಯದ ಗಡಿಯನ್ನು ಹೇಳುವ ರೂಪಗಳು
*-ಇ/*-ಈ + ವರೆಗೆ= ಈವರೆಗೆ
*-ಉ/*-ಊ (ಈ ರೂಪದ ಬಳಕೆ ನನಗೆ ಕಾಣಿಸಿಲ್ಲ)
*-ಅ/*-ಆ + ವರೆಗೆ= ಆವರೆಗೆ
ಹೀಗೆ ಈ ಎಲ್ಲ ರೂಪಗಳಲ್ಲಿ ತೋರುಗವು ತನ್ನ ಪಾತ್ರವನ್ನು ವಹಿಸುತ್ತದೆ. ಇಲ್ಲೆಲ್ಲ, ಜಾಗ ಮತ್ತು ಸಮಯ ಸೂಚಿತವಾಗುತ್ತವೆ ಎಂಬುದು ಸ್ಪಶ್ಟ. ಕಾಲ-ದೇಶಗಳು ತಾತ್ವಿಕತೆಯಲ್ಲಿ ಯಾಕೆ ಮಹತ್ವವನ್ನು ಪಡೆದುಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.