“ನಮ್ಮೊಳಗಿನ ಮನುಷ್ಯತ್ವವನ್ನು ಬಡಿದೆಬ್ಬಿಸುತ್ತವೆ. ಇಂಥಾ ಜೀವಂತ ಜ್ವಾಲಾಮುಖಿಗಳಂಥ ಕಥೆಗಳನ್ನು ಓದಿದಾಗ, ನನ್ನಿಂದ ಅನುವಾದಿಸದೆ ಇರಲು ಸಾಧ್ಯವಾಗದಿದ್ದ ಕಾರಣ, ಇವು ಈಗ ತಮ್ಮ ಮುಂದಿವೆ,” ಎನ್ನುತ್ತಾರೆ ರವಿ ಹಂಪಿ ಅವರು ತಮ್ಮ "ಪ್ಯಾಲೆಸ್ಟೀನ್‌ನ ಮಕ್ಕಳು" ಕೃತಿಗೆ ಬರೆದ ಅನುವಾದಕರ ಮಾತು.
ಯಾವುದಾದರೂ ಘಟನೆ ಸಂಭವಿಸಿದಾಗಿನ ಸಂದರ್ಭಕ್ಕಿಂತ, ಆ ಘಟನೆ ನಡೆಯುವುದಕ್ಕಿಂತ ಮುಂಚೆ ಮತ್ತು ನಂತರವೇ ಹೆಚ್ಚು ವೇದನೆ, ನೋವು, ಸಂಕಟಗಳನ್ನು ಕೊಡುತ್ತದೆಯೆಂದರೆ ಅದು ಯುದ್ದ ಮಾತ್ರವೇ ಆಗಿರಲಿಕ್ಕೆ ಸಾಧ್ಯ. ಯುದ್ಧಕ್ಕಿಂತ ಮುಂಚೆ ಯುದ್ಧಭೀತಿಯಿಂದ ಬಾಳು ನರಕವಾದರೆ, ಯುದ್ಧದ ನಂತರ ತನ್ನವರನ್ನೆಲ್ಲ ಕಳೆದುಕೊಂಡು ಇಡೀ ಜಗತ್ತಿಗೆ ಅಪರಿಚಿತರಂತೆ ಬದುಕುವುದು ಅನಿವಾರ್ಯವಾಗುತ್ತದೆ. ಹೆಣ್ಣು, ಹೊನ್ನು, ಮಣ್ಣುಗಳು ಯುದ್ಧಕ್ಕೆ ಕಾರಣವಾದರೆ ಸಹಜವೆನ್ನಿಸಬಹುದೇನೋ, ಆದರೆ ಧರ್ಮವೂ ಯುದ್ಧಕ್ಕೆ ಕಾರಣವಾದರೆ, ಅದು ಮನುಷ್ಯನ ಅಜ್ಞಾನದ ಪರಮಾವಧಿಯೇ ಸರಿ. ಮನುಷ್ಯ ಮನುಷ್ಯನನ್ನು ಕೊಂದು ಉಳಿಸಿಕೊಳ್ಳಬಹುದಾದ ಧರ್ಮ ಯಾವುದಾದರೂ ಇದೆಯೇ? ನಾವು ವಿಶ್ವಮಾನವರಾಗದ ಹೊರತು ಯುದ್ಧಗಳಿಗೆ ಕೊನೆಯಿಲ್ಲ.
ಇತ್ತೀಚಿಗೆ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ನ ಗಾಜಾಪಟ್ಟಿಯ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧ ಇಂದಿನದಲ್ಲ. ಅನೇಕ ತಲೆಮಾರುಗಳಿಂದ ಯುದ್ಧವೂ ಅನುವಂಶೀಯವಾಗಿ ಬಂದದ್ದು ಮಾತ್ರ ವಿಪರ್ಯಾಸ. ಅರಬ್ಬರು, ಮುಸ್ಲಿಮರು, ಮತ್ತು ಯಹೂದಿಯರ ನಡುವಿನ ಯುದ್ಧ ಒಂದು ತೆರನಾದ ಜೀವಂತ ಜ್ವಾಲ್ವಾಮುಖಿ ಇದ್ದಂತೆ. ಅದು ಯಾವಾಗ ಸ್ಪೋಟಿಸುವುದೋ ಯಾರಿಗೂ ತಿಳಿಯುವುದಿಲ್ಲ. ಆದರೆ ಎಲ್ಲರಿಗೂ ತಮ್ಮ ವಿನಾಶ ಮಾತ್ರ ಅಂಗೈ ಗೆರೆಗಳಷ್ಟೇ ಸ್ಪಷ್ಟ.
ನಾವು ದೂರದ ದೇಶದಲ್ಲಿ, ಸೋಫಾದ ಮೇಲೆ ಕುಳಿತು, ಚಿಪ್ಸ್ ತಿನ್ನುತ್ತ, ವಾರ್ತೆಗಳಲ್ಲಿ ನೋಡುವ ಯುದ್ದಕ್ಕೂ, ಯುದ್ಧದಲ್ಲಿ ಸಿಲುಕಿ, ಅದರ ಭಾಗವಾಗಿ ಅನುಭವಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಲೇಖಕ ಘಸನ್ ಕನಫನಿಯವರು ಉತ್ತರ ಪ್ಯಾಲೆಸ್ಟೀನ್‌ನವರಾಗಿದ್ದು, 'ಪಾಪುಲರ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೀನ್'ನ ಮುಖವಾಣಿಯಂತಿದ್ದರು. ಅನೇಕ ನಿಯತಕಾಲಿಕಗಳಲ್ಲಿ ಕೆಲಸ ಮಾಡುತ್ತ, ಸಿಕ್ಕ ಚಿಕ್ಕ ಸಣ್ಣಪುಟ್ಟ ಅವಕಾಶಗಳನ್ನು ಪ್ಯಾಲೆಸ್ಟೀನ್ ರಕ್ಷಣೆಗೆ, ಪ್ಯಾಲೆಸ್ಟೀನ್ ಜನರ ರಕ್ಷಣೆಗಾಗಿ, ಮತ್ತು ಹೊರಜಗತ್ತಿಗೆ ಪ್ಯಾಲೆಸ್ಟೀನ್ ಜನರ ತೊಂದರೆ, ನೋವುಗಳನ್ನು ತೆರೆದಿಡುವ ಕೆಲಸ ಮಾಡಿದರು. ಇವರು 1972ರಲ್ಲಿ ಬೈರೂತ್‌ನಲ್ಲಿ ಕಾರ್‌ಬಾಂಬ್ ಸ್ಪೋಟದಲ್ಲಿ ಕೊಲ್ಲಲ್ಪಟ್ಟರು. ಘಸನ್ ಅವರ ಕಥೆಗಳು ಇವತ್ತಿಗೂ ನಿಗಿನಿಗಿಸುತ್ತವೆ. ಯುದ್ಧದ ಅನುಭವ ನೀಡುತ್ತವೆ. ನಮ್ಮೊಳಗಿನ ಮನುಷ್ಯತ್ವವನ್ನು ಬಡಿದೆಬ್ಬಿಸುತ್ತವೆ. ಇಂಥಾ ಜೀವಂತ ಜ್ವಾಲಾಮುಖಿಗಳಂಥ ಕಥೆಗಳನ್ನು ಓದಿದಾಗ, ನನ್ನಿಂದ ಅನುವಾದಿಸದೆ ಇರಲು ಸಾಧ್ಯವಾಗದಿದ್ದ ಕಾರಣ, ಇವು ಈಗ ತಮ್ಮ ಮುಂದಿವೆ.
ಇಂಥ ಕಥೆಗಳನ್ನು ಕೈಲಿಟ್ಟು, 'ಒಂದ್ಬಲ ಓದಿನೋಡ್ರಿ' ಎಂದಿದ್ದ ಗೆಳೆಯ ಶ್ರೀ ಆರಿಫ್ ರಾಜಾ ಅವರು, ಸ್ವಲ್ಪ ದಿನ ಬಿಟ್ಟು, 'ಅನುವಾದ ಮಾಡಬಹುದು' ಅಂದಿದ್ದರು. ಆಗಾಗ ಅನುವಾದದ ಸೂಕ್ಷ್ಮಗಳನ್ನು ತಿಳಿಸಿಕೊಟ್ಟು, ಅನುವಾದಕ್ಕೆ ಹಚ್ಚಿದ ಅವರಿಗೆ ನಾನು ಮತ್ತು ನನ್ನ ಅನುವಾದ ಸದಾ ಋಣಿ.
ಸಣ್ಣಪುಟ್ಟ ಕವಿತೆಗಳನ್ನು ಬರೆಯುತ್ತಿದ್ದವನನ್ನು ಚಿದಾನಂದ ಸಾಲಿಯವರು ಗಜಲ್‌ನ ಅ ಆ ಇ ಈ ಹೇಳಿ ಗಜಲ್ ಬರೆಸಿ 'ಸಖಸಖಿ' ಗಜಲ್ ಸಂಕಲನ ಬರುವಂತೆ ಮಾಡಿದರು. ಗೆಳೆಯ ಆರಿಫ್ ರಾಜಾರವರು ಜಗತ್ತಿನ ಒಳೊಳ್ಳೆ ಕಥೆ, ಕಾದಂಬರಿಗಳನ್ನು ಓದಿಸಿ, ಅನುವಾದಕ್ಕೆ ಹಚ್ಚಿ ಅನುವಾದಕನನ್ನಾಗಿಸಿದ್ದಾರೆ.
“ಈ ಕೃತಿ ಬರೀ ಕೃತಿಗಳ ವಿಮರ್ಶೆಯಾಗಿ ರೂಪಗೊಂಡಿಲ್ಲ. ಸಾಹಿತ್ಯ- ಸಂಸ್ಕೃತಿ ಕುರಿತ ಸಾಂಸ್ಕೃತಿಕ ಅಧ್ಯಯನವಾಗಿ ಪರಿಣ...
“ಒಟ್ಟಾರೆ ಈ ಕೃತಿ ಕೆಲವೆಡೆ ತಲೆ ಹರಟೆ ಕಷಾಯವಾಗಿಯೂ ಕಾಡಿ, ನಿಮ್ಮ ತಲೆ ತಿನ್ನುವಂತಾದರೆ ನಾನು ತಲೆ ಕೆಡಿಸಿಕೊಂಡು...
“ಕೃತಿಯು ನನ್ನ ನಾಲ್ಕು ದಶಕಗಳ ಬರೆವಣಿಗೆ ಮತ್ತು ಚಿಂತನೆಗೆ ಪ್ರೇರಕರಾದ ಮಹಾನ್ ದಾರ್ಶನಿಕ ಮನೋಭಾವದ ವ್ಯಕ್ತಿಗಳ ...
©2025 Book Brahma Private Limited.