“ಕೃತಿಯು ನನ್ನ ನಾಲ್ಕು ದಶಕಗಳ ಬರೆವಣಿಗೆ ಮತ್ತು ಚಿಂತನೆಗೆ ಪ್ರೇರಕರಾದ ಮಹಾನ್ ದಾರ್ಶನಿಕ ಮನೋಭಾವದ ವ್ಯಕ್ತಿಗಳ ಬದುಕಿನ ಚಿತ್ರಣವಾಗಿದೆ,” ಎನ್ನುತ್ತಾರೆ ಡಾ.ಎನ್.ಜಗದೀಶ್ ಕೊಪ್ಪಅವರು ತಮ್ಮ “ಎದೆಯ ಕದ ತಟ್ಟಿದವರು” ಕೃತಿಗೆ ಬರೆದ ಲೇಖಕರ ಮಾತು.
ನಾಡಿನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರಿನ ಸಪ್ನ ಬುಕ್ ಹೌಸ್ ಸಂಸ್ಥೆಗೆ ಪ್ರತಿ ವರ್ಷ ಕೃತಿ ರಚಿಸಿಕೊಡುವುದು ನನ್ನ ಪಾಲಿಗೆ ಅತ್ಯಂತ ಗೌರವದ ಸಂಗತಿ ಮತ್ತು ಜವಾಬ್ದಾರಿಯುತ ಕರ್ತವ್ಯ ಕೂಡಾ ಹೌದು.
ನಾನು ಮೂಲತಃ ಲೇಖಕನಾಗಿದ್ದರೂ ಸಹ, ನನ್ನೊಳಗೆ ಒಬ್ಬ ಅರ್ಧ ಶತಮಾನದ ಓದಿನ ಹಿನ್ನಲೆಯಿರುವ ಪ್ರಜ್ಞಾವಂತ ಓದುಗನಿದ್ದಾನೆ. ಅವನ ಮನಸ್ಸಿಗೆ ತೃಪ್ತಿಯಾಗದೆ ನಾನು ಯಾವ ಕೃತಿಯನ್ನೂ ರಚಿಸುವುದಿಲ್ಲ. ಈ ಕಾರಣದಿಂದಾಗಿ ಪ್ರತಿ ಕೃತಿಯೊಂದರ ರಚನೆಯ ಹಿಂದೆ ಅಧ್ಯಯನ ಮತ್ತು ಕ್ಷೇತ್ರ ಕಾರ್ಯಗಳನ್ನು ಮಾಡಿ ಕೃತಿ ರಚಿಸುವುದು ನನ್ನ ಹವ್ಯಾಸವಾಗಿದೆ.
ಈಗ ನಿಮ್ಮ ಮುಂದಿಡುತ್ತಿರುವ "ಎದೆಯ ಕದ ತಟ್ಟಿದವರು" ಕೃತಿಯು ನನ್ನ ನಾಲ್ಕು ದಶಕಗಳ ಬರೆವಣಿಗೆ ಮತ್ತು ಚಿಂತನೆಗೆ ಪ್ರೇರಕರಾದ ಮಹಾನ್ ದಾರ್ಶನಿಕ ಮನೋಭಾವದ ವ್ಯಕ್ತಿಗಳ ಬದುಕಿನ ಚಿತ್ರಣವಾಗಿದೆ. ಈ ಕೃತಿಯಲ್ಲಿ ಗಾಂಧಿ, ನೆಹರು, ಲೋಹಿಯಾ, ಜೆ.ಪಿ. ಮುಂತಾದ ಮಹನೀಯರಿಂದ ಹಿಡಿದು ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞರ ಬದುಕಿನ ವಿವರ ಹಾಗೂ ಚಿಂತನೆಗಳಿವೆ. ಇತಿಹಾಸ ಎಂಬುದು ಕಲಸು ಮೇಲೋಗರವಾಗಿರುವ ಇಂದಿನ ದಿನಮಾನಗಳಲ್ಲಿ ತಮ್ಮ ಮೂಗಿನ ನೇರಕ್ಕೆ ಬರೆದದ್ದೇ ಇತಿಹಾಸ ಎಂಬಂತೆ ಬಿಂಬಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಇಂದಿನ ತಲೆಮಾರು ಸಾಮಾಜಿಕ ತಾಣಗಳಲ್ಲಿ ಮುಳಗಿ ಹೋಗಿರುವಾಗ ಹಾಗೂ ಸೆಲ್ಪಿ ಮತ್ತು ರೀಲ್ ಎಂಬ ವ್ಯಸನಕ್ಕೆ ತುತ್ತಾಗಿರುವಾಗ, ಅವರನ್ನು ಮತ್ತೆ ನಮ್ಮ ನಿಜವಾದ ಇತಿಹಾಸದತ್ತ ಕರೆದೊಯ್ಯಬೇಕಾಗಿರುವುದು ನಮ್ಮೆಲ್ಲರ ನೈತಿಕ ಕರ್ತವ್ಯವಾಗಿದೆ
ಈ ದಿಶೆಯಲ್ಲಿ ಇಲ್ಲಿರುವ ಇಪ್ಪತ್ತೇಳು ಅಧ್ಯಾಯಗಳು ಓದುಗರನ್ನು ಚಿಂತನೆಗೆ ಹಚ್ಚಬಲ್ಲವು ಎಂಬ ವಿಶ್ವಾಸ ನನಗಿದೆ. ಈ ಕೃತಿಯ ರಚನೆಗೆ ಪರೋಕ್ಷ ವಾಗಿ ಕಾರಣರಾದ ಸಪ್ನ ಬುಕ್ ಹೌಸ್ ಸಂಸ್ಥೆಯ ಮಾಲೀಕರಾದ ಶ್ರೀ ನಿತಿನ್ ಷಾ, ಹಾಗೂ ವ್ಯವಸ್ಥಾಪಕರಾದ ಪಕರಾದ ಶ್ರೀ ದೊಡ್ಡೆಗೌಡ ಇವರಿಗೆ ಹೃದಯ ಪೂರ್ವಕ ಕೃತಜ್ಞತೆಗಳು, ಅದೇ ರೀತಿಯಲ್ಲಿ ಕೃತಿಯನ್ನು ಅಚ್ಚು ಕಟ್ಟಾಗಿ ವಿನ್ಯಾಸ ಮಾಡಿ, ಮುದ್ರಣ ಮಾಡಿದ ಬೆಂಗಳೂರಿನ ದಿವ್ಯ ಪ್ರಿಂಟ್ರಾನಿಕ್ಸ್‌ನ ಮಾಲೀಕರಾದ ಶ್ರೀ ರಾಮಕೃಷ್ಣ ಹಾಗೂ ಅವರ ಸಿಬ್ಬಂದಿ ವರ್ಗ ಮತ್ತು ಮುಖಪುಟ ರಚಿಸಿದ ಕಲಾವಿದರಾದ ಶ್ರೀ ಶ್ರೀಪಾದ ಇವರಿಗೂ ಸಹ ನನ್ನ ಧನ್ಯವಾದಗಳು.
- ಡಾ.ಎನ್.ಜಗದೀಶ್ ಕೊಪ್ಪ
"ಪುಸ್ತಕದ ಬಗ್ಗೆ ನಾನು ಹೆಚ್ಚು ವಿವರಿಸಲು ಹೋಗುವುದಿಲ್ಲ. ಏಕೆಂದರೆ ಅದು ನಿಮ್ಮ ಓದಿನ ಸುಖಕ್ಕೆ ಧಕ್ಕೆ ತಂದೀತು. ಆ...
“ಈ ಕೃತಿ ಬರೀ ಕೃತಿಗಳ ವಿಮರ್ಶೆಯಾಗಿ ರೂಪಗೊಂಡಿಲ್ಲ. ಸಾಹಿತ್ಯ- ಸಂಸ್ಕೃತಿ ಕುರಿತ ಸಾಂಸ್ಕೃತಿಕ ಅಧ್ಯಯನವಾಗಿ ಪರಿಣ...
“ಒಟ್ಟಾರೆ ಈ ಕೃತಿ ಕೆಲವೆಡೆ ತಲೆ ಹರಟೆ ಕಷಾಯವಾಗಿಯೂ ಕಾಡಿ, ನಿಮ್ಮ ತಲೆ ತಿನ್ನುವಂತಾದರೆ ನಾನು ತಲೆ ಕೆಡಿಸಿಕೊಂಡು...
©2025 Book Brahma Private Limited.