Date: 16-03-2021
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ನ್ಯೂಯಾರ್ಕ್ ನ ಕಂಟೆಂಪೊರರಿ ಆರ್ಟ್ ಕಲಾವಿದೆ ಕಿಕಿ ಸ್ಮಿತ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದ: ಕಿಕಿ ಸ್ಮಿತ್ (Kiki Smith)
ಜನನ: 18 ಜನವರಿ, 1954
ಶಿಕ್ಷಣ: ಹಾರ್ಟ್‌ಫರ್ಡ್ ಆರ್ಟ್ ಸ್ಕೂಲ್, ಅಮೆರಿಕ
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ಕಂಟೆಂಪೊರರಿ ಆರ್ಟ್ ವ್ಯವಸಾಯ: ಸ್ಕಲ್ಪ್ಚರ್ಸ್, ಪ್ರಿಂಟ್ಸ್, ಕಸೂತಿಗಳು, ಸಿನಿಮಾ
ಕಿಕಿ ಸ್ಮಿತ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಎಪ್ಪತ್ತರ ದಶಕದ ಕೊನೆಯ ಹೊತ್ತಿಗೆ ಕಲಾ ಪ್ರಪಂಚ ಒಂದು ರೀತಿಯ ಸ್ಥಾಗಿತ್ಯ ಅನುಭವಿಸುತ್ತಿತ್ತು. ಅಲ್ಲಿಯ ತನಕ ಕಲಾ ಪ್ರಪಂಚದ ಮುಖ್ಯ ವಾಹಿನಿಗಳಾಗಿದ್ದ ಅಮೂರ್ತ ಕಲೆ, ಮಿನಿಮಲಿಸಂ, ಫೆಮಿನಿಸ್ಟ್ ಕಲೆಯ ಎರಡನೇ ಅಂಕ ಪೂರ್ಣಗೊಂಡಿತ್ತು. ಆ ಹಂತದಲ್ಲಿ, ಫಿಗರೇಟಿವ್ ಚಿತ್ರಗಳಿಗೆ – ಶಿಲ್ಪಗಳಿಗೆ ಸಮಕಾಲೀನ ಕಲೆಯಲ್ಲಿ ಮತ್ತೆ ಹಾದಿ ತೆರೆದುಕೊಟ್ಟು, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳಲ್ಲಿ ಫೆಮಿನಿಸಂನ ಸಾಧ್ಯತೆಗಳನ್ನು ಅನ್ವೇಷಿಸಲು ಅವಕಾಶ ತೆರೆದುಕೊಟ್ಟ ಪ್ರಮುಖ ಕಲಾವಿದರಲ್ಲಿ ಕಿಕಿ ಸ್ಮಿತ್ ಒಬ್ಬರು. ಈ ನಿಟ್ಟಿನಲ್ಲಿ ಅವರನ್ನು ಬಾರ್ಬರಾ ಕ್ರುಗರ್, ಕಾರಾ ವಾಕರ್, ಸಿಂಡಿ ಷೆರ್ಮನ್ ಅವರೊಂದಿಗೆ ಗುರುತಿಸಬಹುದು.
ಪಶ್ಚಿಮ ಜರ್ಮನಿಯಲ್ಲಿದ್ದ ಅಮೆರಿಕನ್ ಕಲಾವಿದರ ಕುಟುಂಬದಲ್ಲಿ ಜನಿಸಿದ ಕಿಕಿ, ತೀರಾ ಎಳವೆಯಲ್ಲೇ ಹೆತ್ತವರೊಂದಿಗೆ ಅಮೆರಿಕಕ್ಕೆ ಹಿಂದಿರುಗುತ್ತಾರೆ. ಕಲಿಕೆಯಲ್ಲಿ ಅಷ್ಟೇನೂ ಮುಂದಿರದ ಕಿಕಿ, ಹಾರ್ಟ್‌ಫರ್ಡ್ ಆರ್ಟ್ ಸ್ಕೂಲಿನಲ್ಲಿ ತಮ್ಮ ಕಲಿಕೆಯನ್ನು ಪೂರ್ಣಗೊಳಿಸುವುದಿಲ್ಲ; ಆಕೆ ಕಲೆಯನ್ನು ತನ್ನಷ್ಟಕ್ಕೆ ತಾನೇ ಕಲಿತದ್ದೇ ಜಾಸ್ತಿ. ಈ ನಡುವೆ ವೈದ್ಯಕೀಯ ಟೆಕ್ನೀಷಿಯನ್ ತರಬೇತಿ ಮುಗಿಸಿಕೊಂಡ ಕಿಕಿ, ಅಲ್ಲಿ ಮಾನವ ದೇಹದ ಬಗ್ಗೆ ತೋರಿಸಿದ ಆಸಕ್ತಿ, ಆಕೆಯ ಮುಂದಿನ ಕಲಾಕೃತಿಗಳಿಗೆ ಹಾದಿ ತೆರೆಯಿತು.
ತಂದೆಯನ್ನು ಕಳೆದುಕೊಂಡ ಕೆಲವೇ ಸಮಯದಲ್ಲಿ ಒಬ್ಬರು ಸಹೋದರಿಯನ್ನು ಏಡ್ಸ್‌ಗೆ ಕಳೆದುಕೊಂಡ ಬಳಿಕ, ಅದೇ ಗುಂಗಿನಲ್ಲಿ ಆಕೆ ರಚಿಸಿದ ಕಲಾಕೃತಿಗಳಲ್ಲಿ ಮಾನವ ದೇಹ, ಅದರ ರೋಗ ರುಜಿನಗಳು, ಅಪರಾಧೀ ಪ್ರಜ್ಞೆ, ಅವಮಾನ, ವ್ಯಗ್ರತೆಗಳು ವಸ್ತುಗಳಾಗಿದ್ದವು. ಮಹಿಳೆಯಾಗಿ ತನ್ನೊಳಗನ್ನು ನೋಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕಿಕಿ ಅವರು ರಚಿಸಿದ ಹಲವು ಕಲಾಕೃತಿಗಳಲ್ಲಿ ತೋಳಗಳು ಕಾಣಿಸಿಕೊಳ್ಳುವುದು ವಿಶಿಷ್ಠ. ’ತನ್ನೊಳಗಿನ ತೋಳತನ’ವನ್ನು ಬಿಂಬಿಸಿಕೊಳ್ಳುವ ಈ ಕಲಾಕೃತಿಗಳು ತನ್ನನ್ನು ಇರುವಂತೆಯೇ ಒಪ್ಪಿಕೊಳ್ಳುವ ಕುರಿತಾದ ಫೆಮಿನಿಸ್ಟ್ ಚರ್ಚೆಗಳಿಂದ ಪ್ರೇರಿತವಾದವು. ಅವು ಸಹಜವಾಗಿರುವ ಜೊತೆಗೇ ಪೌರಾಣಿಕ, ಧಾರ್ಮಿಕ ಕಥನಗಳನ್ನೂ ಒಳಗೊಂಡಿರುವುದರಿಂದ ಹಲವಾರು ಮಜಲುಗಳಲ್ಲಿ ಈ ಚಿತ್ರಗಳನ್ನು ವಿಮರ್ಶಕರು ಗುರುತಿಸುತ್ತಾರೆ.
1982ರಿಂದೀಚೆಗೆ ಕೊಲಾಬ್ ಆರ್ಟ್ ಕಲೆಕ್ಟಿವ್ ಜೊತೆ ಪ್ರದರ್ಶನಗಳಲ್ಲಿ ಪಾಲ್ಗೊಳ್ಳತೊಡಗಿದ ಬಳಿಕ ಜಾಗತಿಕವಾಗಿ ಬೆಳಕಿಗೆ ಬರತೊಡಗಿದ ಕಿಕಿ ಅವರ ಇತ್ತೀಚೆಗಿನ ಕಸೂತಿ ಕಲಾಕೃತಿಗಳಲ್ಲಿ ನೋಡುಗರನ್ನು ಒಳಗೊಳ್ಳುವ ಗುಣ ಇದೆ. ಅಜ್ಜಿಕಥೆಗಳು, ಪುರಾಣಗಳಿಂದ ಆಯ್ದ ವಿಚಾರಗಳನ್ನು ಓಪನ್ ಎಂಡೆಡ್ ಇರಿಸಿ, ನೋಡುಗರನ್ನೂ ಅದರಲ್ಲಿ ಒಳಗೊಳ್ಳುವ ಕಾರಣಕ್ಕೆ ಅವು ಮಹತ್ವದವೆನ್ನಿಸಿವೆ.
ಮೊದಲ ಬಾರಿಗೆ ವೆನೀಸ್ ಬಯೆನಾಲ್‌ನಲ್ಲಿ ಆಕೆಯನ್ನು ಆಯ್ಕೆ ಮಾಡಿದ್ದು “ಎಳೆಯ ಕಲಾವಿದರ” ವರ್ಗದಲ್ಲಿ ಪಾಲ್ಗೊಳ್ಳುವುದಕ್ಕೆ. ಬಳಿಕ ಆಕೆ ಹೆಚ್ಚಿನ ವಯಸ್ಸಿನವರೆಂಬ ಕಾರಣಕ್ಕೆ ಆಕೆಯ ಆಯ್ಕೆ ರದ್ದಾಗುತ್ತದೆ. ಆದರೆ ಮುಂದಿನ ಬಾರಿ (1993) ಕ್ಯುರೇಟರ್ ಜೆಫ್ರಿ ಡೈಥೆಕ್ ಅವರನ್ನು ಮತ್ತೆ ಅದೇ ಎಳೆಯರ ವರ್ಗಕ್ಕೇ ಆಯ್ಕೆ ಮಾಡುತ್ತಾರೆ ಮತ್ತು ಅವರ ಆ ಕಲಾಕೃತಿ ಅವರಿಗೆ ಜಾಗತಿಕ ಮನ್ನಣೆ ತಂದುಕೊಡುತ್ತದೆ. ತನ್ನ ಓರಗೆಯ ಗಂಡು ಕಲಾವಿದರಿಗಿಂತ ಹತ್ತು ವರ್ಷ ವಿಳಂಬವಾಗಿ ತನಗೆ ಈ ಅವಕಾಶ ಸಿಕ್ಕಿತು ಎನ್ನುವ ಕಿಕಿ, “If you can outlive most men, all of a sudden you can be venerated.” ಎನ್ನುತ್ತಾರೆ.
ಕಲಾವಿದ/ದೆ ಮಹತ್ವದ್ದನ್ನು ಸಾಧಿಸಲು ಸಾಧ್ಯವಾಗುವುದು ಹೇಗೆಂಬ ಪ್ರಶ್ನೆಗೆ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಕಿಕಿ ಸ್ಮಿತ್ ಉತ್ತರಿಸಿದ್ದು ಹೀಗೆ: “I think what is perceived as a great artist is subject to cultural change. But, certainly great artists that I admire belong to their time while resonating beyond the specifics of their personality and time. They have a vision that is at once singular and at the same time open to others; they enrich our lives.”
ಕಿಕಿ ಸ್ಮಿತ್ ಅವರ ಸಂದರ್ಶನ:
ಕಿಕಿ ಸ್ಮಿತ್ ಅವರ ಆರ್ಟಿಸ್ಟ್ ಉಪನ್ಯಾಸ:
ಚಿತ್ರ ಶೀರ್ಷಿಕೆಗಳು:
ಕಿಕಿ ಸ್ಮಿತ್ ಅವರ “Untitled (Red Man), (1991), ink on gampi paper in four parts, installation view from the exhibition “Creature” atThe Broad Art Foundation.
ಕಿಕಿ ಸ್ಮಿತ್ ಅವರ Born (2002), Courtesy Scala-Art Resource, New York
ಕಿಕಿ ಸ್ಮಿತ್ ಅವರ My Blue Lake, (1994), photogravure and monoprint, trial proof, courtesy of Pace Gallery
ಕಿಕಿ ಸ್ಮಿತ್ ಅವರ Open (2019) ಕಿಕಿ ಸ್ಮಿತ್ ಅವರ Osprey with Fish (2017)
ಕಿಕಿ ಸ್ಮಿತ್ ಅವರ Sky (2012), Courtesy Pace Gallery
ಕಿಕಿ ಸ್ಮಿತ್ ಅವರ Spinners, (2014), cotton jacquard tapestry, handpainting and gold leaf, courtesy of Pace Gallery
ಕಿಕಿ ಸ್ಮಿತ್ ಅವರ Suene- (1992)
ಕಿಕಿ ಸ್ಮಿತ್ ಅವರ Tied to Her Nature, (2002), bronze, courtesy of Pace Gallery
ಕಿಕಿ ಸ್ಮಿತ್ ಅವರ Untitled (Flower Blanket), (1992)
ಕಿಕಿ ಸ್ಮಿತ್ ಅವರ Untitled (pink bosoms), (1990)
ಕಿಕಿ ಸ್ಮಿತ್ ಅವರ untitled, (1994), plaster cast with four glass, ink, lead solder and wood objects. Courtesy- PaceWildenstein
ಕಿಕಿ ಸ್ಮಿತ್ ಅವರ Wolf Girl, (1999), etching and aquatint on paper, courtesy of Pace Gallery
ಕಿಕಿ ಸ್ಮಿತ್ ಅವರ Woman with Owl (2003)
ಈ ಅಂಕಣದ ಹಿಂದಿನ ಬರೆಹಗಳು:
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.