ಸುಳಿವುಗಳನ್ನು ಓದಿ ಸೂಕ್ತ ಉತ್ತರ ಕಂಡುಹಿಡಿಯಬೇಕು


“ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ, ಕ್ರೀಡೆ ಹೀಗೆ ಹತ್ತು ಹಲವಾರು ಕ್ಷೇತ್ರದ ವಿಷಯಗಳ ಬಗ್ಗೆ ಮತ್ತು ಈ ಕ್ಷೇತ್ರಗಳ ಸಾಧಕರ ವಿವರಗಳನ್ನು ಸುಳಿವುಗಳಲ್ಲಿ ಅಳವಡಿಸಲಾಗಿದೆ,” ಎನ್ನುತ್ತಾರೆ ಪ್ರಕಾಶ ಸಿ. ರಾಜಗೋಳಿ ಅವರು ತಮ್ಮ “ಪದಸರಪಳಿ” ಕೃತಿಗೆ ಬರೆದ ಲೇಖಕರ ಮಾತು.

ಹೆಚ್ಚು ಕಡಿಮೆ ಕನ್ನಡದ ಎಲ್ಲ ದಿನಪತ್ರಿಕೆ, ವಾರಪತ್ರಿಕೆ ಇಲ್ಲವೇ ಮಾಸಪತ್ರಿಕೆಗಳಲ್ಲಿ ಪದಬಂಧ ಪ್ರಕಟವಾಗುತ್ತವೆ. ಇಂತಹ ಪದಬಂಧಕ್ಕೆ ಉತ್ತರಕಂಡು ಹಿಡಿಯುವದು ಹಲವಾರು ಓದುಗರ ದಿನಚರಿಯ ಭಾಗವೂ ಆಗಿರುತ್ತದೆ. ಇಂತಹ ಓದುಗರ ಶಬ್ದ ಭಂಡಾರಕ್ಕೆ ಸವಾಲೆಸಗುವ ಪದಬಂಧಗಳ ಅನೇಕ ಪುಸ್ತಕಗಳು ಲಭ್ಯ.

ಕನ್ನಡದಲ್ಲಿ ಅಂತ್ಯಾಕ್ಷರಿ ಮಾದರಿಯ ಪದಗಳ ಆಟ ಮಾಡಿದರೆ ಹೇಗೆ? ಎನ್ನುವ ಆಲೋಚನೆಯೇ “ಪದಸರಪಳಿ'ಗೆ ಪ್ರೇರಣೆ.

ಒಂದು ಪುಟದಲ್ಲಿ ತಲಾ ನಾಲ್ಕಕ್ಷರಗಳ ಹತ್ತು ಪದಗಳನ್ನು ಸುಲಭ ಸುಳಿವುಗಳ ಮೂಲಕ ಕಂಡುಹಿಡಿಯಬೇಕು. ಹಿಂದಿನ ಶಬ್ದದ ಕೊನೆಯ ಎರಡಕ್ಷರಗಳು ಮತ್ತು ಮುಂದಿನ ಶಬ್ದದ ಆರಂಭದ ಎರಡಕ್ಷರಗಳು ಒಂದೇ ಇರಬೇಕಾದುದು ನಿಯಮ.
(ಉದಾ: ಕರು "ನಾಡು”, “ನಾಡು"ನುಡಿ)

ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ, ಕ್ರೀಡೆ ಹೀಗೆ ಹತ್ತು ಹಲವಾರು ಕ್ಷೇತ್ರದ ವಿಷಯಗಳ ಬಗ್ಗೆ ಮತ್ತು ಈ ಕ್ಷೇತ್ರಗಳ ಸಾಧಕರ ವಿವರಗಳನ್ನು ಸುಳಿವುಗಳಲ್ಲಿ ಅಳವಡಿಸಲಾಗಿದೆ. ಈ ಸುಳಿವುಗಳನ್ನು ಓದಿ ಸೂಕ್ತ ಉತ್ತರ ಕಂಡುಹಿಡಿಯಬೇಕು. ಸಾಮಾನ್ಯ ಬಳಕೆಯ ಪದಗಳ ಜೊತೆಗೆ ಅಷ್ಟೇನೂ ಬಳಕೆಯಲ್ಲಿಲ್ಲದ ಗ್ರಾಂಥಿಕ ಪದಗಳು ಮತ್ತು ಕೆಲ ಪ್ರಾಂತೀಯ ಪದಗಳೂ ಸೇರಿಕೊಂಡಿವೆ ಕನ್ನಡದ ಸಾಮಾನ್ಯ ಜನರಿಗೆ, ಕನ್ನಡ ಭಾಷೆ ಕಲಿಯಲಿಚ್ಛಿಸುವವರಿಗೆ, ವಿಶೇಷವಾಗಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಪುಸ್ತಕ ರಚಿಸಲಾಗಿದೆ. ಅವರಲ್ಲಿ ಕನ್ನಡದ ಬಗ್ಗೆ ಆಸಕ್ತಿ ಹುಟ್ಟಿಸಿ, ಚಿಂತನೆಗೆ ತೊಡಗಿಸಿ ತನ್ಮೂಲಕ ಪದಗಳ ಬಳಕೆ ಹೆಚ್ಚಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಸದುದ್ದೇಶ ಈ ಪುಸ್ತಕದ್ದು. ಈ ಪ್ರಯತ್ನ ನಿಮ್ಮೆಲ್ಲರಿಗೆ ಇಷ್ಟವಾಗಿ ನೀವೆಲ್ಲ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.

ಈ ವಿನೂತನ ಪ್ರಯತ್ನಕ್ಕೆ ಬೆಂಬಲಿಸಿದ ಎಲ್ಲ ಸಹೃದಯ ಕನ್ನಡಿಗರಿಗೆ ಮನದಾಳದ ನಮನಗಳು, ಪದಗಳ ಆಟದ ಹೊಸ ಯೋಚನೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಪುಸ್ತಕ ಪ್ರಕಟಿಸಿದ 'ಅಂಕಿತ ಪುಸ್ತಕ' ಅವರಿಗೆ, ಅಚ್ಚುಕಟ್ಟಾಗಿ ಮುದ್ರಿಸಿದ ಸ್ಕ್ಯಾನ್ ಪ್ರಿಂಟರ್ಸ್ ಅವರಿಗೆ ಅಭಿನಂದನೆಗಳು.

MORE FEATURES

ವರ್ತಮಾನ ಸಾಯುತ್ತಲೇ ಭೂತವಾಗುತ್ತದೆ

07-01-2025 ಬೆಂಗಳೂರು

"ಸಾಹಿತಿ ಶರೀಫ ಗಂಗಪ್ಪ ಚಿಗಳ್ಳಿ ಇವರು ಈ ಪುಸ್ತಕದಲ್ಲಿ 15 ಲೇಖನ ಬರೆದಿದ್ದಾರೆ. ಬಹುತೇಕ ಕನ್ನಡಿಗರು ಕೇಳಬಲ್ಲ, ನ...

ಇತಿಹಾಸ ಸಂಶೋಧನೆಗಳ ಕ್ಷೇತ್ರದಲ್ಲಿ ನಾನು ನಿರಕ್ಷರಿ

07-01-2025 ಬೆಂಗಳೂರು

“ನನ್ನ ಆತ್ಮವೃತ್ತಾಂತದ ಈ ತುಣುಕುಗಳು ಡಾ. ಎ ಓ ನರಸಿಂಹಮೂರ್ತಿಯವರ ಪುಸ್ತಕದೊಡನೆ ತಳುಕು ಹಾಕಿಕೊಳ್ಳುತ್ತಿರುವುದು...

ಕೃಷ್ಣಮೂರ್ತಿಯವರು ಸೂಕ್ಷ್ಮಗ್ರಹಿಕೆಯ ಲೇಖಕರು

07-01-2025 ಬೆಂಗಳೂರು

“ವ್ಯಂಗ್ಯ-ಕುಹಕಗಳ ಸೋಂಕಿಲ್ಲದಂತೆ ತಾವು ನಡೆದುಬಂದ ಹಾದಿಯಲ್ಲಿ ದಾರಿದೀಪಗಳಂತಿದ್ದ ಗುರು-ಹಿರಿಯರಿಗೆ ನುಡಿಗೌರವ ಸ...