ವರ್ತಮಾನ ಸಾಯುತ್ತಲೇ ಭೂತವಾಗುತ್ತದೆ


"ಸಾಹಿತಿ ಶರೀಫ ಗಂಗಪ್ಪ ಚಿಗಳ್ಳಿ ಇವರು ಈ ಪುಸ್ತಕದಲ್ಲಿ 15 ಲೇಖನ ಬರೆದಿದ್ದಾರೆ. ಬಹುತೇಕ ಕನ್ನಡಿಗರು ಕೇಳಬಲ್ಲ, ನೋಡಬಹುದಾದ ಸುಪ್ರಸಿದ್ಧ ದೇವಾಲಯಗಳ ಚಿತ್ರಣಗಳು ಇಲ್ಲಿವೆ.‌ ಒಂದಿಷ್ಟು ಕೇಳಿ ನೋಡಿದರು ಅವುಗಳ ಇತಿಹಾಸ ಬಲ್ಲವರು ಬಹಳ ಕಡಿಮೆ.‌ ಅಂತಹ ಹಿನ್ನೆಲೆ ತಿಳಿಸುವ ಪುಸ್ತಕ ಐತಿಹಾಸಿಕ ದೇವಾಲಯಗಳ ತೊಟ್ಟಿಲಾಗಿದೆ," ಎನ್ನುತ್ತಾರೆ ಸತೀಶ ಕುಲಕರ್ಣಿ. ಅವರು ಶರೀಫ ಗಂ ಚಿಗಳ್ಳಿ ಅವರ ‘ಐತಿಹಾಸಿಕ ದೇವಾಲಯಗಳ ತೊಟ್ಟಿಲು’ ಕೃತಿ ಕುರಿತು ಬರೆದ ವಿಮರ್ಶೆ.

ಲೇಖಕರ ಹೆಸರು:- ಶರೀಫ ಗಂ ಚಿಗಳ್ಳಿ
ಬೆಲೆ:- 100 ರೂ
ಪುಟಗಳು:- 80
ಮುದ್ರಣ ವರ್ಷ:- 2024
ಪ್ರಕಾಶನ:- ದಾಕ್ಷಾಯಿಣಿ ಪ್ರಕಾಶನ ಮೈಸೂರು

ಇತಿಹಾಸವನ್ನು ವರ್ತಮಾನದ ಬೆಳಕಲ್ಲಿ ನೋಡುವುದು ಒಂದು ಸೋಜಿಗದ ಸಂಗತಿ. ವರ್ತಮಾನ ಸಾಯುತ್ತಲೇ ಭೂತವಾಗುತ್ತದೆ. ಅದನ್ನು ಮರೆಯುವದು ಮಾನವನ ಸಹಜ ಗುಣ.‌ ಮತ್ತೆ ಕಣ್ಣೆದುರು ಬರಬೇಕೆಂದರೆ ಅಕ್ಷರ ದಾಖಲೆಗಳೇ ಪ್ರಮಾಣವಾಗುತ್ತವೆ.‌ ಐತಿಹಾಸಿಕ ದೇವಾಲಯಗಳ ತೊಟ್ಟಿಲು ಪುಸ್ತಕವನ್ನು ಓದಿದಾಗ ನನಗೆ ಹೊಳೆದ ಮೊದಲ ವಿಚಾರಗಳೇನೆಂದರೆ.

ಸಾಹಿತಿ ಶರೀಫ ಗಂಗಪ್ಪ ಚಿಗಳ್ಳಿ ಇವರು ಈ ಪುಸ್ತಕದಲ್ಲಿ 15 ಲೇಖನ ಬರೆದಿದ್ದಾರೆ. ಬಹುತೇಕ ಕನ್ನಡಿಗರು ಕೇಳಬಲ್ಲ, ನೋಡಬಹುದಾದ ಸುಪ್ರಸಿದ್ಧ ದೇವಾಲಯಗಳ ಚಿತ್ರಣಗಳು ಇಲ್ಲಿವೆ.‌ ಒಂದಿಷ್ಟು ಕೇಳಿ ನೋಡಿದರು ಅವುಗಳ ಇತಿಹಾಸ ಬಲ್ಲವರು ಬಹಳ ಕಡಿಮೆ.‌ ಅಂತಹ ಹಿನ್ನೆಲೆ ತಿಳಿಸುವ ಪುಸ್ತಕ ಐತಿಹಾಸಿಕ ದೇವಾಲಯಗಳ ತೊಟ್ಟಿಲಾಗಿದೆ.‌

ಇಲ್ಲಿಯ ಚಿಕ್ಕ ಚಿಕ್ಕ ಲೇಖನಗಳು ಸರಳವಾದ ಭಾಷೆಯ ಮೂಲಕ ಅಲ್ಪದರಲ್ಲಿಯೇ ಅನೇಕ ದಾಖಲೆಗಳನ್ನು ನೀಡುತ್ತದೆ. ಗ್ರಾ.ಪಂ. ಕ್ಲಾರ್ಕ್ ಶರೀಫರ ಆಸಕ್ತಿ ಬಹಳ ವಿಶಿಷ್ಟವಾದುದು. ಸಾಹಿತ್ಯ ಕ್ಷೇತ್ರಕ್ಕೆ ಬರುವ ಹೊಸಬರು ಕಾವ್ಯವನ್ನೊ, ಕಥಾನಕಗಳನ್ನೊ ಈಗಿನ ಅಂಕಣ ಬರಹಗಳಿಗೆ ಮೊರೆ ಹೋಗುವುದು ಸರ್ವೇಸಾಮಾನ್ಯ. ಆದರೆ ಪ್ರಸ್ತುತ ಲೇಖಕರು ನಮ್ಮ ನಾಡಿನ ಶಿಲ್ಪಕಲಾ ಅಧ್ಯಾಯನಕ್ಕೆ ಹೊರಟಿರುವುದು ವಿಶೇಷವೆನಿಸುತ್ತದೆ.

ಇದು ಲೇಖಕರ 5ನೇ ಕೃತಿ. ಈ ಹಿಂದೆ ವಿಚಾರ ದೀಪ್ತಿ, ಅನ್ನದ ಬಟ್ಟಲು, ಮಣ್ಣಿಗಾಗಿ ಮಡಿದವರು ಹಾಗೂ ಅರಳುವ ಹೂವುಗಳು ಎಂಬ ನಾಲ್ಕು ಕೃತಿಗಳನ್ನು ಸ್ವಾರಸ್ವತ ಲೋಕಕ್ಕೆ ನೀಡಿದ್ದಾರೆ. ಹೀಗಾಗಿ ಬರವಣಿಗೆಯ ಮೇಲೆ ಒಂದಿಷ್ಟು ಅತ್ಯುತ್ತಮ ಹಿಡಿತ ಇವರಿಗಿದೆ. ಇಲ್ಲಿಯ ಲೇಖನಗಳ ಶೀರ್ಷಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಾಮಾಜಿಕ ಕಾಳಜಿಯೇ ಲೇಖಕರ ಕೇಂದ್ರ ಪ್ರಜ್ಞೆಯಾಗಿದೆ. ಈಗ ಅದೊಂದಿಷ್ಟು ನಾಡಿನ ಶಿಲ್ಪ ಕಲೆಯತ್ತ ಹೊರಳಿರುವುದು ವಿಶೇಷವಾಗಿದೆ.

ಲೇಖಕರ ಬರಹದಲ್ಲಿ ಹೇಳಿಕೊಂಡಂತೆ ಪ್ರಸ್ತುತ ಕೃತಿಯು ಹೊಯ್ಸಳ, ರಾಷ್ಟ್ರಕೂಟ, ಕದಂಬ, ಚಾಲುಕ್ಯರ ಕಾಲದ ವಾಸ್ತುಶಿಲ್ಪಗಳನ್ನು ಇಂದಿನ ಕಾಲಕ್ಕೆ ಪರಿಚಯ ಮಾಡಿಕೊಡುತ್ತಿದ್ದಾರೆ. ನಾಡಿನ ಕಲಾಯಾನ ದಾಖಲೆಗಳು ವಿಸ್ಮಯವಾಗಿದೆ. "ಕಲೆಯಲ್ಲ ಈ ಗುಡಿಯು ಶಿಲೆಯ ಬಲೆಯು" ಎಂದು ಕುವೆಂಪುರವರ ಸಾಲುಗಳು ನೆನಪಾಗುತ್ತವೆ.

ಈ ಬರವಣಿಗೆಯ ಹಿಂದೆ ಒಂದು ಪ್ರಬುದ್ಧ ಮನಸ್ಸಿದೆ. ಓದು ತಿಳಿವು, ಅರಿವುಗಳ ಬಿಚ್ಚಿಡುವ ಪ್ರಯತ್ನ ಶ್ಲಾಘನೀಯ. ಒಂದೊಂದು ಲೇಖನವನ್ನು ಓದುತ್ತಾ ಹೋದಂತೆ ಒಂದು ಮಟ್ಟದ ಏಕಾಕೃತಿ ಬರವಣಿಗೆ ನೋಡಬಹುದು.‌ ಅದರಲ್ಲೂ ಕುತುಹಲಕಾರಿಯಾದ ಕೆಲವು ತಲೆಬರಹಗಳು ಓದುಗರನ್ನು ‌ಸೆಳೆಯುತ್ತವೆ. ಉದಾಹರಣೆ: ಪ್ರಾಚೀನ ದೇವಾಲಯಗಳ ತೊಟ್ಟಿಲು, ದೇವರಿಲ್ಲದ ದೇವಾಲಯ, ಕಮಲ ಮಂಟಪದಲ್ಲಿ ಕಂಗೊಳಿಸುವ ತಾರಕೇಶ್ವರ, ಶಿಲ್ಪ ಕಲೆಯ ರಸ ಋಷಿಗಳ ತಾಣ ಹಾವೇರಿ ಪುರಸಿದ್ದೇಶ್ವರ ದೇವಾಲಯ ಇವುಗಳನ್ನು ಗಮನಿಸಬಹುದು.

ಕಾಲಕಾಲಕ್ಕೆ ಬೇರೆ ಬೇರೆ ಕಾರಣಗಳಿಂದ ಧಕ್ಕೆಗೊಳಗಾದ ನಮ್ಮ ಶಿಲ್ಪ ಸಾಮ್ರಾಜ್ಯ ಈಗ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆಧುನಿಕ ಕಾಲದಲ್ಲಿ ಕೋಟೆ ಕೊತ್ತಲಗಳನ್ನು ಸಣ್ಣ ಸಣ್ಣ ಊರಲ್ಲಿರುವ ದೇವಾಲಯಗಳು ಪರಂಪರೆಯ ಅಜ್ಞಾನಗಳ ಕಾರಣಗಳಿಂದಾಗಿ ಹಾಸುಗಲ್ಲಾದ ಶಾಸನಗಳು ಇವೆ. ಇವೆಲ್ಲವನ್ನು ಲೇಖಕರು ಮನಸ್ಸಿನಲ್ಲಿಟ್ಟುಕೊಂಡು ಇತಿಹಾಸ ಉಳಿಯಬೇಕೆಂದರೆ. ಐತಿಹಾಸಿಕ ದೇವಾಲಯಗಳು ಉಳಿಯಬೇಕೆಂದಿದ್ದಾರೆ.

ಇಂತಹ ಕೆಲಸಗಳು ಬೇರೆ ಬೇರೆ ವಿಶ್ವ ವಿದ್ಯಾಲಯಗಳಿಂದ ಆಗುತ್ತಿವೆ.‌ ವಿಶೇಷವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯಗಳು ಐತಿಹಾಸಿಕ ದೇವಾಲಯಗಳ ಬಗ್ಗೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದನ್ನು ಗಮನಿಸಬಹುದು. 80 ವರ್ಷಗಳ ಹಿಂದೆ ಡಾ. ಶಿವರಾಂ ಕಾರಂತರು ಕರ್ನಾಟಕವನ್ನು ಸುತ್ತಿ ಬರೆದ ಕರ್ನಾಟಕ ದೇವಾಲಯಗಳು ನಾವೆಲ್ಲ ಓದಬೇಕು. ಈ ಕೃತಿಯಲ್ಲಿ ಉಲ್ಲೇಖವಾದ ಹಾವೇರಿಯ ಪ್ರಸಿದ್ಧ ಪುರಸಿದ್ದೇಶ್ವರ ದೇವಾಲಯವನ್ನು ನೋಡಿ " ನೆಲದಲ್ಲಿ ಅರಳುತ್ತಿರುವ ಕಮಲ" ಎಂದಿದ್ದಾರೆ.‌ ಇದೆ ದೇವಾಲಯದ ಕುರಿತು ಶರೀಫ ಗಂ ಚಿಗಳ್ಳಿಯವರು ಸಾಕಷ್ಟು ವಿಷಯ ಸಂಗ್ರಹಿಸಿ ಬರದಿದ್ದು ಮನೋಹರವಾಗಿದೆ.

ಯಾವ ಮುಚ್ಚು ಮರೆಯಿಲ್ಲದೆ ಬಿಚ್ಚಿಕೊಳ್ಳುವ ಐತಿಹಾಸಿಕ ದೇವಾಲಯಗಳ ತೊಟ್ಟಿಲು ಕೃತಿ ಹೊಸ ಜನಾಂಗಕ್ಕೆ ಮಾರ್ಗದರ್ಶಿ ಆಗಬಹುದು. ನಾಡಿನ ವಾಸ್ತುಶಿಲ್ಪವನ್ನು ಪರಿಚಯಿಸುವುದರ ಜೊತೆಗೆ ಅವುಗಳ ರಕ್ಷಣೆ ಅಗತ್ಯ ಎಂಬ ಸಂದೇಶ ಕೂಡ ಇಲ್ಲಿದೆ. ದೇವಾಲಯಗಳ ಚಿತ್ರ, ಯಾರ ಕಾಲದ್ದು, ಇರುವ ಊರಿನ ವಿವರಗಳು, ಇತಿಹಾಸ ಇತ್ಯಾದಿ ಗಮನಾರ್ಹವಾಗಿದೆ.

ಅಕ್ಷರ ದಾಖಲೆಗಳ ಮೂಲಕ ಮರೆತು ಹೋದ ಇತಿಹಾಸವನ್ನು ಮತ್ತೆ ಕಟ್ಟಿಕೊಡುವ " ಐತಿಹಾಸಿಕ ದೇವಾಲಯಗಳ ತೊಟ್ಟಿಲು" ಕೃತಿ ಸ್ವಾಗತಾರ್ಹ ಲೇಖಕರಾದ ಶರೀಫ ಚಿಗಳ್ಳಿಯವರು ಇನ್ನಿಷ್ಟು ನಾಡನ್ನು ಸುತ್ತಿ ಮರೆತು ಹೋದ ಜೀವನ ವಿಧಾನಗಳ ಬಗ್ಗೆ ಬರೆಯಬೇಕು.‌ ಸೃಜನಶೀಲ, ಸಂಶೋಧನೆ, ಕ್ರಾಂತಿಕಾರಕ ಬರವಣಿಗೆಯು ಇನ್ನೂ ಹೆಚ್ಚು ಹೆಚ್ಚು ಮೂಡಿ ಬರಲಿ ಅಂತಾ ನಮ್ರವಾಗಿ ಸೂಚಿಸುವೆ.

MORE FEATURES

Bhinna-Ruchi: ಆಹಾರ ಸೇವನೆ “ಸುರಕ್ಷಿತ” ಅನ್ನಿಸುವುದು ಯಾವಾಗ?!

08-01-2025 ಬೆಂಗಳೂರು

"ಪುಸ್ತಕದ ಬಗ್ಗೆ ನಾನು ಹೆಚ್ಚು ವಿವರಿಸಲು ಹೋಗುವುದಿಲ್ಲ. ಏಕೆಂದರೆ ಅದು ನಿಮ್ಮ ಓದಿನ ಸುಖಕ್ಕೆ ಧಕ್ಕೆ ತಂದೀತು. ಆ...

Samvikshane; ಸಾಹಿತ್ಯ-ಸಂಸ್ಕೃತಿಯ ಮಾಹಿತಿ ಕಣಜ

08-01-2025 ಬೆಂಗಳೂರು

“ಈ ಕೃತಿ ಬರೀ ಕೃತಿಗಳ ವಿಮರ್ಶೆಯಾಗಿ ರೂಪಗೊಂಡಿಲ್ಲ. ಸಾಹಿತ್ಯ- ಸಂಸ್ಕೃತಿ ಕುರಿತ ಸಾಂಸ್ಕೃತಿಕ ಅಧ್ಯಯನವಾಗಿ ಪರಿಣ...

Harate-kashaya ನನ್ನ ಶಬ್ದ ಸಾಲುಗಳೇ ನಿಮಗೆ ಕಷಾಯ

08-01-2025 ಬೆಂಗಳೂರು

“ಒಟ್ಟಾರೆ ಈ ಕೃತಿ ಕೆಲವೆಡೆ ತಲೆ ಹರಟೆ ಕಷಾಯವಾಗಿಯೂ ಕಾಡಿ, ನಿಮ್ಮ ತಲೆ ತಿನ್ನುವಂತಾದರೆ ನಾನು ತಲೆ ಕೆಡಿಸಿಕೊಂಡು...