ಶ್ರವಣ್ ಹೆಗ್ಗೋಡು ಅವರ ಗೊಂಬೆಗಳ ಜೊತೆಗಿನ ಪಯಣ

Date: 20-08-2023

Location: ಬೆಂಗಳೂರು


''ಪ್ರತಿಭಾನ್ವಿತ, ಪೊಪೆಟ್ ರಂಗಕರ್ಮಿ ಶ್ರವಣ್ ಹೆಗ್ಗೋಡು ಭಾರತೀಯ ರಂಗಭೂಮಿಯಲ್ಲಿ ತನ್ನದೇ ಆದ ವಿನೂತನ ರಂಗಶೈಲಿಯ ಮೂಲಕ ಗುರುತಿಸಿಕೊಂಡ ಸೃಜನಶೀಲ ನಿರ್ದೇಶಕ. ಗೊಂಬೆಗಳಿಗೆ ಜೀವ ಭಾವ ತುಂಬಿ ನೋಡುಗರ ಗಮನ ಸೆಳೆಯುವ ಹಾಗೆ ಹಿಡಿದಿಡುವ ಮೂವತ್ತೊಂದು ವರ್ಷದ ಶ್ರವಣ್ ಹೆಗ್ಗೋಡು ಅವರ ಗೊಂಬೆಗಳ ಜೊತೆಗಿನ ಪಯಣ ಶುರುವಾದ ಬಗೆಯನ್ನು ಅವರ ಮಾತಿನಲ್ಲಿ ತಿಳಿದುಕೊಳ್ಳೋಣ ಬನ್ನಿ.'' ಎನ್ನುತ್ತಾರೆ ಅಂಕಣಕಾರ್ತಿ ಜ್ಯೋತಿ ಎಸ್. ಅವರು ತಮ್ಮ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ “ಗೊಂಬೆಯಾಟ ಕಲಾವಿದನ” ಸಾಧನೆಯನ್ನು ಹಂಚಿಕೊಂಡಿದ್ದಾರೆ.

ನೂರಾರು ಕಲಾಪ್ರಕಾರಗಳು ಅತ್ಯಂತ ವಿಶಿಷ್ಟವಾಗಿ ಜಗತ್ತಿನೆಲ್ಲೆಡೆ ಮೂಡಿಬಂದಿವೆ. ಹಾಗೇನೇ ಅವುಗಳನ್ನು ಪ್ರಚುರಪಡಿಸುವ ಕಲಾವಿದರು ಕೂಡ ಅಲ್ಲಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಮ್ಮಲ್ಲಿನ ಕಲೆಗಳನ್ನು ವಿದೇಶದಲ್ಲಿ, ವಿದೇಶದಲ್ಲಿನ ಕಲೆಗಳನ್ನು ನಮ್ಮಲ್ಲಿ ಮಾಡಿತೋರಿಸುವ ಕಲಾವಿದರೂ ಇದ್ದಾರೆ. ಇವತ್ತಿನ ನಮ್ಮ ಅಂಕಣದಲ್ಲಿ ಜಪಾನಿನ ಬುನ್ರಾಕು ಎಂಬ ಜನಪದ ಶೈಲಿಯ ನಾಟಕವನ್ನು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಯುವ ಕಲಾವಿದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಶ್ರವಣ್ ಹೆಗ್ಗೋಡು ಅವರ ಪರಿಚಯ ನಿಮ್ಮ ಓದಿಗೆ. ಇವರು ಯುವ ಕಲಾವಿದರಾಗಿ ನಾಟಕದ ರಚನೆ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಜಪಾನಿನ ಬುನ್ರಾಕು ಎಂಬ ಜನಪದ ಶೈಲಿಯ ನಾಟಕವನ್ನು ನಮ್ಮ ಭಾರತದಲ್ಲಿ ಪರಿಚಯಿಸಿ ಡೈನೋಸಾರ್, ಹಕ್ಕಿ ಕಥೆ, ಪ್ಲಾಸ್ಟಿಸಿಟಿ(ಪ್ಲಾಸ್ಟಿಕ್ ಪರಿಣಾಮದ ಬಗ್ಗೆ) ಜೀವನಚಕ್ರದ ಬಗ್ಗೆ ನಾಟಕಗಳನ್ನು ರಂಗಭೂಮಿಯ ಮೇಲೆ ಪ್ರದರ್ಶಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ನಮ್ಮಲ್ಲಿ ತೊಗಲು ಗೊಂಬೆಯಾಟ, ತೊಲ ಬೊಂಬುಲ, ಯಕ್ಷಗಾನ ಹೀಗೆ ಪ್ರಯೋಗಗಳಾಗಿವೆ. ಆದರೆ ಪಪ್ಪೆಟ್ ಶೋ ಹೆಚ್ಚು ಪ್ರಸಿದ್ಧಿ ಪಡೆದಿಲ್ಲ. ಪ್ರತಿಭಾನ್ವಿತ, ಪೊಪೆಟ್ ರಂಗಕರ್ಮಿ ಶ್ರವಣ್ ಹೆಗ್ಗೋಡು ಭಾರತೀಯ ರಂಗಭೂಮಿಯಲ್ಲಿ ತನ್ನದೇ ಆದ ವಿನೂತನ ರಂಗಶೈಲಿಯ ಮೂಲಕ ಗುರುತಿಸಿಕೊಂಡ ಸೃಜನಶೀಲ ನಿರ್ದೇಶಕ. ದಕ್ಷಿಣ ಭಾರತದಲ್ಲಿ ಅನೇಕ ಕಡೆ ನಿರ್ದೇಶಿಸಿದ ಪೊಪೆಟ್ ಶೋಗಳು ಜನಮನ್ನಣೆ ಗಳಿಸಿವೆ. ಜರ್ಮನಿ, ಟರ್ಕಿ, ಚೈನಾ, ಬಾಂಗ್ ಕಾಕ್, ಹೀಗೆ ದೇಶ ವಿದೇಶಗಳಲ್ಲೂ ನಿರ್ಜೀವ ಗೊಂಬೆಗಳಿಗೆ ಜೀವ ಭಾವ ತುಂಬಿ ನೋಡುಗರ ಗಮನ ಸೆಳೆಯುವ ಹಾಗೆ ಹಿಡಿದಿಡುವ ಮೂವತ್ತೊಂದು ವರ್ಷದ ಶ್ರವಣ್ ಹೆಗ್ಗೋಡು ಅವರ ಗೊಂಬೆಗಳ ಜೊತೆಗಿನ ಪಯಣ ಶುರುವಾದ ಬಗೆಯನ್ನು ಅವರ ಮಾತಿನಲ್ಲಿ ತಿಳಿದುಕೊಳ್ಳೋಣ ಬನ್ನಿ.

'ತಂದೆ ಡಿ. ಎಸ್. ಮಂಜಪ್ಪ ಹೆಗ್ಗೋಡು, ತಾಯಿ ನೀಲಮ್ಮ. ಪಿ. ಯು. ಸಿ. ತನಕ ವಿದ್ಯಾಭ್ಯಾಸವನ್ನು ಮುಗಿಸಿದ್ದೇನೆ. ಅಪ್ಪ ರಂಗಭೂಮಿಯನ್ನು ಸೆರೆ ಹಿಡಿಯುವ ಫೋಟೋಗ್ರಾಫರ್ ಆಗಿ ಕೆಲಸ ಮಾಡ್ತಾ ಇದ್ದರು. ನಾನು ಚಿಕ್ಕವನಿರುವಾಗ ಅಪ್ಪನ ಕೈ ಹಿಡಿದುಕೊಂಡು ನಾಟಕ ನೋಡೋಕೆ ನಾನು ಹೋಗುತ್ತಿದ್ದೆ. ಆದರೆ ಅಲ್ಲಿ ಕಲಿಕೆ ಹೇಗಾಗುತ್ತದೆ ಅನ್ನೋದು ಗೊತ್ತಿರಲಿಲ್ಲ. ಹಾಗಾಗಿ ಪಿ. ಯು. ಸಿ. ನಂತರವೇ ನಾನು ರಂಗಶಿಕ್ಷಣ ಕಲಿಯಲು ಮುಂದಾದೆ. ನೀನಾಸಂನಲ್ಲಿ ಕಲಿತು ನಾಲ್ಕೈದು ವರ್ಷ ಕಲಾವಿದನಾಗಿ ಕೆಲಸ ಮಾಡಿದೆ. ಅನುರೂಪ್ ರಾಯ್ ಅವರು ನನ್ನ ಮೇಲೆ ಬಹಳ ಪ್ರಭಾವ ಬೀರಿದ ವ್ಯಕ್ತಿ. ಅವರಿಂದ ಪ್ರಭಾವಿತಾನಾಗಿ ಜಪಾನಿ ಜಾನಪದ ಶೈಲಿಯ ಬೊಂಬೆಯಾಟದ ಬೇರೆ ಬೇರೆ ಕಲಾಶೈಲಿಗಳನ್ನು ರಂಗದ ಮೇಲೆ ತರಬೇಕು ಅಂತ ಹೊಸ ಆಲೋಚನೆಗಳನ್ನು ಅಳವಡಿಕೆ ಮಾಡ್ತಾ ಹೋದಂತೆ ರಂಗಭೂಮಿಯೂ ಅದನ್ನು ಸ್ವೀಕರಿಸಿತು. ನಮ್ಮ ಕಥೆಗಳಲ್ಲಿ ನಾನಾತರದ ಗೊಂಬೆಗಳಿಗೆ ಅಂತಲೇ ಹೇಳಿ ಮಾಡಿಸಿದ ಸ್ಥಾನಗಳಿವೆ. ಕೆಲವೊಮ್ಮೆ ಒಬ್ಬ ನಟನಾಗಿ ಹೇಳಲಿಕ್ಕೆ ಆಗದ ವ್ಯಕ್ತಪಡಿಸಲಿಕ್ಕೆ ಆಗದ ಹಲವು ಸೂಕ್ಷ್ಮ ಸನ್ನಿವೇಶಗಳನ್ನು ಈ ಗೊಂಬೆಗಳು ನಿಭಾಯಿಸುತ್ತವೆ. ಹಾಗಾಗಿ ಈ ಗೊಂಬೆಗಳನ್ನು ರಂಗದಮೇಲೆ ಯಾಕೆ ತರಬಾರದು ಅಂತ ಯೋಚಿಸಿದೆ. ಈ ಕಲೆ ಮಕ್ಕಳಿಗಾಗಿಯಷ್ಟೇ ಸೀಮಿತವಾಗಿತ್ತು. ನಂತರ ವಯಸ್ಕರಿಗೆ ತಲುಪಿಸಬೇಕೆಂಬ ಆಲೋಚನೆ ಬಂದಿತು. ಅದೇ ಸಮಯದಲ್ಲಿ ಅನುರೂಪ್ ರಾಯ್ ಅವರು ಮಾಸ್ಟರ್ ಕ್ಲಾಸ್ ಮಾಡಲಿಕ್ಕೆ ದೆಹಲಿಯಿಂದ ಕರ್ನಾಟಕಕ್ಕೆ ಬಂದಿದ್ದರು. ಎರಡು ತಿಂಗಳು ಕ್ಲಾಸ್ ಮಾಡಿದ್ರು. ಅದು ನನ್ನಲ್ಲಿ ಹೆಚ್ಚು ಪ್ರಭಾವ ಬೀರಿತು. ಇದರಿಂದ ದೆಹಲಿಯ ಕಟ್ಕಥಾ ಬೊಂಬೆ ಕಲಾ ಟ್ರಸ್ಟ್ ನಲ್ಲಿ ಒಂದು ವರ್ಷಗಳ ಕಾರ್ಯನಿರ್ವಹಿಸುವ ಅವಕಾಶವೂ ದೊರೆಯಿತು. ನಾಲ್ಕೈದು ವರ್ಷ ನಟನೆಯಲ್ಲಿ ಕೆಲಸ ಮಾಡಿದ ನಂತರ ಕಥೆಯನ್ನು ಹೇಳುವುದಕ್ಕೆ ನಮಗೆ ಟೂಲ್ಸ್ ಬೇಕು. ಅದು ಒಂದು ಅಭಿನಯದ ಮುಖೇನ ಇರಬಹುದು. ಚಿತ್ರಕಲೆ, ಸಂಗೀತ ಯಾವುದೇ ಇರಬಹುದು. ನಾನು ನನ್ನನ್ನು ರಂಗದಮೇಲೆ ವ್ಯಕ್ತ ಪಡಿಸಿಕೊಳ್ಳಬೇಕೆಂದರೆ ಯಾವುದಾದರೂ ಒಂದು ಆಧಾರ ಬೇಕು. ಆ ಆಧಾರದಲ್ಲಿ ನಾನು ತುಂಬಾ ಪ್ರಭಾವವಾಗಿ ಕೆಲಸ ಮಾಡಬೇಕು. ಜೊತೆಗೆ ಅದೂ ಕೂಡ ಪ್ರಭಾವ ಬೀರುವಂತದ್ದಾಗಿರಬೇಕು. ನಾನು ಡಿಸೈನಿಂಗ್ ಸ್ಟೂಡೆಂಟ್ ಆದ್ದರಿಂದ ಈ ಬೊಂಬೆಯಾಟಗಳಲ್ಲಿ ಕ್ರಾಫ್ಟ್ ಅನ್ನೋದೆ ದೊಡ್ಡ ಸಾಮ್ರಾಜ್ಯ. ಹಾಗಾಗಿ ನನ್ನನ್ನು ತಾನೇ ಸೆಳೆದುಕೊಂಡು ಬಿಟ್ಟಿತು. ಏನೋ ಒಂದನ್ನು ಪರಿಣಾಮಕಾರಿಯಾಗಿ ಸೃಷ್ಟಿಸಬೇಕಿತ್ತು. ಹಾಗಾಗಿ ಅನುರೂಪ್ ರಾಯ್ ನನಗೆ ಬಹಳ ಪ್ರಭಾವ ಬೀರಿದ ವ್ಯಕ್ತಿ. ಮೂರು ತಿಂಗಳ ತರಬೇತಿಗೆ ಅಂತ ಹೋಗಿದ್ದೆ. ತರಬೇತಿಯ ನಂತರ ಅಲ್ಲೇ ಒಂದು ವರ್ಷ ಕೆಲಸ ಮಾಡಲು ಅವಕಾಶ ಸಿಕ್ತು. ಹ್ಯೂಮನ್ ಅನಾಟಮಿ ಅಲ್ಲಿ ತುಂಬ ಪ್ರಸಿದ್ಧವಾಗಿತ್ತು. ಆಗ ನನಗೆ ಪ್ರಾಣಿಗಳನ್ನೂ ರಂಗದಮೇಲೆ ತರಬಹುದು ಅನ್ನೋ ಯೋಚನೆ ಹುಟ್ಟಿತು'.

'ಕಥಾ ವಸ್ತುವಿಗೆ ಎಲ್ಲ ಸೇರಿ ಕಥೆ ಹೇಳುವುದಷ್ಟೇ ಮುಖ್ಯವಾಗಿರುತ್ತದೆ. ನಾವು ಇದಕ್ಕೆ ಸಮಾಕಾಲೀನವಾಗಿ ಸಾಧ್ಯತೆಗಳನ್ನು, ಹೊಸತನವನ್ನು ತಂದುಕೊಡಬೇಕು. ಪಪ್ಪೆಟ್ ಅಂದರೆ ಮಿತಿಯಿಲ್ಲ. ಅದಕ್ಕೆ ಯಾವ ವ್ಯಕ್ತಿತ್ವವಿಲ್ಲ. ಇಷ್ಟೇ ಇರುತ್ತದೆ, ಹೀಗೆ ಇರುತ್ತದೆ ಎನ್ನುವ ಯಾವ ಅಳತೆಯೂ ಇಲ್ಲ. ಅದು ಹುಟ್ಟಿರೋದೇ ಕಥೆ ಹೇಳೋದಕ್ಕೆ. ಉದಾ: ಕುವೆಂಪುರವರ ಕಥೆಯ 'ಹಂಡ ನಾಯಿ' ಬಂದರೆ, ಈ 'ಹಂಡ ನಾಯಿ ' ಹುಟ್ಟಿದ್ದೇ ಆ ಹಂಡ ನಾಯಿಗಾಗಿ ಅದಕ್ಕೆ ಸ್ವಂತ ಜೀವವಿಲ್ಲ. ಆಗ ಆ 'ಹಂಡ ನಾಯಿ'ಯನ್ನು ಪ್ರೇಕ್ಷಕರು ಪರಿಗಣಿಸಬೇಕು. ಅದಕ್ಕೆ ಇನ್ನೊಂದು ವ್ಯಕ್ತಿತ್ವ ಇಲ್ಲದೇ ಇದ್ದುದರಿಂದ ಸಾತ್ವಿಕತೆ ತಾನಾಗಿಯೇ ಬಂದು ಬಿಡುತ್ತದೆ. ಈ ಕಲೆಗೆ ನಮ್ಮ ಭಾರತದಲ್ಲಿ ರಚನೆಯಾಗಿರುವ ಆಗಿರುವ ಸಂಸ್ಥೆಗಳಿಲ್ಲ. ಮೂಲದಲ್ಲಿ ಬೊಂಬೆಗೆ ಭಾಷೆ ಇಲ್ಲ. ಮಾತಿನ ಭಾಷೆ ಕಡಿಮೆ ಇದ್ದಷ್ಟು ಅವುಗಳ ಕಥೆ ಚೆನ್ನಾಗಿ ಹೊರಗೆ ಬರುತ್ತದೆ. ನನ್ನ ಧ್ವನಿಯನ್ನೇ ಕೊಡಬೇಕು. ಅದಕ್ಕೆ ಇರುವಿಕೆ ಇದೆ. ಕೆಲವೊಮ್ಮೆ ಮಾತಿನಿಂದ ಹೇಳಲಾಗದ್ದನ್ನು ಈ ಗೊಂಬೆಗಳು ಹೆಚ್ಚು ಪ್ರಭಾವಶಾಲಿಯಾಗಿ ಹೇಳುತ್ತವೆ, ಪರಿಣಾಮ ಬೀರುತ್ತವೆ. ನೋಡುಗರ ಅನುಭವವೇ ಈ ಗೊಂಬೆಗಳ ತಾಕತ್ತು. ಒಬ್ಬ ನಟನಾಗಿ ನಟನೆಗೆ ಶರಣಾಗಬೇಕು. ಇರುವಷ್ಟು ಹೊತ್ತು ಮಾಡುವ ಕೆಲಸಗಳನ್ನು ನೈಜವಾಗಿ ಮಾಡುವ ಶಕ್ತಿ ಈ ಗೊಂಬೆಗಳಿಗಿದೆ. ನೋಡುಗರನ್ನು ಪಾತ್ರದೊಳಗೆ ತಂದು ನಿಲ್ಲಿಸುತ್ತದೆ. ಹೀಗೆ ಈ ರೀತಿಯ ಶೋಗಳನ್ನು ನಮ್ಮಲ್ಲಿ ಮಾಡುತ್ತ ಬಂದಿದ್ದೇನೆ' ಎನ್ನುತ್ತಾರೆ.

ಇಂದಿನ ಆಧುನಿಕತೆಯಲ್ಲಿ ನಾಟಕಗಳನ್ನು ನೋಡುವ ಜನ ಕಡಿಮೆಯಾಗುತ್ತಿದ್ದಾರೆ ಎನ್ನುವ ಆತಂಕ ಒಂದೆಡೆಯಿದ್ದರೂ ಇನ್ನೊಂದೆಡೆ ಈ ರೀತಿಯ ವಿಭಿನ್ನ ಪ್ರಯೋಗಗಳು ಯಶಸ್ವಿಯಾಗಿ ಮೂಡಿಬರುತ್ತಿರುವುದು ಆಶಾದಾಯಕ. ಅದರಲ್ಲೂ ವಿದೇಶೀ ಕಲಾಪ್ರಕಾರವೊಂದನ್ನ ಕಲಿತು ನಮ್ಮ ದೇಶದಲ್ಲಿ ಮಾಡುತ್ತ ಹೊಸತನ ಪರಿಚಯಿಸುತ್ತಿರುವ ಶ್ರವಣ್ ಹೆಗ್ಗೋಡು ತಮ್ಮ ನಾಲ್ಕು ಜನರ ತಂಡವೊಂದನ್ನು ಕಟ್ಟಿಕೊಂಡು ನಾಡಿನಾದ್ಯಂತ ಈ ಪೆಪ್ಪಟ್ ಶೋ ಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಯುವ ಜನರ ಶ್ರಮ, ಹೊಸ ಪ್ರಯತ್ನ ಎಲ್ಲರ ಮನಸ್ಸನ್ನು ಗೆಲ್ಲಲಿ ಎಂಬ ಸದಾಶಯ ನಮ್ಮದು.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಬರಹಗಳು:
ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಯಿಂದ ಹೊರಬಂದ ಮಂಜುಳ ಮಾಳ್ಗಿ
ಮಹಾಂತೇಶ್ ಅವರ ಹಾಡುಪಾಡು ಬದುಕಿನ ನೋಟ
ಗುರಿ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ಮುಟ್ಟುವುದೇ ಮುಖ್ಯ
ರಂಗಭೂಮಿ ನನ್ನ ಬದುಕನ್ನು ಚೆಂದವಾಗಿ ರೂಪಿಸಿದೆ: ಪ್ರಶಾಂತ್ ಕುಮಾರ್
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ

ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ

 

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...