ಶ್ರದ್ದಾಭಕ್ತಿಗಳಿಂದ ಆಚರಿಸುವ ಪವಿತ್ರವಾದ ಹಬ್ಬ ‘ರಂಜಾನ್’


"ರಂಜಾನ್ ಹಬ್ಬದ ದಿನ ಮುಸಲ್ಲಾನರೇಲ್ಲ ಈದ್-ಗಾ ಮೈದಾನಕ್ಕೆ ಹೋಗಿ ನಮಾಜ್ ಮಾಡಿ ವಿಭಿನ್ನವಾಗಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ಕಾಣವುದೇ ಒಂದು ಸಂಭೃಮದ ಕ್ಷಣ. ಜಗತ್ತಿನಾದ್ಯಂತ ಆಚರಿಸಲ್ವಡುವ ರಂಜಾನ್ ಹಬ್ಬದಲ್ಲಿ ರಾಮ ಮತ್ತು ರಹೀಮ ಒಂದಾಗಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಸದ್ಬಾವನೆಯ ಸಂತಸವನ್ನು ಇಲ್ಲಿ ಕಾಣಬಹುದು," ಎನ್ನುತ್ತಾರೆ ಮೊಹಮ್ಮದ್ ಅಜರುದ್ದೀನ್. ಅವರು ರಂಜಾನ್ ಹಬ್ಬದ ಪ್ರಯುಕ್ತ ಬರೆದ ಲೇಖನ.

ರಂಜಾನ್ ಜಗತ್ತಿನೆಲ್ಲೆಡೆ ಮುಸಲ್ಲಾನರು ಅತ್ಯಂತ ಶ್ರದ್ದಾಭಕ್ತಿಗಳಿಂದ ಆಚರಿಸುವ ಪವಿತ್ರವಾದ ಹಬ್ಬ ‘ರಂಜಾನ್’. ರಂಜಾನ್ ಅಥವಾ ರಮದಾನ್ ಇದು ಇಸ್ಮಾಮ್ ಕ್ಯಾಲೆಂಡರ್ ನಲ್ಲಿ ವರ್ಷದ ಒಂಬತ್ತನೇ ತಿಂಗಳಲ್ಲಿ ಬರುವ ಹಬ್ಬ. ಇಮಾನ್. ನಮಾಜ್, ರೋಜಾ, ಜಕಾತ್ ಹಾಗೂ ಹಜ್ ಎಂಬ ಪಂಚತತ್ವಗಳಲ್ಲಾ ರಂಜಾನ್ ಹಬ್ಬದ ರೋಜಾ ಎಂಬುವುದು ಬಹುದೊಡ್ಡ ಅಂಗವಾಗಿದೆ.

ಇಸ್ಲಾಂ ಧರ್ಮದ ನಾಲ್ಕನೆಯ ಕಡ್ಡಾಯ ಕರ್ಮ ರಂಜಾನ್ ತಿಂಗಳು. ಈ ತಿಂಗಳು ಸಂಪೂರ್ಣ ವ್ರತಾಚರಣೆಯಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾದಿ ಮೊಹಮ್ಮದ್ ರವರ ಮೇಲೆ ಇದೇ ತಿಂಗಳಲ್ಲಿ ಇಸ್ಲಾಂ ಧðದ ಪವಿತ್ರ ಗ್ರಂಥ “ಕುರನ್” ಅವತೀರ್ಣಗೊಂಡಿತು. ಇ ಸವಿ ನೆನೆಪಿಗೆ ಗೌರವಾರ್ಹ ಪ್ರತಿವರ್ಷವೂ ಪ್ರಭಾತಕಾಲದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇವರ ಸಮಯಗಳಲ್ಲಿ ಧರ್ಮಸುಮ್ಮತವಾದ ಅನ್ನ, ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಂನಲ್ಲಿ ಉಪವಾಸ ಅಥವಾ ವ್ರತಾಚರಣೆ ಎಂದು ಕರೆಯುತ್ತಾರೆ. ಬಡವರ ಹಸಿವು ಶ್ರೀಮಂತರಿಗೆ ತಿಳಿಯಲಿ ಎಂದು ಈ ಹಬ್ಬದ ಪ್ರಮುಖ ಉದ್ದೇಶ. ಸ್ವೇಚ್ಛೆ, ಸಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.

ರಂಜಾನ್ ಹಬ್ಬ ಆರಂಭವಾಗುವುದೇ ಉಪವಾಸದಿಂದ. ಉಪವಾಸವೇ ಇಲ್ಲಿ ಪ್ರಧಾನ ಅದೂ ಇಡೀ ಒಂದು ತಿಂಗಳು ಪೂರ್ತಿ. ವರ್ಷದ ಹನ್ನೊಂದು ತಿಂಗಳು ನಮ್ಮ ದೇಹ ಮತ್ತು ಮನಸ್ಸಿನಲ್ಲಿ ತುಂಬಿದ ಮಾಲಿನ್ಯವನ್ನು ಒಂದು ತಿಂಗಳು ಉಪವಾಸ ಮಾಡಿ ಶುದ್ದೀಕರಿಸುವ ಧಾರ್ಮಿಕ ಕ್ರಿಯೆಯಿದು. ಈ ಉಪವಾಸವೆಂದರೆ ಅಂತಿಂಥ ಉಪವಾಸವಲ್ಲ. ಉಗುಳನ್ನು ನುಂಗಬಾರದೆನ್ನುತ್ತಾರೆ. ಅಂದರೆ ಅಂಥ ಕಟ್ಟುನಿಟ್ಟಿನ ಉಪವಾಸ ವ್ರತವಿದು. ಈ ಹಬ್ಬದ ಹೆಸರೇ ರಂಜಾನ್. ಇದರ ಕಠಿಣ ಆಚರಣೆ ಪ್ರತಿಯೊಬ್ಬ ಮುಸಲ್ಲಾನರಿಗೂ ಒಂದು ಸವಾಲೇ ಸರಿ. ಪುರುಷರು ಮತ್ತು ಮಹಿಳೆಯರೆಲ್ಲರೂ ಎಷ್ಟು ಕಷ್ಟವೆನಿಸಿದರೂ ಸಂತಸದಿಂದಲ್ಲೇ ಇದನ್ನು ಆಚರಿಸುವುದೇ ಒಂದು ವಿಶೇಷ. ಇಸ್ಲಾಂ ಧರ್ಮದಲ್ಲಿ ನಂಬಿಕೆಯುಳ್ಳವರೆಲ್ಲರೂ ಸರ್ವಶಕ್ತನಾದ ಅಲ್ಲಾಹನನ್ನು ಈ ಉಪವಾಸ ವ್ರತದ ಮೂಲಕ ರಂಜಾನ್ ನ ಕೊನೆಯ ಹತ್ತು ದಿನಗಳಲ್ಲಿ ಒಂದು ದೈವೀಕ ಶಕ್ತಿ ಕಂಡುಬರುತ್ತದೆ ಇದನ್ನೇ ಅಲ್ಲಾಹನು ‘1000 ತಿಂಗಳಗಿಂತಲೂ ಉತ್ತಮ’ ಎಂದು ಹೇಳಿರುವುದು ಕುರಾನ್ ನಲ್ಲಿ ಇದೆ.

“ ಬಿಸ್ಮಿಲಾ ಇರಾಹಮಾನ್ ಇರ್ ರಹೀಮ್
ಅಲ್ಲಹುಮ್ಮ ಅಸ್ಸುಮೂ
ಗದ್ದಲಕ ಪಖಾಪಿರಲ್ಲಿ
ಮಾಖದಂತ್ತು ವ ಮಾಖರತ್ತು.”

ಈ ತತ್ವವನ್ನು ಮನದಲ್ಲಿ ನೆನೆದುಕೊಂಡು ಸೂರ್ಯೋದಯಕ್ಕೆ ಮುನ್ನ ಲಘು ಆಹಾರ ಸೇವನೆಯನ್ನಷ್ಟೇ ಮಾಡಿ ಉಪವಾಸ ವ್ರತ ಆರಂಭಿಸುವ ಉಪವಾಸಿಗರು ಮತ್ತೆ ಏನಾದರೂ ಬಾಯಿಗಿಡಬೇಕೆಂದರೆ ಸೂರ್ಯಾಸ್ತದ ನಂತರವಷ್ಟೇ ಆಲಿಯತನಕ ಇಡೀ ದಿನ ಒಂದು ತೊಟ್ಟು ನೀರು ಸಹ ಅವರಿಗೆ ಕುಡಿಯುವ ಹಾಗೆ ಇಲ್ಲ. ದಿನದ ಉಪವಾಸವನ್ನು ಮುಗಿಸುವ ವೇಳೆಯಾದ ಸೂರ್ಯ ಮುಳುಗಿದ ಮುಸ್ಸಂಜೆಯ ಹೊತ್ತಿನಲ್ಲಿ ಎಲ್ಲ ಮುಸ್ಲಿಮರ ಮನೆ ಮತ್ತು ಮಸೀದಿ ಹಾಗೂ ಊರು-ಕೇರಿಗಳ ಅಂಗಳವೆಲ್ಲಾ ಬರೀ ಮೌನ. ಪ್ರತಿಯೊಬ್ಬರು ಆಗ ಮಸೀದಿಯ ಮಿನಾರದಿಂದ ಹೊರಡುವ ಧ್ವನಿಗಾಗಿ ಕಾಯುತ್ತಿರುತ್ತಾರೆ. ಆ ಸಮಯದಲ್ಲಿ ಎಲ್ಲರ ಕೈನಲ್ಲೂ ಖರ್ಜೂರ ಮತ್ತು ನೀರು ಸಿದ್ದವಾಗಿರುತ್ತದೆ.

“ ಬಿಸ್ಮಿಲಾ ಇರಾಹಮಾನ್ ಇರ್ ರಹೀಮ್
ಅಲ್ಲಾಹುಮ್ಮ ಲಕಾಸಂತು
ವ ಬಿಕಾಮಂತು ಆಲೈಕ
ವ ತವಕಲ್‌ತು ವಲಾಕಿ ಕಾ
ಅಕ್‌ರ‍್ತು ವತಾ ಖಪಲ್ ಮಿನ್ನಿ”

ಎಂಬ ಪವಿತ್ರ ಸಾಲು ಧ್ವನಿಯಾಗಿ ಕೇಳಿ ಬರುತ್ತಿದ್ದಂತೆಯೇ ಆ ದಿನದ ಉಪವಾಸವನ್ನು ಮೂಗಿಸುತ್ತಾರೆ.

ಹೀಗೆ ಇಡೀ ಮಾಸಪೂರ್ತಿ ಉಪವಾಸ ವ್ರತಯ ಆಚರಿಸುತ್ತಾರೆ. ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಅವರ್ತೀಣಗೊಂಡ ಪುನೀತ ತಿಂಗಳಿದು. ಈ ರಂಜಾನ್ ತಿಂಗಳಿನಲ್ಲಿ ಪ್ರತಿಯೊಬ್ಬ ಮುಸ್ಲಮರು ಅಲ್ಲಾನ ಜಾಪದಲ್ಲಿ ತಮ್ಮ ದಿನವನ್ನು ಕಳೆಯುತ್ತೀರುತ್ತಾರೆ.

ರಂಜಾನ್ ಹಬ್ಬದ ದಿನ ಮುಸಲ್ಲಾನರೇಲ್ಲ ಈದ್-ಗಾ ಮೈದಾನಕ್ಕೆ ಹೋಗಿ ನಮಾಜ್ ಮಾಡಿ ವಿಭಿನ್ನವಾಗಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ಕಾಣವುದೇ ಒಂದು ಸಂಭೃಮದ ಕ್ಷಣ. ಜಗತ್ತಿನಾದ್ಯಂತ ಆಚರಿಸಲ್ವಡುವ ರಂಜಾನ್ ಹಬ್ಬದಲ್ಲಿ ರಾಮ ಮತ್ತು ರಹೀಮ ಒಂದಾಗಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಸದ್ಬಾವನೆಯ ಸಂತಸವನ್ನು ಇಲ್ಲಿ ಕಾಣಬಹುದು. ಇಂಥ “ರಂಜಾನ್” ಹಬ್ಬವು ಎಲ್ಲರಿಗೂ ಒಳ್ಳೆಯದಯ ಮಾಡಲಿ ಮತ್ತು ನಮ್ಮ ವಿಶ್ವವನ್ನು ಕರೋನ ಬಿಟ್ಟು ಹೋಗಲಿ ಎಂದು ಪ್ರಾಥನೆ ಮಾಡಿಕೊಳ್ಳಿ. ಹಾಗೂ ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು.

ರಂಜಾನ್ ಮಾಸದಲ್ಲಿ ಉಪವಾಸ ಕೈಗೊಳ್ಳುವುದು ಎಂದರೆ ಅದೊಂದು ಪವಿತ್ರ ಕ್ರಿಯೆ ಎಂದೆನಿಸುತ್ತದೆ. ಅದರಲ್ಲೂ ರಂಜಾನ್ ಮಾಸದಲ್ಲಿ ಮಾಡುವ ಉಪವಾಸ ಒಂದು ತಿಂಗಳ ಕಾಲ ಇರುತ್ತದೆ. ರಮಜಾನಿನ ಅರ್ಥ ಮನುಷ್ಯನ ಆಹಾರಗಳು ಮತ್ತು ಪಾನೀಯಗಳ ಮೇಲೆ ಸ್ವಯಂ ಗಮನಿಸುವುದು. ಇದರಲ್ಲಿ ಬಹಳ ಮುಖ್ಯವಾದುದೆಂದರೆ ಇಂದ್ರಿಯನಿಗ್ರಹದಿಂದ ನಕಾರಾತ್ಮಕ ಅಂಶಗಳನ್ನು ಗಮನಿಸುವುದು. ಈ ಸಮಯದಲ್ಲಿ ಮನುಷ್ಯನು ಯಾವುದೇ ರೀತಿಯ ದುರಭ್ಯಾಸಗಳನ್ನು ಇಟ್ಟುಕೊಳ್ಳಬಾರದು. ಈ ಉಪವಾಸದ ಸಂದರ್ಭದಲ್ಲಿ ಮುಸಲ್ಮಾನ್ ಬಾಂಧವರು ಹೆಚ್ಚಾಗಿ ದೇವರ ಪ್ರಾರ್ಥನೆಯಲ್ಲಿ ತಲ್ಲೀನರಾಗಿ ಬೇಕು.

ರಂಜಾನ್ ಉಪವಾಸದ ಚರಣೆ 30 ದಿನಗಳ ಕಾಲ ಇರುತ್ತದೆ. ಇದು ಅಮಾವಾಸ್ಯೆಯ ನಂತರ ಕಾಣುವ ಮೊದಲನೇ ಚಂದ್ರನದರ್ಶನದಿಂದ ಆರಂಭವಾಗಿ ಮತ್ತೆ ಬರುವ ಅಮಾವಾಸ್ಯೆಯ ನಂತರ ಕಾಡುವ ಮೊದಲನೇ ಚಂದ್ರದರ್ಶನವಾದ ನಂತರ ಕೊನೆಗೊಳ್ಳುತ್ತದೆ. ರಂಜಾನ್ ಮಾಸದ ಸಮಯದಲ್ಲಿ ಮುಂಜಾನೆ ಸೂರ್ಯ ಉದಯಿಸುವ ಮುನ್ನ ಮತ್ತು ಸಾಯಂಕಾಲ ಸೂರ್ಯ ಮುಳುಗಿದ ನಂತರ ಆಹಾರವನ್ನು ಸೇವಿಸಬೇಕು ಸೂರ್ಯ ಇರುವ ಸಂದರ್ಭದಲ್ಲಿ ಉಪವಾಸ ಮಾಡಬೇಕು. ತದನಂತರ ದೇವರಲ್ಲಿ ಪ್ರಾರ್ಥನೆ ಮಾಡಿ ಆಹಾರವನ್ನು ಸೇವಿಸಬೇಕು. ಈ ಸಂದರ್ಭದಲ್ಲಿ ಹೆಚ್ಚಾಗಿ ದೇವರ ಪ್ರಾರ್ಥನೆ ಮಾಡಿದರೆ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದು ಮುಸಲ್ಮಾನ್ ಬಾಂಧವರ ನಂಬಿಕೆ.

ಉಪವಾಸದ ಮಹತ್ವ:- ಉಪವಾಸ ಆರೋಗ್ಯಕ್ಕೆ ಒಳ್ಳೆಯದು ಮತ್ತು ಆತ್ಮೀಯ ಜೀವನವನ್ನು ಹೆಚ್ಚಿಸುತ್ತದೆ. ಮನುಷ್ಯನ ಅಂತರ್ ಸುದ್ದಿಗೆ ಹಾಗೂ ಪಾಪ ಪರಿಹಾರಕ್ಕೆ ಉಪವಾಸ ಉತ್ತಮ ಮಾರ್ಗವಾಗಿದೆ. ಸಂಜೆ 7:00 ವರೆಗೆ ಆಹಾರಗಳನ್ನು ತಿಳಿಸುವುದು ಉಪವಾಸವಲ್ಲ, ಬದಲಿಗೆ ಅವಧಿಯಲ್ಲಿ ಮನಸ್ಸಿನಲ್ಲಿ ಏಳುವ ಬಯಕೆಗಳನ್ನು ಕಡಿವಾಣ ಹಾಕಿ ದೇವರ ಪ್ರಾರ್ಥನೆಯಲ್ಲಿ ತಲ್ಲಿನವಾಗುವುದೇ ನಿಜವಾದ ಉಪವಾಸ. ನಮ್ಮ ಮನಸ್ಸಿನಲ್ಲಿ ಹೇಳುವ ಕೆಟ್ಟ ಬಯಕೆಗಳನ್ನು ಕೆಟ್ಟ ಆಲೋಚನೆಗಳನ್ನು ಮರೆತು ಒಳ್ಳೆಯ ಆಲೋಚನೆಗಳನ್ನು ಮಾಡುವುದೇ ನಿಜವಾದ ಉಪವಾಸ ಎಂದು ಮುಸಲ್ಮಾನ ಬಾಂಧವರು ನಂಬಿಕೊಂಡಿದ್ದಾರೆ. ಈ ಒಂದು ತಿಂಗಳ ಕಠಿಣ ವ್ರತಾಚರಣೆಗಳ ಬಳಿಕ ಈದ್-ಉಲ್-ಫಿತ್ರ ಬರುತ್ತದೆ. ಈ ಒಂದು ತಿಂಗಳ ಕಾಲ ಮುಸಲ್ಮಾನ ಬಾಂಧವರು ನಮಾಜ್, ರೋಜ, ಕುರಾನ್, ದಾನ ಮಾಡುವುದರ ಮೂಲಕ ಹಬ್ಬ ಮಾಡಿದರೆ ಅವರಿಗೆ ಸ್ವರ್ಗ ಸಿಗುವುದು ಎಂಬ ನಂಬಿಕೆ.

ಉಪವಾಸದ ವೈಜ್ಞಾನಿಕ ಕಾರಣ:- ರಂಜಾನ್ ಆಚರಣೆಯಲ್ಲಿ ಹಸಿವು ಮತ್ತು ಬಾಯಾರಿಕೆಯ ಮೂಲಕ ಅನೇಕ ಪ್ರಯೋಜನೆಗಳನ್ನು ಪಡೆದುಕೊಳ್ಳಬಹುದು, ಮಿತಿಯಾದ ಊಟ ಕೆಟ್ಟ ಕೊಬ್ಬು ದೇಹದಲ್ಲಿ ಶೇಖರಣೆಯಾಗುವುದನ್ನು ತಡೆಯುತ್ತದೆ. ಅಧ್ಯಯನಗಳ ಮೂಲಕ ತಿಳಿದು ಬಂದಿರುವುದೇನೆಂದರೆ 30 ದಿನಗಳ ಕಾಲ ಕಡಿಮೆ ಆಹಾರ ಮತ್ತು ಉಪವಾಸ ಮಾಡುವುದರಿಂದ ದೇಹದಲ್ಲಿ ಯಾವುದೇ ಪರಿಣಾಮವಾಗುವುದಿಲ್ಲ ಇದರಿಂದ ಅನೇಕ ಕಾಯ್ದೆಗಳು ಗುಣಮುಖವಾಗುತ್ತದೆ ಎಂದು ತಿಳಿದುಬಂದಿದೆ.

ರಂಜಾನ್ ಉಪವಾಸದಿಂದ ಕೆಳಮಟ್ಟದ ಎಲ್ಡಿಎಲ್ ಕೊಲೆಸ್ಟ್ರಾಲ್ ಮತ್ತು ಒತ್ತಡ ಕಡಿಮೆಯಾಗುತ್ತದೆ ಜೊತೆಗೆ ಹೃದಯರಕ್ತನಾಳದ ಕಾಯಿಲೆಗಳ ಕಾಯಿಲೆಗಳ ಅಪಾಯ ಕೂಡ ಕಡಿಮೆಯಾಗುತ್ತದೆ ಎಂದು ವಿಜ್ಞಾನದ ಮೂಲಕ ತಿಳಿದು ಬಂದಿದೆ. ಮೂರು ದಿನಗಳವರೆಗೆ ಉಪವಾಸ ಮಾಡುವುದರಿಂದ ದೇಹದ ಪ್ರತಿರೋಧಕ ವ್ಯವಸ್ಥೆಯಲ್ಲಿ ಪ್ರಭಾವ ಬೀರುತ್ತದೆ ಉಪವಾಸವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಈ ಸಮಯದಲ್ಲಿ ಹೊಸ ಬಿಳಿರಕ್ತಕಣಗಳನ್ನು ಮಾಡುವುದರಿಂದ ದೇಹ ಪ್ರತಿರೋಧಕ ವ್ಯವಸ್ಥೆ ಹೆಚ್ಚಿಸುತ್ತದೆ. 24 ಗಂಟೆಯಲ್ಲಿ ಕೇವಲ 500 ರಿಂದ 600 ಕ್ಯಾಲರಿಗಳನ್ನು ಸೇವಿಸುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಪವಿತ್ರ ಕುರಾನ್:- ಪ್ರವಾದಿ ಮಹಮ್ಮದ್ ಅವರಿಗೆ ರಂಜಾನ್ ಮಾಸದಲ್ಲಿ ಪವಿತ್ರ ಕುರಾನ್ ಗೋಚರವಾಯಿತು. ದೇವರು ಪ್ರವಾದಿ ಮೊಹಮ್ಮದ್ ರವರನ್ನು ತಮ್ಮ ಪ್ರತಿನಿಧಿಯೆಂದು ಆಯ್ಕೆಮಾಡಿ ಪವಿತ್ರ ಕುರಾನ್ ಗ್ರಂಥವನ್ನು ಸಂಗ್ರಹಿಸಿದರು. ರಂಜಾನ್ ಮಾಸದ ಕೊನೆಯ ಹತ್ತು ದಿನಗಳು ಲಾಹಿಲತುಲ್ ಕದಿರ್ (ಶಕ್ತಿಯ ರಾತ್ರಿ) ಎಂದು ಗಮನ ಹರವಾಗಿ ವಿಶೇಷವಾದದ್ದು. ಈ ಸಮಯದಲ್ಲಿಯೇ ಪ್ರವಾದಿ ಅವರಿಗೆ ಕುರಾನಿನ ಪುಸ್ತಕ ಪೂರ್ಣವಾಗುತ್ತದೆ.

 

MORE FEATURES

ಬಯಲು ಸೀಮೆಯ ಭಾಷೆ, ಸಂಸ್ಕೃತಿ, ಸಮಸ್ಯೆ ಕಷ್ಟ ಕೋಟಲೆಗಳ ಚಿತ್ರಣವಿಲ್ಲಿದೆ

02-04-2025 ಬೆಂಗಳೂರು

"'ದೊರೆ' ಕಥೆಯಲ್ಲಿ ಒಬ್ಬ ಚಿಕ್ಕ ಹುಡುಗನ ತುಂಟಾಟಗಳನ್ನು ಕೇಂದ್ರವಾಗಿಟ್ಟುಕೊಂಡು ಲಾಕ್ಡೌನ್ ವೇಳೆಯಲ್ಲಿ ...

ಬ್ರಿಟಿಷರಿಗಿಂತ ಹೆಚ್ಚು ಬ್ರಿಟಿಷರ ಚರಿತ್ರೆ ಇದು

02-04-2025 ಬೆಂಗಳೂರು

"ಈ “ಏರುಘಟ್ಟದ ಹಾದಿ” ಆ ಪ್ರಶ್ನೆಗೆ ಮಾತ್ರವಲ್ಲದೇ, ದೇಶದ ಪರಿಸರ ಸಂರಕ್ಷಣಾ ಕಾಯಿದೆ, ಅರಣ್ಯ ಹಕ್ಕು...

 ಹಸಿವು, ಸಂಕಟಗಳನ್ನು ಕಥೆ ಚಿತ್ರಿಸುತ್ತದೆ

02-04-2025 ಬೆಂಗಳೂರು

“ಕಥೆ ರಚಿಸಿದ ಕಾಲ, ಪರಿಸರ ಮತ್ತು ಹಿನ್ನೆಲೆ ಬೇರೆಬೇರೆಯಾದರೂ ಮನುಷ್ಯನ ಮೂಲಭೂತ ಗುಣಾವಗುಣಗಳನ್ನು ಇಲ್ಲಿನ ಕಥೆಗಳ...