ಹಸಿವು, ಸಂಕಟಗಳನ್ನು ಕಥೆ ಚಿತ್ರಿಸುತ್ತದೆ


“ಕಥೆ ರಚಿಸಿದ ಕಾಲ, ಪರಿಸರ ಮತ್ತು ಹಿನ್ನೆಲೆ ಬೇರೆಬೇರೆಯಾದರೂ ಮನುಷ್ಯನ ಮೂಲಭೂತ ಗುಣಾವಗುಣಗಳನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು,” ಎನ್ನುತ್ತಾರೆ ಮೋಹನ್ ಕುಮಾರ್ ಡಿ ಎನ್. ಅವರು ನೀಲತ್ತಹಳ್ಳಿ ಕಸ್ತೂರಿ ಅವರ “ಚೈನಾ-ಜಪಾನ್‌ ಪ್ರಸಿದ್ದ ಕಥೆಗಳು” ಕೃತಿ ಕುರಿತು ಬರೆದ ವಿಮರ್ಶೆ.

ಹೆಸರೇ ಹೇಳುವಂತೆ ಇದು ಚೈನಾ ಮತ್ತು ಜಪಾನ್ ದೇಶದ ಕಥೆಗಳು. ಅನುವಾದವನ್ನು ನೀಲತ್ತಹಳ್ಳಿ ಕಸ್ತೂರಿ ಅವರು ಮಾಡಿದ್ದಾರೆ. ಸಂಕಲನದಲ್ಲಿ ಎಂಟು ಕಥೆಗಳಿವೆ. 'ಹಾನನ ಕೃತ್ಯ'ದಲ್ಲಿ ಜಾದೂಗಾರ ಹಾನ್ ಅಚಾನಕ್ಕಾಗಿ ಬೀಸಿದ ಕತ್ತಿಯೊಂದು ಅವನ ಹೆಂಡತಿಯನ್ನೇ ಬಳಿ ತೆಗೆದುಕೊಳ್ಳುತ್ತದೆ. ಅವನು ಬಂಧಿತನಾಗಿ ನ್ಯಾಯಾಧೀಶರ ಮುಂದೆ ನಿಲ್ಲುತ್ತಾನೆ. ನಡೆದ ಘಟನೆ ಹೇಗೆ ನಿರುದ್ದೇಶವಾದುದು, ಅಕಾರಣವೂ, ಅಚಾತುರ್ಯವೂ ಆದುದೆಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತಾನೆ. ನ್ಯಾಯಾಧೀಶ ಮತ್ತು ಹಾನನ ನಡುವೆ ನಡೆಯುವ ಮಾತುಕತೆ ಗಮನ ಸೆಳೆಯುತ್ತದೆ. 'ಮಚ್ಚೆ'ಯಲ್ಲಿ ಹೆಣ್ಣೊಬ್ಬಳ ಅಂತರಂಗ ತೆರೆದುಕೊಳ್ಳುತ್ತದೆ. ಹುಟ್ಟಿನಿಂದ ಬಂದ ಮಚ್ಚೆ ಹೇಗೆ ಅವಳ ಬಾಳಲ್ಲಿ ದುಃಸ್ವಪ್ನವಾಗಿ ಕಾಡಬಲ್ಲದು ಎನ್ನುವುದನ್ನು ಕಥೆ ಹೇಳುತ್ತೆ. 'ಪಾತಿವ್ರತ್ಯ' ದಲ್ಲಿ ಆ ರಾಜ್ಯದಲ್ಲಿ ವಿಧವೆಯರಿಗೆ ಕಟ್ಟಿಸುವ ಕಮಾನು ಶಾಸನ ಪ್ರಸಿಧ್ಧವಾಗಿರುತ್ತೆ. ಗಂಡ ಸತ್ತ ಬಳಿಕ ಆಸೆ ಕಾಮನೆಗಳನ್ನು ಅದುಮಿ ಬದುಕಿದ್ದ ಹೆಣ್ಣೊಬ್ಬಳು ಸಮಾಜವನ್ನು ಎದುರು ಹಾಕಿಕೊಂಡು ಮನಸ್ಸು ನುಡಿದಂತೆ ಹೊಸ ಬಾಳಿನತ್ತ ಹೇಗೆ ನಡೆಯುತ್ತಾಳೆ ಎನ್ನುವುದನ್ನು ಕಥೆ ಸಾರುತ್ತದೆ.

'ಹುಲಿ'ಯಲ್ಲಿ ಮನುಷ್ಯನೊಬ್ಬ ಹುಲಿಯಾಗಿ ಬದಲಾದಾಗ ಅನುಭವಿಸುವ ವಿಚಿತ್ರ ಸನ್ನಿವೇಶ, ಹಸಿವು, ಸಂಕಟಗಳನ್ನು ಕಥೆ ಚಿತ್ರಿಸುತ್ತದೆ. ಇದೊಂಥರಾ ಮಾಯಾವಿ ಕಥೆ. 'ಚುಂಗ್ ಷಾನನ ತೋಳ' ಮಕ್ಕಳಿಗೆ ಹೇಳಬಲ್ಲ ನೀತಿಕಥೆಯಂತಿದೆ. ಒಟ್ಟಾರೆಯಾಗಿ ಕಥೆ ರಚಿಸಿದ ಕಾಲ, ಪರಿಸರ ಮತ್ತು ಹಿನ್ನೆಲೆ ಬೇರೆಬೇರೆಯಾದರೂ ಮನುಷ್ಯನ ಮೂಲಭೂತ ಗುಣಾವಗುಣಗಳನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು.

MORE FEATURES

'ಬೆಳಕಿಗೆ ಹರಿಯುವ ಶಕ್ತಿ ಇದೆ ಎಂದು ಹೇಳಿದ ತತ್ವಜ್ಞಾನಿ ಬೇಂದ್ರೆ'

08-04-2025 ಬೆಂಗಳೂರು

"ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ವಿಜ್ಞಾನವು ತಾರ್ಕಿಕವಾಗಿ ವಿಶ್ವಾಸಾರ್ಹವಾಗಿ...

ದೇಸೀ ವಸ್ತು, ದೇಸೀ ಭಾಷೆ ಈ ಕಾದಂಬರಿಯ ವೈಶಿಷ್ಟ್ಯಗಳು

08-04-2025 ಬೆಂಗಳೂರು

“ಕಾದಂಬರಿಯ ಈ ಶೀರ್ಷಿಕೆಯೇ ವಿಶಿಷ್ಟವಾಗಿದೆ. ಮಹತ್ವದ ಸುದ್ದಿ, ಪ್ರಭಾವ ವಲಯ-ಎಂಬುದು ಇದರ ಅರ್ಥವೆಂಬುದು ಕಾದಂಬರಿ...

ಶಿಷ್ಯನಾದವನು ಗುರುಗಳ ಮುಂದೆ ಎಂದಿಗೂ ಕಿರಿಯವನೆ

08-04-2025 ಬೆಂಗಳೂರು

“ನಾನು ಪದವಿ ವ್ಯಾಸಾಂಗದ ಅಂತಿಮ ವರ್ಷದ. ಕೊನೆಯ ಸೆಮ್ ನಲ್ಲಿ ಅಧ್ಯಯನ ಮಾಡುತ್ತಿದ್ದಾಗ, ವಿದ್ಯಾರ್ಥಿನಿಯರ ಪ್ರತಿನ...