ಸಮುದಾಯ, ಸಂಸ್ಕೃತಿಗಳ ಸಮ್ಮಿಶ್ರಣವೇ ಭಾರತ

Date: 29-08-2023

Location: ಬೆಂಗಳೂರು


''ಭಾರತದಲ್ಲಿ ಇರುವ ಎಲ್ಲಾ ಸಿದ್ದಿ ಜನರಿಗೆ ಇರುವ ಸರ್ಕಾರದ ಯೋಜನೆಗಳಲ್ಲಿ ಕೆಲವೊಂದು ಮಾತ್ರ ನಮಗೆ ಸಿಗುತ್ತಿವೆ. ಎಲ್ಲಾ ಸಮುದಾಯಗಳಿಗಿಂತಲೂ ನಮ್ಮ ಸಮುದಾಯ ಹಿಂದುಳಿದಿದೆ. ನಮ್ಮ ಸಮುದಾಯ ಅಭಿವೃದ್ಧಿ ಹೊಂದಬೇಕು. ಸರ್ಕಾರದಿಂದ ಸಿಗುವ ಸವಲತ್ತುಗಳು ನಮ್ಮ ಸಮುದಾಯಕ್ಕೆ ಸಿಗುವಂತಾಗಬೇಕು. ನಮ್ಮ ಸಿದ್ದಿ ಸಮುದಾಯದವರು ಬೇರೆಯವರ ಮನೆಯಲ್ಲಿ ಕೆಲಸಕ್ಕೆ ಇದ್ದುಕೊಂಡು ಮನೆ, ಮಕ್ಕಳನ್ನು ನೋಡಿಕೊಳ್ಳುತ್ತಾರೆ,'' ಎನ್ನುತ್ತಾರೆ ಸಿದ್ದಿ ಜನಾಂಗದ ನವರಾದ ಬೆನಿತ್ ಅಂತೋನಿ ಸಿದ್ದಿ, ಜಾನ್ ಕುಸ್ತಾದ್ ಬಿಳ್ಕೀಕರ್ ಸಿದ್ದಿ, ಮೋನ್ಯ ಸಿದ್ದಿ. ಅವರು ಜ್ಯೋತಿ ಎಸ್. ಅವರ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ “ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಶೋಷಣೆ” ಕುರಿತು ಹಂಚಿಕೊಂಡಿದ್ದಾರೆ.

ನಮ್ಮ ದೇಶದಲ್ಲಿ ಎಲ್ಲ ಸಮುದಾಯಗಳ ಜನರಿಗೂ ಖುಷಿಯಿಂದ ಬದುಕುವ ಹಕ್ಕಿದೆ. ಎಲ್ಲ ಸಮುದಾಯ, ಸಂಸ್ಕೃತಿಗಳ ಸಮ್ಮಿಶ್ರಣವೇ ಭಾರತ. ಮೇಲ್ನೋಟಕ್ಕೆ ಎಲ್ಲರಿಗೂ ಇಲ್ಲಿ ಸಮನಾದ ಆದ್ಯತೆಯಿದೆ ಎನ್ನುತ್ತೇವೆ. ನಮ್ಮ ಸಂವಿಧಾನವೂ ಅದನ್ನೇ ಹೇಳುತ್ತದೆ. ಆದರೆ ವಾಸ್ತವದಲ್ಲಿ ಬೇರೆಯದೇ ಪರಿಸ್ಥಿತಿಯಿದೆ. ನಿರ್ಲಕ್ಷ್ಯಕ್ಕೆ ಒಳಗಾದ ಹಲವಾರು ಸಣ್ಣಪುಟ್ಟ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಲೇ ಇದ್ದಾರೆ. ಅಂತಹುದೇ ಒಂದು ಸಮುದಾಯವಾದ ಸಿದ್ದಿ ಸಮುದಾಯದ ಹೋರಾಟಗಾರರಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕುಚಗಾವ್ ನವರಾದ ಬೆನಿತ್ ಅಂತೋನಿ ಸಿದ್ದಿ, ಜಾನ್ ಕುಸ್ತಾದ್ ಬಿಳ್ಕೀಕರ್ ಸಿದ್ದಿ, ಮೋನ್ಯ ಸಿದ್ದಿ ಅವರ ಬಗೆಗಿನ ಮಾಹಿತಿಯನ್ನು ಇವತ್ತಿನ ಅಂಕಣದಲ್ಲಿ ತಂದಿದ್ದೇವೆ. ಇವರು ತಮ್ಮ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಅವರ ಮೇಲಾಗುತ್ತಿರುವ ಶೋಷಣೆ, ಇತ್ಯಾದಿಯಾಗಿ ಅವರ ಜೀವನವನ್ನು ನನ್ನ ಮುಂದೆ ಹಂಚಿಕೊಂಡದ್ದು ಹೀಗೆ...

'ಭಾರತದಲ್ಲಿ ಇರುವ ಎಲ್ಲಾ ಸಿದ್ದಿ ಜನರಿಗೆ ಇರುವ ಸರ್ಕಾರದ ಯೋಜನೆಗಳಲ್ಲಿ ಕೆಲವೊಂದು ಮಾತ್ರ ನಮಗೆ ಸಿಗುತ್ತಿವೆ. ಎಲ್ಲಾ ಸಮುದಾಯಗಳಿಗಿಂತಲೂ ನಮ್ಮ ಸಮುದಾಯ ಹಿಂದುಳಿದಿದೆ. ನಮ್ಮ ಸಮುದಾಯ ಅಭಿವೃದ್ಧಿ ಹೊಂದಬೇಕು. ಸರ್ಕಾರದಿಂದ ಸಿಗುವ ಸವಲತ್ತುಗಳು ನಮ್ಮ ಸಮುದಾಯಕ್ಕೆ ಸಿಗುವಂತಾಗಬೇಕು. ನಮ್ಮ ಸಿದ್ದಿ ಸಮುದಾಯದವರು ಬೇರೆಯವರ ಮನೆಯಲ್ಲಿ ಕೆಲಸಕ್ಕೆ ಇದ್ದುಕೊಂಡು ಮನೆ, ಮಕ್ಕಳನ್ನು ನೋಡಿಕೊಳ್ಳುತ್ತಾರೆ. ನಮ್ಮ ಅಜ್ಜ, ಅಜ್ಜಿ, ಅಪ್ಪ, ಅಮ್ಮ ನಮ್ಮನ್ನು ಕೂಡ ಹಾಗೆಯೇ ಸಾಕಿದರು. ನಮಗೆ ನಮ್ಮ ಹಿರಿಯರೇ ನಮ್ಮ ದೇವರುಗಳು. ಬ್ರಿಟಿಷರ ಕಾಲದಲ್ಲಿ ಒಡನಾಡಿದಂತಹ ನಮ್ಮ ಅಜ್ಜ, ಮುತ್ತಜ್ಜನವರು ಕೊಟ್ಟ ಜಮೀನನ್ನು ಇಟ್ಕೊಂಡು ಕೆಲವು ಕಾಲ ಜೀವನ ಮಾಡಿದ್ದಾಯ್ತು. ಕಾಲ ಕ್ರಮೇಣವಾಗಿ ಆ ಜಮೀನು ಶ್ರೀಮಂತರ ಸ್ವತ್ತಾಯಿತು. ಅವರು ಸಾಲ ಕೊಟ್ಟು ಒಂದಕ್ಕೆ ಎರಡರಷ್ಟು ಬಡ್ಡಿ ಬೆಳೆಸಿ ನಮ್ಮಿಂದ ಆ ಜಮೀನನ್ನು ದೋಚಿಕೊಂಡು ಬಿಟ್ಟಿದ್ದಾರೆ. ನಮಗೆ ಓದು, ಬರಹ ಗೊತ್ತಿಲ್ಲ. ಅವರು ಹೇಳಿದ್ದಕ್ಕೆ ಇವರು ಹೆಬ್ಬೆಟ್ಟು ಒತ್ತುತ್ತಿದ್ದರು. ಹಾಗಾಗಿ ಆ ಜಮೀನು ಹೋಯ್ತು ಅಲ್ಲಿಗೆ ನಾವು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಯಿತು. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎನ್ನುವ ತಿಳುವಳಿಕೆ ನಮ್ಮ ಹಿರಿಯರಿಗೆ ಇರಲಿಲ್ಲ. ನಮ್ಮ ಜನಗಳು ವಾಸಿಸುತ್ತಿರುವ ಜಾಗಗಳಲ್ಲಿ ಶಾಲೆಗಳೇ ಇರಲಿಲ್ಲ. ನಂತರದ ದಿನಗಳಲ್ಲಿ ನಾವು ದೂರದ ಹಾಸ್ಟೆಲ್ಲುಗಳಿಗೆ ನಮ್ಮ ಮಕ್ಕಳನ್ನು ಸೇರಿಸಬೇಕಾಯ್ತು.1978ರಿಂದಲೂ ನಾವು ಸಾಮಾಜಿಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ನಂತರ ಕೆಲವೊಂದು NGOಗಳು ನಮ್ಮನ್ನು ಕೆಲಸಕ್ಕೆ ಸೇರಿಸಿಕೊಂಡವು. ಅಲ್ಲಿ ಅವರು ಹೇಳಿದ್ದನ್ನಷ್ಟೇ ಮಾಡಬೇಕಿತ್ತು. ಅವರದ್ದೇ ಆದ ಚೌಕಟ್ಟಿತ್ತು. ನಮ್ಮ ಜನರಿಗೆ ಕಷ್ಟ ಇದೆ. ಅದರ ಸಲುವಾಗಿ ನಾವು ಕೆಲಸ ಮಾಡಬೇಕಿತ್ತು. ಅನ್ಯಾಯ ಕಂಡರೂ ಹೋರಾಡುವಂತಿರಲಿಲ್ಲ. ಆಗ ನಾವೇ ತೀರ್ಮಾನಕ್ಕೆ ಬಂದು ನಮ್ಮಲ್ಲೇ ಒಬ್ಬರನ್ನು ಗುಂಪಿನ ನಾಯಕನನ್ನಾಗಿ ಮಾಡಿಕೊಂಡು ಸಂಘಟನೆ ಮಾಡಿ ಸಮಸ್ಯೆಗಳ ಬಗ್ಗೆ, ಅವುಗಳನ್ನು ಪರಿಹರಿಸಿಕೊಳ್ಳುವ ಬಗ್ಗೆ ಚರ್ಚೆಗಳನ್ನು ಮಾಡಿದೆವು. ಐವತ್ತನೇ ಸ್ವಾತಂತ್ರ್ಯದ ಸಮಯದಲ್ಲಿ ಸಂಘಟನೆ, ಹೋರಾಟಗಳ ಬಗ್ಗೆ ನಮಗೆ ಸ್ವಲ್ಪ ಸ್ವಲ್ಪ ತಿಳುವಳಿಕೆ ಬಂತು. ಆ ಸಂಘಟನೆಗಳ ಮುಖಾಂತರ ಸರ್ಕಾರಕ್ಕೆ ಮನವಿಗಳನ್ನು ಬರೆಯಲು ಪ್ರಾರಂಭಿಸಿದೆವು. ನಮ್ಮ ಕಷ್ಟ, ನಮ್ಮ ಬೇಡಿಕೆಗಳ ಬಗ್ಗೆ ಅಲ್ಲಲ್ಲಿ ಜನರನ್ನು ಸೇರಿಸಿ ಸಮಾರಂಭಗಳನ್ನು ಮಾಡಿದ್ವಿ. ಮುಖ್ಯವಾಗಿ ನಮಗೆ ಜಮೀನು, ಜಾತಿ ಪ್ರಮಾಣ ಪತ್ರ ಮಂಜೂರಾಗಬೇಕು. ನಮ್ಮ ಮಕ್ಕಳಿಗೆ ಸರ್ಕಾರದಿಂದ ಶಿಕ್ಷಣ ಸಿಗಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಿಗಬೇಕು. ನಮ್ಮ ಜಾಗಗಳನ್ನು ನಮ್ಮ ಹೆಸರಿಗೆ ಮಾಡಿಸಿ ಹಕ್ಕುಪತ್ರಗಳನ್ನು ಕೊಡಬೇಕು. ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹ ಸಿಗುವಂತಾಗಬೇಕು. ಕ್ರಮೇಣ ಇವೆಲ್ಲಾ ನಮ್ಮಲ್ಲಿ ಚರ್ಚೆಗೆ ಬಂದವು. ಸಾಕಷ್ಟು ಹೋರಾಟ, ಸಂಘಟನೆಗಳ ಪ್ರತಿಫಲವಾಗಿ ಅಲ್ಪ ಸ್ವಲ್ಪ ಬದಲಾವಣೆ ಕಂಡರೂ ಆರ್ಥಿಕವಾಗಿ ಇನ್ನೂ ನಮ್ಮ ಜನ ಹಿಂದುಳಿದಿದ್ದಾರೆ. ಇಲ್ಲಿನ ನಮ್ಮ ಸಮುದಾಯದಲ್ಲಿ ಸರ್ಕಾರಿ ನೌಕರಸ್ಥರು ಯಾರೂ ಇಲ್ಲ. ನಮಗೂ ಮೀಸಲಾತಿ ಸಿಗಬೇಕು. ಅದರ ಮುಖಾಂತರವಾದರೂ ನಮ್ಮ ಮಕ್ಕಳು ಸರ್ಕಾರಿ ಕೆಲಸಕ್ಕೆ ಹೋಗಬೇಕು'.

'ಹಿಂದೆಲ್ಲ ನಮ್ಮ ಇಡೀ ಸಮುದಾಯದಲ್ಲಿ ಒಬ್ಬರೂ ಕೂಡ ಪದವಿ ಮುಗಿಸಿದವರು ಸಿಗುತ್ತಿರಲಿಲ್ಲ. ಈಗ ಪ್ರತಿ ಮನೆಯಲ್ಲಿ ಒಬ್ಬರಾದರೂ ವಿದ್ಯಾವಂತರು ಇದ್ದಾರೆ.

ಮಳೆಗಾಲದಲ್ಲಿ ನಮಗೆ ಕೂಲಿ ಕೆಲಸವೂ ಸಿಗುವುದಿಲ್ಲ. ಜೂನ್ ತಿಂಗಳಿನಿಂದ ಡಿಸೆಂಬರ್ ವರೆಗೆ ಯಾವ ಕೆಲಸವೂ ಇರೋದಿಲ್ಲ. ನಂತರ ಆರು ತಿಂಗಳು ಅಡಿಕೆ ಸುಲಿಯುವುದು, ಮಣ್ಣು ಹೊರುವ ಕೆಲಸ ಸಿಗುತ್ತದೆ. ನಮ್ಮ ಸಮಸ್ಯೆಗಳನ್ನು ಕೇಳುವವರಿಲ್ಲ. ಅತೀ ಕಾಡಂಚಿನಲ್ಲಿರುವವರಿಗೆ ಸೂಕ್ತವಾದ ಮನೆಕಟ್ಟುವಂತಹ ವ್ಯವಸ್ಥೆ ಆಗಬೇಕು. ಇದಕ್ಕಾಗಿ ಸರ್ಕಾರ ಕೊಡುವ ಹಣ ಮನೆ ಕಟ್ಟಲು ಬೇಕಾಗುವ ಸಾಮಗ್ರಿಗಳನ್ನು ಅವರು ಇರುವ ಸ್ಥಳಕ್ಕೆ ತಲುಪಿಸಲು ಸಾಲುವುದಿಲ್ಲ. ಬಾಕಿ ಉಳಿದದನ್ನು ಅವರು ಕೈಯಿಂದ ಹಾಕಿ ಮನೆ ಕಟ್ಟಬೇಕು. ಇದು ಬಹುತೇಕರಿಗೆ ತುಂಬ ಕಷ್ಟ. ಇದರಿಂದ ನಮ್ಮ ಸಮುದಾಯದವರ ಅಭಿವೃದ್ಧಿ ಕುಂಠಿತವಾಗುತ್ತಿದೆ. ಹಾಗಾಗಿ ಇಲ್ಲಿ ಒಳ್ಳೆಯ ಮನೆಗಳಿಲ್ಲ. ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾದರೆ ಶಿಕ್ಷಣ, ಉದ್ಯೋಗ ಸಿಗಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹಾಗಾದಲ್ಲಿ ನಮ್ಮ ಸಿದ್ದಿ ಸಮುದಾಯ ಪ್ರಗತಿ ಹೊಂದಲು ಸಾಧ್ಯವಿದೆ. ನಮಗೆ ನಮ್ಮದೇ ಆದ ಯಾವುದೇ ನೆಲೆ ಇರಲಿಲ್ಲ. ನಾವು ಇನ್ನೊಬ್ಬರ ಆಶ್ರಯದಲ್ಲಿ ಬೆಳೆಯಬೇಕಾಯ್ತು. ನಾವು ಅರಣ್ಯವನ್ನು ಅವಲಂಬಿಸಿಕೊಂಡು, ಅರಣ್ಯದಲ್ಲಿ ಸಿಗುವ ಕಿರು ಕಾಡು ಉತ್ಪನ್ನಗಳನ್ನು ಬಳಸಿಕೊಂಡು ಬದುಕುತ್ತಾ ಬಂದವರು. ಹಾಗೆ ಬರ್ತಾ ಬರ್ತಾ ಅರಣ್ಯ ಪ್ರದೇಶಗಳಲ್ಲಿ ಸಣ್ಣ ಪುಟ್ಟ ವ್ಯವಸಾಯ ಮಾಡ್ತಾ ಬದುಕ್ತಾ ಇದ್ದೇವೆ. ನಮ್ಮ ಭಾಷೆಗೆ ಯಾವುದೇ ಲಿಪಿ ಇಲ್ಲ. ನಮ್ಮದು ಮರಾಠಿ, ಕೊಂಕಣಿ, ಉರ್ದು ಮಿಶ್ರಿತ ಭಾಷೆಯಾಗಿರುತ್ತದೆ. ನಾವು ದಕ್ಷಿಣ ಆಫ್ರಿಕಾದಿಂದ ಬಂದವರು ಅಂತ ನಮ್ಮ ಮೂಲ ಹೇಳುತ್ತದೆ. ಪೋರ್ಚುಗೀಸರ ಕಾಲದಲ್ಲಿ ಬೇರೆಯವರ ಕೆಲಸಕ್ಕೆ ಅಲ್ಲಿಂದ ಗೋವಾಕ್ಕೆ ಕೆಲಸಕ್ಕಾಗಿ, ಜೀತದಾಳುಗಳಾಗಿ ಮೊದಲು ಕರೆತಂದರು. ಅಲ್ಲಿಂದ ಮತ್ತೆ ವಾಪಸ್ಸು ಕರೆದುಕೊಂಡು ಹೋಗುವಾಗ ಆ ಸಮಯದಲ್ಲಿ ಕೆಲವರು ತಪ್ಪಿಸಿಕೊಂಡು ಗೋವಾದ ಮೂಲಕ ಉತ್ತರ ಕನ್ನಡದ ಅರಣ್ಯ ಪ್ರದೇಶವನ್ನು ಸೇರಿದರು. ಮೊದಲು ಕಾಡಿನಲ್ಲಿ ವಾಸವಾಗಿದ್ದು ನಂತರ ನಾಡಿನ ಜನರ ಸಂಪರ್ಕಕ್ಕೆ ಬಂದೆವು. ಅಲ್ಲಿಂದ ಇತರೆ ಸಮುದಾಯಗಳ ಸಂಪರ್ಕದಲ್ಲಿ ಜೀವನ ಸಾಗಿಸಲು ಪ್ರಾರಂಭಿಸಿದೆವು' ಎನ್ನುತ್ತಾರೆ.

ಈ ಸಿದ್ದಿ ಸಮುದಾಯದ ಜನರಿಗಿರುವ ಕಾಡಿನ ತಿಳುವಳಿಕೆ ಅಪಾರವಾದದ್ದು. ಇವರು ಶೈಕ್ಷಣಿಕವಾಗಿ ಹಿಂದುಳಿದಿದ್ದು ಇನ್ನೊಬ್ಬರ ಮನೆ, ತೋಟದ ಕೆಲಸಗಳಿಗೆ ಸೀಮಿತವಾಗಿದ್ದಾರೆ. ಕೆಲವೇ ಜನರು ಶಿಕ್ಷಣ ಉದ್ಯೋಗ ಪಡೆದಿದ್ದಾರೆ. ಜನಪ್ರತಿನಿಧಿಗಳು ಇವರನ್ನು ಚುನಾವಣೆಗಳಲ್ಲಿ ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವುದರೊಂದಿಗೆ ಇವರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ಶ್ರಮಿಸಬೇಕು ಎಂಬುದು ನಮ್ಮ ವಿನಂತಿ.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

 

ಈ ಅಂಕಣದ ಹಿಂದಿನ ಬರಹಗಳು:
ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಯಿಂದ ಹೊರಬಂದ ಮಂಜುಳ ಮಾಳ್ಗಿ
ಮಹಾಂತೇಶ್ ಅವರ ಹಾಡುಪಾಡು ಬದುಕಿನ ನೋಟ
ಗುರಿ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ಮುಟ್ಟುವುದೇ ಮುಖ್ಯ
ರಂಗಭೂಮಿ ನನ್ನ ಬದುಕನ್ನು ಚೆಂದವಾಗಿ ರೂಪಿಸಿದೆ: ಪ್ರಶಾಂತ್ ಕುಮಾರ್
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ

ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯ

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...