ಸಮಾಜಮುಖಿ ಕಥಾ ಪುರಸ್ಕಾರ-2024 ಫಲಿತಾಂಶ ಪ್ರಕಟ

Date: 07-04-2025

Location: ಬೆಂಗಳೂರು


ಬೆಂಗಳೂರು: ಸಮಾಜಮುಖಿ ಪ್ರಕಾಶನವು 2024ನೇ ಸಾಲಿನ ವಾರ್ಷಿಕ ಕಥಾ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಿದೆ.

ವೀರೇಶ ಶಿವಲಿಂಗಪ್ಪ ಸಜ್ಜನ ಅವರ ‘ಕ್ಯಾನವಾಸ್, ಹಳೆಮನೆ ರಾಜಶೇಖರ ಅವರ ‘ದೇವರ ತುಪ್ಪ’, ಟಿ.ಆರ್.ಉಷಾರಾಣಿ ಅವರ ‘ಕಾಲವೆಂಬ ಕಬಂಧ ಬಾಹು’, ಡಾ.ನಾಗರಾಜ ಕೋರಿ ಅವರ ‘ಶಕುನದ ಚುಕ್ಕಿ’ ಹಾಗೂ ಫೌಝಿಯಾ ಸಲೀಂ ಅವರ ‘ಬಯಾಲಾಜಿಕಲ್ ಫಾದರ್’ ಕಥೆಗಳು ತಲಾ ರೂ.5000 ನಗದು ಒಳಗೊಂಡ ಸಮಾಜಮುಖಿ ಕಥಾ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಸಂಪತ್ ಸಿರಿಮನೆ, ಪ್ರವೀಣ್‌ ಕುಮಾರ್‌ ಜಿ., ಪೂರ್ಣಿಮಾ ಭಟ್ಟ ಸಣ್ಣಕೇರಿ, ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, ಅಂದಯ್ಯ ಅರವಟಗಿಮಠ, ಹೇಮಂತ್ ಲಿಂಗಪ್ಪ, ಜಹಾನ್ ಆರಾ ಕೋಳೂರು, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ.ಜಯದೇವಿ ಗಾಯಕವಾಡ, ಅಮರೇಶ ಗಿಣಿವಾರ ಅವರ ಕಥೆಗಳು ಸಮಾಜಮುಖಿ ವಾರ್ಷಿಕ ಕಥಾಸಂಕಲನಕ್ಕೆ ಆಯ್ಕೆಯಾಗಿವೆ.

ಸ್ಪರ್ಧೆಯಲ್ಲಿ ಒಟ್ಟು 241 ಕಥೆಗಾರರು ಭಾಗವಹಿಸಿದ್ದರು. ಲೇಖಕ, ವಿಮರ್ಶಕ ರಂಗನಾಥ ಕಂಟನಕುಂಟೆ ಸ್ಪರ್ಧೆಯ ಅಂತಿಮ ಹಂತದ ತೀರ್ಪುಗಾರರಾಗಿದ್ದರು.

MORE NEWS

ಕನ್ನಡ ಪುಸ್ತಕ ಪ್ರಾಧಿಕಾರದ 2022, 2023 ಹಾಗೂ 2024ನೇ ಸಾಲಿನ ಪ್ರಶಸ್ತಿ ಪ್ರಕಟ

09-04-2025 ಬೆಂಗಳೂರು

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸ...

ಮಕ್ಕಳಿಗಾಗಿ ಕನ್ನಡ ಕಾವ್ಯ ಕಸ್ತೂರಿ ಮತ್ತು ರಂಗ-ಸಂಸ್ಕೃತಿ ಶಿಬಿರ

09-04-2025 ಧಾರವಾಡ

ಧಾರವಾಡ: ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಧಾರವಾಡ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಧಾರವಾಡ ಕುರ್ತಕೋಟಿ ...

2025 Booker prize; ಕಿರುಪಟ್ಟಿಯಲ್ಲಿ ಬಾನು ಮುಷ್ತಾಕ್‌ ಅವರ ಅನುವಾದಿತ 'ಹಾರ್ಟ್‌ ಲ್ಯಾಂಪ್‌' ಕೃತಿ

08-04-2025 ಬೆಂಗಳೂರು

ಲಂಡನ್: ಪ್ರತಿಷ್ಠಿತ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿಯ ಕಿರುಪಟ್ಟಿ ಪ್ರಕಟವಾಗಿದ್ದು, ಕನ್ನಡದ ಸಾಹಿತಿ ಬಾನು ಮುಸ್ತಾಕ್...