Date: 09-04-2025
Location: ಬೆಂಗಳೂರು
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನ ಪ್ರಕಟಿಸಿದೆ.
ಈ ಪ್ರಶಸ್ತಿಗಳನ್ನು ಹಲವು ಕ್ಷೇತ್ರಗಳಲ್ಲಿ ಕನ್ನಡ ಪುಸ್ತಕ ಸಾಹಿತ್ಯಕ್ಕೆ ಸಲ್ಲಿಸಿರುವ ಮಹತ್ವದ ಕೊಡುಗೆಗಳಿಗೆ ನೀಡಲಾಗಿದ್ದು, ಪ್ರತಿ ಪ್ರಶಸ್ತಿಗೂ ನಿಗದಿತ ಹಣದ ಬಹುಮಾನವನ್ನು ಸಹ ಘೋಷಿಸಲಾಗಿದೆ.
2022ನೇ ಸಾಲಿನ ಪ್ರಶಸ್ತಿ ವಿವರಗಳು ಇಂತಿವೆ:
ಕೇಶವ ಮಳಗಿ ಅವರ ಬೆಂಗಳೂರಿನ ದೀಪಂಕರ ಪುಸ್ತಕ ಪ್ರಕಾಶನದಿಂದ ಪ್ರಕಟವಾದ ‘ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್ ಗದ್ಯ ಗಾರುಡಿ’ ಕೃತಿಗೆ ಪುಸ್ತಕ ಸೊಗಸು 2022ರ ಮೊದಲನೇ ಬಹುಮಾನ, ಜಿ. ಕೆ. ದೇವರಾಜಸ್ವಾಮಿ ಅವರ ಯುವಸಾಧನೆ ಬೆಂಗಳೂರು ಪ್ರಕಾಶನದಿಂದ ಪ್ರಕಟಗೊಂಡ ‘ಅಧಿಷ್ಠಾನ ಬಾಯಿಪಾಠ ಪುಸ್ತಕ’ ಕೃತಿಗೆ ದ್ವಿತೀಯ ಬಹುಮಾನ ಹಾಗೂ ರವಿಕುಮಾರ್ ನೀಹ ಅವರ ಜಲಜಂಬೂ ಲಿಂಕ್ಸ್ ತುಮಕೂರು ಪ್ರಕಾಶನದಿಂದ ಪ್ರಕಟವಾದ ‘ಅರಸು ಕುರನ್ಗರಾಯ’ ಕೃತಿಗೆ ತೃತೀಯ ಬಹುಮಾನ ದೊರೆತಿದೆ.
ಮೊದಲ ಬಹುಮಾನದ ಮೊತ್ತ 25,000 ರೂ ನಗದು, ದ್ವಿತೀಯ ಬಹುಮಾನದ ಮೊತ್ತ 20,000 ರೂ ನಗದು ಹಾಗೂ ತೃತೀಯ ಬಹುಮಾನದ ಮೊತ್ತ 10,000 ರೂ ಅನ್ನು ವಿಜೇತರಿಗೆ ನೀಡಲಾಗುತ್ತಿದೆ.
2022ರ ಮಕ್ಕಳ ಪುಸ್ತಕ ಸೊಗಸು ಬಹುಮಾನಕ್ಕೆ ಕುರುವ ಬಸವರಾಜ ಅವರ ಗೀತಾಂಜಲಿ ಪಬ್ಲಿಕೇಷನ್ಸ್ ನಿಂದ ಪ್ರಕಟವಾದ ‘ಮಲ್ಲಿಗೆ’ ಕೃತಿ ಆಯ್ಕೆಯಾಗಿದ್ದು, ಬಹುಮಾನವು 8,000 ನಗದನ್ನು ಒಳಗೊಂಡಿದೆ. ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಎಚ್.ಎಸ್. ಮ್ಯಾದಾರ್ ಅವರ ‘ಅಮೂಲ್ಯ ಮುತ್ತು ಡಾ. ರಾಜಕುಮಾರ್ ಕುರಿತ ನೂರಾರು ಚುಕ್ಕಿ ಚಿತ್ರ ಸಂಪುಟ’ ಕೃತಿಯು ಆಯ್ಕೆಯಾಗಿದ್ದು, ಬಹುಮಾನವು 10,000 ನಗದನ್ನು ಒಳಗೊಂಡಿದೆ. ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಪಾರ್ವತಿ ಜಿ. ಐತಾಳ್ ಅವರ ರೇವತಿ ನಾಡಿಗೇರ್ ಅವರ ವಿನ್ಯಾಸದ ‘ಮಾಧವಿ ಕಥನ ಕಾವ್ಯ’ ಕೃತಿಯು ಆಯ್ಕೆಯಾಗಿದ್ದು, ಬಹುಮಾನವು 8,000 ರೂ ಅನ್ನು ಒಳಗೊಂಡಿದೆ. ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಡಾ. ಬೇಲೂರು ರಘುನಂದನ್ ಅವರ ಶ್ರೀ ಯಂತೋದ್ಧಾರಕ ಪ್ರಿಂಟರ್‍ಸ್ ಅಂಡ್ ಪಬ್ಲಿಕೇಷನ್ಸ್ ಅವರಿಂದ ವಿನ್ಯಾಸದ ‘ಚಿಟ್ಟೆ ಏಕವ್ಯಕ್ತಿ ಮಕ್ಕಳ ನಾಟಕ’ ಕೃತಿಯು ಆಯ್ಕೆಯಾಗಿದ್ದು, ಬಹುಮಾನವು 5,000 ರೂ ನಗದನ್ನು ಒಳಗೊಂಡಿದೆ.
2023ನೇ ಸಾಲಿನ ಬಹುಮಾನಗಳ ಪಟ್ಟಿ:
ಆರ್. ಎಚ್. ಕುಲಕರ್ಣಿ ಅವರ ಬೆಂಗಳೂರು ಆರ್ಟ್ ಫೌಂಡೇಶನ್ ಪ್ರಕಾಶನದಿಂದ ಪ್ರಕಟವಾದ ‘ದೃಶ್ಯಕಲಾ ಕಮಲ’ ಕೃತಿಗೆ ಪುಸ್ತಕ ಸೊಗಸು 2022ರ ಮೊದಲನೇ ಬಹುಮಾನ. ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ ಪ್ರಕಾಶನದಿಂದ ಪ್ರಕಟಗೊಂಡ ಮಲ್ಲಿಕಾರ್ಜುನ ಕಲಮರಹಳ್ಳಿ ಅವರ ‘ಕಾಡುಗೊಲ್ಲ ಬುಡಕಟ್ಟು ಕುಲಕಥನ’ ಕೃತಿಗೆ ದ್ವಿತೀಯ ಬಹುಮಾನ ಹಾಗೂ ಸರಚಂದ್ರ ಪ್ರಕಾಶನ ಪ್ರಕಾಶನದಿಂದ ಪ್ರಕಟವಾದ ಮಲ್ಲಿಕಾರ್ಜುನ ಬಾಗೋಡಿ ಅವರ ‘ಚಿತ್ತ ಭಿತ್ತಿ’ ಕೃತಿಗೆ ತೃತೀಯ ಬಹುಮಾನ ದೊರೆತಿದೆ.
ಮೊದಲ ಬಹುಮಾನದ ಮೊತ್ತ 25,000 ರೂ ನಗದು, ದ್ವಿತೀಯ ಬಹುಮಾನದ ಮೊತ್ತ 20,000 ರೂ ನಗದು ಹಾಗೂ ತೃತೀಯ ಬಹುಮಾನದ ಮೊತ್ತ 10,000 ರೂ ಅನ್ನು ವಿಜೇತರಿಗೆ ನೀಡಲಾಗುತ್ತಿದೆ.
ಶ್ರೀಮತಿ ಪರವೀನ ಬಾನು ಎಂ. ಶೇಖ ಅವರ ‘ಬಾಲ ಮಂದಾರ’ ಕೃತಿಗೆ 2023ರ ಮಕ್ಕಳ ಪುಸ್ತಕ ಸೊಗಸು ಬಹುಮಾನ ದೊರೆತಿದೆ.
2024ನೇ ಸಾಲಿನ ಬಹುಮಾನಗಳ ಪಟ್ಟಿ:
ಪುಸ್ತಕ ಸೊಗಸು 2024ರ ಮೊದಲನೇ ಬಹುಮಾನಕ್ಕೆ ಪ್ರೊ.ಕೆ.ಸಿ. ಶಿವಾರೆಡ್ಡಿ ಅವರ ಎಂ. ಮುನಿಸ್ವಾಮಯ್ಯ ಅಂಡ್ ಸನ್ಸ್ ಪಬ್ಲಿಷರ್‍ಸ ಅಂಡ್ ಡಿಸ್ಟ್ರಿಬ್ಯೂಟರ್‍ಸ್ ಎಂಗಳೂರು ಅವರು ಪ್ರಕಟಿಸಿರುವ ‘ಕೆ.ಪಿ. ಪೂರ್ಣ ಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು ಸಂಪುಟಗಳು’ ಕೃತಿ ಆಯ್ಕೆಯಾಗಿದ್ದು, ಬಹುಮಾನವು 25,000 ರೂ ನಗದು, ಪುಸ್ತಕ ಸೊಗಸು ಎರಡನೇ ಬಹುಮಾನಕ್ಕೆ ಕೆ.ಸಿ. ಶ್ರೀನಾಥ ಅವರ ಅನಿಮಿಷ ಪ್ರಕಾಶನ ದಾವಣಗೆರೆ ಅವರು ಪ್ರಕಟಿಸಿರುವ ‘ಶಕ್ತಿನದಿ ಶರಾವತಿ’ ಕೃತಿ ಆಯ್ಕೆಯಾಗಿದ್ದು ಬಹುಮಾನವು 20,000 ನಗದನ್ನು, ಪುಸ್ತಕ ಸೊಗಸು ಮೂರನೇ ಬಹುಮಾನಕ್ಕೆ ಸ್ವಾಮಿ ಪೊನ್ನಾಚಿ ಅವರ ಅಮೂಲ್ಯ ಪುಸ್ತಕ ಬೆಂಗಳೂರು ಪ್ರಕಟಿಸಿರುವ ‘ಕಾಡು ಹುಡುಗನ ಹಾಡು ಪಾಡು’ ಕೃತಿ ಆಯ್ಕೆಯಾಗಿದ್ದು, ಬಹುಮಾನವು 10,000 ನಗದನ್ನು ಒಳಗೊಂಡಿದೆ.
ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಶ್ರೂ ಲಕ್ಷ್ಮಣ ಬಾದಾಮಿ ಅವರ ‘ಮಾತಿಗಿಳಿದ ಚಿತ್ರ’ ಆಯ್ಕೆಯಾಗಿದ್ದು ಬಹುಮಾನವು 10,000 ನಗದನ್ನು, ಮುಖಪುಟ ಚಿತ್ರ ಕಲೆಯ ಬಹುಮಾನಕ್ಕೆ ಕಪಿಲ ಪು. ಹುಮನಾಬಾದೆ ಅವರ ಶ್ರೀ ಮದನ್ ಸಿ.ಪಿ ಅವರು ವಿನ್ಯಾಸ ಮಾಡಿರುವ ‘ಬಣಮಿ’ ಆಯ್ಕೆಯಾಗಿದ್ದು, ಬಹುಮಾನವು 8,000 ನಗದನ್ನು, ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಡಾ. ಶ್ರೀನಿವಾಸಯ್ಯ ಎನ್. ವೈ ಹಾಗೂ ಎಂ.ಯು. ಶ್ವೇತಾ ಅವರ ಅವಿನಾಶ್ ಗ್ರಾಫಿಕ್ಸ್ ಮಂಡ್ಯ ಅವರು ವಿನ್ಯಾಸ ಮಾಡಿರುವ ‘ಮತ್ತೆ ಮತ್ತೆ ಶಂಕರಗೌಡ ತಲೆಮಾರಿನಂತರದ ಮನಸುಗಳ ಇಣುಕುನೋಟ’ ಕೃತಿಯು ಆಯ್ಕೆಯಾಗಿದ್ದು, ಬಹುಮಾನವು 5,000 ನಗದನ್ನು ಒಳಗೊಂಡಿದೆ.
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2022, 2023 ಮತ್ತು 2024ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳಾದ, ಅತ್ಯುತ್ತ...
ಕನ್ನಡ ಪುಸ್ತಕೋದ್ಯಮ ಓದುಗರ ಕೊರತೆ, ಹೊಸ ಆಲೋಚನೆಗಳ ಅಲಭ್ಯತೆ ಮತ್ತು ಸರ್ಕಾರ-ಸಂಸ್ಥೆಗಳ ಸಮರ್ಪಕ ಬೆಂಬಲವಿಲ್ಲದೆ ಸಂಕಷ್ಟ...
ಬೆಂಗಳೂರು: ಹಿರಿಯ ಕವಿ ಎಂ. ಗೋಪಾಲಕೃಷ್ಣ ಅಡಿಗರಿಂದ ಆರಂಭಗೊಂಡ ಕರ್ನಾಟಕ ಪ್ರಕಾಶಕರ ಸಂಘವು ಕಳೆದ 40 ವರ್ಷಗಳಿಂದ ಪುಸ್ತಕ...
©2025 Book Brahma Private Limited.