Date: 09-04-2025
Location: ಧಾರವಾಡ
ಧಾರವಾಡ: ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಧಾರವಾಡ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಧಾರವಾಡ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಧಾರವಾಡ ಗೊಂಬೆಮನೆ ಇವರ ಸಂಯುಕ್ತ ಆಶ್ರಯದಲ್ಲಿ “ಕನ್ನಡ ಕಾವ್ಯಕಸ್ತೂರಿ” ಮಕ್ಕಳ ರಂಗ-ಸಂಸ್ಕೃತಿ ಶಿಬಿರವನ್ನು ಸೃಜನಾ ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರದ ಆವರಣ, ಧಾರವಾಡದಲ್ಲಿ ಏರ್ಪಡಿಸಲಾಗಿದೆ.
ಈ ಶಿಬಿರಕ್ಕೆ ಹಿರಿಯ ರಂಗಕರ್ಮಿ ಹಾಗೂ ಮಕ್ಕಳ ನಾಟಕಕಾರರಾದ ಡಾ. ಪ್ರಕಾಶ ಗರುಡ ನೇತೃತ್ವ ವಹಿಸಲಿದ್ದಾರೆ. ಈ ಶಿಬಿರದಲ್ಲಿ ಮಕ್ಕಳಿಗೆ ಕನ್ನಡದ ಭಾವಪದ್ಯಗಳು, ಯೋಗಾಸನಗಳು, ಶಾಂತಕವಿಯ ಪದ್ಯಗಳ ಅರ್ಥಗಳೊಂದಿಗೆ ಅಭ್ಯಾಸ ಕಲಿಸಲಾಗುತ್ತದೆ. “ಮತ್ತೆ ಬಾಲ್ಯದಿಂದಲೇ ಮನೋದೃಢತೆ” ಎಂಬ ಉದ್ದೇಶದೊಂದಿಗೆ ಶಿಬಿರವು ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
10 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಶಿಬಿರವಿದ್ದು, ಕೇವಲ 30 ಮಕ್ಕಳಿಗೆ ಮಾತ್ರ ಪ್ರವೇಶವಿರುತ್ತದೆ.
ಶಿಬಿರದ ಕೊನೆಯ ದಿನ ಮಕ್ಕಳಿಂದ ಪಠ್ಯೇತರ ಪ್ರದರ್ಶನ – ಹಾಡು, ನೃತ್ಯ, ಗಾದೆ, ಪದ್ಯ, ನಾಟಕ ಮೊದಲಾದವುಗಳನ್ನು ತರಬೇತಿ ಪಡೆಯಲಿರುವ ಮಕ್ಕಳಿಂದ ಪ್ರದರ್ಶನವಾಗಲಿದೆ.
ಏಪ್ರಿಲ್ 20, 2025 ರಿಂದ ಮೇ 10, 2025 ಮೂರು ವಾರಗಳ ಕಾಲ ಈ ಶಿಬಿರವು ನಡೆಯಲಿದ್ದು. ಪ್ರತಿದಿನ ಬೆಳಗ್ಗೆ 9:30 ರಿಂದ ಮಧ್ಯಾಹ್ನ 1:30 ರವರೆಗೆ ಶಿಬಿರ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಡಾ. ಪ್ರಸನ್ನ ಗಂಡಗಲಿ – 93431 00135
ಡಾ. ಕೃಷ್ಣ ಕಟ್ಟಿ – 94485 80056
ಡಾ. ಶಶಿಕುಮಾರ್ ಸತ್ತರ್ – 94484 36023
ಡಾ. ಶಶಿಧರ ಸರಕುರ್ – 94489 01846
ಶ್ರೀ ಸದಾಶಿವ ಜೋಶಿ – 98454 47002
ಬೆಂಗಳೂರು: ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಕಾಶ ಗರುಡ ಅವರ 'ವಾರೆನ್ ಹೇಸ್ಟಿಂ...
ಬೆಂಗಳೂರು: ಉದಯ ಪ್ರಕಾಶನ, ಬೆಂಗಳೂರು ಇವರ ಆಶ್ರಯದಲ್ಲಿ ಕು. ವಿಹಾರಿಕಾ ಅಂಜನಾ ಹೊಸಕೇರಿ ಅವರು ಬರೆದಿರುವ ‘ಪ್ರವಾ...
ಬೆಂಗಳೂರು: ಕನ್ನಡದ ಸಂವೇದನಾಶೀಲ ಬರಹಗಾರರು, ಚಿಂತಕರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನಲ್ಲಿ 'ಪೂರ್ಣಚಂ...
©2025 Book Brahma Private Limited.