Date: 08-04-2025
Location: ಬೆಂಗಳೂರು
ಲಂಡನ್: ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಕಿರುಪಟ್ಟಿ ಪ್ರಕಟವಾಗಿದ್ದು, ಕನ್ನಡದ ಸಾಹಿತಿ ಬಾನು ಮುಸ್ತಾಕ್ ಅವರ ಸಣ್ಣ ಕತೆಗಳ ಅನುವಾದಿತ ಸಂಕಲನ 'ಹಾರ್ಟ್ ಲ್ಯಾಂಪ್' ( ಮೂಲ ಕೃತಿ: ಹಸೀನಾ ಮತ್ತು ಇತರ ಕತೆಗಳು) ಕಿರುಪಟ್ಟಿಗೆ ಆಯ್ಕೆಯಾಗಿದೆ.
ಅಂತಿಮ ಹದಿಮೂರು ಕೃತಿಗಳ ಪೈಕಿ ಆರು ಕೃತಿಗಳು ಕಿರುಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. 50 ಸಾವಿರ ಪೌಂಡ್ (₹55 ಲಕ್ಷಕ್ಕೂ ಹೆಚ್ಚು) ಮೊತ್ತದ ಬಹುಮಾನದ ಈ ಪ್ರಶಸ್ತಿಯ 'ಶಾರ್ಟ್ ಲಿಸ್ಟ್'ಗೆ ಇದೇ ಮೊದಲ ಬಾರಿಗೆ ಕನ್ನಡದಿಂದ ಅನುವಾದಗೊಂಡ ಕೃತಿಯು ಆಯ್ಕೆಯಾಗಿದೆ.
ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಕಿರುಪಟ್ಟಿಯಲ್ಲಿ ಹಿರೋಮಿ ಕವಾಕಮಿ ಅವರ ಆಸ ಯೊನೇಡ ಜಪಾನಿಗೆ ಅನುವಾದಿಸಿರುವ ‘Under the Eye of the Big Bird', ಸೋಲ್ವೆಜ್ ಬಲ್ಲೆ ಅವರ ಬರ್ಬರ ಜೆ. ಹವ್ಲೆಂಡ ದಾನೀಶ್ ಗೆ ಅನುವಾದಿಸಿರುವ ‘On the Calculation of Volumne 1', ವಿನ್ಸೆಂಟ್ ಡೆಲೆಕ್ರೊಯಿಕ್ಸ್ ಅವರ ಹೆಲೆನ್ ಸ್ಟೀವನ್ಸನ್ ಫ್ರೆಂಚ್ ಗೆ ಅನುವಾದಿಸಿರುವ `Small Boat', ವಿನ್ಸೆಂಜೊ ಲ್ಯಾಟ್ರೋನಿಕೊ ಅವರ ಇಟಾಲಿಯನ್ ಭಾಷೆಗೆ ಸೋಫಿ ಹ್ಯೂಸ್ ಅವರ ‘Perfection', ಆನ್ನೆ ಸೆರ್ರೆ ಅವರ ಮಾರ್ಕ್ ಹಚಿನ್ಸನ್ ಫ್ರೆಂಚ್ ಗೆ ಅನುವಾದಿಸಿರುವ ‘A Leopard-skin Hat' ಕೃತಿಗಳು ಸ್ಥಾನವನ್ನು ಪಡೆದುಕೊಂಡಿದೆ.
ಬೆಂಗಳೂರು: ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಕಾಶ ಗರುಡ ಅವರ 'ವಾರೆನ್ ಹೇಸ್ಟಿಂ...
ಬೆಂಗಳೂರು: ಉದಯ ಪ್ರಕಾಶನ, ಬೆಂಗಳೂರು ಇವರ ಆಶ್ರಯದಲ್ಲಿ ಕು. ವಿಹಾರಿಕಾ ಅಂಜನಾ ಹೊಸಕೇರಿ ಅವರು ಬರೆದಿರುವ ‘ಪ್ರವಾ...
ಬೆಂಗಳೂರು: ಕನ್ನಡದ ಸಂವೇದನಾಶೀಲ ಬರಹಗಾರರು, ಚಿಂತಕರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನಲ್ಲಿ 'ಪೂರ್ಣಚಂ...
©2025 Book Brahma Private Limited.