Date: 20-12-2024
Location: ಬೆಂಗಳೂರು
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ಡಿ. 20, 21, 22 ರಂದು ನಡೆಯುತ್ತಿರುವ ಮೂರನೇ ವರ್ಷದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವು ಡಿ.20 ಶುಕ್ರವಾರದಂದು ಮಂಡ್ಯದ ಸ್ಯಾಂಜೋ ಆಸ್ಪತ್ರೆ ಹಾಗೂ ಹೋಟೆಲ್ ಅಮರಾವತಿಯ ಹಿಂಭಾಗದಲ್ಲಿ ನಿರ್ಮಿಸಲಾದ ಉತ್ಸವದ ಪ್ರಧಾನ ವೇದಿಕೆ "ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು ದೀಪ ಪ್ರಜ್ವಲಿಸಿ, ತೆಂಗಿನ ಗರಿಯನ್ನು ಅರಳಿಸುವ ಮೂಲಕ ಉದ್ಘಾಟಿಸಿದರು.
ಮೊದಲ ಮಾತುಗಳನ್ನಾಡಿದ ಸಮ್ಮೇಳನ ಸ್ವಾಗತ ಸಮಿತಿ ಹಾಗೂ ಸನ್ಮಾನ್ಯ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪಾಧ್ಯಕ್ಷರಾದ ಎನ್. ಚಲುವರಾಯಸ್ವಮಿ ಅವರು, "ಈ ಸಮಾರಂಭ ಒಂದು ಲೆಕ್ಕದಲ್ಲಿ ಯಶಸ್ವಿಯಾಗಲು ಮೂಲ ಕಾರಣ ಸಿದ್ಧರಾಮಯ್ಯನವರು. ಅವರ ಅಭೂತಪೂರ್ವ ಕೊಡುಗೆ ಮಂಡ್ಯ ಜಿಲ್ಲೆ ಇಷ್ಟೊಂದು ಮುಂದುವರಿಯಲು ಸಾಧ್ಯವಾಗಿದೆ. ನಗರದಲ್ಲಿ ಕಾಲೇಜು ಸೇರಿದಂತೆ, ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳನ್ನು ನೀಡಿದ್ದಾರೆ. ಎಸ್.ಎಂ. ಕೃಷ್ಣ ಮಂಡ್ಯ ಜಿಲ್ಲೆಯ ಉತ್ತಮ ನಾಯಕ. ಅಂತ ನಾಯಕ ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ಸಿಗಲು ಸಾಧ್ಯವೇ ಇಲ್ಲ..ಆರು ಸಾವಿರ ಭಾಷೆಗಳಲ್ಲಿ 200 ಭಾಷೆಗಳು ನಶಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆಯನ್ನು ಉಳಿಸುವ ಸಲುವಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಲ್ವಡಿ ಕೃಷ್ಣರಾಜ ಅವರ ಉಪಸ್ಥಿತಿಯಲ್ಲಿ ಶುರುಮಾಡಿ, ಇಂದು ಕನ್ನಡದ ಕಂಪನ್ನು ಎಂದೆಂದಿಗೂ, ನಾಡಿನಾದ್ಯಂತ ಪಸರಿಸುವಂತೆ ಮಾಡಿದೆ," ಎಂದರು.”
‘ಸಾಹಿತ್ಯ ಸರಿ ತಪ್ಪುಗಳನ್ನು ತಿದ್ದುವ ಅಸ್ತ್ರವಾಗಬೇಕು’; ಉದ್ಘಾಟನಾ ನುಡಿಗಳನ್ನಾಡಿದ ಸಿದ್ದರಾಮಯ್ಯ ಮಾತನಾಡಿ, "ಮಂಡ್ಯ ಜಿಲ್ಲೆ ಅಪ್ಪಟ ಕನ್ನಡದ ನಾಡು. ಇಲ್ಲಿನ ಸಾಹಿತ್ಯ, ಭಾಷೆ, ಸಂಸ್ಕೃತಿ ಬಹಳ ಉತ್ಕೃಷ್ಟವಾಗಿದ್ದು. ನಾಗೇಗೌಡ, ತ್ರಿವೇಣಿ, ನರಸಿಂಹಸ್ವಾಮಿ ಸೇರಿದಂತೆ ಅನೇಕ ಮಹನೀಯರು ಮಂಡ್ಯ ಜಿಲ್ಲೆಗೆ ಹೆಸರನ್ನು ತಂದುಕೊಟ್ಟಿದ್ದಾರೆ. ಇನ್ನು ಮೂವತ್ತು ವರ್ಷಗಳ ತರುವಾಯ ನಡೆದ ಬಹಳಷ್ಟು ಚಳುವಳಿಗಳಲ್ಲಿ ಗೊರೂಚ ಅವರು ಭಾಗಿಯಾಗಿದ್ದು, ಪ್ರಸ್ತುತ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು, ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲೆ ತಂದಿದೆ. ‘ನುಡಿ ಬಿಟ್ಟರೆ ದೇಶ ಬಿಟ್ಟಂತೆ, ಭಾಷೆ ಗೇಡಿ ದೇಶ ಗೇಡಿಯೂ ಆಗುತ್ತಾನೆ’ ಎನ್ನುವುದು ಕುಂವೆಪು ಅವರ ಮಾತಾಗಿದ್ದು, ಈ ನಿಟ್ಟಿನಲ್ಲಿ ನಾವು ಕನ್ನಡ ಭಾಷೆಯ ಉಳಿಯುವಿಕೆಗೆ ಹೋರಾಡಬೇಕಾಗಿದೆ. ಕನ್ನಡ ನೆಲದಲ್ಲಿ ಕನ್ನಡ ಭಾಷೆಯೇ ಸೌರ ಭಾಮತ್ವವನ್ನು ಪಡೆದಿದೆ,’ ಎಂದು ಹೇಳಿದರು.
"ಕರ್ನಾಟಕವು ಸಾಹಿತ್ಯದಲ್ಲಿ ಬಹು ದೊಡ್ಡ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ವ್ಯಾವಹರಿಕ ಉದ್ದೇಶಕ್ಕಾಗಿ ಎಷ್ಟೋ ಭಾಷೆಗಳನ್ನು ಕಲಿತರು, ನಮ್ಮ ಹೃದಯದ ಭಾಷೆ, ಮಾತೃ ಭಾಷೆಯನ್ನು ಕನ್ನಡವಾಗಿ ಆಯ್ಕೆಮಾಡಿಕೊಂಡಿದ್ದೇವೆ.. ಕನ್ನಡವನ್ನು, ಕನ್ನಡತನವನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಶಿಕ್ಷಣವನ್ನು ಬಲಪಡಿಸಲಾಗುತ್ತಿದೆ. ಆಡಳಿತ ಮೊದಲುಗೊಂಡು ಎಲ್ಲಾ ಕಡೆಗಳಲ್ಲೂ ಕನ್ನಡಕ್ಕೆ ಮಹತ್ವವನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಸಾಹಿತ್ಯ ಎಲ್ಲವನ್ನೂ ಒಳಗೊಂಡಿದ್ದು, ಶಿವರಾಮ ಕಾರಂತ, ಕುವೆಂಪು, ತೇಜಸ್ವಿ ಅವರನ್ನು ತನ್ನೊಡಲೊಳಗೆ ಪೋಷಿಸಿದೆ. ಇನ್ನು ಸಾಹಿತ್ಯ ಜನರ ಧ್ವನಿಯಾಗಬೇಕು. ಸರಿ ತಪ್ಪುಗಳನ್ನು ಹೇಳುವ ಅಸ್ತ್ರವಾಗಬೇಕು. ಸಾಹಿತ್ಯ ಕ್ಷೇತ್ರದ ಮಹತ್ವವಾದ ಕೃತಿಗಳನ್ನ ಕನ್ನಡಕ್ಕೆ ಅನುವಾದಿಸಿ, ಜನರ ಜ್ಞಾನವನ್ನೂ ಹೆಚ್ಚುಮಾಡಬೇಕಾಗಿದೆ. ಮುಂದಿನ ಪೀಳಗೆ ಸಾಹಿತ್ಯವನ್ನು ಪೂಜಿಸಬೇಕಾದರೆ, ಯುವಕರೂ ಯಾವುದೇ ಸಂಪ್ರದಾಯ, ಜಾತಿ ಮತಗಳಿಗೆ, ಒಳಗೊಳ್ಳದೆ ಎಲ್ಲವನ್ನೂ ಸಮಾನಂತರವಾಗಿ ನೋಡುವ ದೃಷ್ಟಿಯನ್ನು ಬೆಳಿಸಿಕೊಳ್ಳಬೇಕು. ಮಂಡ್ಯದಲ್ಲಿ ದ್ವೇಷ ಹಂಚಲು ಕೆಲವೊಂದು ಜನಗಳು, ಕೆಲವೊಂದು ಪಂಗಡಲು ಬಹಳಷ್ಟು ಶ್ರಮಿಸಿದವು. ಆದರೆ ಸಿಹಿಯಾದ ಮಂಡ್ಯ ನಾಡಿನ ಜನರು ವಿಷವನ್ನೂ ತನ್ನೊಳಗೆ ಬಿಟ್ಟುಕೊಳ್ಳದೆ, ಎಲ್ಲರನ್ನು ಪ್ರೀತಿಸಿದರು," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
‘ಒಂದು ಭಾಷೆ ಬೆಳಿಯಬೇಕಾದರೆ ಇನ್ನೊಂದು ಭಾಷೆಯನ್ನು ಪ್ರೀತಿಸಬೇಕು’: ಕರ್ನಾಟಕ ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರಾದ ಯು. ಟಿ. ಖಾದರ್ ಫರೀದ್ ಮಾತನಾಡಿ; "ಐತಿಹಾಸಿಕವಾಗಿ ಮಂಡ್ಯ ಜಿಲ್ಲೆ ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿದೆ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಮಾತ್ರ, ಕನ್ನಡ ಭಾಷೆ, ನಮ್ಮ ಸಂಸ್ಕೃತಿ, ಊಟ ತಿಂಡಿ ಹೀಗೆ ಎಲ್ಲವನ್ನು ಕೂಡ ನಮ್ಮ ಮುಂದಿನ ಪೀಳಿಗೆಗೆ, ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಪ್ರೀತಿಯನ್ನು ನೀಡುವ ನಿಟ್ಟಿನಲ್ಲಿ ನಮಗೆ ಮುಖ್ಯವಾಗಿದೆ. ಕನ್ನಡವನ್ನು ಉಳಿಸಿ ಬೆಳೆಸುವುದು ಸಾಹಿತಿಗಳ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕರ್ತವ್ಯವಲ್ಲ. ಅದು ಕನ್ನಡ ನಾಡಿನ ಪ್ರತಿಯೊಬ್ಬ ತಂದೆ ತಾಯಿಯ ಕರ್ತವ್ಯ. ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬ ಕಾರ್ಯಕ್ರಮಗಳಿಗೂ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಆಗ ಮಾತ್ರ ಕನ್ನಡದ ಬಗೆಗಿನ ಪ್ರೀತಿ ಸಾಧ್ಯ. ಇನ್ನು ನಮ್ಮ ಭಾಷೆ ಬೆಳಿಯಬೇಕಾದರೆ ಇನ್ನೊಂದು ಭಾಷೆಯನ್ನು ಪ್ರೀತಿಸಬೇಕು. ಇನ್ನೊಂದು ಭಾಷೆಯನ್ನು ದ್ವೇಷಿಸಿ, ಒಂದು ಭಾಷೆ ಬೆಳೆಯಲು ಸಾಧ್ಯವಿಲ್ಲ,' ಎಂದರು.
’ಅತ್ಯಂತ ಶ್ರೀಮಂತ ಭಾಷೆ ಕನ್ನಡ’:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಮಾತನಾಡಿ; "ಕನ್ನಡ ಸಾಹಿತ್ಯ, ಕನ್ನಡ ಭಾಷೆ ಅತ್ಯಂತ ಶ್ರೀಮತವಾದುದು. ದಿವಾನರಿಂದ ಮೊದಲು ಪ್ರಾರಂಭವಾಗಿ ಇಂದು ನಾವು 87ನೇ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿದ್ದೇವೆ," ಎಂದರು.
‘ಸಾಹಿತ್ಯ ಸೋಮಾರಿಗಳನ್ನು ಬಡಿದೆಬ್ಬಿಸುತ್ತಿದೆ’; ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಾತನಾಡಿ, "ಕನ್ನಡದ ಜಾತ್ರೆ ಕನ್ನಡ ನುಡಿಯ ಯಾತ್ರೆ," ಇದು ಕನ್ನಡಿಗರ ಮನದಲ್ಲಿ ಹರಿವನ್ನು ಮೂಡಿಸುವ ಮಹಾ ದೊಡ್ಡ ಯಾತ್ರೆ ಕೂಡ ಹೌದು. ಸಾಹಿತ್ಯ ಕೂಡ ಸೋಮಾರಿಗಳನ್ನು ಬಡಿದು ಹೆಬ್ಬಿಸುತ್ತದೆ. ಸಮಾಜದಲ್ಲಿ ಪ್ರಗತಿಯಾಗಬೇಕು. ಅದು ಯಾರ ಮುಖಾಂತರವೆಂದರೆ, ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸಿದ ಕವಿಗಳ, ಲೇಖಕರ, ಸಾಹಿತಿಗಳ ಮೂಲಕ," ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರಿಂದ ಧ್ವಜ ಗೊರೂಚ ಅವ್ರಿಗೆ ಹಸ್ತಂತರಿಸಲಾಯಿತು.
"ಕನ್ನಡ ಭಾಷೆಗೆ ಐದು ಸಾವಿರಗಳ ಇತಿಹಾಸವಿದೆ’: ನಿಕಟಪೂರ್ವ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಮಾತನಾಡಿ, "5 ಸಾವಿರ ಇತಿಹಾಸದ ಬೇರುಗಳನ್ನು ನಮ್ಮ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಒಳಗೊಂಡಿದೆ. ಇಂತಹ ಕನ್ನಡ ಭಾಷೆ ಬಿ.ಎಂ ಶ್ರೀಕಂಠಯ್ಯ ಅವರ ನಂತರ ಪ್ರವರ್ಗಕ್ಕೆ ಬಂದು ತಲುಪಿದೆ. ಈ ಕುರಿತು ಬಹಳಷ್ಟು ದುಃಖವಿದೆ," ಎಂದರು.
ಈ ಸಂದರ್ಭದಲ್ಲಿ ಪ್ರಜಾವಾಣಿ, ಕನ್ನಡಪ್ರಭ, ವಿಜಯವಾಣಿಯ ಹಾಗೂ ವಿಜಯಕರ್ನಾಟಕದ ವಿಶೇಷ ಪುರವಾಣಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಾಹಿತ್ಯ ಉತ್ಸವದ ಅಂಗವಾಗಿ ವಿವ...
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೆಯ ಅಖಿಲ...
ಆಡಳಿತ ನಡೆಸುವ ಅಧಿಕಾರಿಗಳಲ್ಲಿ ಬಹುಪಾಲು ಮಂದಿ ಇನ್ನೂ 'ಅಂತರಜಾಲವೆಂದರೆ ಆಂಗ್ಲಭಾಷೆ' ಎಂಬ ನಂಬಿಕೆಯಲ್ಲೇ ಕೆಲಸ...
©2024 Book Brahma Private Limited.