ರಂಗಭೂಮಿಗೆ ಹೊಸ ಕಲಾವಿದರ ಅಗತ್ಯವಿದೆ; ಕೆ.ವಿ. ನಾಗರಾಜಮೂರ್ತಿ

Date: 31-12-1899

Location: ಬೆಂಗಳೂರು


ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಾಹಿತ್ಯ ಉತ್ಸವದ ಅಂಗವಾಗಿ ವಿವಿಧ ವೇದಿಕೆಗಳಲ್ಲಿ 20ಕ್ಕೂ ಹೆಚ್ಚಿನ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಡಿ.20 ಶುಕ್ರವಾರದಂದು ಸಮಾನಾಂತರ ವೇದಿಕೆ-2ರಲ್ಲಿ "ರಂಗಭೂಮಿ, ಚಲನಚಿತ್ರ, ಕಿರುತೆರೆ ಕ್ಷೇತ್ರದ ಸವಾಲುಗಳು" ಕುರಿತ ಗೋಷ್ಠಿಯು ನಡೆಯಿತು.

ಆಶಯ ನುಡಗಳನ್ನಾಡಿದ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು, "ರಂಗಭೂಮಿಗೆ ಹೊಸ ಕಲಾವಿದರ ಅಗತ್ಯವಿದೆ. ಹಳೆ ನೀರು ಹೊಸ ನೀರು ಅನ್ನುವ ಹಾಗೆ ರಂಗಭೂಮಿಗೂ ಹೊಸ ತಲೆಮಾರಿನ, ಹೊಸತನದ ಅವಶ್ಯಕತೆಯಿದೆ. ವಿಭಿನ್ನವಾದ ರೂಪುರೇಷೆಗಳಿಂದ ರಂಗಭೂಮಿಯನ್ನು ಮತ್ತೆ ಕಟ್ಟಬೇಕಾದ ಅನಿವಾರ್ಯತೆ ಒದಗಿದೆ. ಕೇವಲ ರಂಗಭೂಮಿ ಮಾತ್ರವಲ್ಲದೇ ಚಲನಚಿತ್ರ ಕೂಡ ಭಿನ್ನವಾದ ಸಾಧ್ಯತೆಗಳನ್ನು ಪಡೆಯಬೇಕಾಗಿದೆ, ಎಂದು ಹೇಳಿದರು.

"ಹೊಸ ತಲೆಮಾರಿನ ದೃಷ್ಟಿಯಲ್ಲಿ ರಂಗಭೂಮಿ": ಲೇಖಕಿ, ರಂಗಭೂಮಿ ಕಲಾವಿದೆ ಡಾ. ಸುಜಾತಾ ಜಂಗಮಶೆಟ್ಟಿ ಮಾತನಾಡಿ, "ಕನ್ನಡ ರಂಗಭೂಮಿಗೆ ಪ್ರಾಯೋಗಿಕವಾದ ನಂಟನ್ನು ಹೊಂದಿರುವ ಯುವ ಸಮುದಾಯ, ಎದುರಿಸುತ್ತಿರುವ ಸವಾಲುಗಳನ್ನು ಗಮನಿಸುವುದರ ಜೊತೆಗೆ ರಂಗಭೂಮಿಯ ಕುರಿತ ಹೊಸ ತಲೆಮಾರಿನ ಉದ್ದೇಶವನ್ನು ಕೂಡ ನಾವು ಅರಿಯಬೇಕಿದೆ. ಕನ್ನಡ ರಂಗಭೂಮಿ ಸುದೀರ್ಘವಾದ ಇತಿಹಾಸವಿದೆ. ಹಲವಾರು ಜನರು ಕಂಪೆನಿ ರಂಗಭೂಮಿಯ ಮೂಲಕ ತಮ್ಮ ರಂಗಭೂಮಿಯ ಜೀವನವನ್ನು ಕಟ್ಟಿಕೊಂಡರು. ನಾಟಕ ರಚನಕಾರರು ಹಾಗೂ ಕಂಪೆನಿಕಾರರು ಒಂದು ಕಾಲದಲ್ಲಿ ಮನರಂಜನೆಯ ಅಂಗವಾಗಿ ಇತಿಹಾಸವನ್ನೇ ನಿರ್ಮಿಸಿದ್ದರು. ಈ ನಿಟ್ಟಿನಲ್ಲಿ ಕನ್ನಡ ರಂಗಭೂಮಿ ಕಲಾವಿದರೂ ಎಂದಿಗೂ ಕೂಡ ಕನ್ನಡ ನೆಲ, ಭಾಷೆಗೆ ಚಿರಋಣಿಯಾಗಿದ್ದಾರೆ," ಎಂದು ತಿಳಿಸಿದರು.

"ಚಲನಚಿತ್ರ ಎದುರಿಸುತ್ತಿರುವ ಒಟಿಟಿ ಸವಾಲು": ಕುರಿತು ಮಾತನಾಡಿದ ಡಿ. ಸತ್ಯಪ್ರಕಾಶ್; "ಚಲನಚಿತ್ರ ಬರೀ ಒಟಿಟಿ ಮಾತ್ರವಲ್ಲದೇ, ಎಲ್ಲಾ ಕಡೆಯಿಂದಲೂ ಕೂಡ ಸವಾಲುಗಳನ್ನೇ ಎದುರಿಸಿಕೊಂಡು ಬರುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲರ ಮನೆಯಲ್ಲಿಯೂ ನಾವು ಒಟಿಟಿಯನ್ನ ಕಾಣಬಹುದು. ಮಗುವಿನ ಕಾರ್ಟೂನ್ ನಿಂದ ಶುರುವಾಗುವ ಕನ್ನಡ ಕಂಟೆಂಟ್ ಕುರಿತ ಸಮಸ್ಯೆಗಳು, ಮಗು ಬೆಳಿತಾ ಬೆಳಿತಾ ಕನ್ನಡದ ಕಂಟೆಂಟ್ ಗಳನ್ನ ಬಿಟ್ಟು ಬರೀ ಇಂಗ್ಲಿಷ್ ನಂತಹ ವಿಚಾರಗಳನ್ನೇ ನೋಡುವ ಮನಸ್ಥಿತಿಯನ್ನು ಹೊಂದುತ್ತಾರೆ. ಇದು ಪ್ರಾಥಮಿಕ ಘಟ್ಟವಾಗಿ ಕನ್ನಡ ಕಂಟೆಟ್ ಗಳು ಸೋಲಲು ಕಾರಣವಾಗುತ್ತದೆ. ಇನ್ನು ಒಟಿಟಿ ಅನ್ನುವುದು ಈ ಒಂದು ಜನರೇಷನ್ ನಲ್ಲಿ ಇರೋದ್ರಿಂದ್ದ ಹಾಗೆಯೇ ಅದು ಸಾಹಿತ್ಯ, ಸಿನಿಮಾ, ಅಥವಾ ಭಾಷೆಯನ್ನು ಅಬಲಂಬಿತವಾಗಿರೂದ್ರಿಂದ ಒಟಿಟಿಗಳು ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದೆ," ಎಂದರು.

"ಕಿರುತೆರೆ: ಸಾಧ್ಯತೆ ಮತ್ತು ಸವಾಲುಗಳು" ಕುರಿತು ಮಾತನಾಡಿದ ಕು. ರಂಜನಿ ರಾಘವನ್; "ಎಷ್ಟರವರೆಗೆ ನಾವು ಕನ್ನಡದ ಕಂಟೆಂಟ್ ಗಳನ್ನ ಟಿವಿ ಮಾದ್ಯಮ ಆಗಿರಬಹುದು ಅಥವಾ ಒಟಿಟಿಯಾ ಮೂಲಕ ಆಗಿರಬಹುದು ನೋಡಿ ಪ್ರೋತ್ಸಾಹಿಸುತ್ತೆವೆಯೋ, ಅಲ್ಲಿ ತನಕ ಕನ್ನಡ ಗೆಲ್ಲುತ್ತದೆ. ಕನ್ನಡ ಭಾಷೆ ಕೂಡ ಉಳಿಯುತ್ತದೆ. ಮೊದಲು ಒಂದು ಕಾಲ ಇತ್ತು, ಕನ್ನಡ ಸೀರಿಯಲ್ ನೋಡ್ತೀರಾ ಅಂತ. ಆದ್ರೆ ಇದೀಗ ಕಾಲ ಬದಲಾಗಿದೆ. ಕನ್ನಡ ಸಿನಿಮಾ, ಕಿರುತೆರೆ ಕಡೆಗೆ ಜನರ ಒಲವು ಹೆಚ್ಚಾಗಿದೆ. ಸವಾಲು ಅನ್ನುವುದು ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಇದೆ. ಆದ್ರೆ ಅದನ್ನ ನಾವು ಸ್ವೀಕರಿಸಿ, ಗೆದ್ದು ಮುಂದೆ ಹೋಗಬೇಕು" ಎಂದು ತಿಳಿಸಿದರು.

 

MORE NEWS

ಲೇಖಕನನ್ನ ಓದಿ ಪ್ರೋತ್ಸಾಹಿಸುವ ಗುಣ ಕನ್ನಡದ ಓದುಗರಲ್ಲಿ ಬರಬೇಕು; ದೊಡ್ಡೇಗೌಡ

20-12-2024 ಬೆಂಗಳೂರು

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೆಯ ಅಖಿಲ...

ಸಾಹಿತ್ಯ ಜನರ ‘ಧ್ವನಿ’ ಹಾಗೂ ಸರಿ ತಪ್ಪುಗಳನ್ನ ತಿದ್ದುವ ಮಹಾನ್ ‘ಅಸ್ತ್ರ’; ಸಿದ್ಧರಾಮಯ್ಯ

20-12-2024 ಬೆಂಗಳೂರು

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ಡಿ. 20, 21, 22 ರಂದು ನಡೆಯುತ್ತಿರುವ ಮೂರನೇ ವರ್ಷದ 87ನ...

ಯಾಂತ್ರಿಕ ಬುದ್ಧಿಮತ್ತೆಗೂ ಬರಲಿ ಶುದ್ಧ ಕನ್ನಡ ಪ್ರೇಮ

20-12-2024 ಮಂಡ್ಯ

ಆಡಳಿತ ನಡೆಸುವ ಅಧಿಕಾರಿಗಳಲ್ಲಿ ಬಹುಪಾಲು ಮಂದಿ ಇನ್ನೂ 'ಅಂತರಜಾಲವೆಂದರೆ ಆಂಗ್ಲಭಾಷೆ' ಎಂಬ ನಂಬಿಕೆಯಲ್ಲೇ ಕೆಲಸ...