ಲೇಖಕನನ್ನ ಓದಿ ಪ್ರೋತ್ಸಾಹಿಸುವ ಗುಣ ಕನ್ನಡದ ಓದುಗರಲ್ಲಿ ಬರಬೇಕು; ದೊಡ್ಡೇಗೌಡ

Date: 20-12-2024

Location: ಬೆಂಗಳೂರು


ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ದಿನವಾದ ಡಿ.20 ಶುಕ್ರವಾರದಂದು ‘ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು’ ಗೋಷ್ಠಿಯಯನ್ನು ‘ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್‌ ಸಮಾನಾಂತರ ವೇದಿಕೆ - 01’ ರಲ್ಲಿ ಜಯದೇವ ಮೆಣಸಗಿ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು.

 

ಸ್ವಪ್ನ ಬುಕ್ ಹೌಸ್ ನಿರ್ದೇಶಕರಾದ ದೊಡ್ಡೇಗೌಡ ಅವರು ಮಾತನಾಡಿ, "ಪುಸ್ತಕೋದ್ಯಮದಲ್ಲಿ ತಳವೂರಿ ನಿಲ್ಲಲು ಕೆಲವೇ ಪ್ರಕಾಶನದಿಂದ ಮಾತ್ರ ಸಾಧ್ಯವಾಗಿದೆ. ರಾಜ್ಯದ ಪುರಸಭೆ, ನಗರಸಭೆ, ಬೃಹತ್ ನಗರ ಪಾಲಿಕೆಯಲ್ಲಿ ಸಂಗ್ರಹವಾಗುತ್ತಿರುವ ಶೆ. 6%ರಷ್ಟು ಗ್ರಂಥಾಲಯದ ಮೊತ್ತವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮುಖ್ಯ ಲೆಕ್ಕ ಶಿರ್ಷೀಕೆಗೆ ಜಮಾ ಆಗುವಂತೆ ನಗರ ಅಭಿವೃದ್ಧಿ ಇಲಾಖೆಯೊಂದಿಗೆ ಸಮಾಲೋಚಿಸಿ ಆದೇಶ ಹೊರಡಿಸಿದರೆ, ಪುಸ್ತಕ ಖರೀದಿ, ಡಿಜಿಟಲೈಸೇಶನ್, ಕಟ್ಟಡ ನಿರ್ಮಾಣ ಹಾಗೂ ಗ್ರಂಥಾಲಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಉತ್ತಮವಾದದ್ದು ಯಾವ ಲೇಖಕನಿಂದ ಬಂದರು ಅದನ್ನು ಓದಿ ಪ್ರೋತ್ಸಾಹಿಸುವ ಗುಣ ಕನ್ನಡದ ಓದುಗರಲ್ಲಿ ಬರಬೇಕು,’ ಎಂದು ಅಶಯ ನುಡಿಗಳನ್ನಾಡಿದರು.

"ಪುಸ್ತಕವನ್ನು ಮುಟ್ಟಿ ಓದುವ ಆ ಸಂವೇದನೆ ಮತ್ತು ಸಂವಹನ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಮುದ್ರಣ ಕ್ಷೇತ್ರದಲ್ಲಿ ಹೊಸ ಸಮುದಾಯ, ಯುವ ಸಮುದಾಯದವರು ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕು. ಅಲ್ಲದೇ ತೆರಿಗೆ ನಿಯಮವು ಮುದ್ರಣ ಕ್ಷೇತ್ರದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ ಹಾಗಾಗಿ ಪುಸ್ತಕ ಮುದ್ರಣ ಕ್ಷೇತ್ರಕ್ಕೆ ಏಕರೂಪ ತೆರಿಗೆ ಅಂದರೆ 3% ತೆರಿಗೆ ವಿಧಿಸಿದರೆ ಕೆಲವು ಮುದ್ರಣಾಲಯಗಳು ಚೇತರಿಸಿಕೊಳ್ಳುತ್ತವೆ," ಎಂದು ಕೆ. ಎಲ್‌. ರಾಜಶೇಖರ್‌ ಅವರು ಮುದ್ರಣ ಕ್ಷೇತ್ರದ ತಲ್ಲಣಗಳ ಬಗೆಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

"ಓದುಗರು ಒಳ್ಳೆಯ ಪುಸ್ತಕಕ್ಕಾಗಿ ಕಾಯುತ್ತಿರುತ್ತಾರೆ. ಓದುಗರು, ಲೇಖಕರು ಮತ್ತು ಪುಸ್ತಕಗಳ ಸಂಬಂಧ ಇಂದು ನೆನ್ನೆಯದಲ್ಲ. ಅದು ಅನಾಧಿಕಾಲದಿಂದಲೂ ನಡೆದು ಬಂದದ್ದು. ಇತ್ತೀಚೆಗೆ ಸಾಹಿತ್ಯ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪುಸ್ತಕದ ಓದನ್ನು ಮೂಲಭೂತ ಅವಶ್ಯಕತೆ ಎಂದು ಪರಿಗಣಿಸಬೇಕು," ಎಂದು ಅಕ್ಷತಾ ಹುಂಚದಕಟ್ಟೆ ಅವರು ‘ಕನ್ನಡ ಪುಸ್ತಕಗಳು ಮತ್ತು ಓದುಗ ಬಳಗ’ ವಿಷಯದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಪ್ರಕಾಶಕರು ಹಾಗೂ ಮುದ್ರಕರ ಸವಾಲುಗಳು ಮತ್ತು ಪರಿಹಾರಗಳ ಬಗ್ಗೆ ಅಶೋಕ ಕುಮಾರ್‌ ಮಾತನಾಡಿದರು.

"ಕನ್ನಡ ಭಾಷೆ 2 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಆದರೆ ಇತ್ತೀಚೆಗೆ ಕೊಪ್ಪಳದಲ್ಲಿ ಸುಮಾರು 7 ಸಾವಿರ 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರುವುದಿಲ್ಲ ಎಂದು ತಿಳಿದು ಬಂದಿರುವುದು ಬಹಳ ವಿಷಾದಕರ ವಿಷಯ. ತಂತ್ರಜ್ಞಾನಗಳು ಹೆಚ್ಚಾಗಿರುವುದರಿಂದ ವರ್ಷಕ್ಕೆ ಸುಮಾರು 10 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿದೆ. ಹಾಗಾಗಿ ಯಾವ ಪುಸ್ತಕ ಏಕೆ ಓದಬೇಕು ಎನ್ನುದರ ಪ್ರಚಾರ ಅತಿಮುಖ್ಯ. ಭವಿಷ್ಯದಲ್ಲಿ ಪುಸ್ತಕ ಹೇಗೆ ಪ್ರಚಾರ ಮಾಡಬೇಕು ಎನ್ನುವುದು ಪ್ರಕಾಶಕರಿಗೆ ಚೆನ್ನಾಗಿ ತಿಳಿದಿರಬೇಕು," ಎಂದು ಭವಿಷ್ಯದ ಪುಸ್ತಕೋದ್ಯಮದ ಕುರಿತು ವಸುಧೇಂದ್ರ ಅವರು ಮಾತನಾಡಿದರು.

MORE NEWS

ರಂಗಭೂಮಿಗೆ ಹೊಸ ಕಲಾವಿದರ ಅಗತ್ಯವಿದೆ; ಕೆ.ವಿ. ನಾಗರಾಜಮೂರ್ತಿ

31-12-1899 ಬೆಂಗಳೂರು

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಾಹಿತ್ಯ ಉತ್ಸವದ ಅಂಗವಾಗಿ ವಿವ...

ಸಾಹಿತ್ಯ ಜನರ ‘ಧ್ವನಿ’ ಹಾಗೂ ಸರಿ ತಪ್ಪುಗಳನ್ನ ತಿದ್ದುವ ಮಹಾನ್ ‘ಅಸ್ತ್ರ’; ಸಿದ್ಧರಾಮಯ್ಯ

20-12-2024 ಬೆಂಗಳೂರು

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ಡಿ. 20, 21, 22 ರಂದು ನಡೆಯುತ್ತಿರುವ ಮೂರನೇ ವರ್ಷದ 87ನ...

ಯಾಂತ್ರಿಕ ಬುದ್ಧಿಮತ್ತೆಗೂ ಬರಲಿ ಶುದ್ಧ ಕನ್ನಡ ಪ್ರೇಮ

20-12-2024 ಮಂಡ್ಯ

ಆಡಳಿತ ನಡೆಸುವ ಅಧಿಕಾರಿಗಳಲ್ಲಿ ಬಹುಪಾಲು ಮಂದಿ ಇನ್ನೂ 'ಅಂತರಜಾಲವೆಂದರೆ ಆಂಗ್ಲಭಾಷೆ' ಎಂಬ ನಂಬಿಕೆಯಲ್ಲೇ ಕೆಲಸ...