ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್

Date: 21-09-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಪೂರ್ವ ಇಂಗ್ಲಂಡ್  ಮೂಲದ ಕಂಟೆಂಪೊರರಿ ಆರ್ಟ್ ಕಲಾವಿದರಾದ  ಗಿಲ್ಬರ್ಟ್ ಪ್ರೋಷ್ ಮತ್ತು  ಜಾರ್ಜ್ ಪಾಸ್‌ಮೋರ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಗಿಲ್ಬರ್ಟ್ ಪ್ರೋಷ್  (Gilbert Prousch) ಜಾರ್ಜ್ ಪಾಸ್‌ಮೋರ್ (George Passmore)
ಜನನ: ಗಿಲ್ಬರ್ಟ್ (1943),  ಜಾರ್ಜ್(1942)
ಶಿಕ್ಷಣ: ಸೈಂಟ್ ಮಾರ್ಟಿನ್ಸ್ ಆರ್ಟ್ ಸ್ಕೂಲ್, ಲಂಡನ್ 
ವಾಸ: ಸ್ಪಿಟಾಲ್‌ಫೀಲ್ಡ್, ಪೂರ್ವ ಇಂಗ್ಲಂಡ್ 
ಕವಲು: ಕಂಟೆಂಪೊರರಿ ಆರ್ಟ್ 
ವ್ಯವಸಾಯ: ಲಿವಿಂಗ್ ಸ್ಕಲ್ಪ್ಚರ್ಸ್, ಫೊಟೋಗ್ರಫಿ-ಗ್ರಾಫಿಕ್ಸ್
ಗಿಲ್ಬರ್ಟ್ ಮತ್ತು ಜಾರ್ಜ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಗಿಲ್ಬರ್ಟ್ ಮತ್ತು ಜಾರ್ಜ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಇದು ಎರಡು ದೇಹ ಒಂದು ಕಲೆಯ ಮಾದರಿ! ಈ ಸಲಿಂಗ ದಂಪತಿ ಬ್ರಿಟನ್ನಿನ ಅತ್ಯಂತ ವಿವಾದಾಸ್ಪದ ಕಲಾವಿದ ಜೋಡಿ. ವಿವಾದಾತ್ಮಕ ಚಿತ್ರಗಳು, ಉದ್ರೇಕಿಸಬಲ್ಲ ಬೈಗುಳು ಮತ್ತು ಸಾರ್ವಜನಿಕರು ಗಲೀಜು ಎಂದು ಪರಿಗಣಿಸಬಲ್ಲ ಸಂಗತಿಗಳನ್ನೂ ಕಲೆ ಎಂದು ಪ್ರಸ್ತುತಪಡಿಸಬಲ್ಲ, ವೈರುಧ್ಯದ ಹೇಳಿಕೆಗಳನ್ನು ನೀಡಿಯೂ ದಕ್ಕಿಸಿಕೊಳ್ಳಬಲ್ಲ ಛಾತಿ – ಇದು ಗಿಲ್ಬರ್ಟ್ ಮತ್ತು ಜಾರ್ಜ್. ತಮ್ಮ ಮಟ್ಟಿಗೆ ಕಲೆಯೇ ಬದುಕು ಮತ್ತು ಬದುಕೇ ಕಲೆ ಎಂದು ಬದುಕುತ್ತಿರುವ ಈ ಕಲಾವಿದ ಜೊಡಿ ಒಂದೇ ರೀತಿಯ ಉಡುಪು ತೊಟ್ಟು ಬಹಿರಂಗವಾಗಿ ಕಾಣಸಿಗುತ್ತಾರೆ. ತಮ್ಮ ಅಸ್ಥಿತ್ವವನ್ನು ಚೀರಿ ಪ್ರಸ್ತುತಪಡಿಸುವ ಪ್ರಖರ ಬಣ್ಣದ ಚಿತ್ರಗಳು ಮತ್ತು ಕಲಾಜಗತ್ತಿನ ವಿಗ್ರಹಭಂಜನೆಯನ್ನೇ ತಮ್ಮ ಗುರಿಯಾಗಿರಿಸಿಕೊಂಡು ಕೆಲಸ ಮಾಡುತ್ತಿರುವ ಈ ಜೋಡಿಯ ಬಳಿ ಕೇಳಿದರೆ, ಅವರು ಸದಭಿರುಚಿ ಎನ್ನುವುದೇ ಆಧುನಿಕ ಬದುಕಿನ ಶಾಪ ಎನ್ನುತ್ತಾರೆ.

ಇಂಗ್ಲಂಡಿನ ಸೈಂಟ್ ಮಾರ್ಟಿನ್ಸ್ ಕಲಾಶಾಲೆಯಲ್ಲಿ, 1967ರಲ್ಲಿ ಮೊದಲ ಬಾರಿಗೆ ಭೇಟಿಯಾದ ಈ ಜೋಡಿ, ತಮ್ಮದು ಮೊದಲ ನೋಟದ ಪ್ರೀತಿ ಎನ್ನುತ್ತಾರೆ. ಇಂಗ್ಲಂಡಿನಲ್ಲಿ ಅದೇ ವರ್ಷ ಸಲಿಂಗ ಸಂಬಂಧಗಳು ಕಾನೂನುಬದ್ಧ ಎಂದು ಪ್ರಕಟವಾದ ಬೆನ್ನಿಗೇ ತಾವು ದಂಪತಿ ಎಂದು ಘೋಷಿಸಿಕೊಳ್ಳುವ ಇಬ್ಬರೂ ಬಡತನದ-ಕಷ್ಟದ ಹಿನ್ನೆಲೆಯಿಂದ ಬಂದವರು. ಗಿಲ್ಬರ್ಟ್ ಪ್ರೋಷ್ ಇಟಲಿ ಮೂಲದ ಚಪ್ಪಲಿ ಹೊಲಿಯುವ ಕಾಯಕದಲ್ಲಿದ್ದ ಕುಟುಂಬದಿಂದ ಬಂದವರು. ಸ್ವಿಟ್ಜರ್‌ಲ್ಯಾಂಡ್, ಆಸ್ಟ್ರಿಯಾ, ಜರ್ಮನಿಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಸೈಂಟ್ ಮಾರ್ಟಿನ್ಸ್ ತಲುಪಿದವರು. ಜಾರ್ಜ್ ಪಾಸ್‌ಮೋರ್, ಇಂಗ್ಲಂಡಿನ ಪ್ಲೈಮೌತ್ ಎಂಬಲ್ಲಿ ಹೊಟೇಲು ವೇಟರ್ ಆಗಿದ್ದ ಸಿಂಗಲ್ ಪೇರೆಂಟ್ ತಾಯಿಯ ಮಗ. ಮಧ್ಯಾಹ್ನ ಶಾಲೆಯಲ್ಲಿ ಸಿಗುವ ಊಟವೇ ತನ್ನ ದಿನದ ಆಹಾರ ಎಂದು ಅವಲಂಬಿಸುವಷ್ಟು ಬಡತನ. ಆಕ್ಸ್‌ಫರ್ಡ್ ತಾಂತ್ರಿಕ ಶಾಲೆಯಲ್ಲಿ ಬಡಗಿ ಕೆಲಸ ಕಲಿಯಲು ಹೋಗಿ, ಅಲ್ಲಿಂದ ಸೈಂಟ್ ಮಾರ್ಟಿನ್ಸ್ ತಲುಪಿದವರು.

ಕಲಿಯುವಾಗಲೂ, ಕಲಿತ ಬಳಿಕವೂ ಆರಂಭಿಕ ದಿನಗಳಲ್ಲಿ ಸ್ಟುಡಿಯೊಕ್ಕೆಂದು ಹಣ ಇಲ್ಲದಿದ್ದಾಗ ತಮ್ಮ ದೇಹಗಳೇ ಕಲಾಕೃತಿಗಳು ಎಂದು ಹೇಳಿಕೊಂಡು ತಿರುಗಾಡಿದವರು ಅವರು. ಇಂಗ್ಲಂಡಿನ ಆಗಿನ ಸಾಂಪ್ರದಾಯಿಕ ಕಲಾ ಜಗತಿನಲ್ಲಿ ಅವಕಾಶಕ್ಕಾಗಿ ಅವರು ಬಹಳ ಕಾಯಬೇಕಾಯಿತು. ಇದು ಯಾವ ಪರಿ ವಿಕೋಪಕ್ಕೆ ಹೋಗಿತ್ತೆಂದರೆ, ಅವರಿಗೆ ಗ್ಯಾಲರಿಗಳಲ್ಲಿ ಅವಕಾಶ ಸಿಗದಿದ್ದಾಗ, ಅವರು ಬೇಕರಿಗಳಲ್ಲಿ, ಕಾರ್ಖಾನೆಗಳಲ್ಲಿ ತಮ್ಮ ಕಲಾ ಪ್ರದರ್ಶನಗಳನ್ನು ಏರ್ಪಡಿಸಬೇಕಾಗಿ ಬರುತ್ತಿತ್ತು. ಒಂದು ಅಂತಾರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಅವರಿಗೆ ಅವಕಾಶ ನಿರಾಕರಣೆ ಆದಾಗ ಅವರು ಲೋಹದ ಮುಖವಾಡ ತೊಟ್ಟು ಆ ಕಲಾ ಪ್ರದರ್ಶನಕ್ಕೆ ತೆರಳಿ ತಾವೇ ಸ್ವತಃ ಜೀವಂತ ಕಲಾಕೃತಿಗಳು ಎಂದು ಹೇಳಿಕೊಂಡು ವೀಕ್ಷಕರ ಮಧ್ಯೆ ಸುಳಿದಾಡಿದ್ದಿದೆ. ಇಂತಹದೇ ಪ್ರಯತ್ನಗಳ ಮೂಲಕ ಅವರಿಗೆ ಮೊದಲ ಗ್ಯಾಲರಿ ಅವಕಾಶ ದೊರೆತದ್ದು ಮತ್ತು ಅವರ ಕಲಾಕೃತಿಗೆ ಮಾರುಕಟ್ಟೆ ದಕ್ಕಿದ್ದು.

ಒಮ್ಮೆ ಮಾರುಕಟ್ಟೆಯಲ್ಲಿ ಅವಕಾಶ ದೊರೆತ ಬಳಿಕ ಮನೆಗಾಗುವಷ್ಟು ದುಡ್ಡು ಹೊಂದಿಸಿಕೊಂಡ ಅವರು ಹಳೆಯ ಮನೆಯೊಂದನ್ನು ಖರೀದಿಸಿ, ಅದನ್ನು ತಾವೇ ಸ್ವತಃ ಶ್ರಮ ಹಾಕಿ ಸರಿಪಡಿಸಿಕೊಂಡು ಇಂದಿಗೂ ಅಲ್ಲೇ ಬದುಕುತ್ತಿದ್ದಾರೆ. ಯಶಸ್ಸಿನ ಜೊತೆ ಕುಡಿತವನ್ನೂ ವ್ಯಸನ ಮಾಡಿಕೊಂಡ ಈ ಜೋಡಿ, ಬಾರ್‌ಗಳಲ್ಲಿ ಕುಡಿದು ಜಗಳಕ್ಕಿಳಿದದ್ದೂ ಇದೆ. ಆ ಸಂದರ್ಭದಲ್ಲವರು Gordon's Makes us Drunk (1972) ಎಂಬ ವೀಡಿಯೊ ಕೂಡ ರಚಿಸಿದ್ದರು. ಆ ಬಳಿಕ ಕುಡಿತ ಸಂಪೂರ್ಣ ತ್ಯಜಿಸಿ, ಕಲಾ ವ್ಯವಹಾರದಲ್ಲಿ ತೊಡಗಿಕೊಂಡ ಗಿಲ್ಬರ್ಟ್ ಮತ್ತು ಜಾರ್ಜ್ 80 ರ ದಶಕದ ಹೊತ್ತಿಗೆ ಫೊಟೋಗ್ರಫಿಯಲ್ಲಿ ಆಸಕ್ತರಾದರು.

90 ರ ದಶಕದ NAKED SHIT PICTURES ನಂತಹ ಅವರ ಚಿತ್ರಗಳು ಇಂಗ್ಲಂಡಿನ ಸಾಂಪ್ರದಾಯಿಕ ಕಲಾಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಲ್ಲದೇ ಮುಂದೊಂದು ದಿನ ಯಂಗ್ ಬ್ರಿಟಿಷ್ ಆರ್ಟಿಸ್ಟ್ಸ್ ಚಳವಳಿಗೆ ತಳಪಾಯವನ್ನೂ ಹಾಕಿತು. ಕಂಪ್ಯೂಟರುಗಳು ಮಾರುಕಟ್ಟೆಗೆ ಬರುತ್ತಿರುವಂತೆಯೇ 2000ನೇ ಇಸವಿಯ ಹೊತ್ತಿಗೆ ಗ್ರಾಫಿಕ್ಸ್ ಕಡೆ ಹೊರಳಿಕೊಂಡ ಈ ಜೋಡಿ, 2008 ರಲ್ಲಿ ಕಾನೂನುಬದ್ಧವಾಗಿ ಮದುವೆಯಾದರು. ಸಾಂಪ್ರದಾಯಿಕ ರಾಜಕೀಯ ನಿಲುವು ಹೊಂದಿದ್ದ ಈ ಜೋಡಿ 2018ರ ಹೊತ್ತಿಗೆ ಬೆಲ್‌ಪಾಸ್ಟ್ ನಗರದಲ್ಲಿ ನಡೆದ ಕಲಾಪ್ರದರ್ಶನದಲ್ಲಿ ಧಾರ್ಮಿಕ ಗುಂಪುಗಳಿಗೆ ಬೈಗಳನ್ನು ಕಲಾಕೃತಿಗಳಲ್ಲಿ ಬಳಸಿದ್ದರಿಂದಾಗಿ ಪ್ರದರ್ಶನ ಭಾರೀ ವಿವಾದಕ್ಕೀಡಾಗಿತ್ತು.

ದೊಡ್ಡ ಗಾತ್ರದ ಫೋಟೋ ಆಧರಿತ ಚಿತ್ರಗಳಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಕೈಯಾಡಿಸಿ ನಿರ್ಮಿತವಾಗುವ ಅವರ ಚಿತ್ರಗಳಲ್ಲಿನ ಬಣ್ಣ ಬಳಕೆ, ಪ್ರಖರ ಬಣ್ಣಗಳೊಂದಿಗೆ ಬಹಳ ಭ್ರಾಮಕ ಸ್ವರೂಪದ್ದು. ತಾವು ಹೇಗೆ ಜೀವಂತ ಶಿಲ್ಪಗಳು ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದು ಹೀಗೆ:

George: Yes, we came up with sculpture because we had nothing else. We were middle class students, our parents couldn’t lend us money, two people could not apply for a grant – there was not a precedent for that. We couldn’t teach because we were two people so we were left without any money. All we felt was that we were the art.

Gilbert: Walking the streets of London, we were the art. Speaking with people we were the art. We have been the art ever since.

Gilbert: We studied sculpture. We didn’t train as picture makers. Even our pictures come from sculpture. Confronting ourselves with the public as we are is our art. We managed to find this form how we can communicate to the public. (200% ಕಲಾ ಮ್ಯಾಗಜೀನಿನ ಥಿಯೆರಿ ಸೋಮರ್ಸ್ ಅವರಿಗೆ ನೀಡಿದ ಸಂದರ್ಶನದಲ್ಲಿ, 2017)

ಗಿಲ್ಬರ್ಟ್ ಮತ್ತು ಜಾರ್ಜ್ ಅವರ ಜೊತೆ ಡೇನಿಯಲ್ ಬರ್ನ್‌ಬಾಮ್ ಮಾತುಕತೆ :

ಗಿಲ್ಬರ್ಟ್ ಮತ್ತು ಜಾರ್ಜ್ ಅವರ ಕುರಿತ ಡಾಕ್ಯುಮೆಂಟರಿ The Secret Files of Gilbert & George: 

The Secret Files of Gilbert & George / Hans Ulrich Obrist from issole on Vimeo.

ಚಿತ್ರ ಶೀರ್ಷಿಕೆಗಳು:

ಗಿಲ್ಬರ್ಟ್ ಮತ್ತು ಜಾರ್ಜ್ ಅವರ Beardester (2016)

ಗಿಲ್ಬರ್ಟ್ ಮತ್ತು ಜಾರ್ಜ್ ಅವರ cashmere (2020)

ಗಿಲ್ಬರ್ಟ್ ಮತ್ತು ಜಾರ್ಜ್ ಅವರ crusade (1980)

ಗಿಲ್ಬರ್ಟ್ ಮತ್ತು ಜಾರ್ಜ್ ಅವರ Dote, (2005)

ಗಿಲ್ಬರ್ಟ್ ಮತ್ತು ಜಾರ್ಜ್ ಅವರ faith drop (1991)

ಗಿಲ್ಬರ್ಟ್ ಮತ್ತು ಜಾರ್ಜ್ ಅವರ Fifty nine streets (2003)

ಗಿಲ್ಬರ್ಟ್ ಮತ್ತು ಜಾರ್ಜ್ ಅವರ Priority Seat (2020)

ಗಿಲ್ಬರ್ಟ್ ಮತ್ತು ಜಾರ್ಜ್ ಅವರ Red morning Trouble (1977)

ಗಿಲ್ಬರ್ಟ್ ಮತ್ತು ಜಾರ್ಜ್ ಅವರ Standing 2020

ಗಿಲ್ಬರ್ಟ್ ಮತ್ತು ಜಾರ್ಜ್ ಅವರ Thirst (1982)

ಈ ಅಂಕಣದ ಹಿಂದಿನ ಬರೆಹಗಳು:
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...