Date: 13-07-2021
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಜರ್ಮನಿ ಮೂಲದ ನಿಯೊ ಎಕ್ಸ್‌ಪ್ರೆಷನಿಸಂ ಕಲಾವಿದ ಜೊರ್ಗ್ ಇಮ್ಮೆಂದ್ರಾಫ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದ: ಜೊರ್ಗ್ ಇಮ್ಮೆಂದ್ರಾಫ್ (Jörg Immendorff)
ಜನನ: 14 ಜೂನ್, 1945
ಮರಣ: 28 ಮೇ, 2007
ಶಿಕ್ಷಣ: ಆರ್ಟ್ ಅಕಾಡೆಮಿ ಆಫ್ ಡಸೆಲ್‌ಡಾರ್ಫ್
ವಾಸ: ಜರ್ಮನಿ
ಕವಲು: ನಿಯೊ ಎಕ್ಸ್‌ಪ್ರೆಷನಿಸಂ
ವ್ಯವಸಾಯ: ಪೇಂಟಿಂಗ್, ಸ್ಕಲ್ಪ್ಚರ್, ಸ್ಟೇಜ್ ವಿನ್ಯಾಸ.
ಜೊರ್ಗ್ ಇಮ್ಮೆಂದ್ರಾಫ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕಲಾಚರಿತ್ರೆಯ, ಪುರಾಣದ, ಜರ್ಮನ್ ಚರಿತ್ರೆಯ ಅಂಶಗಳನ್ನು ಇಟ್ಟುಕೊಂಡು ತೀರಾ ದಟ್ಟವಾದ, ವಿಲಕ್ಷಣವಾದ ಸನ್ನಿವೇಶಗಳನ್ನು ಸಾಂಕೇತಿಕವಾಗಿ ಬಿಂಬಿಸುವ ಜೊರ್ಗ್ ಇಮ್ಮೆಂಡ್ರಾಫ್ ಅವರ ಕಲಾಕೃತಿಗಳ ಉದ್ದಕ್ಕೂ ಒಂದು ರಾಜಕೀಯ ಕಾಮೆಂಟರಿಯ ಎಳೆ ಇದೆ. ಎರಡನೇ ಮಹಾಯುದ್ಧದ ಕೊನೆಯಲ್ಲಿ ಜನಿಸಿದ ಇಮ್ಮೆಂಡ್ರಾಫ್, ಯುದ್ಧೋತ್ತರ ಜರ್ಮನಿಯ ಬದುಕಿನ ರಾಜಕೀಯ-ಮಾನಸಿಕ ಸಂಕಟಗಳನ್ನು ಬಿಂಬಿಸುತ್ತಾರೆ
80ರ ದಶಕದಲ್ಲಿ ಅಮೆರಿಕದಲ್ಲಿ ಪ್ರಮುಖ ಜರ್ಮನ್ ಕಲಾವಿದರಾದ ಅನ್ಸೆಲ್ಮ್ ಕೀಫರ್, ಜೆರಾರ್ಡ್ ರಿಕ್ಟರ್ ಅಂತಹವರನ್ನು ಪ್ರದರ್ಶಿಸುವಾಗ, ಅವರನ್ನು ಸುಲಭವಾಗಿ ಗೃಹಿಸುತ್ತಿದ್ದ ಅಲ್ಲಿನ ಕಲಾಸಕ್ತರಿಗೆ, ಆಗಲೂ ಜಗತ್ತಿನ ಪ್ರಮುಖ ಜರ್ಮನ್ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿತರಾಗುವ ಜೊರ್ಗ್ ಇಮ್ಮೆಂಡ್ರಾಫ್ ಕಬ್ಬಿಣದ ಕಡಲೆಯೇ ಆಗಿದ್ದರು. ಅವರ ರಾಜಕೀಯ ಪ್ರಜ್ಞೆಯ ಕಲಾಕೃತಿಗಳು ಅಂದಿನ ಪಾಶ್ಚಿಮಾತ್ಯ ಕಲೆಗೆ ಅನುಗುಣವಾಗಿರಲಿಲ್ಲ. ಹಾಗಾಗಿ ಅವರು ಅವರ ಬದುಕಿನ ಬಹುಕಾಲ ಕಲಾಜಗತ್ತಿನಲ್ಲಿ ಏಕಾಕಿತನ ಅನುಭವಿಸಬೇಕಾಗಿತ್ತು. ಅವರ ಕಲಾಶಿಸ್ತು ಪಾಶ್ಚಾತ್ಯ ಕಲಾಜಗತ್ತಿನ ಗಮನಸೆಳೆಯತೊಡಗಿದ್ದು ಬಹಳ ಇತ್ತೀಚೆಗೆ.
ಪಶ್ಚಿಮ ಜರ್ಮನಿಯ ಲ್ಯೂನ್‌ಬರ್ಗ್ ಬಳಿ ಬ್ಲೆಕೇಡ್ ಎಂಬಲ್ಲಿ ಜನಿಸಿದ ಜೋರ್ಗ್, ಅವರ ಹೆತ್ತವರು ಬಾಲ್ಯದಲ್ಲೇ ವಿಚ್ಛೇದನ ಪಡೆದ ಬಳಿಕ ತಾಯಿಯ ಜೊತೆ ಬದುಕಿದ್ದರು. ಬೋರ್ಡಿಂಗ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಕಲಿತ ಬಳಿಕ, ಡಸೆಲ್‌ಡಾರ್ಫ್ ಕಲಾ ಅಕಾಡೆಮಿಯಲ್ಲಿ ಕಲಾ ಶಿಕ್ಷಣ ಆರಂಭಿಸಿದ ಜೋರ್ಗ್, ಅಲ್ಲಿ ಶಿಕ್ಷಕರಾಗಿದ್ದ ಜೋಸೆಫ್ ಬೋಯ್ಸ್ ಅವರಿಂದ ಪ್ರಭಾವಿತರಾದರು ಮತ್ತು ಕೊನೆಯ ತನಕ ಅವರ ಆತ್ಮೀಯರ ಬಳಗದಲ್ಲಿದ್ದರು. ಆದರೆ, ಅಕಾಡೆಮಿಯಲ್ಲಿ ಕಲಿಯುತ್ತಿರುವಾಗ ಜರ್ಮನ್ ಕಮ್ಯುನಿಸ್ಟ್ ಪಾರ್ಟಿ ಜೊತೆ ಸಕ್ರಿಯವಾಗಿದ್ದದ್ದಕ್ಕಾಗಿ ಮತ್ತು ರಾಜಕೀಯ ಪ್ರಚಾರದ ಕಲಾಕೃತಿಗಳನ್ನೇ ರಚಿಸುತ್ತಿದ್ದುದಕ್ಕಾಗಿ ಅವರನ್ನು ಅರ್ಧದಲ್ಲೇ ಹೊರಹಾಕಲಾಗಿತ್ತು.
ಆರಂಭದಲ್ಲಿ ಕಾಮಿಕ್ ಸ್ಟ್ರಿಪ್‌ಗಳಂತಹ ಲಿಖಿತ ಕಾಮೆಂಟರಿ ಇರುವ ಕಲಾಕೃತಿಗಳನ್ನು ರಚಿಸುತ್ತಿದ್ದ ಜೋರ್ಗ್, 70ರ ದಶಕದ ಕೊನೆಯ ಹೊತ್ತಿಗೆ ತನ್ನ ದೇಶದಲ್ಲಾಗುತ್ತಿರುವ ರಾಜಕೀಯ ಬದಲಾವಣೆಗಳಿಗೆ ತನ್ನ ಕಲಾಕೃತಿಗಳ ಮೂಲಕ ಪ್ರತಿಕ್ರಿಯಿಸತೊಡಗಿದರು. ಜೋರ್ಗ್ ಅವರ ಕೊನೆಯ ಹಂತದ ಚಿತ್ರಗಳು ಅಮೂರ್ತವಾಗಿ, ಅರ್ಥ ಮಾಡಿಕೊಳ್ಳಲು ಕಠಿಣ. “Painter as Canvas” (1990-91); “Final Self-Portrait I-The Picture Calls” (1998),ಅಂತಹ ಕಲಾಕೃತಿಗಳು. ಅವರು ತಮ್ಮ ಕಲಾಕೃತಿಗಳ ಬಗ್ಗೆ ಹೀಗೆ ಹೇಳುತ್ತಾರೆ “Something is beautiful if it is honest. If you do an engaged piece of work, which is sincere, the concept of beauty meets the concept of truth. So no illusive harmony. I try to reach people who strive for truth, for identity. Although these conceptions are incredibly warn out, one must try to find the way back to these simple conceptions.” ಅವರು ತಮ್ಮ ಕಲಾಸರಣಿಗಳ ಮೇಲೆ ದೀರ್ಘಕಾಲ ಕೆಲಸ ಮಾಡಿದ್ದು, ಆ ಸರಣಿಗಳಲ್ಲಿ ಪ್ರಮುಖವಾದವು LIDL, Maoist Paintings, Cafè Deutschland, ಮತ್ತು The Rake's Progress.
ವೈಯಕ್ತಿಕ ಬದುಕಿನಲ್ಲೂ ವಿಕ್ಷಿಪ್ತ ಸ್ವಭಾವದವರಾಗಿದ್ದ ಜೊರ್ಗ್, 2003ರಲ್ಲಿ ಒಮ್ಮೆ ಡಸೆಲ್‌ಡಾರ್ಫ್‌ನ ಲಕ್ಸುರಿ ಹೊಟೇಲೊಂದರಲ್ಲಿ ಆರೇಳು ಮಂದಿ ವೇಶ್ಯೆಯರು ಮತ್ತು ಮಾದಕದ್ರವ್ಯಗಳೊಂದಿಗೆ ಸಿಕ್ಕಿಬಿದ್ದು, ಜುಲ್ಮಾನೆ-ಪ್ರೊಬೇಶನ್‌ಗಳಿಗೆ ತುತ್ತಾಗಿದ್ದರು; 2004ರಲ್ಲಿ ಮಹಿಳೆಯೊಬ್ಬರಿಂದ ಬ್ಲ್ಯಾಕ್‌ಮೇಲ್‌ಗೆ ತುತ್ತಾಗಿದ್ದರು. ಅವರಿಗೆ, ಸಿಕ್ಕ ಸಾಮಾಜಿಕವಾದ ದೊಡ್ಡ ಅವಕಾಶ ಎಂದರೆ, ಜರ್ಮನ್ ಚಾನ್ಸೆಲರ್ ಜೆರಾರ್ಡ್ ಶ್ರೋಡರ್ ಅವರ ಅಧಿಕೃತ ಪೋರ್ಟ್‌ರೈಟ್‌ಅನ್ನು, ರಚಿಸಿದ್ದು.
ದುರದೃಷ್ಟವಶಾತ್, 1998ರಲ್ಲಿ ಲುವ್ ಗೆರಿಗ್ ರೋಗಕ್ಕೆ (ದೇಹದ ಚಲನೆಯನ್ನು ನಿಯಂತ್ರಿಸುವ ನರಗಳು ಶಿಥಿಲಗೊಳ್ಳುವ ನರ-ಸ್ನಾಯುಗಳ ಅಪರೂಪದ ತೊಂದರೆ ಇದು) ತುತ್ತಾದ ಜೋರ್ಗ್, 2007ರ ಮೇ 27ರಂದು ತೀರಿಕೊಂಡರು.
ಜೊರ್ಗ್ ಇಮ್ಮೆಂದ್ರಾಫ್ ಕುರಿತ ಡಾಕ್ಯುಮೆಂಟರಿ :
ಜೊರ್ಗ್ ಇಮ್ಮೆಂದ್ರಾಫ್ ಅವರ ಕಲಾಪ್ರದರ್ಶನವೊಂದರ ವೀಡಿಯೊ:
ಚಿತ್ರ ಶೀರ್ಷಿಕೆಗಳು:
ಜೊರ್ಗ್ ಇಮ್ಮೆಂದ್ರಾಫ್ ಅವರ Café Deutschland (Lift-Tremble-Back), (1984)
ಜೊರ್ಗ್ ಇಮ್ಮೆಂದ್ರಾಫ್ ಅವರ Das tun, was zu tun ist, (1972)
ಜೊರ್ಗ್ ಇಮ್ಮೆಂದ್ರಾಫ್ ಅವರ Ende gut, alles gut [All's Well That Ends Well], (1983)
ಜೊರ್ಗ್ ಇಮ್ಮೆಂದ್ರಾಫ್ ಅವರ Gertrude, (2001)
ಜೊರ್ಗ್ ಇಮ್ಮೆಂದ್ರಾಫ್ ಅವರ Gyntiana - Gebur t Zwiebelmann [Gyntiana - The Birth of Onionman], (1992)
ಜೊರ್ಗ್ ಇಮ್ಮೆಂದ್ರಾಫ್ ಅವರ Langer Marsch auf Adler, (1992)
ಜೊರ್ಗ್ ಇಮ್ಮೆಂದ್ರಾಫ್ ಅವರ Malirre, (2005)
ಜೊರ್ಗ್ ಇಮ್ಮೆಂದ್ರಾಫ್ ಅವರ Marcels Erlösung [Marcel's Salvation], (1988)
ಜೊರ್ಗ್ ಇಮ್ಮೆಂದ್ರಾಫ್ ಅವರ Master Painter - Caspar, (2002)
ಜೊರ್ಗ್ ಇಮ್ಮೆಂದ್ರಾಫ್ ಅವರ Society of Deficiency, (1990)
ಜೊರ್ಗ್ ಇಮ್ಮೆಂದ್ರಾಫ್ ಅವರ Solo, (1988)
ಈ ಅಂಕಣದ ಹಿಂದಿನ ಬರೆಹಗಳು:
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.