ಪೋರ್ಚುಗೀಸರಿಂದಲೇ ಕಾಳು `ಮೆಣಸಿನ ರಾಣಿ' ಎಂದು ಕರೆಸಿಕೊಂಡ ವೀರವನಿತೆ 


“ಸುಮಾರು ಅರವತ್ತೆರೆಡು ಆಕರ ಗ್ರಂಥಗಳನ್ನು ಅಭ್ಯಸಿಸಿ ಈ ಕೃತಿಯನ್ನು ರಚಿಸಿದ ಡಾ. ಗಜಾನನ ಶರ್ಮರ ಕೆಲಸ ಸ್ತುತ್ಯಾರ್ಹವಾದುದು,” ಎನ್ನುತ್ತಾರೆ ಮೋಹನ್ ಕುಮಾರ್ ಡಿ. ಎನ್. ಅವರು ಗಜಾನನ ಶರ್ಮ ಅವರ “ಚೆನ್ನಭೈರಾದೇವಿ” ಕೃತಿ ಕುರಿತು ಬರೆದ ವಿಮರ್ಶೆ.

ಐವತ್ತಾರು ವರ್ಷಗಳ ಕಾಲ ಹೈವ, ಕೊಂಕಣ ತುಳುನಾಡುಗಳ ಮಹಾಮಂಡಳೇಶ್ವರಿಯಾಗಿ, ಪೋರ್ಚುಗೀಸರು ದಕ್ಷಿಣ ಕೊಂಕಣಕ್ಕಿಳಿಯದಂತೆ ತಡೆಗೋಡೆಯಾಗಿ ನಿಂತು, ಅಕ್ಕಪಕ್ಕದ ಚಿಕ್ಕಪುಟ್ಟ ಸಂಸ್ಥಾನಗಳ ಜೊತೆ ಪ್ರೀತಿ, ಸೌಹಾರ್ದಗಳೊಡನೆ ತಾನೂ ಬದುಕಿ ಅವರನ್ನೂ ಬದುಕಗೊಟ್ಟು, ಜೈನಧರ್ಮದ ಮೇಲ್ಪಂಕ್ತಿಯಲ್ಲಿ ತಾನಾಗಿ ಯಾರ ಮೇಲೂ ಯುದ್ಧ ಘೋಷಿಸದೆ, ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಸಂಸ್ಥಾನದ ಒಡತಿಯೆಂಬ ಹೆಗ್ಗಳಿಕೆ ಪಡೆದು, ಪೋರ್ಚುಗೀಸರಿಂದಲೇ 'ರೈನಾ ದ ಪಿಮೆಂಟಾ' (ಕಾಳು ಮೆಣಸಿನ ರಾಣಿ) ಎಂದು ಕರೆಸಿಕೊಂಡು, ಅರ್ಧಶತಮಾನಗಳಿಗೂ ಮಿಕ್ಕು ತನ್ನ ಪ್ರಜೆಗಳ ಗೌರಾವಾದರಗಳಿಗೆ ಪಾತ್ರಳಾಗಿ, ಅವರನ್ನು ಮಕ್ಕಳಂತೆ ಮಮತೆಯಿಂದ ಸಲಹಿ ಅವರಿಂದ ಅವ್ವರಸಿ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ, ವೀರವನಿತೆ ಚೆನ್ನಭೈರಾದೇವಿಯ ಕಥಾನಕವನ್ನು ಓದಿ ಮುಗಿಸಿದೆ.

ಇತಿಹಾಸದಲ್ಲಿ ತನ್ನ ಹೆಸರು ಅಜರಾಮರವಾಗಿರಲೆನ್ನುವ ವ್ಯಾಮೋಹದಿಂದ ಹೊರ ಬಂದ ಚೆನ್ನ ಭೈರಾದೇವಿಯ ವೈರಾಗ್ಯ ಇತ್ತೀಚೆಗೆ ನೋಡಿದ ಚಿತ್ರದಲ್ಲಿ ಪಾತ್ರಧಾರಿಯೊಬ್ಬ ಹೇಳುವ ‘ದ್ಯೂತವನ್ನು ಎಷ್ಟು ದೊಡ್ಡ ಮಟ್ಟದಲ್ಲಿ ಆಡಿದೆ ಎನ್ನುವುದಕ್ಕಿಂತ ಎಲ್ಲಿ ನಿಲ್ಲಿಸಬೇಕು ಎಂದು ತಿಳಿದವನು ದೊಡ್ಡ ಮನುಷ್ಯನಾಗುತ್ತಾನೆ’ ಎನ್ನುವ ಸಾಲನ್ನು ನೆನಪಿಸಿದ್ದು ಕಾಕತಾಳೀಯವಷ್ಟೇ.

ರಾಣಿ ಚೆನ್ನ ಭೈರಾದೇವಿ ಅಕಳಂಕಿತಳಷ್ಟೇ ಅಲ್ಲ; ಅದ್ವಿತೀಯ, ಅಸಮಾನ್ಯಳೂ ಹೌದು ಎಷ್ಟೋ ಅಷ್ಟೇ ಆತ್ಮಾನುಭಾವವನ್ನು ಗಳಿಸಿದ ಅನುಭಾವಿಯೂ ಹೌದು. ಅಷ್ಟಾಗಿ ತಿಳಿಯದ ಅವಳ ಬಗ್ಗೆ ಸುಮಾರು ಅರವತ್ತೆರೆಡು ಆಕರ ಗ್ರಂಥಗಳನ್ನು ಅಭ್ಯಸಿಸಿ ಈ ಕೃತಿಯನ್ನು ರಚಿಸಿದ ಡಾ. ಗಜಾನನ ಶರ್ಮರ ಕೆಲಸ ಸ್ತುತ್ಯಾರ್ಹವಾದುದು.

MORE FEATURES

ಅಭಿನಯವನ್ನು ಯಾರಿಂದಲೂ ಕಲಿಸಲಾಗುವುದಿಲ್ಲ

26-03-2025 ಬೆಂಗಳೂರು

“ಮನುಷ್ಯ ಅಭಿನಯಿಸುವುದರ ಮೂಲಕ, ಕೃತಕವಾಗಿ ಸಂಘರ್ಷಿಸುವುದರ ಮೂಲಕ ಮಾತ್ರ ಬದುಕುವುದಿಲ್ಲ. ಅವನ ಮೌನ, ಆಳದ ನೋವು, ...

ಕನ್ನಡ ಚಿತ್ರರಂಗದ ಕುರಿತು 150 ಆಸಕ್ತಿಕರ ಮಾಹಿತಿಗಳಿವೆ

26-03-2025 ಬೆಂಗಳೂರು

“ಈ ಪುಸ್ತಕದಲ್ಲಿ ಸಾಕಷ್ಟು ವಿಷಯಗಳನ್ನು ಕ್ರೋಢೀಕರಿಸುವ ಪ್ರಯತ್ನ ಮಾಡಲಾಗಿದೆ. ಹಾಗಂತ ಇದೇ ಅಂತಿಮ ಅಥವಾ ಪರಿಪೂರ್...

ಕಾದಂಬರಿಯಲ್ಲಿ ಬರುವ ಸಾಮ್ರಾಜ್ಯ, ರಾಜ, ಮಂತ್ರಿಯೆಲ್ಲ ಇತಿಹಾಸದಲ್ಲಿ ಇಲ್ಲ

26-03-2025 ಬೆಂಗಳೂರು

“ಕಾದಂಬರಿಯಲ್ಲಿ ಬರುವ ಕಾಡಿನ ವಿವರಣೆಗಳು, ಮೂಢನಂಬಿಕೆಗಳು, ನಾಟಿ ವೈದ್ಯಕೀಯ, ಪ್ರಾಣಿಗಳ ದಾಳಿ, ಪಿಶಾಚಿಯ ಕಲ್ಪನೆ...