ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ

Date: 27-11-2023

Location: ಬೆಂಗಳೂರು


''ಕನ್ನಡ ಪದಕೋಶದ ಬಗೆಗೆ ತುಸು ಪರಿಚಯವನ್ನು ಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಕನ್ನಡದ ಪದಕೋಶ ಎಶ್ಟು ದೊಡ್ಡದು? ಕನ್ನಡ ಪದಕೋಶದಲ್ಲಿ ಎಶ್ಟು ಪದಗಳಿವೆ? ಪದಕೋಶ ಎನ್ನುವುದು ನಿಗಂಟು ರೂಪದ ಪುಸ್ತಕದಲ್ಲಿ ಇದೆಯೆ? ಇಲ್ಲವೆ ಕನ್ನಡ ಮಾತಾಡುವವರ ಮಿದುಳಿನಲ್ಲಿ ಇದೆಯೆ? ಓಹ್, ಹಾಗಾದರೆ, ನಾವು ಮಾತಾಡಬೇಕಾದ ಮತ್ತು ತಿಳಿದುಕೊಳ್ಳಬೇಕಾದ ಅಂಶಗಳು ತುಂಬಾ ಇವೆ. ಇಲ್ಲಿ ಒಂದೆರಡು ಅಂಶಗಳನ್ನು ಮಾತನಾಡುವ ಪ್ರಯತ್ನ ಮಾಡೋಣ,'' ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ ಅವರು ತಮ್ಮ 'ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ’ ಕುರಿತು ವಿಶ್ಲೇಷಿಸಿದ್ದಾರೆ.

ಬಾಶೆಯೊಂದರಲ್ಲಿ ಎಶ್ಟು ಪದಗಳಿವೆ ಎಂಬ ಪ್ರಶ್ನೆ ಉತ್ತರವಿಲ್ಲದ್ದೆ ಆದರೂ ಅರಿವ ಕುತೂಹಲವೂ ಅದನ್ನು ಅರಿಯುವುದರ ಉಪಯೋಗವೂ ಇದ್ದೆ ಇರುತ್ತದೆ. ಈ ಯೋಚನೆಯನ್ನು ಬಾರತೀಯ ಪರಂಪರೆ ಬಹು ಹಿಂದೆಯೆ ಮಾಡಿದೆ. ಕೇಶಿರಾಜನ ಶಬ್ದಪಾರಮಾರ‍್ಗಮಶಕ್ಯಂ ಎಂಬ ಸಾಲು ಸುಪ್ರಸಿದ್ದ. ಇದು, ಬಹು ಅರ‍್ತಪೂರ‍್ಣವೂ ಕೂಡ.

ಕನ್ನಡ ಪದಕೋಶದ ಬಗೆಗೆ ತುಸು ಪರಿಚಯವನ್ನು ಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಕನ್ನಡದ ಪದಕೋಶ ಎಶ್ಟು ದೊಡ್ಡದು? ಕನ್ನಡ ಪದಕೋಶದಲ್ಲಿ ಎಶ್ಟು ಪದಗಳಿವೆ? ಪದಕೋಶ ಎನ್ನುವುದು ನಿಗಂಟು ರೂಪದ ಪುಸ್ತಕದಲ್ಲಿ ಇದೆಯೆ? ಇಲ್ಲವೆ ಕನ್ನಡ ಮಾತಾಡುವವರ ಮಿದುಳಿನಲ್ಲಿ ಇದೆಯೆ? ಓಹ್, ಹಾಗಾದರೆ, ನಾವು ಮಾತಾಡಬೇಕಾದ ಮತ್ತು ತಿಳಿದುಕೊಳ್ಳಬೇಕಾದ ಅಂಶಗಳು ತುಂಬಾ ಇವೆ. ಇಲ್ಲಿ ಒಂದೆರಡು ಅಂಶಗಳನ್ನು ಮಾತನಾಡುವ ಪ್ರಯತ್ನ ಮಾಡೋಣ.

ಮೂಲಬೂತವಾಗಿ ಕನ್ನಡದಲ್ಲಿ ಪದಗಳು ಎಶ್ಟು ಎನ್ನುವ ಒಂದು ಪ್ರಶ್ನೆಯನ್ನು ಅಂದಾಜಾಗಿ ಮಾತನಾಡೋಣ. ಕನ್ನಡದಲ್ಲಿ ಎಶ್ಟು ಪದಗಳಿವೆ ಎಂದು ಅಂದಾಜು ಮಾಡುವ ಮೊದಲು, ಇಲ್ಲವೆ ಇಂತಾ ಅಂದಾಜು ಮಾಡುವ ಪ್ರಯತ್ನಗಳ ಬಗೆಗೆ ಮಾತಾಡುವ ಮೊದಲು ಹೀಗೆ ಒಂದು ಬಾಶೆಯಲ್ಲಿ ಇರುವ ಪದಗಳನ್ನು ಎಣಿಸಲು ಸಾದ್ಯವೆ? ಎಂಬ ಪ್ರಶ್ನೆಯನ್ನು ಎತ್ತಿಕೊಳ್ಳುವುದು ಒಳ್ಳೆಯದು. ಈಗ ತುಸು ಹಗುರವಾಗಿ ಮಾತನಾಡಲು ಸಾದ್ಯವಾಗಬಹುದು.

ಸರಿ ಹಾಗಾದರೆ, ಜನರಲ್ಲಾಗಿ ಒಂದು ಬಾಶೆಯಲ್ಲಿ ಇಶ್ಟು ಪದಗಳು ಇರಬಹುದು ಎಂದು, ಇಲ್ಲವೆ ದಿನಜೀವನ ನಡೆಯುವುದಕ್ಕೆ ಇಶ್ಟು ಪದಗಳು ಇರಬೇಕು ಎಂದು ಹೇಳುವುದಕ್ಕೆ ಸಾದ್ಯವೆ? ಎಂಬ ಪ್ರಶ್ನೆಯನ್ನು ಮೊದಲಿಗೆ ತೆಗೆದುಕೊಳ್ಳೋಣ. ಇದೇನಿದು, ಒಂದು ಪ್ರಶ್ನೆಗೆ ಉತ್ತರ ನೋಡೋಣ ಎನ್ನುತ್ತ ಇನ್ನೊಂದು ಪ್ರಶ್ನೆಯನ್ನು ತೆಗೆದುಕೊಳ್ಳುತ್ತ, ಅದಕ್ಕೆ ಉತ್ತರ ಹುಡುಕೋಣ ಎನ್ನುತ್ತ ಮತ್ತೆ ಇನ್ನೊಂದು ಪ್ರಶ್ನೆ ತೆಗೆದುಕೊಳ್ಳುತ್ತಿದೆಯಲ್ಲ ಈ ಬರವಣಿಗೆ ಅನಿಸುತ್ತದೆ. ನಿಜ. ಇದು ಬಲು ಕಶ್ಟದ ಕೆಲಸ, ಬಹುಶ ಇದು ಅ-ಸಾದ್ಯದ ಕೆಲಸವೂ ಕೂಡ. ಸರಿ ಹಾಗಾದರೆ ಬಾಶೆಯೊಂದರಲ್ಲಿ ಪದಗಳೆಶ್ಟು ಎಂದು ಹೇಳುವುದು ಸಾದ್ಯವೆ? ಇಂತ ಪ್ರಶ್ನೆಯನ್ನು ಕೇಳುವುದು ಸಾದುವೆ? ಇದಕ್ಕೆ ಕೇಶಿರಾಜ ಒಂದು ಸಾಲನ್ನು ಹೇಳುತ್ತಾನೆ. ಶಬ್ದಪಾರಮಾರ‍್ಗಮಶಕ್ಯಂ. ಇದನ್ನು ಎರಡು ಮೂರು ರೀತಿಯಲ್ಲಿ ಒಡೆದು ಅರ‍್ತ ಮಾಡಿಕೊಳ್ಳುವುದಕ್ಕೆ ಸಾದ್ಯವಿದೆ. ಸರಿ, ಹಾಗಾದರೆ, ಕನ್ನಡದಲ್ಲಿ ಶಬ್ದಗಳೆಶ್ಟು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನಕ್ಕಿಂತ ಮೊದಲು ಕೇಶಿರಾಜನ ಈ ಸಾಲನ್ನು ಅರ‍್ತ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಶಬ್ದಕೋಶವನ್ನು ದಾಟುವುದು ಯಾರಿಗೂ ಅಶಕ್ಯ

ಶಬ್ದ ಎನ್ನುವ ಅಪಾರವಾದ ಸಾಗರದ ಆಚೆ ತಡವನ್ನು ತಲುಪುವುದು ಯಾರಿಗೂ ಅಸಾದ್ಯ. ಯಾಕೆ ಹೀಗೆ, ಶಬ್ದಗಳನ್ನು ಎಣಿಸಲು ಯಾಕೆ ಸಾದ್ಯವಾಗುವುದಿಲ್ಲ? ಎಂಬ ಪ್ರಶ್ನೆಯನ್ನು ಈಗ ಹಾಕಿಕೊಳ್ಳಬೇಕು. ಇಲ್ಲಿ ಪ್ರಶ್ನೆಯಿಂದ ಪ್ರಶ್ನೆಗೆ ದಾಟೋಣ ಸಾದ್ಯ. ಉತ್ತರವಿಲ್ಲದ ಎಡೆಯಲ್ಲೆಲ್ಲ ಇದುವೆ ದಾರಿ.

ಶಬ್ದಗಳು ನಿರಂತರ ಹುಟ್ಟುತ್ತಲೂ ಸಾಯುತ್ತಲೂ ಇರುತ್ತವೆ. ಅಂದರೆ, ಸಮಾಜ ತನ್ನ ಅವಶ್ಯಕತೆಗೆ ತಕ್ಕಂತೆ ಹೊಸ ಹೊಸ ಶಬ್ದಗಳನ್ನು ಹುಟ್ಟಿಸುತ್ತಲೆ ಇರುತ್ತದೆ. ಸಮಾಜದ ಯಾವ ಬಿಂದುವಿನಲ್ಲಿ ಯಾರಿಗೆ ಯಾವುದು ಯಾವಾಗ ಅವಶ್ಯಕತೆಯಾಗಿ ಕಾಣಿಸುತ್ತದೆಯೊ, ಅದರಲ್ಲಿ ಯಾವ ಅವಶ್ಯಕತೆಗೆ ಹೊಸದೊಂದು ಶಬ್ದವನ್ನು ಹುಟ್ಟಿಸಲಾಗುತ್ತದೆಯೊ ತಿಳಿಯದು. ಸಾಮಾನ್ಯವಾಗಿ ಪದವೊಂದು ಹುಟ್ಟಿದಾಗ ಅದು ಯಾರಿಗೂ ತಿಳಿಯುವುದಿಲ್ಲ, ಹಲವು ಬಾರಿ ಆ ‘ಹೊಸ’ ಪದವನ್ನು ಹುಟ್ಟಿಸಿದವರಿಗೂ ಅರಿವಿರುವುದಿಲ್ಲ ಇಲ್ಲವೆ ಗೊತ್ತಿರುವುದಿಲ್ಲ. ಆಮೇಲೆ, ಈ ಪದವೊಂದು ಮತ್ತೆ ಮತ್ತೆ ಬಳಕೆಯಾಗಿ, ಮರುಬಳಕೆಯ ಸರಣಿಯಾಗಿ, ಬಳಕೆ ಸ್ತಿರಗೊಂಡ ಮೇಲೆ ಅದರ ಚಲನೆ ಶುರುವಾಗುತ್ತದೆ. ಈ ಪದವನ್ನು ಹುಟ್ಟಿಸಿದವರು ಮತ್ತು ಸುತ್ತಲಿನವರು, ಈ ಪದವನ್ನು ಮತ್ತೆ ಮತ್ತೆ ಬಳಸಿದರೆ ಮತ್ತು ಹೀಗೆ ಬಳಸಿದ ಪದವನ್ನು ಕೇಳಿದಾಗ ಅದನ್ನು ಕೇಳಿದವರಿಗೆ ನಿರ್ದಿಶ್ಟವಾದ ಅರ‍್ತವಾದರೆ, ಆ ಪದ ಆ ಬಾಶೆಯಲ್ಲಿ ಚಲನೆಯನ್ನು ಪಡೆದುಕೊಂಡಿತು ಎಂದೆನ್ನಬಹುದು. ಆದರೆ, ಇಶ್ಟಕ್ಕೆ ನಿಲ್ಲುವುದಿಲ್ಲ. ಆ ಪದದ ಬಳಕೆಯನ್ನು ಸಮುದಾಯ ಮುಂದುವರೆಸಬೇಕು. ಆಗ, ಆ ಸಮುದಾಯದಲ್ಲಿ, ಆ ಗುಂಪಿನಲ್ಲಿ ಆ ಪದ ಬಳಕೆಗೆ ಬಂದಿತು ಎಂದರ‍್ತ. ಕ್ರಮೇಣ, ಈ ಪದ ತನ್ನ ಬಳಕೆಯ ಗುಂಪನ್ನು ದಾಟಿಕೊಂಡು ಇತರ ಗುಂಪುಗಳಿಗೂ ವ್ಯಾಪಿಸಿಕೊಳ್ಳುವ ಅವಕಾಶವನ್ನು ಹೊಂದಿರುತ್ತದೆ. ಆದರೆ, ಅದು ಹಾಗೆ ಇತರ ಗುಂಪುಗಳಿಗೆ ಚಲಿಸಲೇಬೇಕು ಎಂಬ ನಿಯಮವಿಲ್ಲ. ಒಂದೆ ನಿರ್ದಿಶ್ಟ ಗುಂಪಿನಲ್ಲಿ ಮಾತ್ರವೆ ಆ ಪದ ಬಳಕೆಯಲ್ಲಿ ಉಳಿಯಬಹುದು. ಈಗ ಈ ಪದವು ಅದನ್ನು ಬಳಸುವ ಗುಂಪಿನ ಸದಸ್ಯರಿಗೆ ಮತ್ತು ಆ ಗುಂಪಿನ ಹೆಚ್ಚು ಸಂಪರ‍್ಕ ಇರುವವರಿಗೆ ಮಾತ್ರ ತಿಳಿದಿರುತ್ತದೆ, ಉಳಿದವರಿಗೆ ತಿಳಿದಿರುವುದಿಲ್ಲ. ಈಗ, ವಿದ್ವಾಂಸರು ಈ ನಿರ‍್ದಿಶ್ಟ ಗುಂಪಿನಲ್ಲಿನ ಈ ಪದದ ಬಳಕೆಯನ್ನು ತಿಳಿದುಕೊಂಡಿದ್ದರೆ ಮಾತ್ರ ಆ ಪದವೊಂದರ ಬಗೆಗೆ ಅರಿವು ಮೂಡಲು ಸಾದ್ಯ. ಇಲ್ಲದಿದ್ದರೆ, ಆ ಪದದ ಇರುವಿಕೆಯೆ ತಿಳಿಯುವುದಿಲ್ಲ. ಕುತೂಹಲವೆಂದರೆ ಒಂದು ಬಾಶೆಯಲ್ಲಿ ಹಲವು ಬಗೆಯ ಹಲವಾರು ಗುಂಪುಗಳು ಇರಬಹುದು. ಪ್ರತಿಯೊಂದೂ ಗುಂಪು ತನ್ನದೆ ಆದ ಅವಶ್ಯಕತೆಗಳನ್ನು ಹೊಂದಿರಬಹುದು ಮತ್ತು ತನ್ನದೆ ರೀತಿಯಲ್ಲಿ ಹೊಸ ಪದವನ್ನು ಹುಟ್ಟಿಸಬಹುದು. ಇವುಗಳಲ್ಲಿ ಎಶ್ಟೊ ಪದಗಳು ಇತರ ಗುಂಪಿಗೆ ಚಲಿಸದೆ ನಿರ‍್ದಿಶ್ಟ ಗುಂಪಿನಲ್ಲಿ ಕೆಲಕಾಲ ಬಳಕೆಯಾಗಿ ಆನಂತರ ಯಾರಿಗೂ ಗೊತ್ತಾಗದ ಹಾಗೆ ಬಿದ್ದುಹೋಗಬಹುದು.

ಇನ್ನು ಮತ್ತೊಂದು ಪ್ರಶ್ನೆಗೆ ನಮ್ಮ ಮಾತುಕತೆಯನ್ನು ಮುನ್ನಡೆಸೋಣ. ಹೊಸಪದಗಳನ್ನು ಹೇಗೆ ಹುಟ್ಟಿಸಬಹುದು? ಹೊಸಪದಗಳನ್ನು ಹುಟ್ಟಿಸುವುದಕ್ಕೆ ಒಂದು ಬಾಶೆಯಲ್ಲಿ ಹಲವು ಬಗೆಯ ದಾರಿಗಳು ಇರುತ್ತವೆ. ಕನ್ನಡದಲ್ಲಿ ರಾಚನಿಕವಾಗಿ ಹೊಸಪದಗಳನ್ನು ಹುಟ್ಟಿಸುವುದಕ್ಕೆ ಇರುವ ವಿವಿದ ದಾರಿಗಳನ್ನು ಈ ಅಂಕಣದಲ್ಲಿ ಮೊದಲಿಗೆ ಮಾತಾಡಿದೆ. ಆದರೆ, ಹೊಸ ಪದಗಳನ್ನು ಹುಟ್ಟಿಸುವುದಕ್ಕೆ ಇದಲ್ಲದೆಯೂ ಇನ್ನೂ ಹಲವು ದಾರಿಗಳು ಇರುತ್ತವೆ. ಅವುಗಳಲ್ಲಿ ಇರುವ ಪದವನ್ನು ಮರುರೂಪಿಸಿಕೊಳ್ಳುವುದು. ಅಂದರೆ ಪದವೊಂದರ ದ್ವನಿಗಳನ್ನು, ರಚನೆಯನ್ನು, ಪದವರ್ಗವನ್ನು, ಬಳಕೆಯನ್ನು, ಬಳಕೆ ವಿನ್ಯಾಸವನ್ನು, ಅರ್ತವನ್ನು ಬದಲಿಸಿಕೊಳ್ಳಬಹುದು. ಈ ಎಲ್ಲ ನೆಲೆಯಲ್ಲಿಯೂ ಹಲವು ಸಾದ್ಯತೆಗಳನ್ನು ಬಾಶೆಯೊಂದು ಹೊಂದಿರುತ್ತದೆ. ಇವತ್ತಿನ ಬರವಣಿಗೆಯಲ್ಲಿ ಇದೊಂದೆ ಸಾಲನ್ನು ಪರಿಚಯಿಸಿಕೊಳ್ಳೋಣ. ಪದರಚನೆಯಲ್ಲಿ ಕಂಡುಬರುವ ದ್ವನಿಗಳನ್ನು ಬದಲಿಸಿ ಹೊಸ ಪದಗಳನ್ನು

ಬೆಳೆಸಿಕೊಳ್ಳಬಹುದು, ಬೇಟ-ಬೇಟೆ, ರಚನೆಯನ್ನು ಬದಲಿಸಿಕೊಳ್ಳಬಹುದು, ಇಳಿ-ಇಳಿಕೆ-ಇಳಿವು, ಪದವರ‍್ಗವನ್ನೂ ಬದಲಿಸಿಕೊಳ್ಳಬಹುದು, ಅಂದರೆ ನಾಮಪದವನ್ನು ಕ್ರಿಯಾಪದವಾಗಿಸಿ, ಕ್ರಿಯಾಪದವನ್ನು ನಾಮಪದವಾಗಿಸಿ ಹೀಗೆ ಬದಲಿಸಿ ಬಳಸಬಹುದು, ಹಾಡು-ಹಾಡು, ಬೆರಳು-ಬೆರಳು. ಹೀಗೆ ಹಲವು ಸಾದ್ಯತೆಗಳು ಇರುತ್ತವೆ. ಇನ್ನು, ಪದವೊಂದರ ಅರ‍್ತ ಬದಲಾವಣೆಗೆ, ಅಂತೆಯೆ ರೂಪ ಬದಲಾವಣೆಗೆ ಕಾಲಾಂತರದಲ್ಲಿ, ಪ್ರದೇಶಾಂತರದಲ್ಲಿ, ಸಮಾಜಾಂತರದಲ್ಲಿ, ಸನ್ನಿವೇಶಾಂತರದಲ್ಲಿ ಹೀಗೆ ಹಲವು ನೆಲೆಗಳಲ್ಲಿ, ಹಲವು ಆಯಾಮಗಳಲ್ಲಿ ಹಲತೆರನಾದ ಸಾದ್ಯತೆಗಳು ಇರುತ್ತವೆ. ಈಯೆಲ್ಲ ಬಗೆಯ ಸಾದ್ಯತೆಗಳು ನಿಯಮಿತ ನಿಯಮಗಳಿಗೊಳಪಟ್ಟು ಇರುತ್ತವೆ ಎನ್ನುವುದು ನಿಜ.

ಹೀಗೆ, ಪದಗಳು ನಿರಂತರ ಬೆಳೆಯುತ್ತಿರುತ್ತವೆ ಮತ್ತು ಅದನ್ನು ಬೆಳೆಸುತ್ತಿರುವವರಿಗೆ ತಾವು ಬೆಳೆಸುತ್ತಿರುವ ಪ್ರಕ್ರಿಯೆಯ ಅರಿವೂ ಇರುವುದಿಲ್ಲ. ಹಾಗಾಗಿ, ಬಾಶೆಯೊಂದರಲ್ಲಿ ಬಳಕೆಯಲ್ಲಿರುವ ‘ಎಲ್ಲ’ ಪದಗಳನ್ನು ಎಣಿಸಲು, ಅಂದರೆ ಒಂದು ಬಾಶೆಯಲ್ಲಿ ಪದಗಳೆಶ್ಟು ಎಂದು ಹೇಳುವುದು ಸಾದ್ಯವೆ ಇಲ್ಲ. ಅದಕ್ಕಾಗಿಯೆ, ಕೇಶಿರಾಜ ಶಬ್ದ ಎನ್ನುವ ಅಂಬುದಿಯ ಆಚೆಯ ಪಾರವನ್ನು ತಲುಪುವುದು ಆರಿಗೂ ಅಶಕ್ಯವೆಂದು ಉತ್-ಕಾರ, ಅಂದರೆ ಉದ್ಗಾರವನ್ನು ತೆರೆದನು. ನಾವೂ ಅವನ ಜೊತೆಗೆ ದನಿ-ಕೂಡಿಸೋಣ.

ಆದರೂ, ಪದಗಳೆಶ್ಟು ಎಂಬ ಕುತೂಹಲವನ್ನು ಉಳಿಸಿಕೊಂಡು ಮುಂದಿನ ವಾರ ಮತ್ತೆ ಮಾತಾಡೋಣ.

ಈ ಅಂಕಣದ ಹಿಂದಿನ ಬರೆಹಗಳು:
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...