Date: 23-03-2021
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಇಂಗ್ಲೆಂಡ್ ನ ಕಂಟೆಂಪೊರರಿ ಆರ್ಟ್ ಕಲಾವಿದೆ ಸಾರಾ ಲೂಕಸ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದ: ಸಾರಾ ಲೂಕಸ್ (Sarah Lucas)
ಜನನ: 23 ಅಕ್ಟೋಬರ್, 1962
ಶಿಕ್ಷಣ: ಗೋಲ್ಡ್‌ಸ್ಮಿತ್ಸ್ ಕಾಲೇಜ್, ಲಂಡನ್
ವಾಸ: ಸಫೋಕ್, ಇಂಗ್ಲಂಡ್
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ಸ್ಕಲ್ಪ್ಚರ್‌ಗಳು
ಸಾರಾ ಲೂಕಸ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಸಾರಾ ಲೂಕಸ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಪುರುಷಪ್ರಧಾನ ಸಮಾಜಕ್ಕೆ ಹೊರನೋಟಕ್ಕೇ “ಪೋಲಿ” ಅನ್ನಿಸುವ, ಆದರೆ ಅದರ ಜೊತೆಗೇ ಆ ಸಾಂಸ್ಕೃತಿಕ ತಾರತಮ್ಯಗಳನ್ನು ಗೇಲಿ ಮಾಡುತ್ತಲೇ ಗಾಢವಾಗಿ ತಟ್ಟುವ ಸಾರಾ ಲೂಕಸ್ ಅವರ ಸಮಕಾಲೀನ ಶಿಲ್ಪಗಳು ಸಾಮಾನ್ಯವಾಗಿ ಲೈಂಗಿಕತೆಯ ಗಂಡು ನೋಟಕ್ಕೆ “ಶಾಕ್” ಕೊಡುತ್ತಲೇ ಕಲಾ ಜಗತ್ತಿನಲ್ಲಿ ಅವರ ಸ್ಥಾನವನ್ನು ಗಟ್ಟಿಗೊಳಿಸುತ್ತಾ ಬಂದಿವೆ. ಯಂಗ್ ಬ್ರಿಟಿಷ್ ಆರ್ಟಿಸ್ಟ್ (YBA) ಮೂಲ ಗುಂಪಿನಲ್ಲಿ ಡೇಮಿಯನ್ ಹರ್ಸ್ಟ್, ತ್ರೇಸಿ ಎಮಿನ್ ಅವರ ಜೊತೆ ಮತ್ತೊಂದು ದೊಡ್ಡ ಹೆಸರು ಸಾರಾ ಲೂಕಸ್.
ತೀರಾ ಅಸಾಂಪ್ರದಾಯಿಕ ಬದುಕೊಂದಕ್ಕೆ ತನ್ನನ್ನು ಒಡ್ಡಿಕೊಂಡ ಸಾರಾ “ಟಾಮ್ ಬಾಯ್” ಹಾಗೆಯೇ ಬೆಳೆದುನಿಂತಿದ್ದಾರೆ. ಬಡತನ, ಅಸಂತುಷ್ಟ ಬಾಲ್ಯ, 17ನೇ ವಯಸ್ಸಿನಲ್ಲಿ ಗರ್ಭಪಾತ, ಬಾಯ್ ಫ್ರೆಂಡ್ ಜೊತೆ ಯುರೋಪಿನಲ್ಲಿ ದಿಕ್ಕುದಿಸೆಯಿರದ ಅಲೆದಾಟಗಳ ಬಳಿಕ ಅವರಮ್ಮ ಅವರನ್ನು ಕರೆಸಿ ಊರಲ್ಲೊಂದು ಪುಟ್ಟ ಕೆಲಸ ತೆಗೆಸಿಕೊಡುತ್ತಾರೆ. ಅಲ್ಲಿ ಕಲಾಶಾಲೆಯಲ್ಲಿ ಕಲಿತ ಸಹೋದ್ಯೋಗಿಯೊಬ್ಬರೊಂದಿಗೆ ಮಾತುಕತೆಯ ವೇಳೆ ಆಕೆಗೆ ಕಲಾಜಗತ್ತಿನ ಬಾಗಿಲು ತೀರಾ ಆಕಸ್ಮಿಕವೆಂಬಂತೆ ತೆರೆದುಕೊಂಡಿತು.
ಗೋಲ್ಡ್‌ಸ್ಮಿತ್ಸ್ ಕಾಲೇಜಿನಲ್ಲಿ ಸಹಕಲಾವಿದರೊಂದಿಗೆ ದೈಹಿಕ ಸಂಬಂಧಗಳು, ಅವರಲ್ಲೊಬ್ಬರ ಆತ್ಮಹತ್ಯೆ… ಅದರ ಜೊತೆಜೊತೆಗೇ YBA ಚಳವಳಿಯ ಅಬ್ಬರ, ಅದಕ್ಕೆ ಅವರ ಕಲಾತ್ಮಕ ಕೊಡುಗೆಗಳು - ಇವೆಲ್ಲ ಲೂಕಸ್ ಅವರನ್ನು ಪ್ರಸಿದ್ಧಿಗೆ ತಂದವು. ಆದರೆ, ಕಾಲೇಜಿನಲ್ಲಿ ಗಂಡು ಕಲಾವಿದರ ಜೊತೆ ಸರಿದಂಡಿಯಾಗಿದ್ದ ಲೂಕಸ್, ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ಹೊರಗಿನ ಕಲಾಜಗತ್ತಿನಲ್ಲಿ ಪುರುಷ ಪ್ರಾಧಾನ್ಯವನ್ನು ಅನುಭವಿಸತೊಡಗಿದರು. ಕಲಾಸಂಗ್ರಾಹಕರು ಸಾರಾ ಅವರನ್ನು ಅವರ ಗೆಳೆಯ ಗ್ಯಾರಿ ಹ್ಯೂಮ್ ಜೊತೆ “ಪ್ಲಸ್ ಇನ್ನೊಬ್ಬರು” ಎಂದೇ ಗುರುತಿಸುತ್ತಿದ್ದರೇ ಹೊರತು “ಸ್ವತಂತ್ರ ಕಲಾವಿದೆ” ಆಗಿ ಅಲ್ಲ ಎಂಬ ಆಕ್ರೋಶ ಅವರಲ್ಲಿತ್ತು.
ಅಮೆರಿಕನ್ ಲೇಖಕಿ ಆಂದ್ರೆಯಾ ಡ್ವೋರ್ಕಿನ್ ಅವರ ಸ್ತ್ರೀವಾದಿ ನಿಲುವುಗಳಿಂದ ಪ್ರಭಾವಿತರಾದ ಲೂಕಸ್ ಮೊದಲು ಗಮನ ಸೆಳೆದದ್ದು 1991ರಲ್ಲಿ Penis Nailed to a Board ಎಂಬ ಶಿಲ್ಪದ ಮೂಲಕ. 1993ರಲ್ಲಿ ಸಣ್ಣ ಅವಧಿಗೆ ತ್ರೇಸಿ ಎಮಿನ್ ಜೊತೆ ಲಂಡನ್‌ನಲ್ಲಿ ಗಿಫ್ಟ್ ಶಾಪ್ ಒಂದನ್ನು ನಡೆಸಿದ ಲೂಕಸ್, ಆ ಬಳಿಕ ಜಾಗತಿಕವಾಗಿ ಗಮನ ಸೆಳೆದದ್ದು 1997ರಲ್ಲಿ Bunny Gets Snookered ಪ್ರದರ್ಶನದ ಮೂಲಕ. ಆ ಬಳಿಕವೂ ಲಂಡನ್‌ನ ಕ್ಲಬ್‌ಗಳಲ್ಲಿ ಪಾರ್ಟಿ-ಮೋಜು, ಕುಡಿತಗಳಲ್ಲೇ ಕಾಲ ಕಳೆದ ಲೂಕಸ್, 1998ರ ಹೊತ್ತಿಗೆ, ಮಾರುಕಟ್ಟೆಯಲ್ಲಿ ಯಶಸ್ಸು ಕಂಡ ಬಳಿಕ ಅದಕ್ಕೆ ಮಿತಿ ಹೇರಿಕೊಂಡರಾದರೂ ದುಡ್ಡೇ ದೊಡ್ಡಪ್ಪ ಅಲ್ಲ ಅದರೊಂದಿಗೆ ಬರುವ ದೊಡ್ಡಸ್ಥಿಕೆ ಟೊಳ್ಳು ಎಂಬುದನ್ನು ಮರೆಯಲಿಲ್ಲ. ತನ್ನ ಮನೆಯಲ್ಲೇ ಏಕಾಕಿಯಾಗಿ ಕಲಾವೃತ್ತಿಯಲ್ಲಿ ತೊಡಗಿಕೊಂಡಿದ್ದ ಲೂಕಸ್ ಲಂಡನ್‌ನಿಂದ ಸಫೋಕ್ ಎಂಬ ಹಳ್ಳಿಗೆ ತೆರಳಿದರು. 2008ರಲ್ಲಿ ಅವರ ಪ್ರಿಯಕರ, ಸಹಪಾಠಿ ಆಂಗಸ್ ಫೇರ್‌ಹರ್ಸ್ಟ್ ಆತ್ಮಹತ್ಯೆ ಆಕೆಯನ್ನು ಖಿನ್ನತೆಯೆಡೆಗೆ ತಳ್ಳಿತ್ತು.
ಸಮಕಾಲೀನ ಕಲೆಗೆ ವಾಣಿಜ್ಯ ಯಶಸ್ಸು ತಂದುಕೊಟ್ಟ YBAಚಳುವಳಿಯ ಭಾಗವಾಗಿರುವ ಆಕೆಯ ಹಲವು ಸಹಚರರು ಈಗ ಮಾರುಕಟ್ಟೆಯಲ್ಲಿ ಸಫಲತೆ ಕಾಣುತ್ತಿಲ್ಲವಾದರೂ ಸಾರಾ ಲೂಕಸ್ ಇನ್ನೂ ಮಾರುಕಟ್ಟೆಯ ಕಸುವು ಕಳೆದುಕೊಂಡಿಲ್ಲ. ಸುಲಭವಾಗಿ ಸಿಗುವ ಮನೆಯ ಪೀಠೋಪಕರಣಗಳು, ಆಹಾರ, ಕಾಂಕ್ರೀಟ್ ಬ್ಲಾಕ್‌ಗಳು, ಸಿಗರೇಟು, ಸ್ಟಫ್ ಮಾಡಿದ ಬಟ್ಟೆಗಳನ್ನು ಬಳಸಿ ರಚಿತವಾದ ಈ ಶಿಲ್ಪಗಳ ವಿಶೇಷ ಎಂದರೆ ಅವಕ್ಕೆ ಮುಖ ಇಲ್ಲ. ಅವುಗಳ ಗುರುತೇ ಅವುಗಳ ಜನನಾಂಗಗಳು.
ಮಹಿಳೆಯ ಆಬ್ಜೆಕ್ಟಿಫಿಕೇಷನ್ ಜೊತೆಜೊತೆಗೇ ಲಿಬರೇಷನ್ನಿನ ಮಿಥ್ಯೆಯನ್ನು ಸಾರಾ ಲೂಕಸ್ ಅವರಿಗಿಂತ ಚೆನ್ನಾಗಿ ಹಿಡಿದಿಟ್ಟವರಿಲ್ಲ. ತನ್ನ ಅಗ್ರೆಸಿವ್ ಕಲಾಕೃತಿಗಳ ಜೊತೆ ಪುರುಷ ಪ್ರಧಾನ ಕಲಾ ಜಗತ್ತಿನಲ್ಲಿ, ಕಲಾ ಮಾರುಕಟ್ಟೆಯಲ್ಲಿ ನೆಲೆನಿಂತು, ಮಹಿಳಾ ಕಲಾಕೃತಿಗಳ ಬಗ್ಗೆ ಕಲಾಜಗತ್ತಿನಲ್ಲಿದ್ದ ಸಿದ್ಧತೀರ್ಮಾನಗಳನ್ನು ಬದಲಿಸಿದ ಸಾರಾ ಲೂಕಸ್, ತನ್ನ ಮುಂದಿನ ಪೀಳಿಗೆಯ ಮಹಿಳಾ ಕಲಾವಿದೆಯರಿಗೆ ದೊಡ್ಡದೊಂದು ಹಾದಿ ತೆರೆದುಕೊಟ್ಟದ್ದಕ್ಕಾಗಿ ಕಲಾ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆಯುತ್ತಾರೆ.
ಅವರ “ಹರಿಕೇನ್ ಡೋರಿಸ್” ಕಲಾ ಪ್ರದರ್ಶನ ಈಗ ಬರ್ಲಿನ್‌ನಲ್ಲಿ CFA ಗ್ಯಾಲರಿಯಲ್ಲಿ ನಡೆದ್ದರೆ, ಇನ್ನೊಂದು ಮಹತ್ವದ ಕಲಾ ಪ್ರದರ್ಶನ “ನಾಟ್ ನೌ ಡಾರ್ಲಿಂಗ್” ಫ್ರಾನ್ಸಿನ ಕನ್ಸಾರ್ಟಿಯಂ ಮ್ಯೂಸಿಯಂನಲ್ಲಿ ನಡೆದಿದೆ. ಕಲೆಯನ್ನು ವಾಣಿಜ್ಯವನ್ನಾಗಿ ಪರಿವರ್ತಿಸಿದ ಅವರು ಮತ್ತವರ YBA ಚಳುವಳಿಯ ಬಳಿಕ ಕಲೆ ಅತಿಯಾಗಿ ವಾಣಿಜ್ಯೀಕರಣಗೊಂಡಿರುವ ಬಗ್ಗೆ ಈಗ ಆಕೆಯ ಅಭಿಪ್ರಾಯ: “I think art should be amateur, It should be done for love. I’ve never seen art as a career and I still don’t. If I wanted a career, or a fucking job, I would have gone into business. But then again, what do I know? I am an old fogey.” (ದಿ ಗಾರ್ಡಿಯನ್‌ನ ಶಾರ್ಲೆಟ್ ಹಿಗ್ಗಿನ್ಸ್ ಅವರಿಗೆ ನೀಡಿದ ಸಂದರ್ಶನದಲ್ಲಿ. ಮೇ 2015.)
ಸಾರಾ ಲೂಕಸ್ ಮತ್ತು ಅಮೆರಿಕನ್ ಲೇಖಕಿ ಮ್ಯಾಗಿ ನೆಲ್ಸನ್ ಮಾತುಕತೆ:
ಸಾರಾ ಲೂಕಸ್ ಕುರಿತ ಡಾಕ್ಯುಮೆಂಟರಿ “ಅಬೌಟ್ ಸಾರಾ – 2017” :
ಚಿತ್ರ ಶೀರ್ಷಿಕೆಗಳು:
ಸಾರಾ ಲೂಕಸ್ ಅವರ ‘maradona’ 2015, at the british pavilion
ಸಾರಾ ಲೂಕಸ್ ಅವರ Complete Arsehole, 1993
ಸಾರಾ ಲೂಕಸ್ ಅವರ I SCREAM DADDIO (2015)
ಸಾರಾ ಲೂಕಸ್ ಅವರ Nature Abhors a Vacuum, 1998
ಸಾರಾ ಲೂಕಸ್ ಅವರ SARAH LUCAS Not Now Darling photo Rebecca Fanuele © Consortium Museum4678
ಸಾರಾ ಲೂಕಸ್ ಅವರ Au Naturel, 1994
ಸಾರಾ ಲೂಕಸ್ ಅವರ Chicken Knickers, 2014.
ಸಾರಾ ಲೂಕಸ್ ಅವರ Eating a Banana, 1990. © Sarah Lucas. Courtesy of Sadie Coles HQ, London
ಸಾರಾ ಲೂಕಸ್ ಅವರ Self-portrait with Fried Eggs, 1996
ಈ ಅಂಕಣದ ಹಿಂದಿನ ಬರೆಹಗಳು:
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.