ಓದುಗರಿಗೆ ಕುತೂಹಲವೆನ್ನಿಸುವ ಕಥೆಗಳಿಲ್ಲಿವೆ


"ಪುನುಗು ಬೆಕ್ಕಿಗೆ ಕಾಫಿ ಹಣ್ಣು ತಿನ್ನಿಸಿ, ಅಮೇಧ್ಯವಾಗಿ ವಿಸರ್ಜಿಸುವಂತೆ ಮಾಡುವುದು, ಅದರಿಂದ ಬೇರ್ಪಡಿಸಿದ ಬೀಜಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿರುವುದರಿಂದ ಅದನ್ನೊಂದು ಉದ್ಯೋಗ ಮಾಡಿಕೊಂಡಿರುವುದು. ಬೆಕ್ಕಿಗಳನ್ನು ಬಹುವಾಗಿ ಪ್ರೀತಿಸುವ ನನಗೆ ಈ ಕಥೆ ಓದಿ ಬಹಳ ದುಃಖವಾಯಿತು," ಎನ್ನುತ್ತಾರೆ ಪೂರ್ಣಿಮಾ ಮಾಳಗಿಮನಿ. ಅವರು ಮಹಾಂತೇಶ್ ನವಲಕಲ್ ಅವರ ‘ಬುದ್ಧ ಗಂಟೆಯ ಸದ್ದು’ ಕೃತಿ ಕುರಿತು ಬರೆದ ವಿಮರ್ಶೆ.

ಪ್ರತಿಷ್ಠಿತ ‘ರಾಘವೇಂದ್ರ ಪಾಟೀಲ ಕಥಾ ಪುರಸ್ಕಾರ’ ಪಡೆದ ಈ ಕೃತಿಯಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ. ನನಗೆ ಬಹಳ ಇಷ್ಟವಾದ ಸಂಗತಿ ಎಂದರೆ, ಸರಳವಾದ ಕಥನ ತಂತ್ರ, ಸುಂದರವಾದ ಭಾಷೆಯಿಂದ ಇಲ್ಲಿ ಲೇಖಕರು ಕತೆಗಳ ಮೂಲಕ ತಮ್ಮ ಪರಿಸರ ಕಾಳಜಿಯನ್ನು ತೋರುವ, ಅದರ ಸಂರಕ್ಷಣೆಯ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವುದು. ವರ್ತಮಾನದ ಬಹುಮುಖ್ಯ ತಲ್ಲಣವಾಗಿರುವ ಹವಾಮಾನ ವೈಪರೀತ್ಯ ಕುರಿತು ಬರೆದವರು ವಿರಳವಾಗಿರುವಾಗ, ಈ ಕಥೆಗಳು ಅದನ್ನು ಮುನ್ನೆಲೆಗೆ ತಂದು ಚಿಂತನೆಗೆ ಒಡ್ಡುತ್ತವೆ. ಇಲ್ಲಿ ಕುತೂಹಲ ಹುಟ್ಟಿಸುವ, ಹೆಚ್ಚಿನ ಕತೆಗಾರರು explore ಮಾಡಿರದ ಕಥಾ ವಸ್ತುಗಳೂ ಕಂಡವು.

ಉದಾಹರಣೆಗೆ ‘ಧರಣಿಯ ಮೇಲೆ ದಾಳಿ’ ಎನ್ನುವ ಕಥೆ ಆಫ್ರಿಕಾದ ಒಂದು ಕಾಡು/ farm ನಲ್ಲಿ ನಡೆಯುತ್ತದೆ. ಸಾಯುವ ನಿರ್ಧಾರ ಮಾಡಿದ್ದವನು ಕೊನೆಯ ಪ್ರಯತ್ನವೆಂದು ಭಾರತದಿಂದ ಕೆಲಸ ಹುಡುಕಿಕೊಂಡು ಹೋಗಿ ಅಲ್ಲಿ manager ಆಗಿ ಸೇರಿಕೊಂಡ ನಾಯಕನ POV ನಲ್ಲಿ ಈ ಕಥೆ ಸಾಗುತ್ತದೆ.

ಪುನುಗು ಬೆಕ್ಕಿಗೆ ಕಾಫಿ ಹಣ್ಣು ತಿನ್ನಿಸಿ, ಅಮೇಧ್ಯವಾಗಿ ವಿಸರ್ಜಿಸುವಂತೆ ಮಾಡುವುದು, ಅದರಿಂದ ಬೇರ್ಪಡಿಸಿದ ಬೀಜಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿರುವುದರಿಂದ ಅದನ್ನೊಂದು ಉದ್ಯೋಗ ಮಾಡಿಕೊಂಡಿರುವುದು. ಬೆಕ್ಕಿಗಳನ್ನು ಬಹುವಾಗಿ ಪ್ರೀತಿಸುವ ನನಗೆ ಈ ಕಥೆ ಓದಿ ಬಹಳ ದುಃಖವಾಯಿತು.

ಕೆಲವು ವಸ್ತುಗಳನ್ನು ಅದರಲ್ಲೂ ನಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಮತ್ತು ಹೊರದೇಶಗಳಲ್ಲಿ ನಡೆಯುವ ಕಥೆಗಳ ವಸ್ತುಗಳನ್ನು ಆಯ್ದುಕೊಂಡರೆ ಅವುಗಳನ್ನು ಸಮಂಜಸವಾಗಿ ನಿಭಾಯಿಸುವುದು ದೊಡ್ಡ ಸವಾಲೇ ಸರಿ. ಸ್ವತಃ ಕೃಷಿ ವಿಜ್ಞಾನದ ವಿದ್ಯಾರ್ಥಿಯಾದ ಇವರು, ತಮ್ಮ ಕಥೆಗಳಲ್ಲಿ ಸರಾಗವಾಗಿ ಅದನ್ನು ನಿಭಾಯಿಸಿದ್ದಾರೆ.

ಶೀರ್ಷಿಕೆಯ ಕಥೆ ‘ಬುದ್ಧ ಗಂಟೆಯ ಸದ್ದು’ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಈ ಕಥೆಯ ನಿರೂಪಕನನ್ನು, ಕೀಟನಾಶಕ ಒಂದನ್ನು ಭಾರತದಾದ್ಯಂತ ಅತ್ಯಧಿಕ ಸೇಲ್ಸ್ ಮಾಡಿದ್ದಕ್ಕಾಗಿ incentive ಆಗಿ thailand ಪ್ರವಾಸಕ್ಕೆ ಕರೆದೊಯ್ಯುವ ಕಂಪನಿ.

ಲಂಚ ತಿನ್ನಿಸಿ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುವ ಉದ್ಯಮಿಗಳಿಗೆ ಕೊರತೆಯೇನಿಲ್ಲ. ಹಾಗೆ ವಿಷಕಾರಿ ಕೀಟನಾಶಕಗಳಿಂದ ಸತ್ತ ಸಾವಿರಾರು ಜನ, ವಿಕಲಾಂಗರಾಗಿ ಹುಟ್ಟಿದವರು, ಸಾಲು ಸಾಲಾಗಿ ಸಾಯುವ ದನ ಕರುಗಳು, ಅವನ್ನು ತಿಂದು ಸಾಯುವ ರಣಹದ್ದುಗಳು… ಅಬ್ಬಾ ಮೈ ಜುಂ ಎನ್ನುತ್ತದೆ. ಆಹಾರ ಸರಪಣಿಯಲ್ಲಿ, ಪ್ರಕೃತಿಯಲ್ಲಿ ಎಲ್ಲವೂ interdependent. ಒಂದು ಕಡೆ ಎಡವಟ್ಟಾದರೆ ಎಲ್ಲಾ ಬುಡಮೇಲು. ಇದನ್ನೆಲ್ಲಾ ನೆನೆದು ಪಶ್ಚಾತಾಪ ದಿಂದ ಒದ್ದಾಡುತ್ತಿರುವಾಗ ಅಲ್ಲಿನ ವೇಶ್ಯೆಯೊಂದಿಗೆ ಅವನ ಸಂಭಾಷಣೆ ಕಥೆಯ ಮಹತ್ವದ ತಿರುವು.

‘ವಿಭವಾಂತರವ’ ಕಥೆಯ ನಾಯಕಿ ಪಾತ್ರ ವಿಶೇಷವಾಗಿ ಸೆಳೆಯಿತು. ಪ್ರಿಯಕರನ ಹಿಂದೆ ಬುಲೆಟ್ ಏರಿ ಕುಳಿತು ಒಂದು ವಾರ ಸಮಯ ಕಳೆಯಲು ರೆಸಾರ್ಟ್ ಒಂದಕ್ಕೆ ಹೊರಟಿದ್ದಾಳೆ. ಸೋಲೆಂದರೆ ನೈತಿಕತೆಯನ್ನು ಹೊಸಕಿ ಹಾಕುವುದೇ ಎನ್ನುವಂಥ ಪ್ರಶ್ನೆಗಳು ಮಾರ್ಗ ಮಧ್ಯದಲ್ಲಿ ಅವಳ ಮನಸ್ಸಿನಲ್ಲಿ ಮೂಡುತ್ತವೆ. ಮನುಷ್ಯ ಕಡೆಗೂ ಅದಮ್ಯವಾಗಿ ಪ್ರೀತಿಸುವುದು ಸ್ವಚ್ಛಂದವಾಗಿರುವುದನ್ನೇ! ಈ ಕಥೆಯ ಶೈಲಿ ಭಿನ್ನವಾಗಿದ್ದು abstract ಆಗಿದೆ.

ಇವರ ಬಹುತೇಕ ಕಥೆಗಳು ಓದುಗರಲ್ಲಿ ಅನಾಯಾಸವಾಗಿ ಒಂದು guilt ಹುಟ್ಟಿಸಿಬಿಡುತ್ತವೆ. ಅಈ ಕಥೆಗಳ ರಚನೆಯ ಏಕಮಾತ್ರ ಉದ್ದೇಶವಲ್ಲದಿದ್ದರೂ, ವ್ಯವಸ್ಥೆಯ ಭಾಗವೇ ಆದವರು ಹೇಳಿದಾಗ ಅದಕ್ಕೊಂದು autheticity ಬಂದುಬಿಡುವುದರಿಂದ, ಈ ಕಟುಸತ್ಯಗಳಿಂದ ಮನಸ್ಸು ಭಾರವಾಗುತ್ತದೆ. ಇಲ್ಲಿ ರಂಜನೆ, ರೋಚಕತೆ ಹಿನ್ನೆಲೆಗೆ ಸರಿಯುತ್ತವೆ.

 

MORE FEATURES

ಕೌಟುಂಬಿಕ ಕಥಾ ವಸ್ತುಗಳ ಮೇಲೆ ರಚಿತವಾದಂಥ ಕಥೆಗಳಿವು

16-03-2025 ಬೆಂಗಳೂರು

"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್...

ಲೇಖಕಿ ದೀಪ ಜೋಶಿ ಅವರಿಗೆ ಕಥೆ ಹೇಳುವ ಕೌಶಲ್ಯ ಒಲಿದಿದೆ

15-03-2025 ಬೆಂಗಳೂರು

"ಕಥೆಯಲ್ಲಿ ಬರುವ ಬದರಿ ಯಾತ್ರೆಯ ಸನ್ನಿವೇಶಗಳು, ಕೇದಾರಲ್ಲಿ ನಡೆದ ಘಟನೆ, ಹರಿಹರದ ಕಾರ್ಖಾನೆ ಲಾಕ್ ಔಟ್, ಮಳಖೇಡದಲ...

ಸಂಗೀತವು ವಿಶ್ವದ ಏಕೈಕ ಸಾರ್ವತ್ರಿಕ ಭಾಷೆ

15-03-2025 ಬೆಂಗಳೂರು

“ಸರಳವಾದ ಭಾಷಾ ಬಳಕೆ ಹಾಗೂ ಸಮಕಾಲೀನ ಯುಗಧರ್ಮದ ಅರಿವಿಗೆ ತಕ್ಕಂತೆ ಸಂಗೀತವು ಬದಲಾಗುತ್ತಿರುವ ರೀತಿಯ ಬಗೆಗಿನ ಸಕ...