Date: 01-10-2023
Location: ಬೆಂಗಳೂರು
''ನಾನು ದುಡ್ಡಿಗೋಸ್ಕರ ಹಾವು ಹಿಡಿಯುತ್ತಿಲ್ಲ, ಅವುಗಳನ್ನು ರಕ್ಷಣೆ ಮಾಡಲು ಹಾವು ಹಿಡಿಯುತ್ತೇನೆ. ಚಿಕ್ಕವಯಸ್ಸಿನಿಂದಲೂ ನನಗೆ ಪ್ರಾಣಿಗಳು ಎಂದರೆ ಎಲ್ಲಿಲ್ಲದ ಪ್ರೀತಿ ಅಕ್ಕರೆ. ಮೊದಲೆಲ್ಲ ಮನೆಯಲ್ಲಿ ಗಿಳಿ, ಪಾರಿವಾಳ, ಮೊಲ, ಬೆಕ್ಕು, ನಾಯಿಗಳನ್ನೆಲ್ಲ ಸಾಕಿದ್ದೆವು. ಅಮ್ಮ ಮತ್ತು ನನ್ನ ತಂಗಿ ಪ್ರಾಣಿಗಳನ್ನು ಸಲಹುವಲ್ಲಿ ಸಹಾಯ ಮಾಡುತ್ತಿದ್ದರು,'' ಎನ್ನುತ್ತಾರೆ ಸ್ನೇಕ್ ನವೀನ್. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮಳಗಾಳ ಗ್ರಾಮದ ಉರಗ ರಕ್ಷಕ ನವೀನ್ ಅವರ ಕುರಿತು ಅಂಕಣಗಾರ್ತಿ ಜ್ಯೋತಿ ಎಸ್ ಅವರು ತಮ್ಮ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ ಕಟ್ಟಿಕೊಟ್ಟಿದ್ದಾರೆ.
ಹಾವು ಎಂದರೆ ಬಹುತೇಕರಿಗೆ ಭಯ. ಹಾಗಾಗಿ ಮನೆಯೊಳಗೆ ಹಾವು ಬಂದರೂ ಹಿಡಿಯಲು ಜನ ಹಿಂಜರಿಯುತ್ತಾರೆ. ಕೆಲವರು ಹಾವುಗಳನ್ನು ಹೊಡೆದು ಕೊಲ್ಲುತ್ತಾರೆ. ಇದರಿಂದ ಪ್ರಕೃತಿಗೆ ಹಾನಿ. ಹಾವು ರೈತನ ಮಿತ್ರ. ಇಲಿ, ಹೆಗ್ಗಣ, ಹುಳುಗಳನ್ನು ತಿಂದು ಬೆಳೆಗಳು ಹಾಳಾಗದಂತೆ ಪರೋಕ್ಷವಾಗಿ ರೈತನಿಗೆ ಸಹಾಯ ಮಾಡುತ್ತದೆ. ಹಾವುಗಳನ್ನು ಸರಿಯಾಗಿ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವುದು ಬಹಳ ಮುಖ್ಯ. ಅಂತಹ ಒಬ್ಬ ವ್ಯಕ್ತಿ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮಳಗಾಳ ಗ್ರಾಮದ ಸ್ನೇಕ್ ನವೀನ್. ಉರಗ ರಕ್ಷಕ ನವೀನ್ ಅವರ ತಂದೆ ನಾಗೇಶ್ ತಾಯಿ ಪದ್ಮ.
'ನಾನು ದುಡ್ಡಿಗೋಸ್ಕರ ಹಾವು ಹಿಡಿಯುತ್ತಿಲ್ಲ, ಅವುಗಳನ್ನು ರಕ್ಷಣೆ ಮಾಡಲು ಹಾವು ಹಿಡಿಯುತ್ತೇನೆ. ಚಿಕ್ಕವಯಸ್ಸಿನಿಂದಲೂ ನನಗೆ ಪ್ರಾಣಿಗಳು ಎಂದರೆ ಎಲ್ಲಿಲ್ಲದ ಪ್ರೀತಿ ಅಕ್ಕರೆ. ಮೊದಲೆಲ್ಲ ಮನೆಯಲ್ಲಿ ಗಿಳಿ, ಪಾರಿವಾಳ, ಮೊಲ, ಬೆಕ್ಕು, ನಾಯಿಗಳನ್ನೆಲ್ಲ ಸಾಕಿದ್ದೆವು. ಅಮ್ಮ ಮತ್ತು ನನ್ನ ತಂಗಿ ಪ್ರಾಣಿಗಳನ್ನು ಸಲಹುವಲ್ಲಿ ಸಹಾಯ ಮಾಡುತ್ತಿದ್ದರು. ನಾನು ನಾಲ್ಕನೇ ತರಗತಿಯಲ್ಲಿದ್ದಾಗ ರಸ್ತೆ ಬದಿಯಲ್ಲಿ ಹಾವಾಡಿಗರು ಹಾವಾಡಿಸುತ್ತಿದ್ದರು. ಅದನ್ನು ನಿಂತುಕೊಂಡು ನೋಡಬೇಕಾದರೆ ಕೇರೆ ಹಾವಿಗೆ ಬಾಲದಲ್ಲಿ ವಿಷ ಇರತ್ತೆ. ಮಂಡಲದ ಹಾವು ಉಸಿರು ಬಿಟ್ಟರೆ ವಿಷ ಅಂತೆಲ್ಲಾ ಹೇಳ್ತಾ ಯಾರೂ ಹೋಗಬೇಡಿ ಹಾವಿನ ಹಲ್ಲು ತೋರಿಸ್ತೀನಿ ಅಂತ ಹೇಳುತ್ತಿದ್ದರು. ನಾನು ಆಗ ಅಲ್ಲೇ ನೋಡಿಕೊಂಡು ನಿಂತುಕೊಳ್ಳುತ್ತಿದ್ದೆ. ಪ್ರತೀದಿನ ಸರ್ಕಲ್ ವೊಂದರಲ್ಲಿ ಒಬ್ಬ ಹಾವಾಡಿಸುತ್ತಿದ್ದ. ನನಗೆ ನೋಡ್ತಾ ನೋಡ್ತಾ ನಾನು ಹಾವು ಮುಟ್ಟಬೇಕು ಹಿಡಿದುಕೊಳ್ಳಬೇಕು ಅನಿಸುತ್ತಿತ್ತು. ಕಾರಣಾಂತರಗಳಿಂದ ನನ್ನ ವಿದ್ಯಾಭ್ಯಾಸ ಎಸ್. ಎಸ್. ಎಲ್. ಸಿ.ಗೆ ನಿಂತುಹೋಯಿತು. ಮುಂದುವರೆಸುವುದು ಸಾಧ್ಯವಾಗಲಿಲ್ಲ. ನಂತರ ಸ್ವಲ್ಪ ದೊಡ್ಡವನಾದ ಮೇಲೆ ಹಾವುಗಳನ್ನು ಕಂಡರೆ ಹಾವುಗಳನ್ನು ಹಿಡಿಯೋದು, ಆಟ ಆಡಿಸೋದು ನಂತರ ಬಿಟ್ಟುಬಿಡೋದು ಮಾಡುತ್ತಿದ್ದೆ. ಹೀಗೆ ಮಾಡ್ತಾ ಮಾಡ್ತಾ ಕೇರೆ ಹಾವು ಸಿಕ್ಕಿದ್ರೆ ಅದರ ಬಾಲ ನೋಡೋದು, ನಾಗರಹಾವು ನೋಡಿದ್ರೆ ಅದರ ಹಲ್ಲು ನೋಡೋದು. ಎಲ್ಲಿಯಾದರೂ ಹಾವುಗಳನ್ನು ಸಾಯಿಸಿದ್ರೆ ಆ ಹಾವುಗಳನ್ನು ಹಿಡಿದು ಎಲ್ಲವನ್ನು ಗಮನಿಸುತ್ತಿದ್ದೆ. ನಾನು ನನ್ನ ಸ್ನೇಹಿತ ಒಮ್ಮೆ ಬರುತ್ತಿರಬೇಕಾದರೆ ತುಂಬ ಜನರು ಗುಂಪು ಸೇರಿದ್ದರು. ಏನು ಅಂತ ಕೇಳಿದಾಗ ಹಾವು ಇದೆ ಅಂತ ಹೇಳಿದ್ರು. ಅದನ್ನ ಏನ್ ಮಾಡ್ತೀರಾ ಅಂತ ಕೇಳಿದಾಗ ಹಿಡಿದು ಸಾಯಿಸಿಬಿಡುತ್ತೇವೆ ಅಂದ್ರು. ಸಾಯಿಸಬೇಡಿ ನಾನು ಹಿಡಿದುಕೊಂಡು ಹೋಗಿ ಎಲ್ಲಾದರೂ ಬಿಟ್ಟುಬಿಡುತ್ತೇನೆ ಎಂದೆ. ಅವತ್ತು ನನಗೆ ಹಾವು ಹೇಗೆ ಹಿಡಿಯಬೇಕು ಎಂಬ ಬಗ್ಗೆ ಏನೂ ಗೊತ್ತಿಲ್ಲ. ಅದರ ತಲೆಮೇಲೆ ಕೋಲಿಟ್ಟು ಅದನ್ನು ಚೀಲಕ್ಕೆ ಹಾಕಿಕೊಂಡು ದೂರ ತೆಗೆದುಕೊಂಡು ಹೋಗಿ ಬಿಟ್ಟುಬಂದೆ. ನಂತರ ಸುತ್ತಲಿನವರು ಎಲ್ಲಾದ್ರೂ ಹಾವು ಕಂಡ್ರೆ ನನ್ನನ್ನು ಕರೆಯಲು ಮನೆ ಹತ್ತಿರ ಬರಲು ಶುರು ಮಾಡಿದ್ರು. ಆಗ ನನ್ನ ಹತ್ತಿರ ಮೊಬೈಲ್ ಇರಲಿಲ್ಲ. ನನ್ನನ್ನೇನು ಹಾವು ಹಿಡಿಯುವವನು ಅಂತ ಅಂದುಕೊಂಡಿದ್ದೀರಾ!? ಅಂತ ಹೇಳಿ ಅವರನ್ನು ವಾಪಸ್ಸು ಕಳಿಸುವಾಗ ನನ್ನೊಳಗೆ ಒಂಥರಾ ಕಸಿವಿಸಿ ಭಾವ ಕಾಡಲು ಶುರುವಾಯ್ತು.
ನನ್ನನ್ನು ಕಾಪಾಡು ಅಂತ ಹಾವೇ ಕೂಗಿದ ಹಾಗೆ ಭಾಸವಾಗುತ್ತಿತ್ತು. ನಾನು ಹೋಗದೆ ಹೋದರೆ ಒಂದು ಜೀವ ಹೋಗತ್ತೆ ಅಂತ ಇರಿ ಬರುತ್ತೇನೆ ಅಂತ ಹೊರಟೆ. ಬರುಬರುತ್ತಾ ಕನಕಪುರದ ಸುತ್ತ ಮುತ್ತ ನಾನು ಹಾವು ಹಿಡಿಯುವ ವಿಚಾರ ಹಬ್ಬಿ ಇಲ್ಲಿ ಎಲ್ಲೇ ಹಾವು ಕಂಡರೂ ನಮ್ಮ ಮನೆಗೆ ನನಗಾಗಿ ಹುಡುಕಿಕೊಂಡು ಬರುತ್ತಿದ್ದರು. ನಾಗರಹಾವು, ಕೊಳಕು ಮಂಡಲ, ಕಟ್ಟಾವು, ಗರಗಸ ಮಂಡಲ ಇವು ವಿಷದ ಹಾವುಗಳು. ವಿಷ ಇಲ್ಲದ ಹಾವುಗಳು ಕೇರೆ ಹಾವು, ನೀರ್ ಹಾವು, ಹಸಿರು ಹಾವು, ತೋಳದ ಹಾವು, ಹೆಬ್ಬಾವು, ಮಂಗ ಮಂಡಲ, ಸುರಂಗ ಮಂಡಲ ಇತ್ಯಾದಿ.. ಹಿಡಿದ ಹಾವನ್ನು ಕೆಲವೊಮ್ಮೆ ಮನೆಯಲ್ಲಿ ಇಟ್ಟುಕೊಳ್ಳಬೇಕಿತ್ತು. ನಂತರ ಬಿಡಬೇಕಿತ್ತು ಹಾಗಾಗಿ ಮನೆಯಲ್ಲಿ ಮೊದಲೆಲ್ಲ ಬೈತಿದ್ರು. ಚಿಕ್ಕ ವಯಸ್ಸಿನಿಂದ ಅಂದರೆ 14-15 ವರ್ಷದಿಂದ ಹಾವಿನ ಜೊತೆಗಿನ ಒಡನಾಟ ನನ್ನದು. ಕನಕಪುರದ ಸುತ್ತ ಮುತ್ತ ನಲವತ್ತು ಕಿ. ಮೀ. ಯಾರ ಮನೆ, ಆಫೀಸ್, ಹೊಲ, ಗದ್ದೆ, ಶೆಡ್ ಎಲ್ಲಿಯೇ ಹಾವನ್ನು ಕಂಡರೂ ಈಗ ನನಗೆ ಫೋನ್ ಮಾಡುತ್ತಾರೆ. ಹೀಗೆ ಹಾವು ಹಿಡಿಯುವ ಸಂದರ್ಭದಲ್ಲಿ ಕೇರೆಹಾವು, ನೀರ್ ಹಾವು, ಸುರಂಗ ಮಂಡಲ, ಹಸಿರು ಹಾವು ಕಚ್ಚಿದ್ದು ತುಂಬ ಇದೆ. ಕೆಲವರು ಯಾವ ತಂದೆ ತಾಯಿ ಹೆತ್ತ ಮಗನಪ್ಪ ನೀನು ಚೆನ್ನಾಗಿರು ಅಂತ ಹರಸುತ್ತಾರೆ. ಕೆಲವರು ನಾವು ಹಾವು ಹಿಡಿಸಿದ್ದೇವೆ ನಮಗೇನು ಕೊಡಲ್ವಾ? ಅಂತ ಕೇಳ್ತಾರೆ. ಇವರು ಹಾವನ್ನೆಲ್ಲ ಹಿಡಿದು ಅದರ ವಿಷದಿಂದ ಏನೋ ಮಾಡ್ತಾರೆ ಅಂತ ಕೆಲವರು ಅಪಪ್ರಚಾರ ಮಾಡ್ತಾರೆ. ಹಾವು ಹಿಡಿದು ಫಾರೆಸ್ಟ್ ಆಫೀಸರ್ ಗೆ ಕೊಟ್ಟು ಹಣ ತೆಗೆದುಕೊಳ್ಳುತ್ತಾರೆ ಅಂತ ಕೆಲವರು ಹೇಳುತ್ತಾರೆ. ಇಂತಹ ಯಾವ ಉಹಾ ಪೋಹಗಳಿಗೆ, ಯಾವುದೇ ಆರೋಪಗಳಿಗೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹಾವಿನ ರಕ್ಷಣೆ ಮಾಡುವುದು ನನ್ನ ಕೆಲಸವೆಂದು ಮಾಡುತ್ತಿದ್ದೇನೆ. ದಿನಕ್ಕೆ 10-12 ಫೋನ್ ಬರುತ್ತದೆ. ಬೆಟ್ಟ, ಗುಡ್ಡ, ತೋಟ, ಗದ್ದೆ, ಹಂಚಿನ ಮನೆಗಳು ನಮ್ಮ ಸುತ್ತಮುತ್ತಲಿನ ಪರಿಸರ ಹೀಗಿರುವುದರಿಂದ ಇಲ್ಲಿ ಹೆಚ್ಚು ಹಾವುಗಳು ಕಾಣಸಿಗುತ್ತವೆ. ಹಿಡಿದ ಹಾವುಗಳನ್ನು ಜನಸಂಪರ್ಕ ಇಲ್ಲದ ಜಾಗದಲ್ಲಿ, ಕಾಡುಗಳಲ್ಲಿ ಬಿಟ್ಟು ಬರುತ್ತಿದ್ದೆ. ಕೆಲವೊಮ್ಮೆ ರಾತ್ರಿ ಹನ್ನೆರಡು ಗಂಟೆಗೆ ಬೆಳಗಿನ ಜಾವ ನಾಲ್ಕು ಐದು ಗಂಟೆಗೆಲ್ಲ ಫೋನ್ ಬಂದುಬಿಡುತ್ತಿತ್ತು. ಹಾವು ಹಿಡಿಯಲು ದೂರ ಹೋದಾಗ ಒಮ್ಮೊಮ್ಮೆ ಊಟ ಕೂಡ ಮಾಡುತ್ತಿರಲಿಲ್ಲ'.
ನವೀನ್ ಹಾವು ಹಿಡಿಯಲು ಹೋದ ಒಂದು ಸಂಗತಿಯನ್ನು ಹಂಚಿಕೊಳ್ಳುತ್ತಾರೆ. 'ಒಮ್ಮೆ ಹುಣಸೆ ಮರದ ಮೇಲೆ ವೈ ಆಕಾರದಲ್ಲಿ ಹಾವು ಮಲಗಿತ್ತು. ಏಣಿ ತರಿಸಿ ಹತ್ತಿ ಹಾವಿನ ಹತ್ತಿರ ಹೋದ ಮೇಲೆ ಹಾವು ಹೆಡೆ ಎತ್ತಿ ನನ್ನ ಮುಖದ ಹತ್ತಿರ ಕಚ್ಚಲು ಬಂತು ನಾನು ತಪ್ಪಿಸಿಕೊಂಡೆ. ಅದರ ಮುಖವೆಲ್ಲ ರಕ್ತವಾಗಿತ್ತು. ಅಣ್ಣ ಅದು ಮುಂಗುಸಿ ಜೊತೆಗೆ ಕಿತ್ತಾಡಿ ಮರ ಹತ್ತಿತ್ತು ಅಂತ ಅಲ್ಲಿದ್ದವರು ಹೇಳಿದ್ರು. ಅದು ಹಾಗೆಯೇ ಕೊಂಬೆ ಮೇಲೆ ಹೋಗುತ್ತಿತ್ತು, ಕೊಂಬೆ ಕೊನೆಯಾದ ಮೇಲೆ ನನ್ನನ್ನು ಅಟ್ಟಿಸಿಕೊಂಡು ಬರಲು ಶುರುಮಾಡಿತು. ನನಗೆ ಹಾವು ಹಿಡಿಯಲು ಭಯವಿಲ್ಲ. ನಾನು ಮರದಮೇಲೆ ಇದ್ದೆ ಅನ್ನುವುದು ಭಯ ತರಿಸಿತ್ತು. ನಂತರ ಆ ಹಾವನ್ನು ಹಿಡಿದು ಚೀಲದಲ್ಲಿ ಹಾಕಿಕೊಂಡು ಕಾಡಿನೊಳಗೆ ಬಿಟ್ಟೆವು. ಮುಂಗುಸಿ ಜೊತೆಗೆ ಜಗಳವಾಡಿದಾಗ ಅದಕ್ಕೆ ಕೋಪ ಹೆಚ್ಚಿರುತ್ತದೆ. ಅಂತಹ ಹಾವನ್ನು ಹಿಡಿಯುವುದು ಸ್ವಲ್ಪ ಕಷ್ಟ. ಆದರೆ ಇದನ್ನು ಯಾವ ಗ್ರಾಮಸ್ಥರು ಹೇಳಿರಲಿಲ್ಲ. ಅದೊಂದು ಮರೆಯಲಾಗದ ಘಟನೆಯಾಗಿ ಉಳಿದಿದೆ. ಯಾರೂ ಗುರುಗಳಿಲ್ಲದೆಯೇ ನಾನು ಹಾವು ಹಿಡಿಯುವುದನ್ನು ಕಲಿತೆ. ಹಾವುಗಳನ್ನು ಸಾಯಿಸಬಾರದು ಅವುಗಳ ಸಂತತಿ ಉಳಿಯಬೇಕು ಎಂಬ ಕಾಳಜಿ ನನ್ನದು. ಇಲ್ಲಿಯವರೆಗೆ ನಾನು 17,000ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದೇನೆ. ನನಗೆ ಈ ಕೆಲಸ ಖುಷಿ ಕೊಟ್ಟಿದೆ. ಬೇರೆಯವರ ಬಗ್ಗೆ, ಅವರ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸಪೋರ್ಟ್ ಯಾರೂ ಮಾಡ್ತಿಲ್ಲ. ಕೊನೇಪಕ್ಷ ನನ್ನ ಈ ಕೆಲಸದ ಬಗ್ಗೆ ಸರಿಯಾಗಿ ಮಾತಾಡ್ತಿಲ್ಲ ಬದಲಿಗೆ ಕೆಲವರು ತುಂಬ ಅಪಪ್ರಚಾರ ಮಾಡ್ತಾರೆ' ಎಂದು ತಮ್ಮ ಮನದಾಳದ ನೋವನ್ನು ಹಂಚಿಕೊಳ್ಳುತ್ತಾರೆ ಮೂವತ್ತೆರಡು ವರ್ಷದ ನವೀನ್.
ಕೆಲವು ವರ್ಷಗಳ ಹಿಂದೆ ಹಾವುಗಳನ್ನು ಕೊಲ್ಲುವುದರಿಂದ ಅವುಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ನಂತರ ಹಾವು ಕೊಲ್ಲುವುದಕ್ಕೆ ಶಿಕ್ಷೆ ಮಾಡಿದ್ದರಿಂದ ಕೊಲ್ಲುವುದು ಕಡಿಮೆಯಾಯಿತು. ಈಗ ಕಾಡುಗಳ ನಾಶದಿಂದ ಅವುಗಳು ಕಡಿಮೆಯಾಗ್ತಿವೆ. ಹಾವುಗಳಿಗೂ ನಿಸರ್ಗಕ್ಕೂ ಅವೀನಾಭಾವ ಸಂಬಂಧವಿದೆ. ಪ್ರಕೃತಿಯಲ್ಲಿ ಹಾವುಗಳ ಪಾತ್ರ ದೊಡ್ಡದು. ಹಾವಿನ ಬಗ್ಗೆ ತಪ್ಪು ಕಲ್ಪನೆಯಿಂದಾಗಿ ಅವುಗಳನ್ನು ಕೊಲ್ಲುತ್ತಾರೆ. ಇದರ ಬಗ್ಗೆ ಸರಿಯಾದ ತಿಳುವಳಿಕೆ ಮುಖ್ಯ. ಹಾಗೇನೇ ಹಾವು ಹಿಡಿಯುವವರ ಬಗ್ಗೆ ಗೌರವ ಇರಬೇಕು. ಕೆಲವು ಹಾವುಗಳು ಆಕ್ರಮಣ ಸ್ವಭಾವ ಹೊಂದಿರುತ್ತವೆ. ಕೆಲವು ತುಂಬ ವಿಷಕಾರಿ ಹಾವುಗಳು ಇರುತ್ತವೆ. ಒಮ್ಮೊಮ್ಮೆ ಹಾವು ಇಕ್ಕಟ್ಟಾದ ಜಾಗದಲ್ಲಿರುತ್ತದೆ. ಇಂತಹ ಎಷ್ಟೋ ಸಂದರ್ಭಗಳಲ್ಲಿ ಜೀವ ಪಣಕ್ಕಿಟ್ಟು ತುಂಬ ರಿಸ್ಕಲ್ಲಿ ಹಾವು ಹಿಡಿಯುತ್ತಾರೆ. ಆ ಮೂಲಕ ತಮ್ಮ ಜೀವ ಲೆಕ್ಕಿಸದೆ ಇತರರ ಜೀವ ರಕ್ಷಣೆಯ ಜೊತೆಗೆ ಹಾವನ್ನೂ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುತ್ತಾರೆ. ಇಂತಹ ಜೀವ ರಕ್ಷಕರ ಬಗ್ಗೆ ಗೌರವ ಇಟ್ಟುಕೊಳ್ಳುವುದು ಮುಖ್ಯ. ಈ ಉಪಕಾರಿ ಕೆಲಸದಲ್ಲಿ ನಿರತರಾಗಿರುವ ಸ್ನೇಕ್ ನವೀನ್ ಅವರಿಗೆ ದೇವರು ಹೆಚ್ಚಿನ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ.
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಬರಹಗಳು:
ರವಿ ನವಲಹಳ್ಳಿ ಅವರ ಅಂಬೇಡ್ಕರ್ ಅರಿವಿನ ಶಾಲೆ
ಬದುಕಿನ ಪರೀಕ್ಷೆಯಲ್ಲಿ ಎಲ್ಲರ ಮನಗೆದ್ದ ಚಿದಾನಂದ
ಮಕ್ಕಳಲ್ಲಿ ಮಕ್ಕಳಾಗಿ ಮಕ್ಕಳ ಜೀವನ ರೂಪಿಸುವಲ್ಲಿ ಸದಾ ತುಡಿದ ಜೀವ ಎಂ. ಆರ್. ಕಮಲ
ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ
ವಿಶೇಷ ಚೇತನರೆಂದರೆ ಸೆಣಸಾಟಗಳೊಂದಿಗೆ ಕನಸುಗಳನ್ನು ಕಟ್ಟುವವರು
ಚುಕ್ಕಿಯಿಟ್ಟು ಚಿತ್ರ ಬರೆಯುವ ಮಾಂತ್ರಿಕ..
ಕಥೆಯಲ್ಲ, ಬದುಕಿನ ವ್ಯಥೆ ಇದು...
ಅಬ್ದುಲ್ ಅವರ ಬದುಕಿನ ಏಳುಬೀಳು
ಹಾಡನ್ನೇ ಬದುಕಾಗಿಸಿದ ದಂಪತಿ ತಂಬೂರಿ ಜವರಯ್ಯ ಮತ್ತು ಬೋರಮ್ಮ
ಶ್ರವಣ್ ಹೆಗ್ಗೋಡು ಅವರ ಗೊಂಬೆಗಳ ಜೊತೆಗಿನ ಪಯಣ
ಕಾಡುಜನರ, ಬುಡಕಟ್ಚು ಸಮುದಾಯಗಳ ಏಳಿಗೆಯ ವಿನೂತನ ‘ವನಚೇತನ’
ಸಮುದಾಯ, ಸಂಸ್ಕೃತಿಗಳ ಸಮ್ಮಿಶ್ರಣವೇ ಭಾರತ
ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಯಿಂದ ಹೊರಬಂದ ಮಂಜುಳ ಮಾಳ್ಗಿ
ಮಹಾಂತೇಶ್ ಅವರ ಹಾಡುಪಾಡು ಬದುಕಿನ ನೋಟ
ಗುರಿ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ಮುಟ್ಟುವುದೇ ಮುಖ್ಯ
ರಂಗಭೂಮಿ ನನ್ನ ಬದುಕನ್ನು ಚೆಂದವಾಗಿ ರೂಪಿಸಿದೆ: ಪ್ರಶಾಂತ್ ಕುಮಾರ್
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ
ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
ಸಬ್ ಇನ್ಸ್ಪೆಕ್ಟರ್ ಸೋಮಶಂಕರ್ ಜೀವನಯಾನ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ಪ್ರಕೃತಿ ಹಾಗೂ ಪಕ್ಷಿ ಪ್ರೇಮಿ ವಿನೋದ್ ಕುಮಾರ್ ವಿ.ಕೆ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.