ಶಿವನ ಅಂತಃಕರಣವೇ ನಿಗೂಢ


“ಪ್ರತಿಯೊಬ್ಬನಲ್ಲೂ ಶಿವ ಇದ್ದಾನೆ ಅವನನ್ನು ಜಾಗೃತ ಗೊಳಿಸಬೇಕೆಂಬುದೇ ಕಾದಂಬರಿಯ ಮೂಲ ಉದ್ದೇಶ. ಸತ್ಕರ್ಮಗಳಿಂದ ದೈವತ್ವಕ್ಕೇರಿದ ಮಹಾಪುರುಷನೊಬ್ಬನ ರೋಚಕ ಕಥನವೇ ಈ ಕೃತಿ,” ಎನ್ನುತ್ತಾರೆ ಸೋಮನಾಥ ಗುರುಪ್ಪನವರ. ಅವರು ಎಸ್‌. ಉಮೇಶ್‌ ಅವರ “ಮೆಲೂಹದ ಮೃತ್ಯುಂಜಯ” ಕೃತಿ ಕುರಿತು ಬರೆದ ವಿಮರ್ಶೆ.

ಸಕಲ ಜೀವಕೋಟಿಯ ಒಡೆಯನಾದ ಎಲ್ಲರೂ ಪೂಜಿಸಲ್ಪಡುವ ಸರ್ವಾಂತರಯಾಮಿ ಶಿವನನ್ನು ಸಾಧಾರಣನಾಗಿ ನಮ್ಮಂತೆ ತೋರಿಸುವ ಪ್ರಯತ್ನವೇ ಮೆಲೂಹದ ಮೃತ್ಯುಂಜಯ.

ನಂದಿ ಶಿವನನ್ನು ಹುಡುಕಿ ಮೇಲೂಹಕೆ ಕರೆದುಕೊಂಡು ಬಂದಾಗ ಆರಂಭವಾಗುವ ಕಥೆ.

ಆ ಸಾಮ್ರಾಜ್ಯದಲ್ಲಿ ಏನಾಗುತ್ತದೆ ಯಾವ ಯಾವ ಘಟನಾವಳಿಗಳು ನಡೆಯುತ್ತವೆ. ಅಲ್ಲಿರುವ ಸೌಲಭ್ಯಗಳು ಸಮಾಜ ಹೇಗಿರಬೇಕು, ಅಲ್ಲಿಯ ಜನರ ಬದುಕು. ಅಲ್ಲಿಯ ಪದ್ದತಿಗಳು.ಪರಿಪೂರ್ಣ ಸಮಾಜದ ಕಲ್ಪನೆಯನ್ನು ಲೇಖಕರು ನೀಡಿದ್ದಾರೆ.

ಇಲ್ಲಿ ಸಾಮಾನ್ಯ ಶಿವನ ಅಂತಃಕರಣ, ಸತಿಯ ಪ್ರೀತಿ, ದಕ್ಷ ಮತ್ತು ಅಲ್ಲಿ ಜನ ಅಲ್ಲಿನ ಜನರ ಮೂರ್ಖ ನಂಬಿಕೆಗಳು, ಪರ್ವತರಾಜನ ಕಾನೂನು ನಿಷ್ಟೆ,ನಂದಿ, ವೀರಭದ್ರ, ಕೃತಿಕಾಳ ಗೆಳೆತನ, ನಾಗಾಗಳ ಭಯೋತ್ಪಾದನೆ, ಚಂದ್ರವಂಶಿಗಳ ನತದೃಷ್ಟ ಬದುಕು ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ವಿವರಿಸಲಾಗಿದೆ.

ಕಾದಂಬರಿಯಲ್ಲಿ ಯುದ್ಧ ಹಲವಾರು ಬಾರಿ ನಡೆದರು. ಧರ್ಮ ಸಂರಕ್ಷಣೆಗೆ ಯುದ್ಧ ಅನಿವಾರ್ಯ ಎಂಬ ತತ್ವವನ್ನು ಹೇಳಲಾಗಿದೆ. ಮೆಲೋಹದ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡುತ್ತಾ ಮೃತ್ಯುಂಜಯ ನಮ್ಮ ಪ್ರಸ್ತುತ ಸಮಾಜದ ತಪ್ಪುಗಳ ವಿರುದ್ಧ ಹೋರಾಡಲು ಇರಬೇಕಾದ ಧ್ಯೇಯ ಶಕ್ತಿಯನ್ನು ತುಂಬಿಸುತ್ತಾ ಶಿವ ಸ್ಪೂರ್ತಿಯ ಕಿಡಿಯನ್ನು ಹೊತ್ತಿಸುತ್ತಾನೆ.

"ಬದುಕಿನ ಎರಡು ವಿಭಿನ್ನ ಸಿದ್ಧಾಂತಗಳ ನಡುವೆ ಸಂಘರ್ಷ ಏರ್ಪಟ್ಟಾಗ ಅದನ್ನೇ ಧರ್ಮ ಅಧರ್ಮಗಳ ನಡುವಿನ ಯುದ್ಧ ಎಂದು ನಾವು ಭಾವಿಸುತ್ತೇವೆ. ಚಂದ್ರವಂಶಿಗಳು ಸೂರ್ಯವಂಶಿ ಗಳಿಗಿಂತ ವಿಭಿನ್ನ ಜೀವನ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂದ ಮಾತ್ರಕ್ಕೆ ಅವರು ಕೆಟ್ಟವರು ಎಂಬ ಹಣೆಪಟ್ಟಿ ಕಟ್ಟುವುದು ಸರಿಯಲ್ಲ" .ಹೀಗೆ ಪಂಡಿತರ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.

ಹೀಗೆ ಯಾವುದೇ ಒಳ್ಳೆಯದು ಕೆಟ್ಟದ್ದು ಸರಿ ತಪ್ಪುಗಳನ್ನು ವಿಶ್ಲೇಷಿಸುವು ಶಿವನ ಅಂತಃಕರಣವೇ ನಿಗೂಢ. ಪ್ರತಿಯೊಬ್ಬನಲ್ಲೂ ಶಿವ ಇದ್ದಾನೆ ಅವನನ್ನು ಜಾಗೃತ ಗೊಳಿಸಬೇಕೆಂಬುದೇ ಕಾದಂಬರಿಯ ಮೂಲ ಉದ್ದೇಶ. ಸತ್ಕರ್ಮಗಳಿಂದ ದೈವತ್ವಕ್ಕೇರಿದ ಮಹಾಪುರುಷನೊಬ್ಬನ ರೋಚಕ ಕಥನವೇ ಮೆಲೂಹದ ಮೃತ್ಯುಂಜಯ.

MORE FEATURES

ಯಮನೂರ್ ಸಾಹೇಬ ಎಂಬ ಭವರೋಗದ ಬರಹಗಳ ಹಕೀಮ್

23-04-2025 ಬೆಂಗಳೂರು

"ಏನಿಲ್ಲವೆಂದರೂ ಇಲ್ಲಿಯವರೆಗೆ ಬೆಣ್ಣೆಹಳ್ಳಿ ಯಮನೂರ ಸಾಹೇಬ ಅವರು ಮೂರು ಸಾವಿರಕ್ಕೂ ಹೆಚ್ಚು ನಾಟಕಗಳ ರಂಗಸಂಗೀತಕ್ಕ...

ವಿಡಂಬನ ಸಾಹಿತ್ಯಕ್ಕೆ ಒಂದು ಕೊಡುಗೆ

23-04-2025 ಬೆಂಗಳೂರು

"ಎಚ್. ಬಿ. ಎಲ್. ರಾಯರು ಛಂದೋಬದ್ಧವಾಗಿ ಪದ್ಯಗಳನ್ನು ಹೊಸೆಯಬಲ್ಲ ಅಪೂರ್ವ ವ್ಯಕ್ತಿ. ಅಪೂರ್ವ ಯಾಕೆಂದರೆ ಈ ಕಾಲದ ಸ...

ಈ ಕತೆಯಲ್ಲಿ ಎರಡು ಅಪರೂಪದ ತೈಲ ಚಿತ್ರಗಳ ವಿವರಣೆ ಇವೆ

22-04-2025 ಬೆಂಗಳೂರು

“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂ...