"ಎಚ್. ಬಿ. ಎಲ್. ರಾಯರು ಛಂದೋಬದ್ಧವಾಗಿ ಪದ್ಯಗಳನ್ನು ಹೊಸೆಯಬಲ್ಲ ಅಪೂರ್ವ ವ್ಯಕ್ತಿ. ಅಪೂರ್ವ ಯಾಕೆಂದರೆ ಈ ಕಾಲದ ಸಾಹಿತ್ಯ ಶಿಕ್ಷಣ ಛಂದಸ್ಸನ್ನು ನಿರ್ಲಕ್ಷಿಸುತ್ತದೆ. ಹೆಚ್ಚೆಂದರೆ ಎಂ. ಎ. ವಿದ್ಯರ್ಥಿಗಳಿಗೆ ಕೂಡಾ ವಿದ್ಯಾರ್ಥಿಗಳಿಗೆ ಕುಮಾರ ವ್ಯಾಸನ ಭಾರತ ಭಾಮಿನಿ ಷಟ್ಪದಿಯಲ್ಲಿದೆ ಎಂದು ತಿಳಿದರೆ ಸಾಕಾಗುತ್ತದೆ. ಅದರ ಮಾತ್ರೆಗಳ ಲೆಕ್ಕಾಚಾರ ತಿಳಿದಿದ್ದರೆ ಒಳ್ಳೆಯದು, ತಿಳಿಯದಿದ್ದರೆ ತೊಂದರೆಯಿಲ್ಲ ಎಂಬಂತಹ ಪರಿಸ್ಥಿತಿ," ಎನ್ನುತ್ತಾರೆ ಬಿ. ಜನಾರ್ಧನ ಭಟ್. ಅವರು ಎಚ್.ಬಿ.ಎಲ್. ರಾವ್ ಅವರ 'ಬುದ್ಧಿಜೀವಿಯ ಭೋಗ ಷಟ್ಪದಿ' ಪುಸ್ತಕಕ್ಕೆ ಬರೆದ ಮುನ್ನುಡಿ..
ಮುಂಬಯಿಯ ಸಾಂಸ್ಕೃತಿಕ ನೇತಾರರಲ್ಲೊಬ್ಬರಾದ ಎಚ್. ಬಿ. ಎಲ್. ರಾಯರು ಯಕ್ಷಗಾನ ಕ್ಷೇತ್ರಕ್ಕೆ ಪ್ರಧಾನವಾಗಿಯೂ, ಸಾಹಿತ್ಯ ಕ್ಷೇತ್ರಕ್ಕೆ ಮತ್ತು ಇತರ ಸಾಂಸ್ಕೃತಿಕ ಕ್ಷೇತ್ರಗಳಿಗೆ ಪೂರಕವಾಗಿಯೂ ತಮ್ಮ ಸೇವೆಯನ್ನು ನೀಡುತ್ತಲೇ ಬಂದಿದ್ದಾರೆ. ಅವರ ಸಂಘಟನಾ ಸಾಮರ್ಥ್ಯ ಮತ್ತು ದೂರದೃಷ್ಟಿಗಳಲ್ಲದೆ ಹೋಗಿದ್ದರೆ ಹಲವಾರು ಯಕ್ಷಗಾನ ಕೃತಿಗಳು, ಸಾಹಿತ್ಯ ಕೃತಿಗಳು, ತುಳು ಪಾರ್ದನ ಸಂಪುಟಗಳು ಬೆಳಕು ಕಾಣುತ್ತಿರಲಿಲ್ಲ; ಸಮ್ಮೇಳನಗಳು ನಡೆಯುತ್ತಿರಲಿಲ್ಲ. ಇಂತಹ ಸಾಂಸ್ಕೃತಿಕ ವ್ಯಕ್ತಿ ಕವಿಯೂ ಹೌದು ಎನ್ನುವುದನ್ನು ಅವರ ಪದ್ಯ ಕೃತಿ ‘ಸಪ್ತ ಛಂದೋಗತಿಯ ಸಪ್ತತಿ ಗೀತೆಗಳು’ ಸಾಬೀತು ಮಾಡಿದೆ. ಈ ಕೃತಿ ರಾಯರ ಎಪ್ಪತ್ತನೆಯ ಜನ್ಮ ದಿನದ ಸಂರ್ಭದಲ್ಲಿ (2003) ಪ್ರಕಟವಾಗಿತ್ತು. ಈಗ ಅದರಲ್ಲಿದ್ದ ಪದ್ಯ ಕೃತಿಗಳಿಗೆ ‘ಬುದ್ಧಿಜೀವಿಯ ಭೋಗ ಷಟ್ಪದಿ’ ಎಂಬ ನೀಳ್ಗವಿತೆಯೂ ಸೇರಿ ಮರುಮುದ್ರಣ ಕಾಣುತ್ತಿದೆ.
ಎಚ್. ಬಿ. ಎಲ್. ರಾಯರು ಛಂದೋಬದ್ಧವಾಗಿ ಪದ್ಯಗಳನ್ನು ಹೊಸೆಯಬಲ್ಲ ಅಪೂರ್ವ ವ್ಯಕ್ತಿ. ಅಪೂರ್ವ ಯಾಕೆಂದರೆ ಈ ಕಾಲದ ಸಾಹಿತ್ಯ ಶಿಕ್ಷಣ ಛಂದಸ್ಸನ್ನು ನಿರ್ಲಕ್ಷಿಸುತ್ತದೆ. ಹೆಚ್ಚೆಂದರೆ ಎಂ. ಎ. ವಿದ್ಯರ್ಥಿಗಳಿಗೆ ಕೂಡಾ ವಿದ್ಯಾರ್ಥಿಗಳಿಗೆ ಕುಮಾರ ವ್ಯಾಸನ ಭಾರತ ಭಾಮಿನಿ ಷಟ್ಪದಿಯಲ್ಲಿದೆ ಎಂದು ತಿಳಿದರೆ ಸಾಕಾಗುತ್ತದೆ. ಅದರ ಮಾತ್ರೆಗಳ ಲೆಕ್ಕಾಚಾರ ತಿಳಿದಿದ್ದರೆ ಒಳ್ಳೆಯದು, ತಿಳಿಯದಿದ್ದರೆ ತೊಂದರೆಯಿಲ್ಲ ಎಂಬಂತಹ ಪರಿಸ್ಥಿತಿ.
ಅದೇ ವೇಳೆಗೆ ಯಕ್ಷಗಾನ ಕವಿಗಳು ಮತ್ತು ಅಷ್ಟಾವಧಾನಿಗಳಂತಹ ಬೆರಳೆಣಿಕೆಯ ಕೃತಿರಚನೆಕಾರರು ಛಂದಸ್ಸುಗಳ ಮೇಲೆ ಹಿಡಿತ ಸಾಧಿಸಿ ಛಂದೋಬದ್ಧ ಪದ್ಯಗಳನ್ನು ಹೊಸೆಯುತ್ತಿದ್ದಾರೆ.
ಎಚ್. ಬಿ. ಎಲ್. ರಾಯರು ಯಕ್ಷಗಾನವನ್ನು ಪ್ರಧಾನ ತುಡಿತವಾಗಿ ಸ್ವೀಕರಿಸಿದ್ದಾರೆನ್ನುವುದು ಈ ಕೃತಿಯ ಮೂಲಕ ಸ್ಪಷ್ಟವಾಗುತ್ತದೆ. ಯಾಕೆಂದರೆ ಕೇವಲ ಯಕ್ಷಗಾನ ಸಾಹಿತ್ಯದ ಅಭ್ಯಾಸಿಗಳಿಗೆ ಮಾತ್ರ ತಿಳಿದಿರುವ (ಸಾಹಿತ್ಯದ ವಿದ್ಯಾರ್ಥಿಗಳಿಗೆ ತಿಳಿದಿರದ) ಮಟ್ಟು ಅಥವಾ ಛಂದಸ್ಸುಗಳನ್ನು ಎಚ್. ಬಿ. ಎಲ್. ರಾಯರು ಬಳಸುತ್ತಾರೆ. ಉದಾಹರಣೆಗೆ, ಸೌರಾಷ್ಟ್ರ – ತ್ರಿವುಡೆ, ಮಾರವಿ - ಯೇಕ ಇತ್ಯಾದಿ. ಇಲ್ಲಿ ರಾಗ – ತಾಳಗಳ ಸೂಚನೆ ಮಾತ್ರ. ಜತೆಗೆ ಮಾತ್ರೆಗಳ ಲೆಕ್ಕಾಚಾರವಿದೆ.
ಆಧುನಿಕ ಸಾಹಿತ್ಯ ಈ ರೀತಿ ಛಂದಸ್ಸುಗಳನ್ನು ತೊರೆದು ಮುನ್ನಡೆದುದಕ್ಕೆ ಕಾರಣಗಳಲ್ಲಿ ಒಂದು ಛಂದೋಬದ್ಧ ಪದ್ಯ ರಚನೆ ಕಷ್ಟವಾದುದರಿಂದ ಅಲ್ಲ; ರಚನೆಗಳು ಅತಿ ಸುಲಭವಾಗಿ ಒಳಗಿನ ಹೂರಣ ಜೊಳ್ಳಾಗುತ್ತ ಹೋದುದರಿಂದ. ಸಾಮಾನ್ಯ ಕವಿಗಳು ಪಾದಪೂರಣ ಮಾಡಲು ಅರ್ಥಹೀನ ಶಬ್ದಗಳನ್ನು ಬಳಸುವುದರಿಂದ ಕಿರಿಕಿರಿಯಾಗುತ್ತದೆ. ಮುಖ್ಯ ವಿಷಯದ ಗಹನತೆ, ಓದುಗನ ಏಕಾಗ್ರತೆ ಇವುಗಳು ನಷ್ಟವಾಗುತ್ತವೆ. ಕೊನೆಗೆ ಛಂದಸ್ಸಿನ ಘಾತಗಳಷ್ಟೆ ಮನಸ್ಸಿನಮೇಲೆ ಪರಿಣಾಮ ಬೀರುತ್ತ, ಅರ್ಥದ ಕಡೆಗೆ ಗಮನವಿಲ್ಲದೆ ಓಟ ಸಾಗುವಂತಾಗುತ್ತದೆ. ಅದರಿಂದಾಗಿ ಛಂದೋಬದ್ಧ ರಚನೆಗಳ ಬಗ್ಗೆ ಗೌರವ ಇಟ್ಟುಕೊಂಡೇ ಆಧುನಿಕ ಕಾವ್ಯ ಅದನ್ನು ಅನುಸರಿಸುತ್ತಿಲ್ಲ. ಆಧುನಿಕ ‘ಮಹಾ’ಕವಿಗಳು ಕೂಡಾ ‘ಮಹಾಕಾವ್ಯ’ಗಳನ್ನು ಬರೆಯಲು ಛಂದಸ್ಸನ್ನು ಬಳಸುವುದಿಲ್ಲ.
ಇಂತಹ ಸಂರ್ಭದಲ್ಲಿ ಛಂದೋಬದ್ಧ ಪದ್ಯಗಳ ರಚನೆಯ ಮೂಲಕ ತಮ್ಮ ಕಾವ್ಯವಸ್ತುಗಳನ್ನು ನಿರ್ವಹಿಸಲು ಹೊರಡುವ ಎಚ್. ಬಿ. ಎಲ್. ರಾಯರಂತಹ ಕವಿಗಳು ಇದನ್ನು ಮುಖ್ಯವಾಗಿ ಸಮಾಜ ವಿಮರ್ಶೆಯನ್ನು ಉದ್ದೇಶವಾಗಿರಿಸಿಕೊಂಡು ಬರೆಯುತ್ತಾರೆ ಮತ್ತು ಹಾಸ್ಯ ಅಥವಾ ವ್ಯಂಗ್ಯ ಅವರ ಪ್ರಧಾನ ಅಸ್ತ್ರ ಎನ್ನುವುದು ಕುತೂಹಲಕಾರಿ ಸಂಗತಿಯಾಗಿದೆ.
ಕನ್ನಡದಲ್ಲಿ ಇಂತಹ ಒಂದು ಅದ್ಭುತ ಮೂಲ ಮಾದರಿ ಇದೆ. ಅದು ಜಿ. ಪಿ. ರಾಜರತ್ನಂ ಅವರ ‘ಮಹಾಕವಿ ಪುರುಷ ಸರಸ್ವತಿ’. ಕನ್ನಡದಲ್ಲಿ ವಿಡಂಬನ ಪ್ರಕಾರದಲ್ಲಿ ಒಂದು ಸಾರ್ವಕಾಲಿಕ ಮೌಲ್ಯವುಳ್ಳ ಕೃತಿ ಬಂದಿದ್ದರೆ ಅದು ಜಿ. ಪಿ. ರಾಜರತ್ನಂ ಅವರ ‘ಮಹಾಕವಿ ಪುರುಷ ಸರಸ್ವತಿ’. ಜಗತ್ತಿನ ಯಾವುದೇ ಭಾಷೆಯ ಶ್ರೇಷ್ಠ ವಿಡಂಬನ ಕೃತಿಗಳಿಗೆ ಸರಿಸಾಟಿಯಾಗಬಲ್ಲ ಈ ಕೃತಿ ಭಾಮಿನಿ ಷಟ್ಪದಿ ಕಾವ್ಯ ರೂಪದಲ್ಲಿದೆ. ಆ ರೀತಿ ಇರುವುದರಿಂದ ಹಾಸ್ಯ ಮತ್ತು ವಿಡಂಬನೆಗಳು ಮತ್ತಷ್ಟು ಹರಿತವಾಗಿವೆ. ಸಾಮಾನ್ಯ ಜನರು ಕೂಡಾ ಇದನ್ನು ಓದಿ ಸಂತೋಷಪಡಬಹುದು; ಕಾವ್ಯವೆಂದು ಬೆದರಬೇಕಾಗಿಲ್ಲ. ಜತೆಗೆ, ಪು. ತಿ. ನ. ಅವರು ಸಲಹೆ ಮಾಡಿರುವಂತೆ ಈ ಪದ್ಯಗಳನ್ನು ಕವಿಗೋಷ್ಟಿಗಳಲ್ಲಿ ಗಮಕಿಗಳು ಹಾಡಿ ಜನರಿಗೆ ತಲುಪಿಸಿದರೆ ಜನರಿಗೆ ಒಂದು ಅಮೂಲ್ಯ ಹಾಸ್ಯ ಸಂಪತ್ತಿನ ಪರಿಚಯವಾಗುತ್ತದೆ.
ಎಚ್. ಬಿ. ಎಲ್. ರಾಯರ ಕೃತಿಯನ್ನೂ ಹೀಗೆ ಹಾಡಿ ಪ್ರಸ್ತುತಪಡಿಸಿದರೆ ಒಳ್ಳೆಯದು.
ಜಿ. ರಾಜರತ್ನಂ ಅವರ ಕೃತಿಯ ಮಟ್ಟಕ್ಕೆ ರಾಯರ ಕೃತಿ ಬರುತ್ತದೆ ಎಂದಲ್ಲ; ಆದರೆ ಈ ಸಂರ್ಭದಲ್ಲಿ ಓದುಗರಿಗೆ ಆ ಕೃತಿಯ ಪರಿಚಯ ಆಗಲಿ ಎಂಬ ಉದ್ದೇಶದಿಂದ ಅದರ ಬಗ್ಗೆ ಇಲ್ಲಿ ಸ್ವಲ್ಪ ಹೇಳುತ್ತೇನೆ. ಇದರಿಂದ ಎಚ್. ಬಿ. ಎಲ್. ರಾಯರ ಕೃತಿಯ ಮೌಲ್ಯ ಏನು; ಇದನ್ನು ಸಾಹಿತ್ಯ ವಾಙ್ಮಯದಲ್ಲಿ ಎಲ್ಲಿ ಇರಿಸಬಹುದು ಎಂದು ಚಿಂತಿಸಲು ಕೂಡಾ ಅವಕಾಶ ಮಾಡಿಕೊಳ್ಳುತ್ತಿದ್ದೇನೆ.
ಜಿ. ಪಿ. ರಾಜರತ್ನಂ ಅವರು 1940 ರಲ್ಲಿ ‘ಮಹಾಕವಿ ಪುರುಷ ಸರಸ್ವತಿ’ ಕೃತಿಯನ್ನು ಮೊದಲಬಾರಿಗೆ ಪ್ರಕಟಿಸಿದ ಸಂರ್ಭದಲ್ಲಿ ಅದಕ್ಕೆ ನಿರ್ದಿಷ್ಟ ಸಾಹಿತ್ಯಕ ವಾತಾವರಣ ಕಾರಣವಾಗಿತ್ತು. ಅಲ್ಲದೆ ಅವರು ರತ್ನನ ಪದಗಳಲ್ಲಿ ಬಳಸಿದ ಗ್ರಾಮ್ಯ ಭಾಷೆಯಿಂದ ಕರ್ನಾಟಕ ಭಾಷಾ ಸರಸ್ವತಿಗೆ ಅವಮಾನ ಮಾಡಿದಂತಾಗಿದೆ ಎಂಬ ಟೀಕೆಗಳು ಬಂದಿರಬೇಕು. ಜತೆಗೆ ಆ ಕಾಲದಲ್ಲಿ ಪ್ರಾಸರಕ್ಷಣೆಗೆ ಪ್ರಾಣಬಿಟ್ಟಾದರೂ ಕಾದಬಲ್ಲ ‘ಪಾಣಿನಿಯ ಪೈಲ್ವಾನರೂ’ ‘ಕೇಶಿಯ ಗರಡಿಯಾಳುಗಳೂ’ (ಇವು ಜಿ.ಪಿ.ರಾ. ಅವರ ಮಾತುಗಳೇ) ಇದ್ದರು. ಅಂಥವರಿಗೆ ಮತ್ತು ತಮ್ಮ ನಿತ್ಯದ ಮಾತುಗಳನ್ನು ಇಂಗ್ಲಿಷ್ ಬೆರಕೆಯ ಕನ್ನಡದಲ್ಲಿ ಆಡುತ್ತಿದ್ದರೂ ಕೂಡಾ ಕವಿಗಳು ಕಾವ್ಯದಲ್ಲಿ ಶುದ್ಧ ಅಂದರೆ ಸಂಸ್ಕೃತ ಶಬ್ದಗಳುಳ್ಳ ಭಾಷೆಯನ್ನು ಬಳಸಬೇಕೆಂದು ಆದೇಶಿಸುವ ಸೋಗಿನ ಶುದ್ಧಾಚಾರಿಗಳಿಗೆ ಇಂಜೆಕ್ಷನ್ ನೀಡಲು ರಾಜರತ್ನಂ ಆಂಗ್ಲೀಕೃತ ಕನ್ನಡವನ್ನು ಬಳಸುವ ಪ್ರಾಸಬದ್ಧವಾದ ಭಾಮಿನಿ ಷಟ್ಪದಿಯನ್ನು ಬಳಸುವ ಪುರುಷ ಸರಸ್ವತಿಯನ್ನು ಸೃಷ್ಟಿಸಿದರು. “ಪುರುಷ ಸರಸತಿಯ ಸೋಗಿನಲಿ ಸಾಹಿತ್ಯ ಜೀವನದೀಗಳಿನ ವಿಕೃತಿಗಳ ಲಾಗಹಾಕಿಸುವೀ ಕೃತಿಯು” ಎಂದು ಜಿ. ಪಿ. ರಾ. ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಪುರುಷ ಸರಸ್ವತಿ ಕೃತಿಯಲ್ಲಿ ವ್ಯಂಗ್ಯ, ಹಾಸ್ಯ ಹಾಗೂ ವಿಡಂಬನದ ಸಾಧ್ಯತೆಗಳನ್ನೆಲ್ಲ ಜಿ. ಪಿ. ರಾಜರತ್ನಂ ಸೂರೆಗೊಂಡಿದ್ದಾರೆ ಎನ್ನಬಹುದಲ್ಲದೆ ಇಲ್ಲಿ ಅದನ್ನು ವಿವರಿಸಲು ಅವಕಾಶವಾಗದು; ಅಷ್ಟು ಸಮೃದ್ಧವಾದ ಸಾಹಿತ್ಯ ಅದು.
ಎಚ್. ಬಿ. ಎಲ್. ರಾಯರ ಕೃತಿಯ ಹಿಂದೆಯೂ ಇಂತಹದೇ ತುಡಿತಗಳಿವೆ. ಯಕ್ಷಗಾನ ಕ್ಷೇತ್ರದಲ್ಲಿ ಆಗುತ್ತಿರುವ ಅಧ್ವಾನಗಳು ಮತ್ತು ಸಂಘಟಕನಾದ ತನ್ನ ಮೇಲೆ ಬರುತ್ತಿರುವ ಅಪವಾದಗಳು, ಟೀಕೆಗಳಿಗೆಲ್ಲ ಅವರು ನೀಡಿರುವ ಉತ್ತರ ಈ ಕೃತಿ. ಪ್ರಸ್ತುತ ಕೃತಿಯ ಪ್ರಕಟಣೆಯ ವೇಳೆಗೆ ರಾಯರು ಕನ್ನಡ ‘ಬುದ್ಧಿಜೀವಿ’ಗಳ ಮೇಲೆಯೂ ‘ಬುದ್ಧಿ ಜೀವಿಯ ಭೋಗ ಷಟ್ಪದಿ’ ಪದ್ಯ ರಚಿಸಿ ಅದನ್ನಿಲ್ಲಿ ಸೇರಿಸಿಕೊಂಡಿದ್ದಾರೆ.
‘ಮಹಾಕವಿ ಪುರುಷ ಸರಸ್ವತಿ’ ಕೃತಿಯಲ್ಲಿ ತಲಾ ಐವತ್ತು ಭಾಮಿನೀ ಷಟ್ಪದಿಗಳುಳ್ಳ ಮೂರು ಕಾವ್ಯಗಳಿವೆ. ಅವುಗಳೆಂದರೆ : 1. ಣತ್ವೋದ್ಧರಣ ಮಹಾಕ್ಷುದ್ರ ಕಾವ್ಯ ಪ್ರಪಂಚವು. 2. ಹಾರ್ಮೋನಿಯಂ ಹರಣವು. 3. ಮಹಾಕವಿ ಪುರುಷ ಸರಸ್ವತಿ ಪ್ರಶಸ್ತಿ ಎಂಬ ಅಭಿನವ ಬೈರಿಗೇಂದ್ರ ಭಯಾನಕವು.
ಇವುಗಳ ಮುನ್ನುಡಿ, ಹಿನ್ನುಡಿ, ಟಿಪ್ಪಣಿ, ವಿವರಣೆ, ಪತ್ರವ್ಯವಹಾರ ಮುಂತಾದ ಪರಿವೇಷಗಳಲ್ಲಿ ಸಮೃದ್ಧ ಹಾಸ್ಯ ರಸಾಯನವಿದೆ. ಪುರುಷ ಸರಸ್ವತಿಯು ಬಳಸಿದ ವ್ಯರ್ಥಾಲಂಕಾರ, ಅನ್ನೆಸೆಸರಿ ಅಪೆಂಡೇಜಲಂಕಾರ, ಪರಪಂಕ್ತಿ ಪ್ರಾರಂಭಾಲಂಕಾರ, ಟರ್ಗ ಪ್ರಥಮಾಕ್ಷರ ದ್ವಿತ್ವ ಪಂಚದಶಾಲಂಕಾರ ಮುಂತಾದ ಅಲಂಕಾರಗಳ ಬಗ್ಗೆ ವಿವರಣೆಗಳೂ, ಅಡಿಟಿಪ್ಪಣಿಗಳೂ ಇವೆ. ‘ಸಂದೇಹ ಸಂದೋಹ ಸಂದೇಶವು’ ಎಂಬ ಸಂಪರ್ಣ ಅಸಂಪೂರ್ಣ ಗ್ರಂಥವೂ ಇದರಲ್ಲಿದೆ. ವಾರ್ಧಕ ಷಟ್ಪದಿಯ ಮೂರು ಪದ್ಯಗಳು ಮಾತ್ರ ಇದರಲ್ಲಿರುವುದು. ಕೊನೆಯಲ್ಲಿ ‘ಪು. ಸ. ಮಿತ್ರನ (ಪುರುಷ ಸರಸ್ವತಿ ಮಿತ್ರನ) ಅಪ ** ಕ ** ಥಾವಲ್ಲರಿ (ಅಪ್ರಸಿದ್ಧ ಕವಿಕಥಾ ವಲ್ಲರಿ) ಎಂಬ ಮೂದಲೆಯ ಮನುಸ್ಮೃತಿಗಳು’ ಎಂಬ ಹಾಸ್ಯ ಒಸರುವ ಸಾಹಿತ್ಯ ಚರಿತ್ರೆ ಗದ್ಯದಲ್ಲಿದೆ.
ಪುರುಷ ಸರಸ್ವತಿಯ ಮೂರು ಕಾವ್ಯಗಳಲ್ಲಿ ಮೊದಲನೆಯದಾದ ‘ಣತ್ವೋದ್ಧರಣ ಮಹಾಕ್ಷುದ್ರ ಕಾವ್ಯ ಪ್ರಪಂಚವು’ ಸೃಷ್ಟಿಯಾದ ಸಂರ್ಭವೆಂದರೆ 1937 ರ ಜಮಖಂಡಿ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಬೆಳ್ಳಾವೆ ವೆಂಕಟನಾರಣಪ್ಪನವರು ನಮ್ಮಲ್ಲಿ ಒಗ್ಗಟ್ಟಿಲ್ಲ, ನಮ್ಮ ರಾಜ್ಯದ ಹೆಸರು ಕರ್ನಾಟಕವೋ, ಕರ್ಣಾಟಕ ವೋ ಎನ್ನುವುದನ್ನೇ ನಾವು ನಿರ್ಧರಿಸಿಲ್ಲ ಎಂಬರ್ಥದ ಮಾತುಗಳನ್ನು ಆಡಿದರು. ಅದರ ನಂತರ ಪತ್ರಿಕೆಗಳಲ್ಲಿ ಅದರ ಬಗ್ಗೆ ದೀರ್ಘ ಚರ್ಚೆ ನಡೆಯಿತು. ರಾಜರತ್ನಂ ಅವರು ಸಭೆಯೊಂದರಲ್ಲಿ ಆಡಿದ ಮಾತನ್ನು ನೆವನವಾಗಿರಿಸಿಕೊಂಡು ಅವರನ್ನೂ ಈ ಚರ್ಚೆಗೆ ಎಳೆದುತಂದು, ಅವರು ತಮಗೆ ಇಚ್ಛೆಯಿಲ್ಲದಿದ್ದರೂ ಪತ್ರಿಕೆಗಳಲ್ಲಿ ಪ್ರತಿಕ್ರಿಯೆ, ವಿವರಣೆಗಳನ್ನು ಬರೆಯುವಂತೆ ಆಯಿತು. ಇದರಿಂದ ಅವರು ನೊಂದುಕೊಂಡರು. ಆ ಸಂರ್ಭದಲ್ಲಿ ಅವರು ಬರೆದ ವಿಡಂಬನ ಕೃತಿ ‘ಣತ್ವೋದ್ಧರಣ ಮಹಾಕ್ಷುದ್ರ ಕಾವ್ಯ ಪ್ರಪಂಚವು’. ಇದರಲ್ಲಿ ಕರ್ನಾಟಕ ಹೇಗೆ ಸರಿಯಲ್ಲ, ಕರ್ಣಾಟಕವೇ ಯಾಕೆ ಸರಿ ಎನ್ನುವುದನ್ನು ಅಣಕು ಗಾಂಭೀರ್ಯದಲ್ಲಿ ಸಾಧಿಸಿ ತೋರಿಸಲಾಗಿದೆ.
ಎರಡನೆಯದಾದ ‘ಹಾರ್ಮೋನಿಯಂ ಹರಣವು’ ಒಂದು ಶ್ರೇಷ್ಠ ಹಾಸ್ಯ ಕಾವ್ಯ. ಇದು ಇಂಗ್ಲಿಷಿನ ಪೋಪ್ ಕವಿಯ ‘ರೇಪ್ ಆಫ್ ದ ಲಾಕ್’ ಎಂಬ ಅಣಕು ಮಹಾಕಾವ್ಯದ ಮಾದರಿಯದು. ವೇಂಕಟಾಚಾರ್ಯರೆಂಬ ಗೃಹಸ್ಥರು ತಮ್ಮ ಮಗಳು ಯೆಂಕುವಿಗೆ ಸಂಗೀತ ಕಲಿಸಲು ಒಂದು ಸದ್ದು ಹೆಚ್ಚಿನ ಹಾರ್ಮೋನಿಯಮ್ಮನ್ನು ತಂದು ತಾವೇ ಕಲಿಸಲು ತೊಡಗುತ್ತಾರೆ. “ಕೀರ ಕಚ್ಚಿದ ಬಾಯ ಬೆಕ್ಕಿನ / ಮೋರೆಗಂಡ ಶ್ವಾನ ತನ್ನಯ / ತೋರಬಾಯನು ತೆರೆಯಲಾ ಸರ ಮೂರನುರೆ ಮೀರಿ ಹಾರುಮುನಿಯಂ ತಂದೆ ಮಗಳುದಿ / ರೇರು ಕೂಗಿನ ಕಿರಿಚುಗೊರಲಿನ / ಸಾರಿಗಮಗಳ ಸಮರ ಕೋಳಾಹಳವನೇನೆಂಬೆ ಎಂದು ಕವಿ ವರ್ಣಿಸುತ್ತಾನೆ. ಅವರ ಮನೆಯ ಜಗಲಿಯ ಕೋಣೆಯಲ್ಲಿ ಬಾಡಿಗೆಗಿದ್ದ ನಿಂಗನೆಂಬ ವಿದ್ಯರ್ಥಿಗೆ ಈ ಕಿರಿಚಾಟದಿಂದ ಪರೀಕ್ಷೆಗೆ ಓದಲು ಕಷ್ಟವಾಗಿ ಒಂದು ದಿನ ರಾತ್ರಿ ಹೊತ್ತು ಹಾರ್ಮೋನಿಯಮನ್ನು ಕದಿಯಲು ಬರುತ್ತಾನೆ. ಆದರೆ ಅವನು ಕೈಹಾಕಿದಾಗ ಹಾರ್ಮೋನಿಯಮಿನ ತಿದ್ದಿ ಒತ್ತಿ ಭೋಂ ಎಂಬ ಸದ್ದಾಗುತ್ತದೆ. ವೇಂಕಟರ್ಯರು ಎದ್ದು ಅವನನ್ನು ಹಿಡಿದು ಅವನ ಉದ್ದೇಶವನ್ನು ತಿಳಿದು, ಅವನು ಒಂದೋ ತನ್ನ ಮಗಳನ್ನು ಮದುವೆಯಾಗಬೇಕು, ಇಲ್ಲವೇ ನಿತ್ಯ ಸಂಗೀತ ಪಾಠವಾಗುವಾಗ ಎದುರಲ್ಲೇ ಕುಳಿತಿರಬೇಕೆಂದು ಆಜ್ಞೆ ಮಾಡುತ್ತಾರೆ. ಈ ಎರಡನೆಯ ಶಿಕ್ಷೆಯನ್ನು ಎರಡು ದಿನ ಸಹಿಸಿದ ನಿಂಗ ಮೂರನೆಯ ದಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಈ ದುಃಖಾಂತವನ್ನು ಸಹಿಸದೆ ನೊಂದವರ ಆತ್ಮಕ್ಕೆ ತೃಪ್ತಿಯಾಗುವಂತೆ ಒಂದು ಪಾಠಾಂತರವೂ ಇದೆ. ಅದರಲ್ಲಿ ನಿಂಗನು ಯೆಂಕುವನ್ನು ಮದುವೆಯಾಗಿ ಸಂಗೀತ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾನೆ ಎಂದಿದೆ.
ಪುಸ್ತಕದ ಮೂರನೆಯ ಕಾವ್ಯವೆಂದರೆ ಮಹಾಕವಿ ಪುರುಷ ಸರಸ್ವತಿ ಪ್ರಶಂಸೆ. ಇದರಲ್ಲೇ ಅದ್ಭುತವಾದ ಆಂಗ್ಲೀಕೃತ ಕನ್ನಡದ ಭಾಮಿನಿ ಷಟ್ಪದಿಗಳಿರುವುದು. ಪುರುಷ ಸರಸ್ವತಿಯು ಕಾವ್ಯದಾರಂಭದಲ್ಲಿ ಗಣಪತಿಯನ್ನು ಪ್ರರ್ಥಿಸುವ ಒಂದು ಪದ್ಯ ಹೀಗಿದೆ :
ಕಳ್ಟು ಕಾವ್ಯದ ಮಸಿಯ ಕುಡಿಕೆಯ
ಟಿಳ್ಟು ಮಾಡುವ ಮೊದಲು ಹಾವಿನ
ಬೆಳ್ಟು ಹಾಕಿದ ಗಣಪನನು ಹಾಡುವುದು ನಮ್ಮವರ
ಫಾಳ್ಟು ಮೀರಿದರಿದನು ಸೀವಿಯರ್
ಜೋಳ್ಟು ತಪ್ಪದು ಸತ್ಯ ಥಂಡರ್
ಬೋಳ್ಟು ಬಿದ್ದಂತೆಂದು ಗಣಪತಿಯ ನೆನೆವೆ
ಇನ್ನು ಪುರುಷ ಸರಸ್ವತಿಯ ಸ್ವಪ್ರಶಂಸೆ ಹೀಗಿದೆ :
ಡಸ್ಟಿನಲಿ ಗೋಲ್ಡ್ ಡಸ್ಟು ಮೌಂಟೆವ
ರೆಸ್ಟು ಗಿರಿಗಳ ಗಡಣದಲಿ ಫಾ
ರೆಸ್ಟು ಬೀಸ್ಟುಗಳೊಳಗೆ ಲಯನೆಂತಪ್ರತಿಮವಂತೆ
ವೇಸ್ಟು ಬರಿಮಾತೇಕೆ ಯೀ ಫೋರ್
ಮೋಸ್ಟು ಪೊಯೆಟನು ನೆನೆಯೆ ತಾನೆ
ಕ್ಲಾಸ್ಟು ಕವಿಗಳ ಲಿಸ್ಟಿನೊಳಗೊಬ್ಬೊಂಟಿ ನರವಾಣಿ
ಪಾಸ್ಟರೊರಳಿರಲಿಲ್ಲ ಪ್ರಸೆಂಟಿನ
ಪೋಸ್ಟುಡೇಟಿನ ರ್ಭದೊಳಗ
ಕ್ಕಾಸ್ಟು ಮಾಡಲು ಪುರುಷ ಸರಸತಿಯನದರಿನ್ನಿಲ್ಲ
ಲಾಸ್ಟು ಲಾಸ್ಟೋ ಲಾಸ್ಟು ವರಕವಿ
ಈಸ್ಟು ವೆಸ್ಟೆಲ್ಲೆಡೆಯೊಳಟ್ ವನ್ಸ್
ಹೇಸ್ಟಿನಿಂದೀ ಕವಿಜಯಂತಿಯನೆಸಗಲಿಟ್ಸ್ ರ್ತಿಟ್
ಪದ್ಯಗಳಿಗೆ ನೀಡಿದ ಟಿಪ್ಪಣಿಗಳು, ಪುರುಷ ಸರಸ್ವತಿಯ ಕಾಲನರ್ಣಯ ಮುಂತಾದ ವ್ಯಂಗ್ಯ ಕಟಕಿಗಳ ಒಗ್ಗರಣೆ ಪುಟಪುಟದಲ್ಲೂ ಇದೆ. ಈ ಕೃತಿಗೆ ಕನ್ನಡ ಸಾಹಿತ್ಯದ ದಿಗ್ಗಜರಾದ ಎಂ. ಗೋವಿಂದ ಪೈ, ಶಿವರಾಮ ಕಾರಂತ, ವಿ. ಕೃ. ಗೋಕಾಕ, ದ. ರಾ. ಬೇಂದ್ರೆ, ಎಸ್. ವಿ. ರಂಗಣ್ಣ, ಆರ್. ವಿ. ಜಾಗೀರ್ದಾರ್ ಮತ್ತು ನಾರಾಯಣ ಶಾಸ್ತ್ರೀ ಇವರು ಮುನ್ನುಡಿ ಬರೆದು, ವಿಡಂಬನ ಸಾಹಿತ್ಯದ ಬಗ್ಗೆ ರ್ಚಿಸಿದ್ದಾರೆ. ಈ ಎಲ್ಲಾ ಸಂಗತಿಗಳು ಇದನ್ನು ಒಂದು ಅಮೂಲ್ಯ ಪುಸ್ತಕವನ್ನಾಗಿ ಮಾಡಿವೆ.
ಎಚ್. ಬಿ. ಎಲ್. ರಾಯರು ಕೂಡಾ ಇಂತಹ ಇಂಗ್ಲಿಷ್ ಶಬ್ದಗಳುಳ್ಳ (ಆದಿ ಪ್ರಾಸ) ಪದ್ಯಗಳನ್ನು ಬರೆದಿದ್ದಾರೆ ಮತು ಕೆಲವು ಸಾಂರ್ಭಿಕ ಟಿಪ್ಪಣಿಗಳನ್ನು ಇದೇ ಮಾದರಿಯಲ್ಲಿ ನೀಡಿದ್ದಾರೆ ಎನ್ನುವುದೂ ಕುತೂಹಲಕರ ಸಂಗತಿ.
ನೋಡಿ:
Test ಮಾಡುತ ವೇಷಧಾರಿಯ
Dust ಹೋಗಿದೆ ಶ್ವಾಸಕೋಶಕೆ
Worst ಮುಂದಿದೆ ಕೊಡಿರಿ ಹಣವನು ಕೇಳಿಕೊಂಡದಕೆ||
Best ನಿಮಗಿದು ಮೇಳ ಬಿಡುವುದು
Rest ಮಾಡಿರಿ ಎಂದು ಬೋಧಿಸಿ
List ಕೊಟ್ಟರು ಗುಳಿಗೆ ನುಂಗಲು ಆಂಗ್ಲ ಪಂಡಿತರು.
ಎಚ್. ಬಿ. ಎಲ್. ರಾಯರು ತಮ್ಮ ಮೂಲ ಕೃತಿಗೆ ನೀಡಿದ ಹೆಸರು: ‘ಸಪ್ತ ಛಂದೋಗತಿಯ ಸಪ್ತತಿ ಗೀತೆಗಳು’. ಸಪ್ತತಿ ಅಂದರೆ ಅವರ ಎಪ್ಪತ್ತನೆಯ ಜನ್ಮದಿನೋತ್ಸವ. ಸಪ್ತ ಛಂದೋಗತಿಗಳು ಇವು: ಕಂದ, ಶರ ಷಟ್ಪದಿ, ಕುಸುಮ ಷಟ್ಪದಿ, ಭೋಗ ಷಟ್ಪದಿ, ಭಾಮಿನಿ ಷಟ್ಪದಿ, ಪರಿರ್ಧಿನಿ ಷಟ್ಪದಿ ಮತ್ತು ವರ್ಧಕ ಷಟ್ಪದಿಗಳು.
‘ನಾನು - ನನ್ನೊಳಗೆ’ ಎಂಬ ಕವಿತೆಯಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸುವ ಎಚ್. ಬಿ. ಎಲ್. ನಂತರ ‘ಪರ್ವರಂಗ’ ದಲ್ಲಿ ತನ್ನ ಬಗ್ಗೆ ಮೂರು ಪದ್ಯಗಳನ್ನು ಬರೆದುಕೊಳ್ಳುತ್ತಾರೆ. ‘ಪ್ರಸಂಗ ಪೀಠಿಕೆ’ ಎನ್ನುವುದು ಈ ಕೃತಿಯ ಪ್ರಧಾನ ಭಾಗವಾಗಿದೆ. ಇದು ಪದ್ಯ ರೂಪದ ಯಕ್ಷಗಾನ ಚಿಂತನೆ – ವಿರ್ಶೆಯಾಗಿದೆ. ಹಾಸ್ಯ, ವ್ಯಂಗ್ಯ, ವಿಡಂಬನೆ ಮತ್ತು ಕಟಕಿಗಳನ್ನು ಧಾರಾಳವಾಗಿ ಬಳಸುವ ಎಚ್. ಬಿ. ಎಲ್. ರಾಯರು ಎಲ್ಲದಕ್ಕೂ ಅನುಭವದ ಹಿನ್ನೆಲೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದಾದ ನಂತರ ‘ಸತ್ಯ ವಿಜಯ’ (ಭಗವಾನ್ ಕ್ರಿಸ್ತ) ಎಂಬ ಹಳೆ ಒಡಂಬಡಿಕೆಯನ್ನಾಧರಿಸಿದ ಯಕ್ಷಗಾನ ಪ್ರಸಂಗವಿದೆ.
‘ಪ್ರಸಂಗ ಪೀಠಿಕೆ’ ಎನ್ನುವ ಭಾಗ ಪದ್ಯ ರೂಪದ ಯಕ್ಷಗಾನ ಚಿಂತನೆ – ವಿರ್ಶೆಯಾಗಿದೆ. ಹಾಸ್ಯ, ವ್ಯಂಗ್ಯ, ವಿಡಂಬನೆ ಮತ್ತು ಕಟಕಿಗಳನ್ನು ಧಾರಾಳವಾಗಿ ಬಳಸುವ ಎಚ್. ಬಿ. ಎಲ್. ರಾಯರು ಎಲ್ಲದಕ್ಕೂ ಅನುಭವದ ಹಿನ್ನೆಲೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಟೀಕಿಸಿರುವ ಬಹುತೇಕ ಸನ್ನಿವೇಶಗಳು ಯಾವುವು, ವ್ಯಕ್ತಿಗಳು ಯಾರು ಎನ್ನುವುದು ಈ ಕಾಲದಲ್ಲಿ ಕೆಲವರಿಗೆ ಗೊತ್ತಿರುವ ಸಾಧ್ಯತೆ ಇದೆ. ಆದರೆ ಮುಂದಿನ ಪೀಳಿಗೆಗೆ? ಅಂತಹ ಸಂಗತಿಗಳನ್ನು ಎಲ್ಲಿಯಾದರೂ ದಾಖಲಿಸುವ ಅಗತ್ಯ ಇದೆ. ಆಗ ಎಚ್. ಬಿ. ಎಲ್. ರಾಯರ ಟೀಕೆಗಳಿಗೆ ಸಾಂಸ್ಕೃತಿಕ ಮಹತ್ವ ಪ್ರಾಪ್ತವಾಗುತ್ತದೆ. (ಮೇಲೆ ಉಲ್ಲೇಖಿಸಿದ ರಾಜರತ್ನಂ ಅವರ ‘ಣತ್ವೋದ್ಧರಣ ಮಹಾಕ್ಷುದ್ರ ಕಾವ್ಯ ಪ್ರಪಂಚವು’ ಸೃಷ್ಟಿಯಾದ ಸಂರ್ಭದ ಬಗ್ಗೆ ನಾನು ಕೊಟಿರುವ ಟಿಪ್ಪಣಿ ಗಮನಿಸಿರಿ. ಈ ಮಾಹಿತಿ ಇಲ್ಲದಿದ್ದರೆ ಆ ಪದ್ಯಗುಚ್ಛದ ರ್ಥ ಇಂದಿನ ಓದುಗರಿಗೆ ಹೇಗಾದೀತು?)
ಎಚ್. ಬಿ. ಎಲ್. ರಾಯರು ಪ್ರಾರಂಭದಲ್ಲಿ : ‘ತನು ಮನ ಸಹಕಾರ ಬೇಕಿಲ್ಲ, ವಿರ್ಶಕರ ಭಯ ನನಗಿಲ್ಲ, ಸಲಹೆ ಸೂಚನೆ ಕೇಳುವುದಿಲ್ಲ .....’ ಎಂದು ಹೇಳಿಕೊಂಡರೂ ನಂತರ ‘ನನ್ನ ಅನಿಸಿಕೆಗಳು ಕಲ್ಪನೆಯ ಕೂಸಲ್ಲ, ತುಂಬಿಕೊಂಡಿವೆ ನಡೆದ ಘಟನೆಗಳೆಲ್ಲ, ದಾಕ್ಷಿಣ್ಯಕೊಳಗಾಗಿ ಹೆಸರು ಬರೆದಿಲ್ಲ’ ಎಂದು ಹೇಳುತ್ತಾರೆ.
ಹೆಸರು, ಸನ್ನಿವೇಶಗಳು ಸ್ಪಷ್ಟವಾಗದ ಟೀಕೆ, ವಿರ್ಶೆಗಳಿಗೆ ಸರ್ವಕಾಲಿಕ ಮೌಲ್ಯ ಇರುವುದಿಲ್ಲ. ಅನಾಮಧೇಯರಾಗಿ ಅಥವಾ ಗುಪ್ತನಾಮದಲ್ಲಿ ಮಾಡಿದ ಟೀಕೆಗಳಂತೆಯೇ ಇವುಗಳು ಕೂಡಾ. ತಕ್ಷಣದ ಸನ್ನಿವೇಶದಲ್ಲಿ ಕಿರುನಗುವನ್ನು ಹುಟ್ಟಿಸುವಷ್ಟಕ್ಕೆ ಅವುಗಳ ಸರ್ಥಕ್ಯ. ಟೀಕೆ, ವಿರ್ಶೆಗಳು ವ್ಯಾಪಕ ಪರಿಣಾಮ ಬೀರಿ ಕಲೆಯೊಂದರ ಪರಿಶುದ್ಧತೆಗೆ ಅಥವಾ ಸಮಾಜದ ಸ್ವಾಸ್ಥ÷್ಯಕ್ಕೆ ದಾರಿತೋರಬೇಕಾದರೆ ಸನ್ನಿವೇಶಗಳನ್ನಾದರೂ ಸ್ಪಷ್ಟಪಡಿಸುವ ಟಿಪ್ಪಣಿಗಳಿರಬೇಕು. ಉದಾಹರಣೆಗೆ, ......... ಸಂಸ್ಥೆಯು ............. ರಲ್ಲಿ ರ್ಪಡಿಸಿದ ........... ಸಮಾರಂಭದಲ್ಲಿ ಅತಿಥಿಯೊಬ್ಬರು ಹೀಗೆ ಹೇಳಿದರು. ಅದಕ್ಕೆ ಪ್ರತಿಕ್ರಿಯೆಯಾಗಿ ಬರೆದ ಪದ್ಯ’ - ಹೀಗೆ ವ್ಯಕ್ತಿಗಳ ಹೆಸರು ಹೇಳದೆಯೇ ಸನ್ನಿವೇಶಗಳನ್ನು ಸ್ಪಷ್ಟಪಡಿಸುವ ಅಗತ್ಯವಿದೆ.
ಕೆಲವು ಮಹತ್ವದ ಯಕ್ಷಗಾನ ವಿರ್ಶೆಗಳು ಈ ಪದ್ಯಗಳಲ್ಲಿ ದಾಖಲಾಗಿವೆ. ಅವುಗಳಿಗೆ ಟಿಪ್ಪಣಿ ಅಥವಾ ವಿವರಣೆಯ ಅಗತ್ಯವಿಲ್ಲ. ಉದಾಹರಣೆಗೆ:
ರಂಗಭೂಮಿಯ ಮೇಲೆ ಸ್ತ್ರೀಯರ
ಅಂಗಸೌಷ್ಟವ ಕಾಣಲಾರದೆ
ಭಂಗಬಂದಿದೆ ಪಾತ್ರ ಚಿತ್ರಣ ಯಕ್ಷಗಾನದಲಿ
ಹೆಂಗಸರಿಗವಕಾಶವಿಲ್ಲದೆ
ಪಂಗುವಿನ ತೆರನಾಯ್ತು ಎನ್ನುತ
ಹಂಗಿಪರು ಸತ್ಕುಲಸ್ತ್ರೀಯರ ಪಕ್ಷಪಾತಿಗಳು||
ಹತ್ತು ದಶಕದ ಹಿಂದೆ ರಂಗಕೆ
ಇತ್ತ ಕಥೆಯದು ಕೋಟಿ ಚೆನ್ನಯ
ಮತ್ತೆ ಬಂದಿದೆ ಗ್ರಂಥ ಸಂಶೋಧನೆಯ ರೂಪದಲಿ
ಮೊತ್ತ ಮೊದಲಿಗೆ ಯಕ್ಷಗಾನದಿ
ಪುಸ್ತಕವ ಬರೆದಿರುವ ಕವಿ ಹೆಸ-
ರೆತ್ತಿಕೊಳ್ಳದೆ ಪ್ರಥಮ ಕೃತಿಯಿದು ಎಂದು ಸಾರಿದರು||
ಸವ್ಯ ಸಾಚಿಯು ಎಂದು ಘೋಷಿಸಿ
ನವ್ಯ ರೀತಿಯ ವೇಷ ಕಟ್ಟುತ
ದಿವ್ಯರ್ಶನ ಕೊಟ್ಟ ರಂಗದ ರಾಜ ತಾನೆನಿಸಿ
ಅವ್ಯವಸ್ಥೆಯ ಕಂಡು ಸಭಿಕರು
ಭವ್ಯ ಹೋಲಿಕೆಯೊಂದ ಹೆಣೆದರು
ನವ್ಯ ನಾಟ್ಯವು ಶಾನುಭಾಗರು ಭೂಮಿ ಅಳೆದಂತೆ||
-ಇಂತಹ ಪದ್ಯಗಳು ಕಲೆಯ ವಿಕೃತಿಗಳ ಟೀಕೆಗಳಾಗಿರುವುದರಿಂದ ವ್ಯಕ್ತಿ, ಸನ್ನಿವೇಶಗಳ ಕುರಿತಾದ ಟಿಪ್ಪಣಿಗಳ ಅಗತ್ಯವಿಲ್ಲ. ಇವು ಸಾಧಾರಣವಾಗಿ ಆಗಾಗ ಯಕ್ಷರಂಗದಲ್ಲಿ ಕೇಳಸಿಗುವ ಅಥವಾ ಕಾಣಸಿಗುವ ಮರ್ಖತನ, ಧರ್ತತನ ಹಾಗೂ ಕಲಾವಿಕೃತಿಗಳ ವಿರ್ಶೆಯಾಗಿದೆ.
ಇನ್ನು ‘ಸತ್ಯ ವಿಜಯ’ ಎಂಬ ಕಿರು ಯಕ್ಷಗಾನ ಪ್ರಸಂಗವು ಈ ರಂಗಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವ ಕಥಾಭಾಗವನ್ನು ಹೊಂದಿದೆ. ಶರ್ಷಿಕೆಯ ಬಗ್ಗೆ ಮಾತ್ರ ಮರುಚಿಂತನೆ ಅಗತ್ಯವಿದೆ. ಇದು ಕ್ರಿಸ್ತಪರ್ವದ ಕಥೆಯಾದುದರಿಂದ ಶರ್ಷಿಕೆಯನ್ನು ಬದಲಾಯಿಸಬಹುದು.
‘ಬುದ್ಧಿ ಜೀವಿಯ ಭೋಗಷಟ್ಪದಿ’ ಎನ್ನುವ ಬುದ್ಧಿಜೀವಿಗಳೆಂಬ ಹಣೆಪಟ್ಟಿ ಕಟ್ಟಿಕೊಂಡು ಹಾಸ್ಯಾಸ್ಪದರಾಗಿರುವ ರ್ಗದವರನ್ನು ಲೇವಡಿಮಾಡುತ್ತದೆ.
ಒಟ್ಟಿನಲ್ಲಿ ಸಂತೋಷಕೊಡುವ ಮತ್ತು ಕಲಾವಿರ್ಶೆ ಹಾಗೂ ಸಮಾಜ ವಿರ್ಶೆಗಳೂ ಮೇಳೈಸಿರುವ ಪದ್ಯಗಳು ಇಲ್ಲಿವೆ. ‘ಸತ್ಯ ವಿಜಯ’ ಪ್ರಸಂಗವನ್ನು ಬಿಟ್ಟರೆ ಉಳಿದ ರಚನೆಗಳು ಬಿಡಿಬಿಡಿ ಪದ್ಯಗಳ ಗುಚ್ಛಗಳಾಗಿವೆ. ಕಥಾನಕ ಅಥವಾ ವೈಚಾರಿಕ ಬೆಳವಣಿಗೆಯ ಸೂತ್ರಗಳಿಲ್ಲದ ಮುಕ್ತಕಗಳಾಗಿ ರಂಜಿಸುತ್ತವೆ. ತ್ರಿಪದಿ, ವಚನಗಳಂತೆ ಆಗಾಗ ಭಾಷಣಗಳಲ್ಲಿ ಬಳಸಬಹುದಾದ ರಚನೆಗಳಿವು. ಎಸ್. ವಿ. ಪರಮೇಶ್ವರ ಭಟ್ಟರು, ಎಸ್. ವೆಂಕಟರಾಜರು, ದಿನಕರ ದೇಸಾಯಿಯವರು ಸೇರಿದಂತೆ ಕೆಲವು ಆಧುನಿಕ ಕವಿಗಳು ಈ ರೀತಿ ಸಮಾಜ ವಿರ್ಶೆಯ ಮುಕ್ತಕಗಳ ಸಂಗ್ರಹಗಳನ್ನು ಪ್ರಕಟಿಸಿದ್ದುಂಟು.
ಎಚ್. ಬಿ. ಎಲ್. ರಾಯರ ವೈಶಿಷ್ಟ÷್ಯ ಎಂದರೆ ಯಕ್ಷಗಾನ ಕಲಾ ವಿರ್ಶೆಯ ಪದ್ಯಾವಳಿಯೊಂದನ್ನು ರಚಿಸಿರುವುದು. ಮತ್ತು ತೀವ್ರ ವ್ಯಂಗ್ಯದ ಹಾಸ್ಯಪ್ರಜ್ಞೆಯ ಪದ್ಯಗುಚ್ಛಗಳನ್ನು ಬರೆದಿರುವುದು. ಮೇಲಿನ ಉಲ್ಲೇಖಗಳಲ್ಲಿ ಸೂಚಿಸಿರುವಂತೆ ಎಚ್. ಬಿ. ಎಲ್. ರಾಯರ ಈ ಕೃತಿಯನ್ನು ಈ ಬಗೆಯ ವಿಡಂಬನಾತ್ಮಕ ಪದ್ಯ ಕೃತಿಗಳ ಪರಂಪರೆಯ ಭಾಗವಾಗಿ ನೋಡಬೇಕಾಗುತ್ತದೆ.
"ಅದೊಂದು ಕಾಲ್ಪನಿಕ ಪಾತ್ರವೇ ಆಗಿದ್ದರೂ ಜನ ಅವನಿಗಾಗಿ ಹುಡುಕಾಡಿಬಿಟ್ಟಿದ್ದರಂತೆ. ಅವನ ಅಡ್ರೆಸ್ ಹುಡುಕ ಹೋಗಿ ನಿರ...
"ಮಿತ್ರ ಆನಂದ ಭೋವಿಯವರ ಗಜಲ್ ಗಳಲ್ಲಿ ನಾನು ಹೆಚ್ಚಾಗಿ ಕಂಡಿದ್ದು ವಿಷಾದದ ಭಾವ ಇಲ್ಲಿ ನನ್ನದೆನ್ನುವುದು ಯಾವುದೂ ಇ...
“ಇಡೀ ಬಾಳೆ ಅದೃಷ್ಟ ರೇಖೆಯ ಕೈಗೊಂಬೆ ಎಂದು ಸ್ಪಷ್ಟಪಡಿಸುವುದು ಲೇಖಕರ ಇರಾದೆ ಇದ್ದಂತಿದೆ. ಇದು ಕೊನೆಯ ಕಥೆಯಲ್ಲಿಯ...
©2025 Book Brahma Private Limited.