ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ

Date: 03-08-2024

Location: ಬೆಂಗಳೂರು


"ಮರಾಟಿ ನಡುಗಾಲದಲ್ಲಿ ಬೇಗ ಬೇಗ ಬೆಳೆಯುತ್ತ ರಾಜಕೀಯದ ಬಾಶೆಯಾಗಿ ಬೆಳೆಯಿತು. ಶಿವಾಜಿಯ ಕಾಲಕ್ಕೆ ದೊಡ್ಡಮಟ್ಟದ ರಾಜಕೀಯದ ಬಾಶೆಯಾಗಿ ಮಾತ್ರವಲ್ಲದೆ ಕಡಲ ಸಂಬಂದದಿಂದಾಗಿ ದೊಡ್ಡಮಟ್ಟದ ವ್ಯಾಪಾರದ ಬಾಶೆಯಾಗಿ ಬೆಳೆದಿದ್ದಿತು. ಇದರಿಂದಾಗಿ ಕನ್ನಡ ಮತ್ತು ಮರಾಟಿ ಬಾಶೆಗಳ ಸಂಬಂದ ತೀವ್ರವಾಗಿ ಮತ್ತು ವಿಬಿನ್ನವಾಗಿ ಬೆಳೆಯಿತು," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ’ ಕುರಿತು ಬರೆದಿರುವ ಲೇಖನ.

ಮರಾಟಿ ಬಾಶೆ ಕನ್ನಡ ಮತ್ತು ಪ್ರಾಕ್ರುತ ಬಾಶೆಗಳ ಸಮಾಗಮದಲ್ಲಿ ಬೆಳೆದ ಒಂದು ಬಾಶಾಬಗೆ ಎಂದು ಈ ಮೊದಲಿನ ಬರಹದಲ್ಲಿ ಮಾತನಾಡಿದೆ. ಅದರಂತೆಯೆ ಕನ್ನಡ ಮತ್ತು ಪರ‍್ಶಿಯನ್ ಬಾಶೆಗಳ ಸಮಾಗಮದಲ್ಲಿ ಉರ‍್ದು ಬಾಶೆ ಹುಟ್ಟಿ ಬೆಳೆದಿದೆ ಎಂಬುದನ್ನೂ ಈ ಹಿಂದಿನ ಬರಹಗಳಲ್ಲಿ ಮಾತಾಡಿದೆ. ಅಲ್ಲಲ್ಲಿಯೆ, ಮರಾಟಿ ಮತ್ತು ಉರ‍್ದು ಕನ್ನಡದೊಂದಿಗೆ ಹೇಗೆ ಸಂಬಂದವನ್ನು ಇಟ್ಟುಕೊಂಡಿವೆ ಎನ್ನುವುದನ್ನೂ ಈಗಾಗಲೆ ಮಾತಾಡಿದೆ. ಆದರೆ, ಅಲ್ಲಿ ಕ್ರಮವಾಗಿ ಕನ್ನಡದ ಪ್ರಾಕ್ರುತ-ಸಂಸ್ಕೃತ ಮತ್ತು ಅರಾಬಿಕ್-ಪರ‍್ಶಿಯನ್ ಬಾಶೆಗಳ ನಡುವಿನ ಸಂಬಂದದ ಮುಂದುವರಿಕೆಯಾಗಿ ಮಾತನಾಡಲಾಗಿದ್ದಿತು. ಇಲ್ಲಿ ಆನಂತರದ ಸಂಬಂದವನ್ನು ತುಸು ಮಾತನಾಡಬಹುದು.

ಮರಾಟಿ ನಡುಗಾಲದಲ್ಲಿ ಬೇಗ ಬೇಗ ಬೆಳೆಯುತ್ತ ರಾಜಕೀಯದ ಬಾಶೆಯಾಗಿ ಬೆಳೆಯಿತು. ಶಿವಾಜಿಯ ಕಾಲಕ್ಕೆ ದೊಡ್ಡಮಟ್ಟದ ರಾಜಕೀಯದ ಬಾಶೆಯಾಗಿ ಮಾತ್ರವಲ್ಲದೆ ಕಡಲ ಸಂಬಂದದಿಂದಾಗಿ ದೊಡ್ಡಮಟ್ಟದ ವ್ಯಾಪಾರದ ಬಾಶೆಯಾಗಿ ಬೆಳೆದಿದ್ದಿತು. ಇದರಿಂದಾಗಿ ಕನ್ನಡ ಮತ್ತು ಮರಾಟಿ ಬಾಶೆಗಳ ಸಂಬಂದ ತೀವ್ರವಾಗಿ ಮತ್ತು ವಿಬಿನ್ನವಾಗಿ ಬೆಳೆಯಿತು. ಮರಾಟಿ ಬಾಶೆ ರಾಜ್ಯ ಮತ್ತು ವ್ಯಾಪಾರದ ಬಾಶೆಯಾಗಿ ಬೆಳೆದದ್ದರಿಂದ ಕನ್ನಡ ಮರಾಟಿಯ ಪ್ರಬಾವಕ್ಕೆ ವಿಪರೀತವಾಗಿ ಒಳಗಾಗುತ್ತದೆ. ಇಲ್ಲಿ ಮುಕ್ಯವಾದ ಅಂಶವೆಂದರೆ ಮರಾಟಿ ಬಾಶೆಯೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕನ್ನಡದ ಒಳನುಡಿಗಳು ವಿಶಿಶ್ಟವಾದ ರಚನೆಯನ್ನು ಹೊಂದಿರುವುದು. ಅದೆ ರೀತಿ ಕನ್ನಡದ ಗಡಿಯನ್ನು ಹಂಚಿಕೊಂಡಿರುವ ಮರಾಟಿಯ ಒಳನುಡಿಗಳೂ ಇಂತದೆ ವಿಚಿತ್ರ ರಚನೆಯನ್ನು ತೋರಿಸುತ್ತವೆ. ಇದು ಕನ್ನಡ ಮತ್ತು ಮರಾಟಿ ಪರಸ್ಪರ ಬೆಸೆದು ಬಿನ್ನವಾಗಿ ಬೆಳೆಯುತ್ತಿರುವಾಗಿನ ಕಾಲದಿಂದಲೆ ಬೆಳೆದ ಅಂಶಗಳು. ಇದರ ಜೊತೆಗೆ ಆನಂತರ, ಶಿವಾಜಿ ಕಾಲದ ನಂತರದಿಂದ ದೊಡ್ಡ ಪ್ರಮಾಣದಲ್ಲಿ ಕನ್ನಡದ ಮೇಲೆ ಪ್ರಬಾವ ಬೀರುತ್ತದೆ. ಹೀಗಾಗಿ ಮರಾಟಿಯ ಪದಗಳು ಈ ಒಳನುಡಿಗಳಲ್ಲಿ ದೊಡ್ಡಮಟ್ಟದಲ್ಲಿ ಬಳಕೆಯಾಗುತ್ತವೆ. ಬೀದರ, ಬೆಳಗಾವಿ, ಸೊಲ್ಲಾಪುರ, ಅವುರಂಗಾಬಾದ ಮೊದಲಾದ ಪರಿಸರಗಳಲ್ಲಿ ಬಳಕೆಯಲ್ಲಿರುವ ಕನ್ನಡ ಮತ್ತು ಮರಾಟಿ ಬಾಶೆಗಳ ಒಳನುಡಿಗಳು ಇಲ್ಲವೆ ಬಾಶಾಬಗೆಗಳು ಪರಸ್ಪರ ಸಾಕಶ್ಟು ಪದಕೋಶವನ್ನು ಮಾತ್ರವಲ್ಲದೆ ವ್ಯಾಕರಣವನ್ನೂ ಹಂಚಿಕೊಳ್ಳುತ್ತವೆ. ಕನ್ನಡ ಮಾತಾಡುವ ದೊಡ್ಡ ಸಂಕೆಯ ಮಂದಿ ಹದಿನೆಂಟನೆ ಮತ್ತು ಹತ್ತೊಂಬತ್ತನೆ ಶತಮಾನಗಳಲ್ಲಿ ಮರಾಟಿಗೆ ತಿರುಗಿದ್ದಕ್ಕೆ ಸಾಂಕಿಕ ಆದಾರಗಳು ದೊರೆಯುತ್ತವೆ.

ಮರಾಟಿಗೆ ಸಂಬಂದಿಸಿದ ಪರ‍್ದಿ ಕನ್ನಡ ಪರಿಸರದಲ್ಲಿ ಬಳಕೆಯಲ್ಲಿರುವುದನ್ನು ಅಲ್ಲಲ್ಲಿ ಕಾಣಬಹುದು. ಇದನ್ನು ಮರಾಟಿ-ಗುಜರಾತಿ ಇವುಗಳ ನಡುವಿನ ಸಂಬಂದದಲ್ಲಿ ಬೆಳೆದ ಬಾಶಾಬಗೆ ಎಂದು ಬಹಳ ಮಂದಿ ಗುರುತಿಸುತ್ತಾರೆ. ಪರ‍್ದಿಯ ಜೊತೆಗೆ ಇತರ ಮರಾಟಿ ಬಾಶಾಬಗೆಗಳಾದ ಆರೆ, ಕೋಳಿ, ಜೋಗೆರ ಮೊದಲಾದ ಸಮುದಾಯಗಳು ಮಾತಾಡುವಂತವು ಕನ್ನಡದ ಪರಿಸರದಲ್ಲಿ ಬಳಕೆಯಲ್ಲಿವೆ. ಆರೆ ಮಾತಾಡುವ ದೊಡ್ಡ ಸಂಕೆಯ ಮಂದಿ ಇಂದಿನ ಕರ‍್ನಾಟಕದಲ್ಲಿ ದಾಕಲಾಗಿದ್ದಾರೆ.

ಮರಾಟಿಯ ಬಗೆಗೆ ಮಾತನಾಡುತ್ತಿರುವ ಇಲ್ಲಿಯೆ ಕೊಂಕಣಿಯ ಪ್ರಸ್ತಾಪವನ್ನೂ ಮಾಡಬೇಕು. ಕೊಂಕಣಿ ಕರ‍್ನಾಟಕದ ಮಹತ್ವದ ಬಾಶೆಗಳಲ್ಲಿ ಒಂದು. ಕುತೂಹಲವೆಂದರೆ ಕೊಂಕಣಿಗೆ ದೊಡ್ಡ ಸಂಕೆಯ ಮಾತುಗರ ದಾಕಲೆ ಗೋವಾದಲ್ಲಿ. ಕರ‍್ನಾಟಕದಲ್ಲಿಯೂ ಅದರಶ್ಟೆ ಸಂಕೆಯ ಕೊಂಕಣಿಗರ ದಾಕಲೆ ಕಂಡುಬರುತ್ತದೆ. ಕೊಂಕಣಿ ಮರಾಟಿಗಿಂತ ಬಿನ್ನವಾಗಿ ಕನ್ನಡದ ಹಲವು ಅಂಶಗಳನ್ನು ಹಂಚಿಕೊಂಡು ಬಳಕೆಯಲ್ಲಿದೆ. ಮುಕ್ಯವಾಗಿ ಕಾರವಾರದ ಕೊಂಕಣಿಯನ್ನು ಇಲ್ಲಿ ಉಲ್ಲೇಕಿಸಬೇಕು. ಸಿದ್ದಾಪುರ ಪರಿಸರದಲ್ಲಿ ಸಿದ್ದಿ ಸಮುದಾಯದವರು ಬಳಸುವ ಕೊಂಕಣಿಯಲ್ಲಿ ಇನ್ನೂ ಹೆಚ್ಚು ಕನ್ನಡದ ಪ್ರಬಾವವನ್ನು ಗಮನಿಸಬಹುದು. ಕೊಂಕಣಿಯ ಒಳನುಡಿಯೆಂದು ಗುರುತಿಸುವ ಕುಣುಬಿ ಮತ್ತು ನವಾಯತಿ ಇವು ಕರ‍್ನಾಟಕದಲ್ಲಿಯೆ ವಿಶೇಶವಾಗಿ ಬಳಕೆಯಲ್ಲಿರುವುದು ಮುಕ್ಯವಾದ ವಿಚಾರ.

ಇನ್ನು ಉರ‍್ದು ಬಾಶೆಯ ಬಗೆಗೆ ಒಂದೆರಡು ಮಾತುಗಳನ್ನಾಡಬಹುದು. ಉರ‍್ದು ಬಹು ಉದ್ದನೆಯ ಇತಿಹಾಸವನ್ನು ಹೊಂದಿಲ್ಲದ ಬಾಶೆಯಾಗಿದ್ದರೂ ಬಹಮನಿಗಳ ಕಾಲದಲ್ಲಿ ಸಾಮಾಜಿಕವಾಗಿ ಬೆಳೆದು ಆದಿಲ್ ಶಾಹಿಗಳ ಕಾಲದಲ್ಲಿ ಆಸ್ತಾನದ ಒಳಗೆ ಸೇರಿಕೊಂಡಿತು. ಆನಂತರ ಆಸಿಪ್ ಶಾಹಿಗಳ ಕಾಲದಲ್ಲಿ ಅಂದರೆ ಹಯ್ದರಾಬಾದಿನ ನಿಜಾಮರ ಕಾಲದಲ್ಲಿ ಅದಿಕ್ರುತ ಆಡಳಿತ ಬಾಶೆಯಾಗಿ ಬಳಕೆಯಾಗುತ್ತದೆ. ಈ ವೇಳೆಗೆ ಸಾಮಾಜಿಕವಾಗಿ ವ್ಯಾಪಕ ಬಳಕೆಯನ್ನೂ ರಾಜ್ಯ ಅದಿಕಾರದ ಸ್ತಾನವನ್ನೂ ಪಡೆದುಕೊಂಡ ಉರ‍್ದು ಸಹಜವಾಗಿ ಹೆಚ್ಚು ಪ್ರಬಾವಿ ಬಾಶೆಯಾಗಿ ಬೆಳೆಯುತ್ತದೆ. ಉತ್ತರದಲ್ಲಿ ಆಳುತ್ತಿದ್ದ ಮುಸಲ್ಮಾನ ದೊರೆಗಳು ಸ್ತಳೀಯರಿಗೆ ದೂರವಾಗಿದ್ದ ಪರ‍್ಶಿಯನ್ ಬಾಶೆಯನ್ನು ಆಡಳಿತ ಬಾಶೆಯಾಗಿ ನೆಮ್ಮಿಕೊಂಡಿದ್ದ ಕಾಲದಲ್ಲಿ ಹಯ್ದರಾಬಾದಿನ ನಿಜಾಮರು ಸ್ತಳೀಯರು ಮಾತನಾಡುತ್ತಿದ್ದ ಉರ‍್ದು ಬಾಶೆಯನ್ನು ಅದಿಕ್ರುತವಾಗಿ ಆಡಳಿತ ಬಾಶೆಯನ್ನಾಗಿ ಬಳಸಿಕೊಳ್ಳುವುದು ಒಂದು ವಾಸ್ತವದ ಇತಿಹಾಸಿಕ ವಿಚಾರ. ಗಮನಿಸಬೇಕಾದ ವಿಚಾರವೆಂದರೆ, ಉರ‍್ದು ಅಂದಿಗೆ ಅಂದರೆ ಹದಿನೆಂಟು, ಹತ್ತೊಂಬತ್ತನೆ ಶತಮಾನದ ವೇಳೆಗೆ ಎಶ್ಟು ಪ್ರಬಾವಿಯಾಗಿದ್ದಿತೆಂದರೆ ಹಯ್ದರಾಬಾದಿನ ನಿಜಾಮರು ಮಾತ್ರವಲ್ಲದೆ ಸುರಪುರ ಸಂಸ್ತಾನ ಹಾಗೆಯೆ ಹಲವು ಸ್ತಳೀಯ ಮನೆತನಗಳು ಮತ್ತು ಮಯ್ಸೂರಿನ ದೊರೆಗಳೂ ರ‍್ದುವನ್ನು ಆಡಳಿತದಲ್ಲಿ ಬಳಸುತ್ತಿದ್ದರು. ಈ ಎಲ್ಲ ಕಾರಣದಿಂದ ಉರ‍್ದು ವ್ಯಾಪಕವಾಗಿ ಕನ್ನಡವನ್ನು ಪ್ರಬಾವಿಸುತ್ತದೆ. ಸಂಗೀತ, ಕುಸ್ತಿ, ಹೊಲ, ಆಡಳಿತ ಹೀಗೆ ಹಲವಾರು ವಲಯಗಳಲ್ಲಿ ಉರ‍್ದು ಹಲವು ಹೊಸತನಗಳನ್ನು ತರುವ ಬಾಶೆಯಾಗಿ ಬರುತ್ತದೆ. ಹೀಗಾಗಿ ಉರ‍್ದು ಬಾಶೆಯಿಂದ ದೊಡ್ಡ ಪ್ರಮಾಣದ ಪದಗಳು ಕನ್ನಡಕ್ಕೆ ಬರುತ್ತವೆ. ಪದಗಳನ್ನು ಮಾತ್ರವಲ್ಲದೆ ಪ್ರತ್ಯಯಗಳನ್ನೂ ಕನ್ನಡ ಪಡೆದುಕೊಳ್ಳುತ್ತದೆ. ಹೆಚ್ಚು ಬಳಕೆಯಲ್ಲಿದ್ದ ಹಯ್ದರಾಬಾದ ಕರ‍್ನಾಟಕ ಪರಿಸರ ಅದರಲ್ಲಿಯೂ ಮುಕ್ಯವಾಗಿ ಸೊಲ್ಲಾಪುರ, ಬೀದರ, ಕಲಬುರಗಿ ಪರಿಸರಗಳಲ್ಲಿ ಕನ್ನಡದ ಮೇಲೆ ಹೆಚ್ಚಿನ ಪ್ರಬಾವ ಬೀರುತ್ತದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಪರ‍್ಶಿಯನ್ ಬಾಶೆಯಿಂದ ದೊಡ್ಡ ಪ್ರಮಾಣದ ಪದಗಳು ಕನ್ನಡಕ್ಕೆ ಉರ‍್ದುವಿನ ಮೂಲಕ ಬರುತ್ತವೆ. ಇನ್ನೊಂದು ಮಹತ್ವದ ಅಂಶವೆಂದರೆ, ಬಾರತ ಸ್ವತಂತ್ರವಾದ ನಂತರ ಕನ್ನಡಕ್ಕೆ ಹೊಸ ಆಡಳಿತ ಪದಗಳನ್ನು ಹುಟ್ಟಿಸುವಾಗ ಹಿಂದಿ ಬಾಶೆಗೆ ಬೆಳೆಸಿದ ಪದಗಳನ್ನೆ ಕನ್ನಡಕ್ಕೆ ತೆಗೆದುಕೊಂಡರು. ಆದರೆ, ಉತ್ತರದ ಬಾಶಾಬಗೆಯಾಗಿದ್ದ ಹಿಂದಿಯ ಈ ಪದಗಳು ಕನ್ನಡದಲ್ಲಿ ಚಾಲ್ತಿಗೆ ಬರಲೆ ಇಲ್ಲ. ಬದಲಾಗಿ ಅದಕ್ಕಿಂತ ಬಿನ್ನವಾಗಿ, ಅದಕ್ಕಿಂತ ಮೊದಲು ಆಡಳಿತದಲ್ಲಿ ಬಳಕೆಗೆ ಬಂದಿದ್ದ ಉರ‍್ದು ಪದಗಳು ಇಂದಿಗೂ ಕರ‍್ನಾಟಕದಲ್ಲಿ, ಕನ್ನಡದಲ್ಲಿ ಅತಿ ಸಹಜವಾಗಿ ಬಳಕೆಯಲ್ಲಿವೆ.

ಈ ಅಂಕಣದ ಹಿಂದಿನ ಬರೆಹಗಳು:
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ

ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ

ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು

ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ

ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ

ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು

ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ

ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ

ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ

ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ

ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

 

 

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...