ಮನುಷ್ಯನ ಬದುಕಿನಲ್ಲಿ ಅರ್ಥಪೂರ್ಣವಾದದ್ದು ಏನಾದರೂ ಘಟಿಸುತ್ತದೆ ಅಂದರೆ ಅದು 'ಪ್ರೀತಿ' ಮಾತ್ರ...


"ಇಲ್ಲಿನ ಭಗ್ನ ಪ್ರೇಮದ ಕಥೆ ಬರಿಯ ಕಥೆಯಲ್ಲ ಅದೊಂದು ಜನ್ಮ ಜನ್ಮಾಂತರದ ಪ್ರೀತಿಯ ಕಥೆ, ಇಲ್ಲಿ ಕೋಲಾರದ ಕೆಜಿಎಫ್ ಇದೆ, ಇಲ್ಲಿಯೂ ಚಿನ್ನದ ಗಣಿಗಳಿವೆ ಆದರೆ ಅದು ರಾಕಿ ಭಾಯಿನ ಕೆಜಿಎಫ್ ಅಲ್ಲ ಜಗನ್ನಾಥನ ಕೆಜಿಎಫ್," ಎನ್ನುತ್ತಾರೆ ಧನು ಪಕ್ಷಿಕೆರೆ. ಅವರು ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ‘ಭಗ್ನ ಪ್ರೇಮಿಯ ಅಪೂರ್ಣ ಡೈರಿ’ ಕುರಿತು ಬರೆದಿರುವ ವಿಮರ್ಶೆ.

ಕಾದಂಬರಿ- ಭಗ್ನ ಪ್ರೇಮಿಯ ಅಪೂರ್ಣ ಡೈರಿ
ಲೇಖಕರು - ಜೋಗಿ
ಪ್ರಕಟಕರು- ಸಾವಣ್ಣ ಎಂಟರ್ಪ್ರೈಸಸ್
ಬೆಲೆ ರೂ- 180
ಪುಟಗಳ ಸಂಖ್ಯೆ- 152

- ಧನು ಪಕ್ಷಿಕೆರೆ

ನಾನು ಜೋಗಿಯವರ ಕೃತಿಗಳ ಬಗ್ಗೆನೇ ಹೆಚ್ಚಾಗಿ ತಿಳಿಸುತ್ತೇನೆಂದು ನೀವುಗಳೇನಾದರೂ ಅಪವಾದಿಸಿದರೆ ಅದು ನನ್ನ ತಪ್ಪಲ್ಲ, ನಾನು ಒಂದು ಪುಸ್ತಕ ಓದಿ ಮುಗಿಸಿ ಅದರ ಗುಂಗಿನಿಂದ ಹೊರ ಬಂದೇ ಎನ್ನುವಷ್ಟರಲ್ಲಿ ಜೋಗಿಯವರ ಇನ್ನೊಂದು ಪುಸ್ತಕ ಬಿಡುಗಡೆಯಾಗಿರುತ್ತದೆ. ನಾನು ಅರಿತಂತೆ ಜೋಗಿಯವರು ಅತ್ಯಂತ ವೇಗವಾಗಿ ಪುಸ್ತಕಗಳನ್ನು ಬರೆದು ಸಾಹಿತ್ಯದ ಉಣ ಬಡಿಸುವುದರಲ್ಲಿ ನಿಸ್ಸಿಮರು, ಜನರ ನಾಡಿ ಮಿಡಿತ ಸರಿಯಾಗಿ ಬಲ್ಲವರಾದ ಅವರು ಸಮಾಜದ ಪ್ರಸ್ತುತ ಪರಿಸ್ಥಿತಿಗೆ ಒಗ್ಗಿ ಕೊಳ್ಳುವಂತಹ ಕೃತಿಗಳನ್ನೇ ರಚಿಸುತ್ತಾರೆ.

"ಕೇವಲ ಅಸಂಗತತೆ ಮತ್ತು ಅನಿಶ್ಚಿತತೆ ನಡುವೆ ಹೊಯ್ದಾಡುವ ಮನುಷ್ಯನ ಬದುಕಿನಲ್ಲಿ ಅರ್ಥಪೂರ್ಣವಾದದ್ದು ಏನಾದರೂ ಘಟಿಸುತ್ತದೆ ಅಂದರೆ ಅದು 'ಪ್ರೀತಿ' ಮಾತ್ರ"

ಕೃತಿಯಲ್ಲಿ ಹೇಳಿದಂತೆ ಎಲ್ಲರ ಬದುಕಿನಲ್ಲೂ ಪ್ರೀತಿ ಹೃದಯದ ಬಾಗಿಲನ್ನು ಬಡಿದೇ ಬಡಿದಿರುತ್ತದೆ, ಈ ಪ್ರೀತಿ ಕೆಲವೊಮ್ಮೆ ಬಂದಷ್ಟೇ ವೇಗವಾಗಿ ಮರೆಯಾಗಿ ಬಿಟ್ಟರೂ ಜೀವನ ಪೂರ್ತಿ ಆವರಿಸಿಕೊಳ್ಳುವುದು ಯಾಕೆ.....??? ಎನ್ನುವ ಪ್ರಶ್ನೆ ಎಲ್ಲರ ಬದುಕಿನಲ್ಲಿ ಕೊನೆಯವರೆಗೂ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿರುತ್ತದೆ.

ಈ ಭಗ್ನ ಪ್ರೇಮದ ಬೆಂಕಿಯನ್ನು ಎಲ್ಲರೂ ನೋಡಿರುತ್ತಾರೆ, ಕೆಲವರು ಇದರಿಂದ ಬೇಗ ಪಾರಾದರೆ ಮತ್ತೆ ಕೆಲವರು ಈ ಬೆಂಕಿಯಲ್ಲಿ ಬೆಂದು ಸುಟ್ಟು ಕರಕಲಾಗಿ ಹೋಗಿಬಿಡುತ್ತಾರೆ.

ಇಲ್ಲಿನ ಭಗ್ನ ಪ್ರೇಮದ ಕಥೆ ಬರಿಯ ಕಥೆಯಲ್ಲ ಅದೊಂದು ಜನ್ಮ ಜನ್ಮಾಂತರದ ಪ್ರೀತಿಯ ಕಥೆ, ಇಲ್ಲಿ ಕೋಲಾರದ ಕೆಜಿಎಫ್ ಇದೆ, ಇಲ್ಲಿಯೂ ಚಿನ್ನದ ಗಣಿಗಳಿವೆ ಆದರೆ ಅದು ರಾಕಿ ಭಾಯಿನ ಕೆಜಿಎಫ್ ಅಲ್ಲ ಜಗನ್ನಾಥನ ಕೆಜಿಎಫ್.

ಕಾಲದ ಸುಳಿಗೆ ಸಿಕ್ಕಿ ಪ್ರೇಮ ಭಗ್ನವಾಗಬಹುದು, ಆದರೆ ಅದರ ಘಮ ಜೀವನದ ಕೊನೆಯವರೆಗೂ ಇರುತ್ತದೆ.

ಯೋಗರಾಜ್ ಭಟ್ ರವರ ಚಿತ್ರ ಸಾಹಿತ್ಯದಂತೆ "ಕೆರೆಯೋಕೆ ಹುಣ್ಣೋಂದು ಇರಬೇಕೂರೀ" ಎಂಬಂತೆ ಪ್ರತಿಯೊಬ್ಬನ ಎದೆಯೊಳಗೂ ಒಂದು ಭಗ್ನ ಪ್ರೇಮದ ಕಥೆ ಇದ್ದೇ ಇರುತ್ತದೆ,

ಅದೇ ರೀತಿ ಇಲ್ಲಿಯೂ ಪರಶುರಾಮನ ಪ್ರೇಮದ ಬಗ್ಗೆ ತಿಳಿಸುತ್ತಾ ತನಗಿಂತ ಹಿರಿಯಳಾದವಳ ಮೇಲೆ ಮೂಡುವ ಪ್ರೀತಿ, ಏನೂ ಅರಿಯದ ಎಳೆ ಹುಡುಗನ ಪ್ರೀತಿ ಅಷ್ಟೆ ನಾಜೂಕಾಗಿ ಸೃಷ್ಟಿಸುತ್ತಾ ಹೋಗುವ ಲೇಖಕರು ಒಂದು ಕಡೆ ಗಂಟಲಿನ ಭಾಗದಲ್ಲಿ ಹರಿಯುತ್ತಿದ್ದ ಬೆವರನ್ನು ನಯಾಗರ ಜಲಪಾತಕ್ಕೆ ಹೋಲಿಸಿದಂತೆ ಇನ್ನೂ ಅನೇಕ ಅದ್ಬುತ ಅಲಂಕಾರಗಳು ಇಲ್ಲಿ ಅಡಕವಾಗಿದೆ.

ಕಥೆಯ ದ್ವಿತೀಯಾರ್ಧದಲ್ಲಿ ಕೆಜಿಫ್ ಜಗತ್ತು ಸೃಷ್ಟಿಯಾದ ಬಗ್ಗೆ ವಿವರಿಸುತ್ತಾ ಅವರು ನಡೆಸಿದ ಅಧ್ಯಯನ ಮೆಚ್ಚಲೇ ಬೇಕು, ಇಂಗ್ಲೆಂಡ್ ಬ್ರಿಟಿಷರು ನಂದಗೋಪಲ ರೆಡ್ಡಿಯ ಸಹಾಯದಿಂದ ಕೋಲಾರಕ್ಕೆ ಬರುವುದು, ರಾಜರುಗಳ ಕಥೆ,60-70 ವರ್ಷದ ನಂತರ ಮತ್ತೆ ಇನ್ನೊಬ್ಬ ಅಧಿಕಾರಿ ಬಂದು ನವ ಕೋಲಾರದ ಜನನಕೆ ಕಾರಣವಾಗುವ ಕಥೆ, ಇವುಗಳ ನಡುವೆ ಜೀರ್ಣಿಸಲಾಗದ ನಂದಗೋಪಾಲನ ಪಾತ್ರ ಎಲ್ಲವೂ ರೋಚಕವಾಗಿ ಮೂಡಿ ಬಂದಿದೆ.ಅದಲ್ಲದೆ ಇವರುಗಳ ನಡುವೆ ಇನ್ನೊಂದು ಪ್ರೇಮ ಕಥೆ ಅದು ಜಗನ್ನಾಥನ ಪ್ರೇಮ ಕಥೆ.

ಜಗನ್ನಾಥ ಯಾರು.....???
ಕೆಜಿಫ್ ಗೂ ಅವನಿಗೆ ಏನು ನಂಟು...??
ಜಗನ್ನಾಥ ಪ್ರೀತಿಸುವುದು ಯಾರನ್ನ...???
ಪ್ರೀತಿ ಹುಟ್ಟಲು ಕಾರಣ..??
ಅದೂ ಭಗ್ನವಾಗುವುದೇ ....??? ಹೇಗೆ.....????
ಇವರುಗಳು ನಡುವೆ ಪರಶುರಾಮ ಏನಾದ...???
ಎಲ್ಲದರ ಬಗ್ಗೆ ತಿಳಿಯಬೇಕಾದರೆ ಪುಸ್ತಕ ಓದಲೇ ಬೇಕು....

ಓದುಗರನ್ನು ಭಾವನಾ ಲೋಕಕ್ಕೆ ಕೊಂಡ್ಯೋದ್ದು ಅಲ್ಲೊಂದು ಲೋಕ ಸೃಷ್ಟಿಸಿ ಹಲವು ರೋಚಕ ತಿರುವುಗಳನ್ನು ಕೊಟ್ಟು ಒಂದು ಅದ್ಭುತ/ದುರಂತ ಪ್ರೇಮ ಕಥೆ ಸೃಷ್ಟಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.

ನಮ್ಮನ್ನು ಓದಿಸಿಕೊಂಡು ಹೋಗುವ ಈ ಕೃತಿಯನ್ನು ಎಲ್ಲರೂ ಓದುವಂತಹದ್ದೆ.ಪ್ರತಿಯೊಬ್ಬ ಭಗ್ನ ಪ್ರೇಮಿಯ ಜೀವನವೇ ಒಂದು ಅಪೂರ್ಣ ಡೈರಿ

MORE FEATURES

ಡಂಕಲ್‌ಪೇಟೆಗೆ ಹೊರಡುವ ಮುನ್ನ…….

05-07-2024 ಬೆಂಗಳೂರು

‘ಈ ಡಂಕಲ್‌ಪೇಟೆ ಎಂಬುದು ನನ್ನ ಕಥೆಗಳಿಗಾಗಿ ನಾನೇ ಸೃಷ್ಟಿಸಿಕೊಂಡಿರುವ ಒಂದು ಪ್ರಾದೇಶಿಕ ಚೌಕಟ್ಟು ಇರುವ ಕಾ...

`ಕುದ್ಮಲ್ ಪಿಜ್ಜ' ಹೇಗಿದ್ದರೆಂದು ತಿಳಿಯುವ ಪ್ರೇಮಿ ರಾವ್ ಅವರ ಮುಗ್ಧ ಆಸಕ್ತಿಯೇ ಈ ಪುಸ್ತಕದ “ಮೂಳೆ ಹಂದರ”

05-07-2024 ಬೆಂಗಳೂರು

"ಕುದ್ಮಲ್ ಅವರ ಮರಿಮೊಮ್ಮಗ ಪ್ರೇಮಿ ಎಂ. ರಾವ್ ಬರೆದ ಪುಸ್ತಕದ ಅನುವಾದ “ನೀವು ಕಂಡರಿಯದ ಕುದ್ಮಲ್ ರಂಗರಾವ್,...

ಕವಿತೆ ಕಟ್ಟುತ್ತ ಬಿರಾದಾರ ಸೃಷ್ಟಿಸುವ ರೂಪಕ-ಪ್ರತಿಮೆಗಳು ಚೆಲುವಾಗಿವೆ: ಕೇಶವ ಮಳಗಿ

05-07-2024 ಬೆಂಗಳೂರು

'ಮಧು ತಮ್ಮ ಕಾವ್ಯದ ನಿಧಾನ ನಡಿಗೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಕವಿತೆಗಳ ದೀರ್ಘತೆ. ವಸ್ತು ಬೆಂಕಿಯಂತೆ ಸುಡುತ್ತಿ...