Date: 13-09-2024
Location: ಬೆಂಗಳೂರು
"ಶಿಕ್ಶಣ ಎನ್ನುವಂತದ್ದು ಮಗು ಪ್ರಯತ್ನಪೂರ‍್ವಕವಾಗಿ ಕಲಿಯಬೇಕಾಗಿರುವಂತದ್ದು. ಆದ್ದರಿಂದ ಇದು ಮನುಶ್ಯರ ಆಂತರಿಕೆ ಗಳಿಕೆ ಆಗಿರದೆ ಬಾಹ್ಯ ಕಲಿಕೆ ಆಗಿರುತ್ತದೆ. ಮಗು ಈ ಬೂಮಿಗೆ ಬಂದ ಮೇಲೆ ತಾಯಿಯ ಸ್ವರ್‍ಶವನ್ನು ಅರಿಯುವುದರಿಂದ ಮೊದಲ್ಗೊಂಡು ಪ್ರತಿಯೊಂದನ್ನೂ ಪಡೆಯಬೇಕು," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ’ ಕುರಿತು ಬರೆದಿರುವ ಲೇಖನ.
ಮಗುವೊಂದು ಬೂಮಿಗೆ ಬಂದಾಗ ಆಡುವ ಉಸಿರು, ಸೋಕುವ ಗಾಳಿ, ಕೇಳುವ ದನಿ ಎಲ್ಲವೂ ಹೊಸದು. ಎಲ್ಲವನ್ನೂ ಪಡೆದುಕೊಳ್ಳುವ ಸಾಮರ್‍ತ್ಯ ಇರುವ ಮಗುವೊಂದು ಬೂಮಿಗೆ ಬಂದಾಗ ಎಲ್ಲವನ್ನೂ ಪಡೆದುಕೊಳ್ಳಬೇಕು. ಹೀಗೆ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಬಿನ್ನತೆಗಳು ಇರುತ್ತವೆ. ಕೆಲವನ್ನು ಮಗು ನಿರ‍್ಗ ಸಹಜವಾಗಿ ಗಳಿಸಿಕೊಳ್ಳುತ್ತದೆ. ಇನ್ನು ಕೆಲವನ್ನು ಪ್ರಯತ್ನ ಪೂರ‍್ವಕವಾಗಿ ಕಲಿತುಕೊಳ್ಳಬೇಕು. ಪ್ರಾಕ್ರುತಿಕವಾಗಿ ಮಗು ಪಡೆದುಕೊಳ್ಳುವ ಉಸಿರಾಟದಂತಾ ದೇಹಿಕ ವಿಚಾರಗಳು ಮಗುವನ್ನು ಈ ಬೂಮಿಯ ಪರಿಸರದಲ್ಲಿ ಬದುಕುವುದಕ್ಕೆ ತಯಾರುಗೊಳಿಸುತ್ತವೆ. ಆನಂತರ ಈ ಜಗದ ಜಂಜಾಟದಲ್ಲಿ ಮಗು ಬೀಳುತ್ತದೆ. ಬೂಮಿಯ ಮೇಲಿನ ಎಲ್ಲ ಜೀವಸಂಕುಲದ ಹಾಗೆಯೆ ಮನುಶ್ಯ ಪ್ರಾಣಿಯೂ ಬದುಕುವುದಕ್ಕೆ ಬೇಕಾಗುವಶ್ಟನ್ನು ಪ್ರಕ್ರುತಿಯಿಂದ ಸಹಜವಾಗಿ ಗಳಿಸಿಕೊಳ್ಳುತ್ತದೆ. ಇನ್ನು ಕೆಲವನ್ನು ಮಗು ಬೆಳೆಯುತ್ತಾ ಕ್ರಮೇಣ ಸಾಮಾಜಿಕ ಬದುಕಿಗೆ ಅವಶ್ಯವಾದುದನ್ನು ಸುತ್ತಲಿನ ಪರಿಸರದಿಂದ ಪ್ರಯತ್ನ ಪೂರ‍್ವಕವಾಗಿ ಕಲಿತುಕೊಳ್ಳುತ್ತದೆ. ಈ ಎರಡನ್ನು ಬಿನ್ನವಾಗಿ ಗಳಿಕೆ (Aquisation) - ಕಲಿಕೆ (Learning) ಎಂದು ಕರೆಯಬಹುದು. ಈ ಎರಡರ ನಡುವಿನ ಬಿನ್ನತೆಯನ್ನು ಜೀವಶಾಸ್ತ್ರಗ್ನರು, ಶಿಕ್ಶಣ ಶಾಸ್ತ್ರಗ್ನರು ವಿವರಿಸುತ್ತಾರೆ. ಗಳಿಕೆ ಆಂತರಿಕ (Internal) ಆಗಿದ್ದರೆ ಕಲಿಕೆ ಬಾಹ್ಯ (External) ಆಗಿರುತ್ತದೆ.
ಶಿಕ್ಶಣ ಎನ್ನುವಂತದ್ದು ಮಗು ಪ್ರಯತ್ನಪೂರ‍್ವಕವಾಗಿ ಕಲಿಯಬೇಕಾಗಿರುವಂತದ್ದು. ಆದ್ದರಿಂದ ಇದು ಮನುಶ್ಯರ ಆಂತರಿಕೆ ಗಳಿಕೆ ಆಗಿರದೆ ಬಾಹ್ಯ ಕಲಿಕೆ ಆಗಿರುತ್ತದೆ. ಮಗು ಈ ಬೂಮಿಗೆ ಬಂದ ಮೇಲೆ ತಾಯಿಯ ಸ್ವರ್‍ಶವನ್ನು ಅರಿಯುವುದರಿಂದ ಮೊದಲ್ಗೊಂಡು ಪ್ರತಿಯೊಂದನ್ನೂ ಪಡೆಯಬೇಕು. ಸ್ರರ್‍ಶ, ವಾಸನೆ, ಬಣ್ಣ ಮೊದಲಾದ ಇಂದ್ರಿಯ ಸಂಬಂದಿ ಅರಿವನ್ನು, ಹಸಿವು, ಬಾಯಾರಿಕೆ ಮೊದಲಾದ ದೇಹಸಂಬಂದಿ ಅರಿವನ್ನು, ಪ್ರೀತಿ ಮೊದಲಾದ ಮನಸಂಬಂದಿ ಅರಿವನ್ನು, ತಾಯಿ, ಮನೆ, ಸಮಾಜ ಮೊದಲಾದ ಸಮಾಜ ಸಂಬಂದಿ ಅರಿವನ್ನು ಮಗು ಪಡೆದುಕೊಳ್ಳುತ್ತದೆ. ಈ ಎಲ್ಲವನ್ನು ಮಗುವೊಂದು ಪಡೆದುಕೊಳ್ಳುವುದು ಸ್ವತಂತ್ರವಾಗಿ ಇರುವುದಿಲ್ಲ. ಒಂದು ಇನ್ನೊಂದರೊಂದಿಗೆ ಪರಸ್ಪರ ಕೋದುಕೊಂಡ ಸ್ತಿತಿಯಲ್ಲಿ ಮಗು ಈ ಎಲ್ಲವನ್ನೂ ಪಡೆಯುತ್ತಿರುತ್ತದೆ. ಒಂದು ಕಲಿಕೆ ಇನ್ನೊಂದರ ಕಲಿಕೆಯನ್ನು ಸಹಜವಾಗಿ ಪ್ರಬಾವಿಸುತ್ತಿರುತ್ತದೆ ಮತ್ತು ಅದರಿಂದ ಪ್ರಬಾವಕ್ಕೊಳಗಾಗುತ್ತಿರುತ್ತದೆ. ಹೀಗೆ ಮಗು ಬೆಳೆಯುತ್ತದೆ. ಇದನ್ನು ಮಗುವಿನ ದೇಹಿಕ ಬೆಳವಣಿಗೆ, ಮಾನಸಿಕ ಬೆಳವಣಿಗೆ ಮತ್ತು ಸಾಮಾಜಿಕ ಬೆಳವಣಿಗೆ ಎಂದು ಸ್ತೂಲವಾಗಿ ಹೇಳಬಹುದು. ಮಗುವಿನ ದೇಹದ ಮತ್ತು ದೇಹಿಕ ಬೆಳವಣಿಗೆಯು ಮಗುವಿನ ಮಾನಸಿಕ ಬೆಳವಣಿಗೆಯನ್ನು ಸಹಜವಾಗಿ ನಿಯಂತ್ರಿಸುತ್ತಿರುತ್ತದೆ. ಈ ಎರಡರ ಬೆಳವಣಿಗೆ ಸಹಜವಾಗಿ ಮಗುವಿನ ಸಾಮಾಜಿಕ ಬೆಳವಣಿಗೆಯನ್ನು ನಿಯಂತ್ರಿಸುತ್ತಿರುತ್ತದೆ.
ಮನುಶ್ಯ ದೇಹ ರಚನೆಯಲ್ಲಿ ಉಸಿರಾಟ, ಪಚನಕ್ರಿಯೆ, ಎದೆಬಡಿತ, ಅಲ್ಲದೆ ನಡೆದಾಡುವುದು ಮೊದಲಾಗಿ ಹಲವಾರು ಕ್ರಿಯೆಗಳನ್ನು ಮಗು ಸಹಜವಾಗಿ ಪಡೆದುಕೊಳ್ಳುತ್ತದೆ. ಇದಕ್ಕೆ ಯಾವುದೆ ಬಗೆಯ ಪ್ರೇರಕಗಳ ಅವಶ್ಯಕತೆ ಇಲ್ಲ. ಮಗು ಯಾರನ್ನು, ಯಾವುದನ್ನು ಅನುಸರಿಸುವ ಇಲ್ಲವೆ ಅನುಕರಿಸುವ ಅಗತ್ಯವೂ ಇಲ್ಲ. ಸುತ್ತಲಿನ ಸಮಾಜದಲ್ಲಿ ಹಲವಾರು ಪ್ರಾಣಿ-ಪಕ್ಶಿಗಳೂ ಹೀಗೆ ಸಹಜ ಗಳಿಕೆ ಪ್ರಕ್ರಿಯೆಯ ಬಾಗವಾಗಿ ಪಡೆದುಕೊಳ್ಳುವುದನ್ನು ಕಾಣಬಹುದು. ಕೆಲ ಜೀವಿಗಳು ಹುಟ್ಟಿದ ತಕ್ಶಣವೆ ಹಾರುವುದನ್ನು ಗಳಿಸಿಕೊಳ್ಳುತ್ತವೆ, ಇನ್ನು ಕೆಲವು ಈಜುವುದನ್ನು, ಇನ್ನು ಕೆಲವು ನಡೆಯುವುದನ್ನು ಗಳಿಸಿಕೊಳ್ಳುತ್ತವೆ. ಅವುಗಳಿಗೆ ಹಾರುವ, ಈಜುವ, ನಡೆಯುವ ಮೊದಲಾದ ಪ್ರಕ್ರಿಯೆಗಳ ಅರಿವೂ ಕೂಡ ಸಹಜವಾಗಿ ಬಂದಿರುತ್ತದೆ. ಹಾಗಾಗಿ ಇದನ್ನು ದೇಹದ ಆಂತರಿಕ ಗಳಿಕೆ ಎನ್ನಲಾಗುವುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಮೇಲೆ ಮಾತನಾಡಿದ ಪರಸ್ಪರ ಪ್ರಬಾವ ಬೀರುವ ವಿವಿದ ಬಗೆಯ ಬೆಳವಣಿಗೆಗಳ ಬಾಗವಾಗಿ ಇವು ಬರುವುದಿಲ್ಲ. ದೇಹದ ಬೆಳವಣಿಗೆಯ ಬಾಗವಾಗಿ ಇವುಗಳನ್ನು ನೋಡಬಹುದು. ಆದರೆ, ದೇಹದ ಬೆಳವಣಿಗೆ ಇತರ ಕಲಿಕಾ ಪ್ರಕ್ರಿಯೆಗಳನ್ನು ನಿಯಂತ್ರಿಸಬಹುದು. ಇದಕ್ಕೆದುರಾಗಿ ದೇಹದ ಬೆಳವಣಿಗೆಯನ್ನು ಉಳಿದ ಕಲಿಕಾ ಪ್ರಕ್ರಿಯೆಗಳು ಪ್ರಬಾವಿಸಲಾರವು. ಆದ್ದರಿಂದ ಈ ಸಹಜ ಗಳಿಕೆ ಬಿನ್ನವಾಗುತ್ತದೆ. ಸಹಜ ಗಳಿಕೆಯಲ್ಲಿ ಯಾವುದೆ ಮಗು ಸೋತರೆ, ಅಂದರೆ ಸಹಜವಾಗಿ ಗಳಿಸಿಕೊಳ್ಳಬೇಕಾದವುಗಳಲ್ಲಿ ಯಾವುದನ್ನಾದರು ಮಗು ಪಡೆಯದೆ ಹೋದರೆ ಅದು ಆ ಮಗುವಿನ ಪ್ರಾಕ್ರುತಿಕ ದೇಹಿಕ ಊನವಾಗಿರುತ್ತದೆ.
ಮಗು ಹಸಿವು, ಬಾಯಾರಿಕೆಯನ್ನು ಅನುಬವಿಸುವ ವೇಳೆಗೆ ತಾಯಿಯ ಸಕ್ಯದಲ್ಲಿ ಇರುತ್ತದೆ. ಇದರಿಂದ ಮಗುವಿಗೆ ಹಸಿವು, ಬಾಯಾರಿಕೆಗಳ ಅರಿವು ಬರುವುದರ ಜೊತೆಜೊತೆಗೆ ತಾಯಿಯ ಸ್ರರ್‍ಶವೂ ದೊರೆಯುತ್ತದೆ. ಈ ಸ್ರರ್‍ಶವು ತಾಯಿಯ ಪ್ರೀತಿಯನ್ನೂ ಕೊಡುತ್ತದೆ. ಹೀಗೆ ಈ ಎಲ್ಲವನ್ನೂ ಮಗು ಒಟ್ಟೊಟ್ಟಿಗೆ ಕಲಿಯುತ್ತದೆ. ಮಗು ಬೂಮಿಗೆ ಬಂದ ಬಳಿಕ ಹಸಿದಾಗ ದೊರೆಯುವ ತಾಯಿಯ ಹಾಲು, ತಾಯಿಯ ಸ್ರರ್‍ಶ ಮತ್ತು ಆ ಮೂಲಕ ದೊರೆಯುವ ತಾಯಿಯ ಪ್ರೀತಿ ಇವು ಮಗುವಿನ ಕಲಿಕಾ ಪ್ರಕ್ರಿಯೆಯ ಸಂಕರ‍್ಣತೆಯನ್ನು ಬೆಸೆಯುತ್ತವೆ. ಆದ್ದರಿಂದಲೆ ಮನುಶ್ಯರ ಹಸಿವು, ದೇಹದ ಅವಶ್ಯಕತೆಗಳು ಮತ್ತು ಪ್ರೀತಿ ಪರಸ್ಪರ ಬಿಡಿಸಲಾಗದಂತೆ ಬೆಸೆದುಕೊಂಡಿರುವುದು. ಹಸಿವಿಗೆ ಹಾಲುಣಿಸುವ ತಾಯಿ ಸ್ರ‍್ಶಸುಕವನ್ನೂ ಪ್ರೀತಿಯ ಸುಕವನ್ನೂ ಒಟ್ಟೊಟ್ಟಿಗೆ ಕೊಡುತ್ತಿರುತ್ತಾಳೆ. ಹಾಗಾಗಿ ಮಗು ಇವುಗಳನ್ನು ಬೇರೆಯಾಗಿಸಲಾರದು. ಇದು ಬದುಕಿನ ಉದ್ದಕ್ಕೂ ಸಹಜವಾಗಿ ಮುಂದುವರೆಯುತ್ತದೆ.
ಮಗುವೊಂದು ಹೀಗೆ ಏನೆಲ್ಲವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಅವಲೋಕಿಸಬೇಕು. ಮಗು ತನ್ನ ದೇಹಸಾಮರ್‍ತ್ಯಕ್ಕೆ ಮತ್ತು ಮಾನಸಿಕ ಸಾಮರ್‍ತ್ಯಕ್ಕೆ ದಕ್ಕುವವುಗಳನ್ನು ಹೇಗೆ ಗ್ರಹಿಸುತ್ತದೆ, ಮಗುವಿನ ಈ ಗ್ರಹಿಕೆಯನ್ನು ಯಾವ ಪ್ರಬಾವಗಳು ನಿಯಂತ್ರಿಸುತ್ತವೆ, ತನ್ನ ಸುತ್ತಲಿನ ಜಗತ್ತನ್ನು ಮಗು ಹೇಗೆ ಅರ‍್ತ ಮಾಡಿಕೊಳ್ಳುತ್ತದೆ ಎಂಬ ಸೂಕ್ಷ್ಮವಾದ ವಿಚಾರಗಳನ್ನು ತಿಳಿದುಕೊಳ್ಳಬೇಕು.
ಮಗು ಏನೆಲ್ಲವನ್ನು ಪಡೆದುಕೊಳ್ಳುತ್ತದೆ? ಮಗು ತನ್ನ ಪರಿಸರದ ಸುತ್ತ ದೊರೆಯುವ ಎಲ್ಲವನ್ನೂ ಅದು ಪಡೆದುಕೊಳ್ಳುತ್ತದೆ. ಅತ್ಯಂತ ಸಹಜವಾಗಿ ಹಸಿವನ್ನು ಅದು ಅನುಬವಿಸುತ್ತದೆ. ಹಸಿವಿನ ಸುಕವನ್ನು, ಹಸಿದಾಗ ದೊರೆಯುವ ಹಾಲು, ಆ ಹಾಲಿನ, ಹಸಿವನ್ನು ನೀಗುವುದರ ಸುಕವನ್ನು ಅದು ಅರಿತುಕೊಳ್ಳುತ್ತದೆ. ಅದರಿಂದ ದೇಹದ ಬೆಳವಣಿಗೆಗೆ ಅದು ಪೂರಕವಾಗಿರುತ್ತದೆ. ಹಸಿವು ಮತ್ತು ಅದನ್ನು ನೀಗಿಸುವುದು ಎಂಬ ಎರಡು ಬಿನ್ನ ಪ್ರಕ್ರಿಯೆಗಳನ್ನು ಮಗು ಕಲಿಯುತ್ತದೆ.
ಇದು ಮಗುವಿನ ಮಾನಸಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ. ಈ ಪ್ರಕ್ರಿಯೆಗಳಿಗೆ ಪೂರಕವಾಗಿರುವುದು ತಾಯಿ. ತಾಯಿ ಸಾಮಾಜಿಕತೆಯನ್ನು ಮಗುವಿಗೆ ತನ್ನ ಸ್ರರ್‍ಶ ಮತ್ತು ಹಾಲಿನ ಮೂಲಕ ಕೊಡುತ್ತಾಳೆ. ಅಲ್ಲಿಗೆ ಮಗುವಿಗೆ ಸಾಮಾಜಿಕತೆ ದಕ್ಕುತ್ತದೆ. ಮಗುವಿಗೆ ಸಂಬಂದಿಸಿದ ಮೊದಮೊದಲ ಕೆಲವು ತಿಂಗಳುಗಳವರೆಗಿನ ಎಲ್ಲ ಚಟುವಟಿಕೆಗಳು ಈ ರೀತಿಯ ಒಂದು ರಚನೆಯನ್ನು ಹೊಂದಿರುತ್ತವೆ. ಮಗು ಸ್ರರ್‍ಶದ ಅರಿವನ್ನು ಅದರೊಂದಿಗೆ ಕೇಳುವ, ನೋಡುವ ಅರಿವನ್ನೂ ಪಡೆದುಕೊಳ್ಳುತ್ತದೆ. ಇಲ್ಲಿಯೂ ಮುಟ್ಟುವ ಅರಿವಿನಂತದೆ ಸಂಕರ‍್ಣ ಕಲಿಕಾ ಪ್ರಕ್ರಿಯೆಯೊಂದು ಸರಪಣಿಯಂತೆ ಬೆಸೆದುಕೊಳ್ಳುತ್ತದೆ. ಮಗು ಕೇಳುವ ಮತ್ತು ನೋಡುವ ಪ್ರತಿಯೊಂದೂ ಅದರ ಸಮಗ್ರ ಬೆಳವಣಿಗೆಗೆ ಪೂರಕವಾಗಿರುತ್ತದೆ. ಕೇಳುವಿಕೆ ಮತ್ತು ನೋಡುವಿಕೆ ಇವು ಸಹಜವಾಗಿಯೆ ದೇಹದ ಬೆಳವಣಿಗೆ. ಇವೆರಡೂ ಮಗುವಿನ ಆಂತರಿಕ ಸಾಮರ್‍ತ್ಯಗಳೂ ಆಗಿವೆ. ಈ ಕೇಳುವ ಮತ್ತು ನೋಡುವ ಸಾಮರ್‍ತ್ಯದಿಂದ ಮಗು ಏನನ್ನು ಪಡೆದುಕೊಳ್ಳುತ್ತದೆಯೊ ಅವು ಮಗುವಿನ ಮಾನಸಿಕ ಬೆಳವಣಿಗೆಯನ್ನು ಪ್ರಬಾವಿಸುತ್ತವೆ. ಈ ಕೇಳುವ ಮತ್ತು ನೋಡುವ ಪ್ರಕ್ರಿಯೆಯಲ್ಲಿ ಮಗು ಪಡೆದುಕೊಳ್ಳುವ ಎಲ್ಲವೂ ಸಾಮಾಜಿಕವೆ ಆಗಿರುತ್ತವೆ.
ಮಗು ತಾಯಿಯ ದನಿಯನ್ನು ಕೇಳಬಹುದು, ತಾಯಿಯ ಮುಕವನ್ನು ನೋಡಬಹುದು. ಇವೆರಡೂ ಸಾಮಾಜಿಕವೆ ಆಗಿವೆ. ಹೀಗೆ ಮಗುವಿನ ಪ್ರತಿಯೊಂದು ಬೆಳವಣಿಗೆಯೂ ಒಂದು ಸಂಕರ‍್ಣ ರಚನೆಯಾಗಿರುತ್ತದೆ. ಇವುಗಳನ್ನು ಪರಸ್ಪರ ಬಿಡಿಸಲು ಸಾದ್ಯವಾಗದು. ಆದ್ದರಿಂದಲೆ ಮಗು ಬೆಳೆದ ಪರಿಸರದ ಬಾವನೆಗಳನ್ನೆ ನಿರಂತರ ಅನುಬವಿಸುತ್ತಿರುತ್ತದೆ. ಮಗುವಿಗೆ ಈ ಬಾವನೆಗಳನ್ನು ಅನುಬವಿಸುವುದಕ್ಕೆ ಸಾಕಶ್ಟು ಅವಕಾಶಗಳೂ ಇರಬೇಕು. ಇವು ಮಗುವಿನ ಮಾನಸಿಕ ಸ್ತಿತಿಯನ್ನು ಮತ್ತು ಸಾಮಾಜಿಕತೆಯನ್ನು ನಿರ‍್ದರಿಸುತ್ತವೆ.
ಈ ವಿಶಯವಾಗಿ ಮನೋವಿಗ್ನಾನಿಗಳು, ಮಕ್ಕಳತಗ್ನರು ಇನ್ನಶ್ಟು ಹೆಚ್ಚಾಗಿ ಬರೆಯಬಲ್ಲರು. ಇಲ್ಲಿ ಈ ವಿಚಾರಗಳನ್ನು ತುಸು ಮಾತನಾಡುವುದಕ್ಕೆ ಕಾರಣವೆಂದರೆ ಮಗುವೊಂದು ಹೇಗೆ ತನ್ನ ಸಾಮಾಜಿಕತೆಯನ್ನು ರೂಪಿಸಿಕೊಳ್ಳುತ್ತದೆ ಎಂಬುದನ್ನು ಅರಿತುಕೊಳ್ಳುವುದಕ್ಕೆ. ಇನ್ನು ಮುಂದಿನ ಬರಹಗಳಲ್ಲಿ ಮಗು ಬಾಶೆಯನ್ನು ಪಡೆದುಕೊಳ್ಳುವ ಪ್ರಕ್ರಿಯೆ ಬಗೆಗೆ ತುಸು ಮಾತನಾಡಬಹುದು.
ಈ ಅಂಕಣದ ಹಿಂದಿನ ಅಂಕಣಗಳು
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.