Date: 10-09-2023
Location: ಬೆಂಗಳೂರು
''ಎಲ್ಲಾ ವಿದ್ಯಾರ್ಥಿಗಳಿಗೂ ಕಲಿಸುವ ಕ್ರಮ ಉರು ಹೊಡೆಯುವುದಲ್ಲ. ಮೊದಲನೆಯದಾಗಿ ಭಾವನೆಗಳಿಗೆ ಸ್ಪಂದಿಸಬೇಕು, ಮಾನಸಿಕ ಬೆಂಬಲ ತುಂಬಬೇಕು, ಅವರನ್ನು ಪ್ರೀತಿ ಮಾಡಬೇಕು. ನಂತರದಲ್ಲಿ ಅವರನ್ನು ನಿಧಾನವಾಗಿ ಅರಿವಿನ ಕಡೆಗೆ ಕರೆದುಕೊಂಡು ಹೋಗಬೇಕು. ಶಿಕ್ಷಕಿಯಾಗಿ ಪಠ್ಯದಲ್ಲಿರುವುದನ್ನಷ್ಟೇ ಪಾಠ ಮಾಡುವುದಲ್ಲ ಎನ್ನುವುದು ನನಗೆ ಬಹಳ ಬೇಗ ಅರ್ಥ ಆಗಿದ್ದರಿಂದ ಕಾಲೇಜಿನಲ್ಲಿ ಕೆಲಸ ಮಾಡುವಾಗ ಹೊಡೆದಾಟ, ಬಡೆದಾಟ ಆದದ್ದು ಒಬ್ಬ ಹುಡುಗ ಕಲ್ಲು ತೆಗೆದುಕೊಂಡು ಮತ್ತೊಬ್ಬ ಹುಡುಗನಿಗೆ ಹೊಡೆದಿದ್ದು ಇದೆ,” ಎನ್ನುತ್ತಾರೆ ಲೇಖಕಿ ಎಂ.ಆರ್. ಕಮಲ. ಅವರು ಅಂಕಣಗಾರ್ತಿ ಜ್ಯೋತಿ ಎಸ್. ಅವರ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ “ಪ್ರಾಧ್ಯಾಪಕಿಯ ಅನುಭವ”ವನ್ನು ಕುರಿತು ಹೀಗೆ ಹಂಚಿಕೊಂಡಿದ್ದಾರೆ.
ಕಲಿಸುವುದು ಎಂದರೆ ಕಲಿಯುವುದು, ಪ್ರೀತಿಯನ್ನು ಹಂಚುವುದು, ಅಂತಃಕರಣ ಉಣಿಸುವುದು. ಪ್ರೀತಿ ಅಂತಃಕರಣ ಮೊದಲ್ಗೊಂಡು ಕಲಿಸುತ್ತಿರುವ ಕಮಲ ಅಮ್ಮನವರ ಕುರಿತ ಅಂಕಣ ಇಂದಿನ ನಿಮ್ಮ ಓದಿಗೆ. ಎಂ. ಆರ್. ಕಮಲ ಅಮ್ಮ ಹಿರಿಯ ಸಾಹಿತಿಗಳು, ಚಿಂತಕರು, ಕನ್ನಡ ಪ್ರಾಧ್ಯಾಪಕರು. ಇವರು ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮೇಟಿಕುರ್ಕೆಯಲ್ಲಿ. ತಂದೆ ಎಂ. ಹೆಚ್. ರಾಮಸ್ವಾಮಿ ತಾಯಿ ವಿಶಾಲಾಕ್ಷಿ. ಹನ್ನೊಂದು ಜನರು ಮಕ್ಕಳ ತುಂಬು ಕುಟುಂಬದಲ್ಲಿ ಬೆಳೆದ ಕಮಲ ಅಮ್ಮ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಇವರ "ಅಮ್ಮ ಹಚ್ಚಿದೊಂದು ಹಣತೆ" ಭಾವಗೀತೆಯನ್ನು ಕೇಳದ ಕನ್ನಡಿಗರಿಲ್ಲ. ನೃತ್ಯ, ವೀಣೆ ನುಡಿಸುವುದು ಇವರ ಆಸಕ್ತಿಗಳು. ಸದಾ ಪಾದರಸದಂತ ವ್ಯಕ್ತಿತ್ವ, ಹಸನ್ಮುಖಿ, ಮಕ್ಕಳಲ್ಲಿ ಮಕ್ಕಳಾಗಿ ಮಕ್ಕಳ ಜೀವನ ರೂಪಿಸುವಲ್ಲಿ ಸದಾ ತುಡಿದ ಜೀವ ಎಂ. ಆರ್. ಕಮಲ ಅಮ್ಮನವರ ಮಾತುಗಳನ್ನು ಓದಿಕೊಳ್ಳಿ.
'ಎಲ್ಲಾ ವಿದ್ಯಾರ್ಥಿಗಳಿಗೂ ಕಲಿಸುವ ಕ್ರಮ ಉರು ಹೊಡೆಯುವುದಲ್ಲ. ಮೊದಲನೆಯದಾಗಿ ಭಾವನೆಗಳಿಗೆ ಸ್ಪಂದಿಸಬೇಕು, ಮಾನಸಿಕ ಬೆಂಬಲ ತುಂಬಬೇಕು, ಅವರನ್ನು ಪ್ರೀತಿ ಮಾಡಬೇಕು. ನಂತರದಲ್ಲಿ ಅವರನ್ನು ನಿಧಾನವಾಗಿ ಅರಿವಿನ ಕಡೆಗೆ ಕರೆದುಕೊಂಡು ಹೋಗಬೇಕು. ಶಿಕ್ಷಕಿಯಾಗಿ ಪಠ್ಯದಲ್ಲಿರುವುದನ್ನಷ್ಟೇ ಪಾಠ ಮಾಡುವುದಲ್ಲ ಎನ್ನುವುದು ನನಗೆ ಬಹಳ ಬೇಗ ಅರ್ಥ ಆಗಿದ್ದರಿಂದ ಕಾಲೇಜಿನಲ್ಲಿ ಕೆಲಸ ಮಾಡುವಾಗ ಹೊಡೆದಾಟ, ಬಡೆದಾಟ ಆದದ್ದು ಒಬ್ಬ ಹುಡುಗ ಕಲ್ಲು ತೆಗೆದುಕೊಂಡು ಮತ್ತೊಬ್ಬ ಹುಡುಗನಿಗೆ ಹೊಡೆದಿದ್ದು ಇದೆ. ಅಂತಹ ವಾತಾವರಣವನ್ನು ಬದಲು ಮಾಡಲು ಪ್ರಯೋಗಗಳನ್ನು ಮಾಡುತ್ತಾ ಬಂದೆ. ಅವರಿಗೆ ಬರೀ ತರಗತಿಯಲ್ಲಿ ಪಾಠ ಮಾಡಿದ್ರೆ ಆಗಲ್ಲ ಅಂತ ತೀರ್ಮಾನಿಸಿ ಪಠ್ಯದಲ್ಲಿರುವುದನ್ನೇ ನಾಟಕ ಮಾಡಿಸೋದು, ಗುಂಪು ಮಾಡಿ ಹಾಡು ಹೇಳಿಸುವುದು. ಚಿತ್ರ ಬಿಡಿಸುವುದು, ಬರಡಾಗಿದ್ದ ಕಾಲೇಜಿನಲ್ಲಿ ಗಿಡಗಳನ್ನು ಹಾಕೋದು ಮಾಡುತ್ತ ಕಲೆಯ ಮುಖಾಂತರ ಮಕ್ಕಳ ಮನವೊಲಿಸಿ ಅವರ ಕ್ರೂರತ್ವವನ್ನು ಕಡಿಮೆ ಮಾಡಬಹುದು ಅನ್ನಿಸಿತು. ಒಟ್ಟಿನಲ್ಲಿ ನನ್ನ ಉದ್ದೇಶ ಅವರವರ ಆಸಕ್ತಿಯ ಕ್ಷೇತ್ರಗಳನ್ನು ಹುಡುಕಿ ಆ ಕಲೆಯ ಮೂಲಕವೇ ಅವರನ್ನು ಮುನ್ನೆಲೆಗೆ ತರುವುದು. ಮೊದಲು 12% ಫಲಿತಾಂಶ ಬರುತ್ತಿದ್ದ ಕಾಲೇಜಿನಲ್ಲಿ ಐದಾರು ವರ್ಷದಲ್ಲೇ 65% ಫಲಿತಾಂಶ ಬರಲು ಸಾಧ್ಯವಾಯ್ತು. ನಾನು ಮಾಡಿದ ಪ್ರಯೋಗಗಳು ಅಷ್ಟು ಪರಿಣಾಮಕಾರಿ ಬದಲಾವಣೆಯನ್ನು ತಂದಿತು. ಇದು ನನಗೆ ಸಾಧನೆ ಅನ್ನಿಸುವುದಿಲ್ಲ. ಏಕೆಂದರೆ ಅಂಕಗಳ ಮೂಲಕ ನಾನು ಯಾವತ್ತು ಮನುಷ್ಯರನ್ನು ವಿದ್ಯಾರ್ಥಿಗಳನ್ನು ಅಳೆದಿಲ್ಲ. ಅಂತರಂಗದ ಬದಲಾವಣೆ ಮುಖ್ಯ. ಮಕ್ಕಳಲ್ಲಿ ಭಯ ಹುಟ್ಟಿಸುವುದು, ಪೋಷಕರನ್ನು ಕರೆದುಕೊಂಡು ಬನ್ನಿ ಅನ್ನೋದು, ಕ್ಲಾಸಿಗೆ ಸೇರಿಸಲ್ಲ ಅನ್ನೋದು ಇದ್ಯಾವುದನ್ನು ನಾನು ಮಾಡುತ್ತಿರಲಿಲ್ಲ. ನಾನು ಶಿಕ್ಷಕಿ ಅನ್ನೋದನ್ನು ಮರೆತು ಮಕ್ಕಳ ಜೊತೆಗೆ ಮಕ್ಕಳಾಗಿ ಭಾಗಿಯಾಗಿ ಹಾಡು, ನಾಟಕ, ಸಂಗೀತದೊಂದಿಗೆ ಅವರ ಜೊತೆಗೆ ನಾನೊಂದು ಪಾತ್ರವಾಗಿದ್ದೇನೆ. ಆಗಿನ ಕಾಲೇಜುಗಳಲ್ಲಿ ಗ್ರಂಥಾಲಯಗಳಿರಲಿಲ್ಲ. ನಮ್ಮ ಮನೆಯಿಂದ ಸುಮಾರು 200-300 ಪುಸ್ತಕಗಳನ್ನು ಕಾಲೇಜಿನಲ್ಲಿರಿಸಿ ಮಕ್ಕಳಿಗೆ ಓದಲು ಕೊಡುತ್ತಿದ್ದೆವು. ಕೆಲವು ಮಕ್ಕಳು ಪುಸ್ತಕ ತೆಗೆದುಕೊಂಡು ಹೋಗಿಬಿಡುತ್ತಿದ್ದರು. ಬೈಬೇಡಿ ಅದು ಕಳ್ಳತನ ಅಲ್ಲ, ಕಲಿಯುವ ಆಸೆ ಜ್ಞಾನದ ತುಡಿತ ಅಂತ ಕಾಲೇಜಿನ ಸಿಬ್ಬಂದಿಗೆ ಹೇಳಿ ಮನೆಯಿಂದ ಇನ್ನೊಂದೆರಡು ಪುಸ್ತಕ ತಂದಿಡುತ್ತಿದ್ದೆ'.
'ಮೇಲಿನ ನೋಟಕ್ಕೆ ಉತ್ತೀರ್ಣ ಆಗೋದು, ಅಂಕಗಳನ್ನು ತೆಗೆಯೋದು ಕಲಿಕೆ ಅಲ್ಲ. ಆಂತರಿಕ ಬದಲಾವಣೆ ಇರತ್ತಲ್ಲ ಅದು ಜೀವನ ಪೂರ್ತಿ ಜೊತೆಗಿರುತ್ತದೆ. ಎಲ್ಲಿ ಏನು ಸಾಧ್ಯ ಇಲ್ಲ ಅಂತಿದ್ರೋ 2002ರಿಂದ 2012ರವರೆಗೆ ಸತತವಾಗಿ ಎಲ್ಲರ ಜೊತೆಗೂಡಿ ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಎಂದೋ ಬಿತ್ತಿ, ಬೆಳೆದ ಗಿಡ ಮುಂದೊಂದು ದಿನ ಹೆಮ್ಮರವಾಗಿ ಪ್ರತಿಫಲ ಕೊಡುವಂತೆ ಆ ಮಕ್ಕಳೆಲ್ಲ ಇವತ್ತು ನೃತ್ಯ ರಂಗದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ, ವಿದೇಶಗಳಲ್ಲಿ, ಅವರವರ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಕೊಂಡು ಹಲವಾರು ಪ್ರಶಸ್ತಿ ಸನ್ಮಾನಗಳನ್ನು ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಇವರೆಲ್ಲ ಅಂದು ಕಲ್ಲು ಹಿಡಿದು ಹೊಡೆದಾಟ ಬಡಿದಾಟ ಮಾಡುತ್ತಿದ್ದ ಅದೇ ಸರ್ಕಾರಿ ಕಾಲೇಜಿನ ಮಕ್ಕಳೇ. ಮಕ್ಕಳ ಆಸೆಗಳನ್ನು ಗುರುತಿಸಿ ಎಲ್ಲಾ ಪ್ರಕಾರದ ಕಲೆಯ ಅಭಿವ್ಯಕ್ತಿಗೆ ಅವಕಾಶಗಳನ್ನು ಕೊಟ್ಟು ಓದಿಸಬೇಕು. ಕೃಷಿಕರಾಗಿದ್ದ ನನ್ನ ತಂದೆಯವರು ಸಾಹಿತ್ಯವನ್ನು ಬಲ್ಲವರು. ನಾನು ಚಿಕ್ಕವಳಿದ್ದಾಗ ಕುಮಾರವ್ಯಾಸ ಮಹಾಭಾರತವನ್ನು ಮನೆಯ ಅಂಗಳದಲ್ಲಿ ಕುಳಿತು ಊರಲ್ಲಿನ ರೈತರಿಗೆ ಹೇಳುತ್ತಿದ್ದರು. ಅಲ್ಲಿಂದಲೇ ನನಗೆ ಸಾಹಿತ್ಯಡೆಗೆ ಆಸಕ್ತಿ ಬೆಳೆಯಿತು. ನಾನು ಪ್ರಿನ್ಸಿಪಾಲ್ ವೃತ್ತಿಯಿಂದ ನಿವೃತ್ತಿ ಹೊಂದಿ ಐದು ವರ್ಷ ಕಳೆದವು. ಮುಂದೆ ಪುಸ್ತಕಗಳ ಅನುವಾದ ಮಾಡಬೇಕು. ನನ್ನದೇ ವಿಚಾರಗಳನ್ನು ಬರವಣಿಗೆಯ ಮುಖಾಂತರ ಕಿರಿಯರಿಗೆ ತಲುಪಿಸಬೇಕು ಎಂಬ ಉದ್ದೇಶವಿದೆ. ಇದೇ ನಿಟ್ಟಿನಲ್ಲಿ ಇದುವರೆಗೆ ನಲವತ್ತು 'ಮಾತುಕತೆ' ಕಾರ್ಯಕ್ರಮಗಳನ್ನು ನಮ್ಮ ಮನೆಯಲ್ಲಿ ಮಾಡಿದ್ದೇವೆ. ಹೆಚ್. ಎಸ್ ಸತ್ಯನಾರಾಯಣ ಅವರ ಸಹಯೋಗದೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಕವಿ, ಕಾವ್ಯ, ಸಮಾಜ, ಸಂಗೀತ, ಸಂಸ್ಕೃತಿ ಇತ್ಯಾದಿ ಎಲ್ಲಾ ಪ್ರಕಾರದ ವಿಚಾರ ವಿನಿಮಯ, ಚರ್ಚೆ, ಸಂವಾದ ಮಾಡಿದ್ದೇವೆ. ಈ ಕಾರ್ಯಕ್ರಮಕ್ಕೆ ಆಸಕ್ತರು ಬಂದು ಸೇರಿಕೊಳ್ಳುತ್ತಿದ್ದರು. ಒಮ್ಮೆ ನೇಮಿಚಂದ್ರ ಅವರು ಕೂಡ ಬಂದಿದ್ದರು. ಈಗಿನ ಯುವಜನತೆ ಬದುಕಿಗೆ ವಿಶಾಲವಾಗಿ ತೆರೆದುಕೊಂಡಿದೆ. ಇಂದಿನ ಬರಹಗಾರರು ವಿಭಿನ್ನ ಚಿಂತನೆ, ವಿಶಿಷ್ಟ ಶೈಲಿಯಲ್ಲಿ ಸಾಹಿತ್ಯದೆಡೆಗೆ ಆಸಕ್ತಿವಹಿಸುತ್ತಿರುವುದು ನನಗೆ ಖುಷಿಯ ವಿಚಾರ'.
ಶಕುಂತಲೋಪಖ್ಯಾನ, ಜಾಣೆ ಮತ್ತು ಇತರ ಕವಿತೆಗಳು. ಹೂವು ಚೆಲ್ಲಿದ ಹಾದಿ, ಮಾರಿಬಿಡಿ, ನೆಲದಾಸೆಯ ನಕ್ಷತ್ರಗಳು, ಕಾಳನಾಮ ಚರಿತೆ, ಕಸೂತಿಯಾದ ನೆನಪು, ಕೊಳದ ಮೇಲಿನ ಗಾಳಿ, ಊರಬೀದಿಯ ಸುತ್ತು, ಹೊನ್ನಾವರಿಕೆ, ಗದ್ಯಗಂಧಿ ಇವರ ಪುಸ್ತಕಗಳು. ಆಫ್ರಿಕನ್, ಅಮೇರಿಕನ್, ಅರಬ್ ಸಾಹಿತ್ಯದ ಬರಹಗಳನ್ನು ಇವರು ಅನುವಾದಿಸಿದ್ದಾರೆ. ಕಪ್ಪು ಹಕ್ಕಿಯ ಬೆಳಕಿನ ಹಾಡು, ನೆತ್ತರಲಿ ನೆಂದ ಚಂದ್ರ, ಉತ್ತರ ನಕ್ಷತ್ರ, ನನ್ನ ಕಥೆ, ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ ಇವರ ಅನುವಾದಿತ ಬರಹಗಳು. ಇವರ ಬರಹಗಳಲ್ಲಿ ಹೆಣ್ತನದ ಎಲ್ಲ ವಿಚಾರಧಾರೆಗಳು ಸ್ಫುರಿಸುತ್ತವೆ. ಬೆಂಗಳೂರು ವಿಶ್ವ ವಿದ್ಯಾನಿಲಯದ ಎಂ. ಎ., ಎಲ್. ಎಲ್. ಬಿ. ಪದವೀಧರೆಯಾದ ಇವರು ತಮ್ಮ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿ. ಎಂ. ಶ್ರೀ ಸ್ವರ್ಣ ಪದಕ, ಕಿ. ರಂ. ಕಾವ್ಯ ಪುರಸ್ಕಾರ, ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಪುರಸ್ಕಾರ, ಕುವೆಂಪು ಭಾಷಾ ಪ್ರಾಧಿಕಾರದ ಗೌರವ ಸೇರಿದಂತೆ ಸಾಕಷ್ಟು ಪ್ರಶಸ್ತಿ ಸನ್ಮಾನಗಳು ಇವರಿಗೆ ಸಂದಿವೆ. ಪ್ರೆಂಚ್ ಭಾಷೆಯನ್ನು ಅಧ್ಯಯನ ಮಾಡಿರುವ ಇವರು ಪ್ರೆಂಚ್ ಭಾಷೆಯಲ್ಲಿ ಪದವಿಯನ್ನು ಪಡೆದಿದ್ದಾರೆ. ಹೆಸರಿಗೆ ತಕ್ಕಂತೆ ಕಮಲದ ಹೂ ಮನಸಿನ ಕಮಲ ಅಮ್ಮನವರ ಸಾಹಿತ್ಯ ವಿಸ್ತರಿಸುತ್ತಿರಲಿ. ಅವರ ಬದುಕಿನ ಅನುಭವ ಕಿರಿಯರಿಗೆ ಮಾರ್ಗದರ್ಶಿಯಾಗಿ ಜೊತೆಯಿರಲಿ. ದೇವರು ಅವರಿಗೆ ಹೆಚ್ಚಿನ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ.
ಧನ್ಯವಾದಗಳೊಂದಿಗೆ
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಬರಹಗಳು:
ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ
ವಿಶೇಷ ಚೇತನರೆಂದರೆ ಸೆಣಸಾಟಗಳೊಂದಿಗೆ ಕನಸುಗಳನ್ನು ಕಟ್ಟುವವರು
ಚುಕ್ಕಿಯಿಟ್ಟು ಚಿತ್ರ ಬರೆಯುವ ಮಾಂತ್ರಿಕ..
ಕಥೆಯಲ್ಲ, ಬದುಕಿನ ವ್ಯಥೆ ಇದು...
ಅಬ್ದುಲ್ ಅವರ ಬದುಕಿನ ಏಳುಬೀಳು
ಹಾಡನ್ನೇ ಬದುಕಾಗಿಸಿದ ದಂಪತಿ ತಂಬೂರಿ ಜವರಯ್ಯ ಮತ್ತು ಬೋರಮ್ಮ
ಶ್ರವಣ್ ಹೆಗ್ಗೋಡು ಅವರ ಗೊಂಬೆಗಳ ಜೊತೆಗಿನ ಪಯಣ
ಕಾಡುಜನರ, ಬುಡಕಟ್ಚು ಸಮುದಾಯಗಳ ಏಳಿಗೆಯ ವಿನೂತನ ‘ವನಚೇತನ’
ಸಮುದಾಯ, ಸಂಸ್ಕೃತಿಗಳ ಸಮ್ಮಿಶ್ರಣವೇ ಭಾರತ
ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಯಿಂದ ಹೊರಬಂದ ಮಂಜುಳ ಮಾಳ್ಗಿ
ಮಹಾಂತೇಶ್ ಅವರ ಹಾಡುಪಾಡು ಬದುಕಿನ ನೋಟ
ಗುರಿ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ಮುಟ್ಟುವುದೇ ಮುಖ್ಯ
ರಂಗಭೂಮಿ ನನ್ನ ಬದುಕನ್ನು ಚೆಂದವಾಗಿ ರೂಪಿಸಿದೆ: ಪ್ರಶಾಂತ್ ಕುಮಾರ್
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ
ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
ಸಬ್ ಇನ್ಸ್ಪೆಕ್ಟರ್ ಸೋಮಶಂಕರ್ ಜೀವನಯಾನ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ಪ್ರಕೃತಿ ಹಾಗೂ ಪಕ್ಷಿ ಪ್ರೇಮಿ ವಿನೋದ್ ಕುಮಾರ್ ವಿ.ಕೆ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.