ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ 

Date: 19-10-2024

Location: ಬೆಂಗಳೂರು


"ತಾಯಿಯನ್ನು ತಿಳಿದುಕೊಳ್ಳುವುದು ಹೇಗೆ ಮಾನಸಿಕ ಬೆಳವಣಿಗೆಯೊ ಹಾಗೆಯೆ ಅದೊಂದು ಸಾಮಾಜಿಕ ಬೆಳವಣಿಗೆಯೂ ಆಗಿದೆ. ತಾಯಿ ಎನ್ನುವುದು ಹಾಲುಣಿಸುವ, ಪ್ರೀತಿಸುವ ಜೀವವಾಗಿ ಮಗುವಿನ ಮಾನಸಿಕ ಬೆಳವಣಿಗೆಗೆ ಪೂರಕವಾದರೆ ತಾಯಿಯಾಗಿ ಎಂದರೆ ತಾಯಿ ಎಂಬುದು ಸಮಾಜದ ಒಂದು ಗಟಕವಾದ ಕುಟುಂಬದೊಳಗಿನ ಒಂದು ಸಂಬಂದವಾಗಿ ಮಗುವಿನ ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ’ ಕುರಿತು ಬರೆದಿರುವ ಲೇಖನ.

ಮಗುವಿನ ಮನೋವಿಕಾಸ ಮತ್ತು ಸಾಮಾಜಿಕತೆಯನ್ನು ಬಾಶೆಯ ಗಳಿಕಾ ಪ್ರಕ್ರಿಯೆ ಪ್ರಬಾವಿಸುತ್ತದೆ. ಆರಂಬದಲ್ಲಿ ಹೇಳಿದಂತೆ ಮಗು ಹುಟ್ಟಿದ ಬಳಿಕ ಪಡೆಯುವ ಬಿನ್ನ ಬೆಳವಣಿಗೆ ಪ್ರಕ್ರಿಯೆಗಳಲ್ಲಿ ದೇಹದ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆ ಪ್ರಕ್ರಿಯೆಗಳು ಒಟ್ಟೊಟ್ಟಿಗೆ ನಡೆಯುತ್ತಿರುತ್ತವೆ. ಮಗು ಬೆಳೆಯುತ್ತಾ ತನ್ನ ಸುತ್ತಲಿನ ಪರಿಸರವನ್ನು ಗ್ರಹಿಸುತ್ತದೆ. ಈ ಪರಿಸರದಲ್ಲಿ ಸಾಮಾನ್ಯವಾಗಿ ತಾಯಿ, ತಂದೆ, ಮನೆಯ ಇತರ ಸದಸ್ಯರು, ಮನೆ, ಮನೆಯ ಹಲವು ಬಾಗಗಳು, ಮನುಶ್ಯ ಸಂಬಂದಗಳು, ಮಾತನಾಡಿಸುವಿಕೆ, ಪರಸ್ಪರ ಸಂಬಂದಗಳು ಈ ಮೊದಲಾದವನ್ನು ಮಗು ಅವಲೋಕಿಸುತ್ತಾ ಕಲಿಯುತ್ತಾ ಬೆಳೆಯುತ್ತದೆ. ಇದು ಮಗುವಿನ ಸಾಮಾಜಿಕರಣ ಪ್ರಕ್ರಿಯೆಯೆ ಆಗಿದೆ.

ತಾಯಿಯನ್ನು ತಿಳಿದುಕೊಳ್ಳುವುದು ಹೇಗೆ ಮಾನಸಿಕ ಬೆಳವಣಿಗೆಯೊ ಹಾಗೆಯೆ ಅದೊಂದು ಸಾಮಾಜಿಕ ಬೆಳವಣಿಗೆಯೂ ಆಗಿದೆ. ತಾಯಿ ಎನ್ನುವುದು ಹಾಲುಣಿಸುವ, ಪ್ರೀತಿಸುವ ಜೀವವಾಗಿ ಮಗುವಿನ ಮಾನಸಿಕ ಬೆಳವಣಿಗೆಗೆ ಪೂರಕವಾದರೆ ತಾಯಿಯಾಗಿ ಎಂದರೆ ತಾಯಿ ಎಂಬುದು ಸಮಾಜದ ಒಂದು ಗಟಕವಾದ ಕುಟುಂಬದೊಳಗಿನ ಒಂದು ಸಂಬಂದವಾಗಿ ಮಗುವಿನ ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ. ತಾಯಿ ಎಂಬುದು ಸಾಮಾಜಿಕ ರಚನೆಯ ಬಾಗವಾಗಿ ಬರುವಾಗ ಸಹಜವಾಗಿಯೆ ಮಗು ಇರುವ ನಿರ‍್ದಿಶ್ಟ ಸಮಾಜದ ತಾಯಿ ಎಂಬ ಪರಿಕಲ್ಪನೆಯನ್ನು ಪಡೆದುಕೊಂಡು ಬೆಳೆಯುತ್ತದೆ.

ಎಲ್ಲ ಬಾಶಿಕ ಸಮುದಾಯಗಳಲ್ಲಿ ತಾಯಿಯನ್ನು ಒಂದೆ ರೀತಿಯಲ್ಲಿ ಗ್ರಹಿಸಲು ಸಾದ್ಯವಿಲ್ಲ. ಇದಕ್ಕೆ ಕಾರಣ ಆಯಾ ಸಮಾಜದ ರಚನೆ ಕಾರಣವಾಗಿರುತ್ತದೆ. ಮಗು ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯ ಜೊತೆಗೆ ತಾಯಿಯನ್ನು ಕರೆಯುವ ಒಂದು ಶಬ್ದವನ್ನೂ ಪಡೆದುಕೊಳ್ಳುತ್ತದೆ. ಅಂದರೆ ಮಗುವಿನ ದೇಹದ ಬೆಳವಣಿಗೆ, ದೇಹದ ಬೆಳವಣಿಗೆಯ ನಿಯಂತ್ರಣದಲ್ಲಿ ಆಗುವ ಮಾನಸಿಕ ಬೆಳವಣಿಗೆ, ಅದರ ನಿಯಂತ್ರಣದಲ್ಲಿ ನಡೆಯುವ ಸಾಮಾಜಿಕ ಬೆಳವಣಿಗೆ ಈ ಎಲ್ಲವೂ ಪರಸ್ಪರ ಕೋದುಕೊಂಡ ಸ್ತಿತಿಯಲ್ಲಿ ಮಗುವಿಗೆ ದಕ್ಕುತ್ತವೆ. ಇದನ್ನು ಈ ಮೇಲೆ ಚರ‍್ಚಿಸಿದೆ. ಈ ಸಂಕರ‍್ಣ ಪಡೆಯುವಿಕೆ ಪ್ರಕ್ರಿಯೆಯ ಬಾಗವಾಗಿ ತಾಯಿಯನ್ನು ಹೇಳುವ ಪದವನ್ನೂ ಮಗು ಕಲಿಯುತ್ತದೆ. ಅಂದರೆ ಅತ್ಯಂತ ಸಂಕರ‍್ಣವಾದ ರಚನೆಯೊಳಗೆ ಮಗು ಮಾತನ್ನು ಪಡೆದುಕೊಳ್ಳುತ್ತದೆ. ಇದರಿಂದ ಸ್ಪಶ್ಟವಾಗುವುದೇನೆಂದರೆ ಮಗು ಬಾಶೆಯನ್ನು ಪಡೆದುಕೊಳ್ಳುವುದು ಅದರ ದೇಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಯ ಒಟ್ಟು ಪ್ರಕ್ರಿಯೆಯ ಒಳಗೆ ಆಳದಲ್ಲಿ ನಂಟನ್ನು ಇಟ್ಟುಕೊಂಡು ಎಂಬುದು. ಅಂದರೆ ಮಗುವಿನ ಒಟ್ಟಾರೆ ಬೆಳವಣಿಗೆಯ ಬಾಗವಾಗಿಯೆ ಬಾಶೆ ಬೆಳೆಯುತ್ತದೆ. ಇದನ್ನು ಮಗುವಿನ ಇತರ ಬೆಳವಣಿಗೆಗಳಿಂದ ಪ್ರತ್ಯೇಕಿಸುವುದಕ್ಕೆ, ಹೊರತರುವುದಕ್ಕೆ ಅಸಾದ್ಯ.

ಒಂದು ಬಾಶಿಕ ಸಮುದಾಯ ಇಲ್ಲವೆ ಸಮಾಜ ತನ್ನದೆ ಆದ ಸಾಮಾಜಿಕ ರಚನೆಯನ್ನು ಬೆಳೆಸಿಕೊಂಡಿರುತ್ತದೆ. ಅದರಲ್ಲಿ ಸಮಾಜದ ಪ್ರತಿಯೊಬ್ಬ ಸದಸ್ಯರ ಅರಿವಿಗೆ ಬರುವಂತವು ಹಲವು ಇದ್ದರೆ ಅರಿವಿಗೆ ಬಾರದೆ ಅಂರ‍್ಗತವಾಗಿ ಇರುವಂತವೂ ಹಲವಿರುತ್ತವೆ. ಈ ಸಮಾಜದಲ್ಲಿ ಮಕ್ಕಳು ಕಲಿಯುವ ಮತ್ತು ಆನಂತರ ದೊಡ್ಡವರಾಗಿ ಮನುಶ್ಯರು ಬಳಸುವ ಹಲವಾರು ಪ್ರಕ್ರಿಯೆಗಳ ಬಗೆಗೆ ಮನುಶ್ಯರಿಗೆ ಯಾವುದೆ ಅರಿವು ಇರುವುದಿಲ್ಲ. ಮಗುವೊಂದು ಬೆಳೆಯುತ್ತಾ ವಾಸನೆಯನ್ನು, ಸ್ರ‍್ಶವನ್ನು, ನೋಟವನ್ನು, ದ್ವನಿಯನ್ನು, ರುಚಿಯನ್ನು ದೇಹ ರಚನೆಯ ಬೆಳವಣಿಗೆ ಬಾಗವಾಗಿ ಕಲಿಯುತ್ತದೆ.

ಈ ದೇಹ ರಚನೆಯ ಬೆಳವಣಿಗೆ ಆ ಮಗು ಬದುಕಿರುವ ಸಮಾಜದಲ್ಲಿನ ಮವುಲ್ಯಗಳಿಗೆ ಪಕ್ಕಾಗಿರುತ್ತದೆ. ಸಮಾಜದ ರಚನೆಯಲ್ಲಿ ಪ್ರತಿ ವಾಸನೆ, ಸ್ರ‍್ಶ, ನೋಟ, ದ್ವನಿ, ರುಚಿ ಈ ಎಲ್ಲವಕ್ಕೂ ಅವುಗಳದೆ ಮವುಲ್ಯ ಆರೋಪಿತವಾಗಿರುತ್ತದೆ. ಈ ಆರೋಪಿತ ಮವುಲ್ಯಗಳನ್ನು ಪೋಶಕರು ತಮ್ಮ ಅರಿವಿಗೂ ಇಲ್ಲದೆ ಮಕ್ಕಳಿಗೆ ಕಲಿಸುತ್ತಾರೆ. ಯಾವ ಬಗೆಯ ವಾಸನೆಗೆ ಯಾವ ಬಗೆಯ ಮವುಲ್ಯ ಎಂಬುದನ್ನು ಮಗುವಿಗೆ ಯಾರೂ ಹೇಳಿಕೊಡುವುದಿಲ್ಲ. ಆದರೆ ಮನೆಯ ಒಳಗೆ ಯಾವುದಕ್ಕೆ ಏನು ಮವುಲ್ಯವಿದೆ, ಯಾವ ರ‍್ತವಿದೆ ಎಂಬುದನ್ನು ಮಗು ಅವಲೋಕಿಸುವ ಮತ್ತು ಅನುಬವಿಸುವುದರ ಮೂಲಕ ಕಲಿತುಕೊಳ್ಳುತ್ತಿರುತ್ತದೆ. ಇದು ಮಾತ್ರವಲ್ಲದೆ ಮಗು ಬೆಳೆಯುತ್ತಾ ಬಣ್ಣವನ್ನು, ದೂರವನ್ನು, ಅಳತೆಯನ್ನು, ಎತ್ತರವನ್ನು ಕಲಿಯುತ್ತದೆ. ವಾಸನೆ, ಸ್ರ‍್ಶಗಳಲ್ಲಿ ತರತಮಗಳನ್ನು ಮಗು ಕಲಿಯುತ್ತದೆ. ಈ ತರತಮಗಳು ವಾಸ್ತವದಲ್ಲಿ ಆಯಾ ಸಮಾಜಗಳಲ್ಲಿ ಆರೋಪಿತ ವಾಸ್ತವಗಳೆ ಆಗಿರುತ್ತವೆ. ಉದಾಹರಣೆಗೆ ಒಂದು ಸಮಾಜದಲ್ಲಿ ಎಶ್ಟು ಬಗೆಯ ಬಿಳಿ ಬಣ್ಣಗಳನ್ನು ನೋಡುವುದಕ್ಕೆ ಸಾದ್ಯ, ಎಶ್ಟು ಬಗೆಯಲ್ಲಿ ‘ಸು’ ವಾಸನೆಗಳನ್ನು ವಾಸಿಸಲು ಸಾದ್ಯ, ನೀರಿನಲ್ಲಿ ಬಿನ್ನತೆಗಳನ್ನು (ಕುಡಿಯುವ, ಬಳಸುವ, ಪೂಜಿಸುವ ಮೊ.) ಎಶ್ಟು ಬಗೆಯಲ್ಲಿ ಮಾಡಬೇಕು, ಬೆಂಕಿಯ ಬಗೆಗಳು ಹೇಗಿರುತ್ತವೆ (ಬೆಳಕಿನ, ಅಡುಗೆಯ, ದರ‍್ಮಿಕತೆಯ ಮೊ.) ಎಂಬೀ ಮೊದಲಾದವು. ಪ್ರತಿಯೊಬ್ಬ ವ್ಯಕ್ತಿಯೂ ಇವೆಲ್ಲವನ್ನು ಕಲಿತು ಬೆಳೆದಿರುತ್ತದೆ. ಈ ಮತ್ತು ಇಂತಾ ಹಲವಾರು ಕಲಿಕಾ ಪ್ರಕ್ರಿಯೆಗಳು ಹೆಚ್ಚಿನ ಅರಿವಿಲ್ಲದೆ ನಡೆಯುತ್ತಿರುತ್ತವೆ. ಈ ಒಟ್ಟು ಕಲಿಕೆಗಳ ಮೊತ್ತವೆ ಸಂಸ್ಕೃತಿಯಾಗಿರುತ್ತದೆ.

ಮಗುವಿನ ಕಲಿಕೆಯ ಪ್ರಕ್ರಿಯೆಯನ್ನು ಇನ್ನೂ ಸ್ವಲ್ಪ ವಿಸ್ತರಿಸಿ ನೋಡೋಣ. ಮಗುವೊಂದು ತಾಯಿ ಎನ್ನುವ ಪರಿಕಲ್ಪನೆಯನ್ನು ಹೇಗೆ ಪಡೆದುಕೊಳ್ಳುತ್ತದೆ ಮತ್ತು ಆ ತಾಯಿ ಎನ್ನುವ ಪರಿಕಲ್ಪನೆ ಹೇಗೆ ಸಂಸ್ಕೃತಿನಿಶ್ಟ ಎನ್ನುವುದನ್ನು ಈ ಮೇಲೆ ಮಾತನಾಡಿದೆವು. ಅದರಂತೆಯೆ ಕುಟುಂಬದ ರಚನೆಯನ್ನು ಮಗು ಕಲಿಯುವುದನ್ನು ಕುರಿತು ಇನ್ನಶ್ಟು ಮಾತನಾಡುವುದಾದರೆ ಮಗು ಮನೆಯೊಳಗಿನ ವಿವಿದ ಸಂಬಂದಗಳನ್ನು ಕಲಿಯುತ್ತದೆ. ತಂದೆ, ಅಜ್ಜಿ, ತಾತ, ಅಕ್ಕ, ಅಣ್ಣ, ತಂಗಿ, ತಮ್ಮ ಇವೆ ಮೊದಲಾದವು. ವಾಸ್ತವದಲ್ಲಿ ಬಾರತೀಯ ಸಮಾಜದಲ್ಲಿ ಈ ಸಂಬಂದಗಳಲ್ಲಿ ಮತ್ತೆ ಹಲವು ಬಿನ್ನತೆಗಳು ಇರುತ್ತವೆ. ಕೂಡುಕುಟುಂಬದೊಳಗಿನ ಸಂಬಂದಗಳು, ಸ್ನೇಹಸಂಬಂದದೊಳಗಿನ ಸಂಬಂದಗಳು, ಇನ್ನೂ ಹಲವು ನಿರಿಗೆಗಳಲ್ಲಿ ಕೋದುಕೊಂಡಿರುವ ಸಂಬಂದದ ಪರಿಕಲ್ಪನೆ ನೇರವಾಗಿರದೆ ಬಹು ಸಂಕರ‍್ಣವಾಗಿರುತ್ತದೆ. ಮಗುವೊಂದು ಈ ಎಲ್ಲವನ್ನೂ ಆಯಾ ಸಮಾಜದ ರಚನೆಗೆ ತಕ್ಕಂತೆ ಕಲಿಯುತ್ತದೆ.

ಈ ರಚನೆಗಳ ಕಲಿಕೆಯೆ ಮಗುವಿನ ಸಾಮಾಜಿಕತೆಯಾಗಿರುತ್ತದೆ. ಮಗುವೊಂದರ ಬವಿಶತ್ತಿನ ಒಟ್ಟು ಸ್ತೂಲ ಬದುಕು ರೂಪುಗೊಳ್ಳುವುದು ಈ ಕಲಿಕೆ ಪ್ರಕ್ರಿಯೆಯಲ್ಲಿಯೆ. ಇಲ್ಲಿ ಮಗು ಕೇವಲ ಸಂಬಂದಗಳನ್ನು ಕಲಿಯುವುದಿಲ್ಲ. ಬದಲಿಗೆ ಕುಟುಂಬದ ಒಳಗೆ ಪ್ರತಿಯೊಂದು ಸಂಬಂದಗಳ ಪ್ರೀತಿಯ ಜೊತೆಗೆ ಅವು ನರ‍್ವಹಿಸುವ ಜವಾಬ್ದಾರಿಗಳು, ಅವರ ಕೆಲಸಗಳನ್ನೂ ಮಗು ಕಲಿಯುತ್ತದೆ. ಅಂದರೆ ಸಂಪರ‍್ಣವಾಗಿ ಮಗು ಸಾಮಾಜಿಕ ರಚನೆಯನ್ನು ಕಲಿಯುತ್ತದೆ. ಕುಟುಂಬವೆ ಸಮಾಜದ ಮೂಲಬೂತ ಗಟಕವಾಗಿರುವುದರಿಂದ ಮಗು ಕುಟುಂಬದ ರಚನೆಯನ್ನು ತಿಳಿದುಕೊಳ್ಳುವುದು ಸಮಾಜವನ್ನು ಕಲಿತಂತೆ. ಮನೆಯ ಒಳಗೆ ಪ್ರೀತಿ, ಸಂಬಂದಗಳ ಜೊತೆಜೊತೆಗೆ ಸಹಜವಾಗಿ ಇನ್ನೂ ಹಲವು ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಮಗು ನಮಸ್ಕರಿಸುವುದನ್ನು, ಗವುರವಿಸುವುದನ್ನು, ಪ್ರೀತಿಸುವುದನ್ನು ಕಲಿಯುತ್ತದೆ. ಇದೆಲ್ಲವನ್ನೂ ಮಗು ಮನೆಯ ಪರಿಸರದ ಒಳಗೆ ಕಲಿಯುತ್ತದೆ. ಇವೆಲ್ಲವೂ ಮಗುವಿನ ಸಂಸ್ಕುçತಿ ಆಗಿರುತ್ತದೆ. ನಮಸ್ಕರಿಸುವುದು, ಪ್ರೀತಿಸುವುದು, ಗವುರವಿಸುವುದು, ದ್ವೇಶಿಸುವುದು ಎಂದರೆ ಏನು, ಅವುಗಳ ಮವುಲ್ಯ ಎಂತಹದ್ದು ಎಂಬ ಮೊದಲಾದವನ್ನೂ ಮಗು ಕಲಿತುಕೊಳ್ಳುತ್ತದೆ.

ಈ ಒಟ್ಟು ಕಲಿಕಾ ಪ್ರಕ್ರಿಯೆಯ ಬಾಗವಾಗಿ ಮಗುವಿನ ಬಾಶಾಗಳಿಕೆ ಪ್ರಕ್ರಿಯೆಯೂ ನಡೆದಿರುತ್ತದೆ. ಹಾಗಾಗಿ ಮಗುವಿನ ಬಾಶೆ ಮಗುವಿನ ದೇಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯ ಅತ್ಯಂತ ಆಳಸಂಬಂದಿ ಬೆಳವಣಿಗೆ ಆಗಿರುತ್ತದೆ. ಹೀಗೆ ಮಗುವಿನ ಮನೋವಿಕಾಸ ಮತ್ತು ಸಾಮಾಜಿಕತೆ ಎರಡೂ ಸಂಕರ‍್ಣ ಪ್ರಕ್ರಿಯೆಯಗಳು ಮತ್ತು ಈ ಎರಡೂ ಮಗುವಿನ ಬಾಶಾಗಳಿಕೆ ಪ್ರಕ್ರಿಯೆಯ ಬಾಗವಾಗಿರುತ್ತವೆ ಮತ್ತು ಅದಕ್ಕೆದುರಾಗಿ ಮಕ್ಕಳ ಬಾಶಾಗಳಿಕೆ ಪ್ರಕ್ರಿಯೆಯೂ ಅದರ ಮನೋವಿಕಾಸ ಮತ್ತು ಸಾಮಾಜಿಕತೆ ಪ್ರಕ್ರಿಯೆಗಳ ಬಾಗವಾಗಿ ಇರುತ್ತದೆ.

ಈ ವಯಸ್ಸಿನ ನಂತರ ಶುರುವಾಗುವ ಶಿಕ್ಶಣ ವ್ಯವಸ್ತೆ ಇದುವರೆಗೆ ಆ ಮಗುವಿನ ಮಾನಸಿಕತೆಯನ್ನು ರೂಪಿಸಿದ ಮತ್ತು ಸುತ್ತಲಿನ ಸಮಾಜದ ರಚನೆಯನ್ನು ಗ್ರಹಿಸಿಕೊಳ್ಳಲು ಪೂರಕವಾದ ಬಾಶೆಯಲ್ಲಿರುವುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲಿ ಕೆಲವು ವಿಚಾರಗಳನ್ನು ಉಲ್ಲೇಕಿಸಬಹುದು. ಮಗುವಿಗೆ ಎಳವೆಯಲ್ಲಿ ಪಡೆದುಕೊಂಡ ಅನುಬವಗಳು ಆನಂತರದ ಬದುಕಿನುದ್ದಕ್ಕೂ ಪಡೆದುಕೊಳ್ಳುವ ಅನುಬವಗಳಿಗೆ, ಅವುಗಳನ್ನು ಪಡೆದುಕೊಳ್ಳುವುದಕ್ಕೆ ನೆಲೆಯಾಗಿ ಉಳಿದಿರುತ್ತವೆ. ಕನ್ನಡದ ದೊಡ್ಡ ಕವಿಯಾದ ಪಂಪ ಬನವಾಸಿ ದೇಶವನ್ನು ಹಾಡುತ್ತಾ ಅವನು ಹೇಳುವ ಅನುಬವಗಳೂ ಇಂತವೆ. ಅವನು ಬದುಕಿನಲ್ಲಿ ಕಾಣುವ ಅನುಬವಗಳೆಲ್ಲವೂ ಬನವಾಸಿ ದೇಶದ ನೆನಪನ್ನು ತರುತ್ತವೆ ಎಂಬುದು. ವಾಸ್ತವದಲ್ಲಿ ತನ್ನೂರಿನ ನೆನಪನ್ನು ತರುವುದು ಮಾತ್ರವಲ್ಲದೆ ತನ್ನೂರಿನ ನೆನಪಿನ ಬಲದಿಂದಲೆ ಇವುಗಳೆಲ್ಲವೂ ಒಬ್ಬ ವ್ಯಕ್ತಿಯ ಅನುಬವಕ್ಕೆ ಬರುವುದು ಎಂಬುದನ್ನು ಇಲ್ಲಿ ಗಮನಿಸಬೇಕು. ಹೀಗೆಯೆ ಮಗು ತನ್ನ ಮೊದಲ ಬಾಶೆಯಲ್ಲಿ ಪಡೆದ ಪರಿಣತಿ, ಅನುಬವ ಬದುಕಿನ ಇತರ ಕುಶಲತೆಗಳಲ್ಲಿ ಪರಿಣತಿಯನ್ನು, ಅನುಬವವನ್ನು ಪಡೆಯುವುದಕ್ಕೆ ಪೂರಕವಾಗುತ್ತದೆ.

ಈ ಅಂಕಣದ ಹಿಂದಿನ ಅಂಕಣಗಳು
ಮಗು ಮತ್ತು ಬಾಶಾಗಳಿಕೆ
ತಾಯ್ಮಾತು-ತಾಯಿ ಮಾತು-ಗುರ‍್ತಿಕೆ
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

MORE NEWS

ಶಶಿಧರ ತೋಡಕರ: ಸಾಮಾಜಿಕ ಋಣ ಸಂದಾಯದ ಎರಡು ಮಾದರಿಗಳು

17-10-2024 ಬೆಂಗಳೂರು

"ಕಳೆದ ಎರಡು ವರ್ಷಗಳ ಹಿಂದೆ ಪೂಜ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರ ಕುರಿತ ಸಂಸ್ಮರಣಾ ಗ್ರಂಥವನ್ನು ಸಂಪಾದಿಸಿ...

ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು

16-10-2024 ಬೆಂಗಳೂರು

"ಪಂಜೆಯವರಿಗೆ ಮಡಿಕೇರಿಗೆ ವರ್ಗವಾಗಿ ಅಲ್ಲಿ ವೃತ್ತಿಯನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ಬರೆದಂತಹ ಕೃತಿಯೇ "ಕ...

ಮಗು ಮತ್ತು ಬಾಶಾಗಳಿಕೆ 

11-10-2024 ಬೆಂಗಳೂರು

"ಮಕ್ಕಳು ಬಾಶೆಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎಂಬುದು ಬಹುಶಾ ಮೊದಲಿನಿಂದಲೂ ಮನುಶ್ಯರನ್ನು ಕಾಡಿದ ಹಲವು ಪ್ರಶ್ನ...