Date: 11-10-2024
Location: ಬೆಂಗಳೂರು
"ಮಕ್ಕಳು ಬಾಶೆಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎಂಬುದು ಬಹುಶಾ ಮೊದಲಿನಿಂದಲೂ ಮನುಶ್ಯರನ್ನು ಕಾಡಿದ ಹಲವು ಪ್ರಶ್ನೆಗಳಲ್ಲಿ ಒಂದಾಗಿರಬೇಕು. ಇಪ್ಪತ್ತನೆಯ ಶತಮಾನದ ಮೊದಲರ‍್ದ ಬಾಗದಲ್ಲಿ ಸ್ಕಿನ್ನರ್ ಮೊದಲಾದ ಶಿಕ್ಶಣತಗ್ನರು ಮಕ್ಕಳ ಕಲಿಕಾ ಪ್ರಕ್ರಿಯೆಗಳನ್ನು ಆಳವಾಗಿ ಅದ್ಯಯನ ಮಾಡಿದರು," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಮಗು ಮತ್ತು ಬಾಶಾಗಳಿಕೆ’ ಕುರಿತು ಬರೆದಿರುವ ಲೇಖನ.
ಮಗು ಬಾಶೆಯನ್ನು ಪಡೆದುಕೊಳ್ಳುತ್ತದೆ. ಆದರೆ ಬಾಶೆಯ ಪಡೆದುಕೊಳ್ಳುವಿಕೆ ಪ್ರಕ್ರಿಯೆ ಗಳಿಕೆಯೆ, ಕಲಿಕೆಯೆ ಎಂಬುದು ಬಹುಮುಕ್ಯವಾದ ವಿಚಾರ. ಮಕ್ಕಳು ಬಾಶೆಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎಂಬುದು ಬಹುಶಾ ಮೊದಲಿನಿಂದಲೂ ಮನುಶ್ಯರನ್ನು ಕಾಡಿದ ಹಲವು ಪ್ರಶ್ನೆಗಳಲ್ಲಿ ಒಂದಾಗಿರಬೇಕು. ಇಪ್ಪತ್ತನೆಯ ಶತಮಾನದ ಮೊದರ‍್ದ ಬಾಗದಲ್ಲಿ ಸ್ಕಿನ್ನರ್ ಮೊದಲಾದ ಶಿಕ್ಶಣತಗ್ನರು ಮಕ್ಕಳ ಕಲಿಕಾ ಪ್ರಕ್ರಿಯೆಗಳನ್ನು ಆಳವಾಗಿ ಅದ್ಯಯನ ಮಾಡಿದರು. ಅವರ ಉದ್ದೇಶ ಜೀವಿಗಳು, ಮನುಶ್ಯರು ಹೇಗೆ ಕಲಿಯುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಾಗಿತ್ತು. ಸ್ಕಿನ್ನರ್, ಪಾವ್ಲೋವ್, ಕೊಹ್ಲರ್, ಗೆಹ್ಲೋಟ್ ಮೊದಲಾದ ವಿದ್ವಾಂಸರು ನಾಯಿ, ಚಿಂಪಾಂಜಿ, ಪಾರಿವಾಳ ಮೊದಲಾದ ಜೀವಿಗಳ ಮೇಲೆ ಪ್ರಯೋಗಗಳನ್ನು ಮಾಡಿದರು. ಆ ಮೂಲಕ ಜೀವಿಗಳು, ಮಕ್ಕಳು ಅನುಕರಣೆಯಿಂದ ಕಲಿಯುತ್ತಾರೆ ಎಂಬುದನ್ನು ವಿವರಿಸಿದರು. ಹೀಗೆ ಅನುಕರಣೆಯ ಮೂಲಕ ಏನೇನನ್ನು ಕಲಿಯುತ್ತಾರೆ ಎಂದು ಹೇಳುವಾಗ ಮಕ್ಕಳು ಬಾಶೆಯನ್ನೂ ಅನುಕರಣೆಯ ಮೂಲಕ ಕಲಿಯುತ್ತಾರೆ ಎಂದು ಹೇಳಲಾಯಿತು. ಹೀಗಾಗಿ ಇಂದು ಸಮಾಜದಲ್ಲಿ ನೆಲೆ ನಿಂತಿರುವ ಮಕ್ಕಳು ಬಾಶೆಯನ್ನು ಅನುಕರಣೆಯಿಂದ ಕಲಿಯುತ್ತಾರೆ ಎಂಬ ನಂಬಿಕೆಗೆ ಸಿದ್ದಾಂತದ ಹಿನ್ನೆಲೆ ದೊರಕಿತು. ವಾಸ್ತವದಲ್ಲಿ ಸ್ಕಿನ್ನರ್ ಮೊದಲಾದ ಯಾರೆ ವಿದ್ವಾಂಸರು ಮಕ್ಕಳು ಬಾಶೆಯನ್ನು ಕಲಿಯುವುದರ ಮೇಲೆ ಪ್ರಯೋಗಗಳನ್ನು ಮಾಡಿರಲಿಲ್ಲ.
ಆನಂತರ ಬಾಶಾವಿಗ್ನಾನಿಯಾದ ನೋಮ್ ಚಾಮಸ್ಕಿ ಇದನ್ನು ಪ್ರಶ್ನಿಸಿದನು. ಮಕ್ಕಳು ಬಾಶೆಯನ್ನು ಅನುಕರಣೆಯಿಂದ ಕಲಿಯುವುದಿಲ್ಲ ಎಂದು ಈತನು ವಿವರಿಸಿದನು. ಇದಕ್ಕೆ ಪೂರಕವಾಗಿ ಇಂಗ್ಲೀಶಿನಿಂದ ಹಲವು ಮಕ್ಕಳ ಬಾಶೆಯ ವ್ಯಾಕರಣಾತ್ಮಕವಲ್ಲದ ಇಲ್ಲವೆ ‘ತಪ್ಪು’ ಬಳಕೆಗಳನ್ನು ಕಲೆಹಾಕಿ, ಈ ತಪ್ಪುಗಳು ಅನುಕರಣೆಯಿಂದ ಬಂದಿಲ್ಲ ಮತ್ತು ಒಂದು ಬಗೆಯ ರಾಚನಿಕತೆ ಇವುಗಳ ಹಿಂದೆ ಇದೆ ಎಂಬುದನ್ನು ತೋರಿಸಿಕೊಟ್ಟನು. ಆ ಮೂಲಕ ಬಾಶೆ ಕಲಿಕೆಯಲ್ಲ ಬದಲಿಗೆ ಅದೊಂದು ಗಳಿಕೆ, ಅದು ಪ್ರಯತ್ನಪೂರಕ ಕಲಿಯುವುದಲ್ಲ ಬದಲಿಗೆ ಆಂತರಿಕ ಸಾದನವೊಂದರ ಸಹಾಯದಿಂದ ಮಕ್ಕಳು ಸಹಜವಾಗಿ ಗಳಿಸಿಕೊಳ್ಳುವಂತದ್ದು ಎಂಬುದನ್ನು ತೋರಿಸಿದನು. ಮನೆ ಪರಿಸರದಲ್ಲಿ ಒದಗುವ ಅತ್ಯಂತ ಸೀಮಿತ ಪ್ರಮಾಣದ ಬಾಶೆಯನ್ನು ಪಡೆದ ಮಕ್ಕಳು ಅಗಾದ ಅನಿಯಮಿತ ಸಾದ್ಯತೆಯ ಬಾಶೆಯನ್ನು ಬಳಸಲು ಶಕ್ತರಾಗುತ್ತಾರೆ ಎಂಬುದೆ ಒಂದು ಮಹತ್ವದ ವಿಚಾರವಾಗಿದ್ದಿತು. ಅದರೊಂದಿಗೆ ವ್ಯಾಕರಣಾತ್ಮಕವಲ್ಲದ ರೂಪಗಳನ್ನು ಬಳಸುವಾಗ ಅವುಗಳಿಗೆ ಯಾವುದು ಅನುಕರಣೆಗೆ ಮೂಲವಾಗಿದ್ದಿತು ಎಂಬ ಪ್ರಶ್ನೆ ಬಹು ಮುಕ್ಯವಾಯಿತು.
ವಾಸ್ತವದಲ್ಲಿ ಮನುಶ್ಯ ಪ್ರಾಣಿಗೆ ದೇಹಿಕ ರಚನೆಯ ಬಾಗವಾಗಿ ಬಹು ಹಿಂದೆ ಬಾಶೆಯ ಶಕ್ತಿ ಇರಲಿಲ್ಲ. ಆನಂತರ ಕಾಲಾನುಕ್ರಮದಲ್ಲಿ ಎಂತದೊ ಪ್ರಾಕ್ರುತಿಕ ಬೆಳವಣಿಗೆಯ ಬಾಗವಾಗಿ ಮಾತನಾಡುವ ಮತ್ತು ವಿಚಾರಿಸುವ ಶಕ್ತಿಗಳು ಮನುಶ್ಯರಿಗೆ ದಕ್ಕಿದವು. ಇದನ್ನೊಂದು ಪ್ರಾಕ್ರುತಿಕ ಬೆಳವಣಿಗೆ ಎಂದೆ ಹೇಳಬೇಕು. ಇಂತಾ ಬೆಳವಣಿಗೆಯೊಂದು ನಡೆದಾಗಲೂ ಮನುಶ್ಯ ಪ್ರಾಣಿಗೆ ಅನುಕರಿಸಲು ಏನೂ ಇರಲಾರದು. ಹಾಗಾಗಿ ಬಾಶೆಯ ಬೆಳವಣಿಗೆಯನ್ನು ಒಂದು ಪ್ರಾಕ್ರುತಿಕ ಬೆಳವಣಿಗೆ ಎನ್ನಬೇಕಾಗುತ್ತದೆ. ಇದನ್ನು ಒಪ್ಪುವುದಾದರೆ ಇಂದಿನ ಮಗು ಬಾಶೆಯನ್ನು ಪಡೆದುಕೊಳ್ಳುವ ಪ್ರಕ್ರಿಯೆಯೂ ಅಶ್ಟು ಸರಳವಾಗಿ ಇರಲಿಕ್ಕಿಲ್ಲ.
ಮಕ್ಕಳ ಬಾಶೆಯ ಗಳಿಸುವ ಸಾಮಾನ್ಯ ವಯಸ್ಸು ಸುಮಾರು ಎಂಟು ತಿಂಗಳಿನಿಂದ ನಾಲ್ಕು ವರುಶಗಳವರೆಗೆ ಎಂದು ಅಂದಾಜಾಗಿ ಹೇಳಬಹುದು. ಬಾಶಾವಿಗ್ನಾನದಾಗ ನಾಲ್ಕು ವರುಶದ ಮಗುವನ್ನು ಬಾಶಾವಯಿಗ್ನಾನಿಕ ಪ್ರವುಡ, ಬಾಶಿಕ ವಯಸ್ಕ (Linguistic Adult) ಎನ್ನಲಾಗುವುದು. ಹೀಗೆ ಬಾಶೆ ಪಡೆಯುವಿಕೆಯ ಪ್ರಕ್ರಿಯೆಯಲ್ಲಿ ಇರುವ ಮಕ್ಕಳು ಕೆಲವು ವ್ಯಾಕರಣಾತ್ಮಕ ‘ತಪ್ಪು’ಗಳನ್ನು ಮಾಡುತ್ತವೆ.
ಮಗುವೊಂದು ಅಪ್ಪ ಬಂದಿರುವ ಮತ್ತು ಬರುವ ಈ ಎರಡು ಕ್ರಿಯೆಗಳ ನಡುವಿನ ವ್ಯತ್ಯಾಸದ ಅರಿವು ಇಲ್ಲದ ಕಾಲಕ್ಕೆ ಅಪ್ಪ ಬಂತು ಎಂಬ ಸಾಮಾನ್ಯ ರೂಪವೊಂದನ್ನು ನಿನ್ನೆ ಬಂದಿರುವ ಮತ್ತು ನಾಳೆ ಬರುವ ಈ ಎರಡೂ ಕ್ರಿಯೆಗಳಿಗೂ ಬಳಸಬಹುದು. ಅಂದರೆ ಬೂತಕಾಲ ರೂಪವೊಂದನ್ನು ಬವಿಶ್ಯತ್ತಿನ ಕೆಲಸವೊಂದಕ್ಕೆ ಬಳಸುವುದು. ಇದು ವ್ಯಾಕರಣಾತ್ಮಕವಲ್ಲದ ರೂಪ. ಇದಕ್ಕಿಂತ ಒಳ್ಳೆಯ ಉದಾಹರಣೆ ಎಂದರೆ ನಾಯಿ ಬಂದುರು ಎನ್ನುವಂತಾ ಮಾನವ ಬಹುವಚನ ರೂಪವನ್ನು ಮಾನವವಲ್ಲದವುಗಳಿಗೆ ಹಾಕಿ ಬಳಸುವಂತಾ ರೂಪಗಳು. ಇಂತಾ ‘ತಪ್ಪು’ ಪ್ರಯೋಗಗಳನ್ನು ಬಹುಶಾ ಪ್ರತಿಯೊಂದು ಮಗುವೂ ಮಾಡುತ್ತದೆ ಮತ್ತು ಇಂತಾ ತಪ್ಪುಗಳನ್ನು ಬಹುತೇಕರು ಸಹಜವಾಗಿಯೆ ಗಮನಿಸಿರುತ್ತಾರೆ. ಮಕ್ಕಳು ಅನುಕರಣೆಯಿಂದ ಬಾಶೆಯನ್ನು ಕಲಿಯುತ್ತಾರೆ ಎಂದಾದರೆ ಇಂತಾ ರೂಪಗಳನ್ನು ಬಳಸುವುದಕ್ಕೆ ಮಕ್ಕಳಿಗೆ ಯಾವುದು ಪ್ರೇರಕವಾಯಿತು ಎಂಬುದು ದೊಡ್ಡ ಪ್ರಶ್ನೆ. ಅನುಕರಿಸಲು ಬಳಕೆ ಇರಬೇಕು. ಕನ್ನಡ ಬರುವ ಯಾರೂ ಇಂತಾ ರೂಪಗಳನ್ನು ಬಳಸಲಾರರು ಎಂದಾದರೆ ಮಕ್ಕಳಿಗೆ ಅನುಕರಿಸಲು ಇಂತಾ ಬಳಕೆಗಳು ಸಿಗಲಾರವು. ಹಾಗಾದರೆ ಮಕ್ಕಳಿಗೆ ಇಂತಾ ಪ್ರಯೋಗಗಳನ್ನು ಅನುಕರಿಸಲು ಯಾವ ಮೂಲವಿದ್ದಿರಲು ಸಾದ್ಯ? ಇಲ್ಲಿ ಅನುಕರಣಾ ಸಿದ್ದಾಂತ ಬಿದ್ದುಹೋಗುತ್ತದೆ.
ಇದಕ್ಕೆ ಪ್ರತಿಯಾಗಿ ಚಾಮಸ್ಕಿ ಬಾಶೆಯ ಪಡೆಯುವಿಕೆ ಪ್ರಕ್ರಿಯೆ ಬಗೆಗೆ ಬಿನ್ನವಾದ ಆಲೋಚನೆಯೊಂದನ್ನು ಮುಂದಿಡುತ್ತಾರೆ. ಬಾಶೆ ಪಡೆಯುವ ಪ್ರಕ್ರಿಯೆ ಕಲಿಕೆ ಅಲ್ಲ, ಅಂದರೆ ಅದು ಬಾಹ್ಯ ಕಲಿಕೆಗಳಲ್ಲಿ ಒಂದು ಅಲ್ಲ ಬದಲಿಗೆ ಅದೊಂದು ಆಂತರಿಕ ಗಳಿಕೆಗಳಲ್ಲಿ ಒಂದು ಎಂದು ವಿವರಿಸಿದನು. ಮಕ್ಕಳು ಬಾಶೆಯ ಗಳಿಕೆಗೆ ಅನುವಾಗುವಂತಾ ಸಾರ್‍ತ್ಯವನ್ನು ಹುಟ್ಟಿನಿಂದಲೆ ಅಂದರೆ ಪ್ರಾಕ್ರುತಿಕವಾಗಿಯೆ ಪಡೆದುಕೊಂಡು ಬಂದಿರುತ್ತಾರೆ. ಇಂತದೊಂದು ಸಾದನವು ಮಕ್ಕಳ ದೇಹರಚನೆಯ ಬಾಗವಾಗಿ ಇರುತ್ತದೆ. ಈ ಸಾದನಕ್ಕೆ ಬವುತಿಕ ಜಗತ್ತಿನಿಂದ ಚೋದಕದಂತೆ ಬಾಶಾಬಳಕೆ ಸಿಕ್ಕಾಗ ಅದನ್ನು ಬಳಸಿಕೊಳ್ಳುತ್ತದೆ. ಬಾಶೆಯ ರಚನೆಯನ್ನು ಈ ಸಾದನ ತೀವ್ರವಾಗಿ ಗ್ರಹಿಸುತ್ತದೆ. ಆದ್ದರಿಂದ ಮಗುವಿಗೆ ದೊರೆಯುವ ಅತ್ಯಂತ ಕಡಿಮೆ ಬಾಶೆಯನ್ನು ಬಳಸಿಕೊಂಡು ಆ ಮಗು ಅನಂತ ಅವಕಾಶದ ಬಾಶೆಯ ಬಳಕೆಗೆ ಸಿದ್ದವಾಗುತ್ತದೆ.
ಮಕ್ಕಳು ಬಾಶೆಯನ್ನು ಗಳಿಸಿಕೊಳ್ಳುವ ಈ ಪ್ರಕ್ರಿಯೆಯನ್ನು ಚಾಮಸ್ಕಿ ಬಹು ವಿಶದವಾಗಿ ಪ್ರತಿಶ್ಟಾಪಿಸುತ್ತಾರೆ. ಮಕ್ಕಳಿಗೆ ‘ಮಾತಿನ ಗಳಿಕಾ ಸಾದನ’ವೊಂದು ಹುಟ್ಟಿನಿಂದಲೆ ಬಂದಿರುತ್ತದೆ ಎಂಬುದು ಚಾಮಸ್ಕಿಯ ವಾದ. ಇದನ್ನು ಅವನು ‘ಲಾಂಗ್ವೇಜ್ ಅಕ್ವಿಸೇಶನ್ ಡಿವಯ್ಸ್’ (Language Aquisation Devise- LAD) ಎಂದು ಹೆಸರಿಸುತ್ತಾನೆ. ಇದನ್ನು ಕನ್ನಡದಾಗ ‘ಮಾತಿನ ಗಳಿಕಾ ಸಾದನ’ ಎಂದು ಕರೆಯಬಹುದು. ಇದನ್ನು ಸಣ್ರೂಪದಲ್ಲಿ ‘ಮಾಗಸ’ ಎಂದು ಕರೆಯಬಹುದು. ಈ ಮಾಗಸ ಬಾಶೆಯ ರಚನೆಯನ್ನು ಗ್ರಹಿಸುವ ಸಾರ್‍ತ್ಯವನ್ನು ಹೊಂದಿರುತ್ತದೆ ಎಂಬುದು ಚಾಮಸ್ಕಿಯ ಚಿಂತನೆ. ಮಗುವಿಗೆ ಮನೆಯ ಪರಿಸರದಲ್ಲಿ ದೊರೆಯುವ ಮಾತು ಸೀಮಿತವಾಗಿದ್ದರೂ ಆ ಮಗು ಆ ಸೀಮಿತ ಬಾಶೆಯಲ್ಲಿ ಬಳಕೆಯಾಗುವ ಪದಗಳನ್ನು ಮಾತ್ರ ಅವಲೋಕಿಸದೆ ಪದಗಳು, ಪ್ರತ್ಯಯಗಳು ಮತ್ತು ಅವುಗಳ ವ್ಯಾಕರಣ ನಿಯಮಗಳನ್ನು, ಅವುಗಳ ಪ್ರಯೋಗಗಳನ್ನು ಪಡೆದುಕೊಳ್ಳುತ್ತದೆ. ಆದ್ದರಿಂದಲೆ ಇದುವರೆಗೆ ಬಳಸದ ಪದವೊಂದನ್ನು ಬಳಸಿದಾಗ ಮಗು ಪರಿಸರದ ಹಿನ್ನೆಲೆಯಲ್ಲಿ ಅರ‍್ತ ಮಾಡಿಕೊಳ್ಳಬಲ್ಲದು ಮತ್ತು ಅದನ್ನು ಬೇರೆ ರೀತಿಯಲ್ಲಿ ಬಳಸಬಲ್ಲದು, ಅದು ನಾಮಪದವೆ, ಕ್ರಿಯಾಪದವೆ ಎಂಬುದನ್ನು ಸ್ಪಶ್ಟವಾಗಿ ಬಳಸಬಲ್ಲದು. ಅಂದರೆ ಅದುವರೆಗೆ ಬಳಸದ ಒಂದು ಕ್ರಿಯಾಪದವನ್ನು ಬರುವ ಕಾಲ (ಬವಿಶತ್‌ಕಾಲ)ದಲ್ಲಿ ಬಳಸಿದಾಗ ಮಗು ತನ್ನಶ್ಟಕ್ಕೆ ತಾನು ಆ ಕ್ರಿಯಾಪದವನ್ನು ಕಳೆದ ಕಾಲ (ಬೂತಕಾಲ)ದಲ್ಲಿ ಬಳಸುವುದಕ್ಕೆ ಸಾದ್ಯವಾಗುತ್ತದೆ. ಅಂದರೆ ಮಗು ಆ ಪದದ ಕಳೆದ ಕಾಲದ ಬಳಕೆಯನ್ನು ಕೇಳಿರುವುದಿಲ್ಲ, ಬರುವ ಕಾಲದ ಬಳಕೆಯನ್ನು ಮಾತ್ರ ಕೇಳಿರುತ್ತದೆ. ಆದರೆ ಮಾಗಸ ಈಗಾಗಲೆ ಅದೆ ರಚನೆ ಇರುವ ಕ್ರಿಯಾಪದಗಳನ್ನು ಬಿನ್ನ ಕಾಲಗಳಲ್ಲಿ ಹೇಗೆ ಬಳಸಬೇಕು ಎಂಬ ಅರಿವನ್ನು ಪಡೆದುಕೊಂಡಿರುವುದರಿಂದ ಹೊಸಪದವೊಂದನ್ನು ಬಿನ್ನ ಕಾಲಗಳಲ್ಲಿ ಹೇಗೆ ಬಳಸಬೇಕು ಎಂಬುದಕ್ಕೆ ಅನುಕರಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಮಾಗಸದ ಬಾಶಾ ರಚನೆಯ ಅರಿವಿನ ಬಲದಿಂದ ಮಗು ಅದನ್ನು ಬಳಸಲು ಸಾದ್ಯವಾಗುತ್ತದೆ.
ಈ ಅಂಕಣದ ಹಿಂದಿನ ಅಂಕಣಗಳು
ತಾಯ್ಮಾತು-ತಾಯಿ ಮಾತು-ಗುರ‍್ತಿಕೆ
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.