ಮಾತಿನ ಮಹಿಮೆ ಏನೆಂದು ತಿಳಿಸಿಕೊಡುವುದೇ ಕೃತಿಯ ಉದ್ದೇಶ


"ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ. ಅದು ಮಾತು. ಮಾತು ಮನೆ ಕೆಡಿಸೀತು ಅಂತಾರೆ. ಆದರೆ ಮಾತೇ ಆಡದಿದ್ದರೆ ನಾವೇ ಪ್ರೀತಿಯಿಂದ ಕಟ್ಟಿದ ಸಂಬಂಧಗಳ ಸೌಧಗಳು ನಮ್ಮ ಕಣ್ಣೆದುರಲ್ಲೇ ಕುಸಿದು ಹೋಗುವುದು ನಿಶ್ಚಿತ. ಮಾತಿನ ಮಹಿಮೆ ಏನೆಂದು ತಿಳಿಸಿಕೊಡುವುದೇ ಈ ಪುಸ್ತಕದ ಉದ್ದೇಶ," ಎನ್ನುತ್ತಾರೆ ಕನಕ ರಾಜು. ಅವರು ವಿರೂಪಾಕ್ಷ ದೇವರಮನೆ ಅವರ ‘ಸ್ವಲ್ಪ ಮಾತಾಡಿ ಪ್ಲೀಸ್’ ಕೃತಿ ಕುರಿತು ಬರೆದ ವಿಮರ್ಶೆ.

ಒಂದು ಸಂಬಂಧ ಬೆಳೆದು ಗಟ್ಟಿಗೊಳ್ಳಬೇಕಾದ್ರೆ ವರ್ಷಗಳೇ ಹಿಡಿಯುತ್ತೆ. ಆದರೂ ಅದು ಉಳಿದು ಇನ್ನಷ್ಟು ಸಧೃಡವಾಗಬೇಕಾದ್ರೆ ನಿರಂತರ ಪ್ರೀತಿ, ವಿಶ್ವಾಸ, ಮುಖ್ಯವಾಗಿ ಮಾತುಗಳು ಬೇಕು. ಎಲ್ಲ ಸಂಬಂಧಗಳನ್ನು ಜೀವಂತವಾಗಿಡಬಲ್ಲ ದಿವ್ಯಶಕ್ತಿ ಇರುವುದು ಈ ಮಾತುಗಳಿಗೆ ಮಾತ್ರ. ಅಂಥಹ ಮಾತುಗಳೇ ಇರದ ಬರಡು ವಾತಾವರಣದಲ್ಲಿ ಸಂಬಂಧಗಳ ಕೊಂಡಿಗಳು ಶಿಥಿಲಗೊಂಡು ಒಂದೊಂದಾಗಿ ಕಳಚಿಕೊಳ್ಳುತ್ತಾ ಒಂದು ದಿನ ನಾವು ಅಕ್ಷರಶಃ ಒಂಟಿಯಾಗಿ ಬಿಡುತ್ತೇವೆ.

ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ. ಅದು ಮಾತು. ಮಾತು ಮನೆ ಕೆಡಿಸೀತು ಅಂತಾರೆ. ಆದರೆ ಮಾತೇ ಆಡದಿದ್ದರೆ ನಾವೇ ಪ್ರೀತಿಯಿಂದ ಕಟ್ಟಿದ ಸಂಬಂಧಗಳ ಸೌಧಗಳು ನಮ್ಮ ಕಣ್ಣೆದುರಲ್ಲೇ ಕುಸಿದು ಹೋಗುವುದು ನಿಶ್ಚಿತ. ಮಾತಿನ ಮಹಿಮೆ ಏನೆಂದು ತಿಳಿಸಿಕೊಡುವುದೇ ಈ ಪುಸ್ತಕದ ಉದ್ದೇಶ.

ಈ ಪುಸ್ತಕ ಓದಿ ಕೆಳಗಿಡುವಷ್ಟರಲ್ಲಿ ನಿಮ್ಮೆಲ್ಲಾ ಸಂಬಂಧಗಳಲ್ಲಿ ಚೈತನ್ಯ ತುಂಬಿ ನಿಮ್ಮಲ್ಲಿ ನವ ಜೀವನೋತ್ಸಾಹ ತುಂಬುವುದು ಗ್ಯಾರಂಟಿ. ಇಟ್ಸ್ ಮೈ ಪ್ರಾಮಿಸ್. ನಿಮ್ಮೆಲ್ಲಾ ಸಂತಸಗಳಿಗೆ ಕಾರಣವಾಗಬಲ್ಲ ಸಂಬಂಧಗಳ ಕೊಂಡಿಗಳು ಕಳಚುವ ಮುನ್ನ..

ಎಲ್ಲರೂ ಓದಲೇಬೇಕಾದ ಪುಸ್ತಕ‌ 'ಸ್ವಲ್ಪ ಮಾತಾಡಿ ಪ್ಲೀಸ್.

MORE FEATURES

ಅಭಿನಯವನ್ನು ಯಾರಿಂದಲೂ ಕಲಿಸಲಾಗುವುದಿಲ್ಲ

26-03-2025 ಬೆಂಗಳೂರು

“ಮನುಷ್ಯ ಅಭಿನಯಿಸುವುದರ ಮೂಲಕ, ಕೃತಕವಾಗಿ ಸಂಘರ್ಷಿಸುವುದರ ಮೂಲಕ ಮಾತ್ರ ಬದುಕುವುದಿಲ್ಲ. ಅವನ ಮೌನ, ಆಳದ ನೋವು, ...

ಕನ್ನಡ ಚಿತ್ರರಂಗದ ಕುರಿತು 150 ಆಸಕ್ತಿಕರ ಮಾಹಿತಿಗಳಿವೆ

26-03-2025 ಬೆಂಗಳೂರು

“ಈ ಪುಸ್ತಕದಲ್ಲಿ ಸಾಕಷ್ಟು ವಿಷಯಗಳನ್ನು ಕ್ರೋಢೀಕರಿಸುವ ಪ್ರಯತ್ನ ಮಾಡಲಾಗಿದೆ. ಹಾಗಂತ ಇದೇ ಅಂತಿಮ ಅಥವಾ ಪರಿಪೂರ್...

ಕಾದಂಬರಿಯಲ್ಲಿ ಬರುವ ಸಾಮ್ರಾಜ್ಯ, ರಾಜ, ಮಂತ್ರಿಯೆಲ್ಲ ಇತಿಹಾಸದಲ್ಲಿ ಇಲ್ಲ

26-03-2025 ಬೆಂಗಳೂರು

“ಕಾದಂಬರಿಯಲ್ಲಿ ಬರುವ ಕಾಡಿನ ವಿವರಣೆಗಳು, ಮೂಢನಂಬಿಕೆಗಳು, ನಾಟಿ ವೈದ್ಯಕೀಯ, ಪ್ರಾಣಿಗಳ ದಾಳಿ, ಪಿಶಾಚಿಯ ಕಲ್ಪನೆ...