Date: 02-12-2024
Location: ಬೆಂಗಳೂರು
ಬೆಂಗಳೂರು: ಲೇಖಕ, ಅನುವಾದಕ ಪ್ರಮೋದ ಮುತಾಲಿಕ್ ಅವರು ಇಂದು(2024, ಡಿ.02) ಇಹಲೋಕವನ್ನು ತ್ಯಜಿಸಿದ್ದಾರೆ.
ಪ್ರಮೋದ ಮುತಾಲಿಕ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ 37 ವರ್ಷ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಅವರು ಅನುವಾದ ಮತ್ತು ವಿಮರ್ಶೆಯಲ್ಲಿ ಸಾಕಷ್ಟು ಕೃಷಿ ಮಾಡಿದ್ದರು. ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಮತ್ತು ಕನ್ನಡದ ಶ್ರೇಷ್ಠ ಕೃತಿಗಳನ್ನು ಇಂಗ್ಲೀಷಗೆ ಅನುವಾದಿಸಿದ್ದರು. ‘ಚಿನುವ ಅಚಿಬೆ’ಯ Things Fall Apart, ಆರ್. ಕೆ. ನಾರಾಯಣರ The Guide, ಸ್ಕಾಟ್ ಫಿಜರಾಲ್ಡ್ ರ Great Gatsby ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಇದಲ್ಲದೆ ಜಗತ್ತಿನ ಅಪರೂಪದ ಕಥೆಗಳನ್ನು ಕನ್ನಡಕ್ಕೆ ಕಣಜ ಎಂಬ ಹೆಸರಿನಲ್ಲಿ ಪರಿಚಯಿಸಿದ್ದರು. ಶಿವರಾಮ ಕಾರಂತರ ಅಳಿದ ಮೇಲೆ ಕಾದಂಬರಿಯನ್ನು Beyond Life ಹೆಸರಿನಲ್ಲಿ ಇಂಗ್ಲಿಷ್ ಗೆ ಅನುವಾದಿಸಿದ್ದರು. ಹೆಚ್. ನರಸಿಂಹಯ್ಯನವರ ಆತ್ಮ ಕಥೆ ಯನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಯಶವಂತ ಚಿತ್ತಾಲರ ಕಥೆಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಇತ್ತೀಚಿಗೆ ಜಗತ್ತಿನ ಶ್ರೇಷ್ಠ ಕವನಗಳನ್ನು ಅನುವಾದಿಸಿ ಕ್ಷಿತಿಜ ಎಂಬ ಸಂಕಲನದಲ್ಲಿ ಪ್ರಕಟಿಸಿದ್ದಾರೆ. ಇವರ 'ಬಿಯಾಂಡ್ ಲೈಫ್' ಇಂಗ್ಲಿಷ್ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅಮೆರಿಕ ಕನ್ನಡ ದತ್ತಿ ನಿಧಿ ಪ್ರಶಸ್ತಿ ಲಭಿಸಿದೆ.
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ ಪ್ರಕಟವಾಗಿದ್ದು, ಒಟ್ಟು ನಾಲ್ಕುವರ್ಷಗಳ ಪ್ರ...
ಬೆಂಗಳೂರು: ಹಾಡ್ಲಹಳ್ಳಿ ನಾಗರಾಜ್ ಅವರ ಆಪ್ತ ಬಳಗ ಮತ್ತು ಸಾಹಿತ್ಯಾಸಕ್ತರ ವತಿಯಿಂದ ಶ್ರೀ ಹಾಡ್ಲಹಳ್ಳಿ ನಾಗರಾಜ್ ಅವರ ಅಭ...
ದಾವಣಗೆರೆ: `ವಿಶ್ವಕನ್ನಡ ಸಮ್ಮೇಳನವು ಮಧ್ಯ ಕರ್ನಾಟಕದಲ್ಲಿ ದಶಕದ ಹಿಂದೆಯೇ ನಡೆಯಬೇಕಿತ್ತು. ಆದರೆ ಹಿಂದಿನ ಸರ್ಕಾರಗಳು ಈ...
©2024 Book Brahma Private Limited.