Date: 01-12-2024
Location: ಬೆಂಗಳೂರು
ದಾವಣಗೆರೆ: `ವಿಶ್ವಕನ್ನಡ ಸಮ್ಮೇಳನವು ಮಧ್ಯ ಕರ್ನಾಟಕದಲ್ಲಿ ದಶಕದ ಹಿಂದೆಯೇ ನಡೆಯಬೇಕಿತ್ತು. ಆದರೆ ಹಿಂದಿನ ಸರ್ಕಾರಗಳು ಈ ವಿಚಾರದಲ್ಲಿ ತಪ್ಪು ನಿರ್ಧಾರ ಕೈಗೊಂಡಿವೆ. ಇದೀಗ ದಾವಣಗೆರೆಯಲ್ಲಿ ಸಮ್ಮೇಳನವನ್ನು ನಡೆಸುವಂತೆ ಚಳವಳಿ ನಡೆಸುವ ಅಗತ್ಯವಿದೆ' ಎಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.
ಅವರು ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಗೌರಮ್ಮ ಪಿ.ಮೋತಿ ರಾಮರಾವ್ ಚಾರಿಟಬಲ್ ವತಿಯಿಂದ ಗುರುವಾರ ಏರ್ಪಡಿಸಿದ್ದ “ಮಹಲಿಂಗರಂಗ', 'ಗ್ರಾಮೀಣ ಸಿರಿ' ಮತ್ತು 'ನಗರ ಸಿರಿ' ಪ್ರಶಸ್ತಿ ಪ್ರದಾನ ಮತ್ತು 'ಸಂಗಮ ಸಿರಿ' ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
'ಕನ್ನಡವನ್ನು ಉಳಿಸುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕಿದೆ. ಜಗತ್ತಿನಲ್ಲಿ ಎಲ್ಲಿಯೂ ಕನ್ನಡದಷ್ಟು ಸುಂದರವಾದ ಭಾಷೆ ಇಲ್ಲ. ಕನ್ನಡ ಭಾಷಾ ಬಳಕೆ ಮಾಡುವಂತೆ ಮಕ್ಕಳಿಗೂ ಅರಿವು ಮೂಡಿಸಬೇಕು' ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಕರ್ತ ಬಾ.ಮ. ಬಸವರಾಜಯ್ಯ ಅವರು ಮಾತನಾಡಿ, ‘ರಂಗಾಯಣ ದಾವಣಗೆರೆಯಲ್ಲಿ ಮಲ್ಲಿಕಾರ್ಜುನ ಕಡಕೊಳ ಅವರ ಪರಿಶ್ರಮದ ಫಲವಾಗಿ ವೃತ್ತಿ ರಂಗಭೂಮಿ ಸ್ಥಾಪನೆ ಆಗಿದೆ. ಮಹಾಲಿಂಗರಂಗ ಅವರ ಹೆಸರಿನಲಿ ಪ್ರದಾನ ಮಾಡುವ ಪ್ರಶಸ್ತಿಗೆ ಕಡಕೊಳ ಅವರು ಅರ್ಹರು. ಅಂಕಣಕಾರ ಹಾಗೂ ಕಥೆಗಾರರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಈ ನೆಲದ ಸೊಗಡು ಅವರ ಸಾಹಿತ್ಯದಲ್ಲಿ ಕಾಣುತ್ತಿದೆ' ಎಂದರು.
ಸಮಾರಂಭದಲ್ಲಿ ಮಲ್ಲಿಕಾರ್ಜುನ ಕಡಕೋಳ ಅವರಿಗೆ ಮಹಾಲಿಂಗರಂಗ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿ.ಸಿ.ಮಂಗಳಾ, ಬಿ.ಕೆ.ಜಯಪ್ರಕಾಶ್ ಅಗಸನಕಟ್ಟೆ, ಕೆ.ಟಿ.ಗೀತಾ, ಕೆ.ಪಂಚಾಕ್ಷರಿ, ಹೊದಿಗೆರೆ ಪ್ರಭಾಕರ್, ನಾಗೇಶ ಶಾಸ್ತ್ರಿ, ಸುನೀತಾ ರಾಜು, ಕಾಟಮ್ಮ, ಎ.ಸಿ. ಚಂದ್ರಕಲ, ಬಿ.ಚಂದ್ರಶೇಖರಾಚಾರಿ, ಪುರವಂತರ ಪರಮೇಶ್ವರಪ್ಪ, ಸಿದ್ದಮ್ಮ ಭುವನೇಶ್ವರಪ್ಪ ಅವರಿಗೆ 'ಗ್ರಾಮೀಣ | ಸಿರಿ' ಪ್ರಶಸ್ತಿ ಹಾಗೂ ಕಲಾವಿದ ಎಚ್. ಶಶಿಧರ, ವಿದುಷಿ ಶೋಭಾ ರಂಗನಾಥ್ ಅವರಿಗೆ 'ನಗರ ಸಿರಿ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವ- ಪ್ಪ, ಗೌರಮ್ಮ ಪಿ.ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್ ಸದಸ್ಯ ಮೋತಿ ಆರ್.ಸುಬ್ರಹ್ಮಣ್ಯ ರಾವ್, ಪ್ರೊ.ಸಿ.ವಿ. ಪಾಟೀಲ್, ಸಾಹಿತಿ ಎನ್.ಟಿ.ಎರಿಸ್ವಾಮಿ ಉಪಸ್ಥಿತರಿದ್ದರು.
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ ಪ್ರಕಟವಾಗಿದ್ದು, ಒಟ್ಟು ನಾಲ್ಕುವರ್ಷಗಳ ಪ್ರ...
ಬೆಂಗಳೂರು: ಲೇಖಕ, ಅನುವಾದಕ ಪ್ರಮೋದ ಮುತಾಲಿಕ್ ಅವರು ಇಂದು(2024, ಡಿ.02) ಇಹಲೋಕವನ್ನು ತ್ಯಜಿಸಿದ್ದಾರೆ. ಪ್ರಮೋದ ಮ...
ಬೆಂಗಳೂರು: ಹಾಡ್ಲಹಳ್ಳಿ ನಾಗರಾಜ್ ಅವರ ಆಪ್ತ ಬಳಗ ಮತ್ತು ಸಾಹಿತ್ಯಾಸಕ್ತರ ವತಿಯಿಂದ ಶ್ರೀ ಹಾಡ್ಲಹಳ್ಳಿ ನಾಗರಾಜ್ ಅವರ ಅಭ...
©2024 Book Brahma Private Limited.