ಅನುಪಮಾ ಪ್ರಸಾದ್ ಸೇರಿದಂತೆ ನಾಲ್ವರಿಗೆ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿ

Date: 02-12-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ ಪ್ರಕಟವಾಗಿದ್ದು, ಒಟ್ಟು ನಾಲ್ಕುವರ್ಷಗಳ ಪ್ರಶಸ್ತಿ ಘೋಷಣೆಯಾಗಿದೆ.

2020, 2021, 2022 ಹಾಗೂ 2023 ನೆಯ ಸಾಲಿಗೆ ಅನುಕ್ರಮವಾಗಿ ಅಲಕಾ ಕಟ್ಟೆಮನೆಯವರ ‘ಹೊರಳು ಹಾದಿಯ ನೋಟ’ ಕಥಾ ಸಂಕಲನ, ಎಲ್.ವಿ.ಶಾಂತಕುಮಾರಿ ಯವರ ‘ಎಪಿಕ್ಟೆಟಸ್’ ಅನುವಾದ ಕೃತಿ, ಹೆಚ್.ಆರ್. ಸುಜಾತಾ ಅವರ ‘ಮಣಿಬಾಲೆ’ ಕಾದಂಬರಿ ಹಾಗೂ ಅನುಪಮಾ ಪ್ರಸಾದ್ ಅವರ ‘ಚೋದ್ಯ’ ಕಥಾಸಂಕಲನ ಆಯ್ಕೆಯಾಗಿವೆ ಎಂದು ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್.ಪುಷ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ.

ಇದೇ ತಿಂಗಳ 8ರಂದು ಬೆಳಿಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಖ್ಯಾತ ನ್ಯಾಯವಾದಿಗಳಾದ ಹೇಮಲತಾ ಮಹಿಷಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಮರ್ಶಕ ಬಂಜಗೆರೆ ಜಯಪ್ರಕಾಶ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.

ಖ್ಯಾತ ಅನುವಾದಕಿ ಹಾಗೂ ಕತೆ, ಕಾದಂಬರಿಗಾರ್ತಿಯಾಗಿದ್ದ ಎಚ್.ವಿ.ಸಾವಿತ್ರಮ್ಮನ ಹೆಸರಿನಲ್ಲಿ ಕರ್ನಾಟಕ ಲೇಖಕಿಯರ ಸಂಘದಲ್ಲಿ ದತ್ತಿಯನ್ನು ಇಡಲಾಗಿದ್ದು, ಅನುವಾದ ಸಾಹಿತ್ಯ ಹಾಗೂ ಕತೆ, ಕಾದಂಬರಿ ಸೇರಿದಂತೆ ಒಂದೊಂದು ಪ್ರಕಾರಗಳಿಗೆ ಪ್ರತಿ ವರ್ಷವೂ ಪ್ರಶಸ್ತಿ ನೀಡಲಾಗುತ್ತಿದೆ. ಒಟ್ಟು ನಾಲ್ಕು ವರ್ಷಗಳಿಗೆ ಕೃತಿಗಳನ್ನು ಆಹ್ವಾನಿಸಿದ್ದು, ಆಯಾ ಪ್ರಕಾರಕ್ಕೆ ಸಾಕಷ್ಟು ಕೃತಿಗಳು ಬಂದಿದ್ದು, ಅಂತಿಮವಾಗಿ ಈ ನಾಲ್ಕು ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿಯಲ್ಲಿ ಪತ್ರಕರ್ತ ಹಾಗೂ ಕತೆಗಾರ ದೇವುಪತ್ತಾರ, ಉಪನ್ಯಾಸಕರಾದ ರುದ್ರೇಶ್ ಅದರಂಗಿ ಹಾಗೂ ಕಿರುತೆರೆ ನಟಿ, ಉಪನ್ಯಾಸಕಿ ವತ್ಸಲಾ ಮೋಹನ್ ಇದ್ದರು ಎಂದೂ ಪುಷ್ಪ ತಿಳಿಸಿದ್ದಾರೆ.

MORE NEWS

ಲೇಖಕ, ಅನುವಾದಕ ಪ್ರಮೋದ ಮುತಾಲಿಕ್ ಇನ್ನಿಲ್ಲ

02-12-2024 ಬೆಂಗಳೂರು

ಬೆಂಗಳೂರು: ಲೇಖಕ, ಅನುವಾದಕ ಪ್ರಮೋದ ಮುತಾಲಿಕ್ ಅವರು ಇಂದು(2024, ಡಿ.02) ಇಹಲೋಕವನ್ನು ತ್ಯಜಿಸಿದ್ದಾರೆ. ಪ್ರಮೋದ ಮ...

ಹಾಡ್ಲಹಳ್ಳಿ ಅವರ ಸಜ್ಜನಿಕೆ ಮುಖ್ಯವಾಹಿನಿಯಿಂದ ದೂರ ಮಾಡಿರಬಹುದು; ಪುರುಷೋತ್ತಮ ಬಿಳಿಮಲೆ

01-12-2024 ಬೆಂಗಳೂರು

ಬೆಂಗಳೂರು: ಹಾಡ್ಲಹಳ್ಳಿ ನಾಗರಾಜ್ ಅವರ ಆಪ್ತ ಬಳಗ ಮತ್ತು ಸಾಹಿತ್ಯಾಸಕ್ತರ ವತಿಯಿಂದ ಶ್ರೀ ಹಾಡ್ಲಹಳ್ಳಿ ನಾಗರಾಜ್ ಅವರ ಅಭ...

ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಚಳವಳಿಯ ಅಗತ್ಯವಿದೆ; ಕುಂ.ವೀ 

01-12-2024 ಬೆಂಗಳೂರು

ದಾವಣಗೆರೆ: `ವಿಶ್ವಕನ್ನಡ ಸಮ್ಮೇಳನವು ಮಧ್ಯ ಕರ್ನಾಟಕದಲ್ಲಿ ದಶಕದ ಹಿಂದೆಯೇ ನಡೆಯಬೇಕಿತ್ತು. ಆದರೆ ಹಿಂದಿನ ಸರ್ಕಾರಗಳು ಈ...