Date: 25-12-2024
Location: ಬೆಂಗಳೂರು
ಬೆಂಗಳೂರು: ಪ್ರೊ.ಕಿರಂ ನೆನಪಿನ ಕವಿಗೋಷ್ಠಿ ಮತ್ತು ಪ್ರೊ.ಕಿ.ರಂ ನಾಗರಾಜ ಸಂಸ್ಕೃತಿ ಪ್ರಶಸ್ತಿ ಪ್ರದಾನ ಸಮಾರಂಭವು 2024 ಡಿ.25 ಬುಧವಾರದಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕವಿ ಮತ್ತು ಪ್ರಜ್ಞಾಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಆರ್.ಕೆ. ಮಾತನಾಡಿ, "ಸಾಹಿತ್ಯ ಕ್ಷೇತ್ರದಲ್ಲಿ ನನ್ನನ್ನು ತಿದ್ದಿ ತೀಡಿದ ಗುರು ಕಿರಂ. ಅವರೊಂದಿಗೆ ವಾದ, ವಿವಾದ, ಜಗಳಗಳು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಬಹಳಷ್ಟು ನಡೆದಿವೆ. ಕಿರಂ ಸಾಹಿತ್ಯ ಕ್ಷೇತ್ರದಲ್ಲಿ ಎಂದಿಗೂ ಕೂಡ ಮರೆಯಲಾಗದ ವ್ಯಕ್ತಿ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಕ.ಸಾ.ಪರಿಷತ್ತು ನಿಕಟಪೂರ್ವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಅವರು ಮಾತನಾಡಿದರು.
ಕಿರಂ ಪ್ರಶಸ್ತಿಯನ್ನು ಕವಿ, ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರೊ. ಎಲ್.ಎನ್. ಮುಕುಂದರಾಜ ಅವರು ಜಾನಪದ ವಿದ್ವಾಂಸ ಡಾ.ಟಿ. ಗೋವಿಂದರಾಜು ಅವರಿಗೆ ಪ್ರಧಾನಿಸಿದರು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ಅಧ್ಯಾಪಕಿ ಕೆ.ಎನ್. ಸಹನ ಇಂಗ್ಲಿಷ್ ಅಧ್ಯಾಪಕಿ ಅವರು ಉಪಸ್ಥಿತರಿದ್ದರು.
ದೆಹಲಿ: ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಖಾಯಿಲೆಯಿಂದ ಬಳಲ...
ಬೆಂಗಳೂರು: ಸಮಾಜಮುಖಿ ವಾರ್ಷಿಕ ಕಥಾಪುರಸ್ಕಾರ-2024ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಐದು ಬಹುಮಾನಿತ ಕಥೆಗಳಿಗೆ ತಲಾ ...
"ಸಾಹಿತ್ಯ ದಿಗ್ಗಜ, ಬಹುಮುಖ ಪ್ರತಿಭೆ ಎಂ.ಟಿ.ವಾಸುದೇವನ್ ನಾಯರ್, ತಮ್ಮ 92ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನ...
©2024 Book Brahma Private Limited.