ಆರ್ಥಿಕ ಸುಧಾರಣೆಗಳ ಹರಿಕಾರ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಇನ್ನಿಲ್ಲ..

Date: 26-12-2024

Location: ಬೆಂಗಳೂರು


ದೆಹಲಿ: ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು.

2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. ಸಿಂಗ್ ಅವರು ಮೇ 22, 2004 ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2009ರಲ್ಲಿ ಅದೇ ದಿನಾಂಕದಂದು ಮತ್ತೊಮ್ಮೆ ಪ್ರಧಾನಿಯಾಗಿ 2 ನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ್ದರು.

1990 ರಲ್ಲಿ ಆರ್ಥಿಕ ಸುಧಾರಣೆಗಳು, ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ಮನಮೋಹನ್ ಸಿಂಗ್ ಹೊಸ ದಿಕ್ಕು ತೋರಿಸಿದ್ದರು.

MORE NEWS

ಸಮಾಜಮುಖಿ ವಾರ್ಷಿಕ ಕಥಾಪುರಸ್ಕಾರ-2024ಕ್ಕೆ ಅರ್ಜಿ ಆಹ್ವಾನ

26-12-2024 ಬೆಂಗಳೂರು

ಬೆಂಗಳೂರು: ಸಮಾಜಮುಖಿ ವಾರ್ಷಿಕ ಕಥಾಪುರಸ್ಕಾರ-2024ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಐದು ಬಹುಮಾನಿತ ಕಥೆಗಳಿಗೆ ತಲಾ ...

ಪ್ರೀತಿಯ ‘ವಾಸುವೇಟ್ಟಾ’ಗೆ ನುಡಿನಮನ..

26-12-2024 ಬೆಂಗಳೂರು

"ಸಾಹಿತ್ಯ ದಿಗ್ಗಜ, ಬಹುಮುಖ ಪ್ರತಿಭೆ ಎಂ.ಟಿ.ವಾಸುದೇವನ್ ನಾಯರ್, ತಮ್ಮ 92ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನ...

ಕಿ.ರಂ. ನಾಗರಾಜ ಪ್ರಶಸ್ತಿ ಪ್ರದಾನ ಸಮಾರಂಭ

25-12-2024 ಬೆಂಗಳೂರು

ಬೆಂಗಳೂರು: ಪ್ರೊ.ಕಿರಂ ನೆನಪಿನ ಕವಿಗೋಷ್ಠಿ ಮತ್ತು ಪ್ರೊ.ಕಿ.ರಂ ನಾಗರಾಜ ಸಂಸ್ಕೃತಿ ಪ್ರಶಸ್ತಿ ಪ್ರದಾನ ಸಮಾರಂಭವು 2024 ...