ಕನಾ೯ಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಎಚ್ ಎಲ್ ಪುಷ್ಪ ಆಯ್ಕೆ

Date: 18-09-2022

Location: ಬೆಂಗಳೂರು


ಲೇಖಕಿ ಎಚ್ ಎಲ್ ಪುಷ್ಪರವರು ಕನಾ೯ಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದಿದ್ದು, ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಎನ್.ಆರ್. ಕಾಲೊನಿಯಲ್ಲಿರುವ ಬಿ.‌ಎಂ.ಶ್ರೀ. ಪ್ರತಿಷ್ಠಾನದಲ್ಲಿ ಮತದಾನ ನಡೆದಿತು.

ರಾಜ್ಯದೆಲ್ಲೆಡೆಯಿಂದ 699 ಮತಗಳು ಚಲಾವಣೆಯಾಗಿದ್ದು, ಈ ಪೈಕಿ 44 ಮತಗಳು ತಿರಸ್ಕೃತಗೊಂಡಿವೆ. ಉಳಿದ ಮತಗಳ ಪೈಕಿ ಎಚ್ ಎಲ್ ಪುಷ್ಪ 342 ಮತಗಳನ್ನು ಪಡೆದು 62 ಮತಗಳ ಅಂತರದಿಂದ ಹಾಲಿ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್ ಅವರನ್ನು ಸೋಲಿಸಿದರು. ವನಮಾಲ ಅವರು 280 ಮತಗಳನ್ನು ಪಡೆದಿದ್ದರು. ಶೈಲಜಾ ಸುರೇಶ್ ಅವರು 33 ಮತಗಳನ್ನು ಗಳಿಸಿದರು.

ಎಚ್ ಎಲ್ ಪುಷ್ಪ ಹಾಗೂ ಸಂಘದ ಹಾಲಿ ಅಧ್ಯಕ್ಷರಾಗಿದ್ದ ವನಮಾಲ ಸಂಪನ್ನಕುಮಾರ್‌ ಅವರ ನಡುವೆ ನೇರ ಸ್ಪರ್ಧೆ ಏರ್ಪಟ್ಟು ಅಂತಿಮವಾಗಿ ಗೆಲುವು ಪುಷ್ಪ ಅವರ ಪಾಲಾಯಿತು.

ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ : ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್‌ 18ರಂದು ಎಚ್ ಎಲ್ ಪುಷ್ಪ ಜನಿಸಿದರು ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.

ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ (ವಿಮರ್ಶೆ) ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಪು.ತಿ.ನ.ಕಾವ್ಯ ಪುರಸ್ಕಾರ, ಕಡೆಂಗೋಡ್ಲು ಶಂಕರಭಟ್‌ ಕಾವ್ಯ ಪ್ರಶಸ್ತಿ, ಸಾರಂಗಮಠ ಪಾಟೀಲ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಎಚ್.ಎಲ್. ಪುಷ್ಪ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

MORE NEWS

ನಾಲ್ವಡಿಯವರನ್ನು ಕೇಂದ್ರವಾಗಿರಿಸಿಕೊಂಡ ಹಲವು ನಿರೂಪಣೆಗಳು

15-01-2025 ಬೆಂಗಳೂರು

“ಸದ್ಯ ದೊರೆಯುತ್ತಿರುವ ದಾಖಲೆಗಳನ್ನು ಆಧರಿಸಿ ಅವರೂ ಅವರ ಪರಿಸರದಲ್ಲಿದ್ದ ಅವರ ಬಳಗದವರೂ ಮತ್ತು ಹೊರಗಿನಿಂದ ಪ್ರಭ...

ಟೊಟೊ ಪುರಸ್ಕಾರ 2025: ಅಂತಿಮ ಸುತ್ತಿಗೆ ಸುವರ್ಣ ಚೆಲ್ಲೂರು, ವಿನಯ ಗುಂಟೆ, ಕಪಿಲಾ ಪಿ. ಹುಮನಾಬಾದೆ

15-01-2025 ಬೆಂಗಳೂರು

ಬೆಂಗಳೂರು: 2025ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಸಲ್ಲಿಸಿದ್ದ ಕನ್ನಡದ ಸೃಜನಶೀಲ ಯುವ ಬರಹಗಾರರ ಕಿರು ಪಟ್ಟಿ ಬಿಡುಗಡೆಯಾಗ...

‘2025ರ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಯ ಎರಡನೇ ಸುತ್ತಿಗೆ ಆಯ್ಕೆಯಾದ ಕವನ ಸಂಕಲನಗಳ ಪಟ್ಟಿ ಪ್ರಕಟ

14-01-2025 ಬೆಂಗಳೂರು

ಬೆಂಗಳೂರು: ಈ ಹೊತ್ತಿಗೆ ಪ್ರಕಾಶನವು ‘2025ರ ಈ ಹೊತ್ತಿಗೆ ಕಾವ್ಯ ಪ್ರಶಸ್ತಿಗಾಗಿ’ ಕವನ ಸಂಕಲನಗಳನ್ನು ಆಹ್...