ಕನ್ನಡಮುಂ ಪಾಗದಮುಂ

Date: 04-05-2024

Location: ಬೆಂಗಳೂರು


"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯಾದೆಯ ಹಲವು ಕಾರಣಗಳು ಕಂಡಿತ ಇದ್ದಿರಬಹುದು. ಈ ಎಲ್ಲ ಕಾರಣಗಳಿಂದ ಉತ್ತರವು ದಕ್ಶಿಣಕ್ಕೆ ನಿರಂತರ ಹರಿದುಬರುತ್ತಲಿದ್ದಿತು. ದಕ್ಶಿಣವೂ ಉತ್ತರಕ್ಕೆ ಹರಿದಿರಬಹುದೆನ್ನುವುದಕ್ಕೆ ಆದಾರಗಳೂ ಇವೆ, ಅವು ಈ ಬರವಣಿಗೆಯಲ್ಲಿ ಅಪ್ರಸ್ತುತ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಕನ್ನಡಮುಂ ಪಾಗದಮುಂ’ ಕುರಿತು ಬರೆದಿರುವ ಲೇಖನ.

ಪ್ರಾಕ್ರುತ ಎಂದರೆ ಒಂದು ಬಾಶೆ ಎಂಬುದು ಜನರಲ್ಲಾಗಿ ತಿಳುವಳಿಕೆಯ ಬಾಗವಾಗಿ ಇದ್ದರೂ ಅದು ಬಹು ಗೊಂದಲದ ಬಳಕೆ. ಪ್ರಾಕ್ರುತ ಒಂದು ಬಾಶೆಯೂ ಹವುದು, ಒಂದು ಬಾಶೆಗಳ ಗುಂಪೂ ಹವುದು, ಹಲವು ಮಾತಿನಬಗೆಗಳ ಗುಂಪೂ ಹವುದು, ಒಂದು ಬಾಶೆಯ ಬಳಕೆಯ ರೂಪವೂ ಹವುದು. ಈ ಎಲ್ಲ ವಿಚಾರಗಳು ಇವೆ. ಇವೆಲ್ಲವುಗಳನ್ನು ಇಲ್ಲಿ ಮಾತನಾಡುವುದು ಬೇಡ. ಆದರೆ, ಈ ವಿಬಿನ್ನ ವಿಚಾರಗಳು ನಮಗೆ ತಿಳಿದಿದ್ದರೆ ಪ್ರಾಕ್ರುತ ಕನ್ನಡದೊಂದಿಗೆ ಹೇಗೆ ಸಂರ‍್ಕಕ್ಕೆ ಬಂದಿತು ಮತ್ತು ನಂಟನ್ನು ಹೇಗೆ ಬೆಳೆಸಿಕೊಂಡಿತು ಎಂಬುದನ್ನು ಊಹಿಸಿಕೊಳ್ಳುವುದಕ್ಕೆ, ತಿಳಿದುಕೊಳ್ಳುವುದಕ್ಕೆ ಮತ್ತು ಸದ್ಯ ಇದರ ಬಗೆಗೆ ಇರಬಹುದಾದ ತಪ್ಪುತಪ್ಪಾದ ಮಾಹಿತಿಗಳ ಬಗೆಗೆ ತುಸು ತಿಳುವಳಿಕೆ ಬರಬಹುದು. ಇದೆಲ್ಲ ಮಾತನಾಡುವ ಮೊದಲು, ಪ್ರಾಕ್ರುತಕ್ಕೆ ಕನ್ನಡದಲ್ಲಿ ‘ಪಾಗದ’ ಎಂಬ ಹೆಸರನ್ನು ಬಳಸಲಾಗಿದೆ. ಕವಿರಾಜಮರ‍್ಗದಲ್ಲಿ ಈ ಶಬ್ದ ಬಳಕೆ ಆಗಿದೆ.

ಉತ್ತರ ದಕ್ಶಿಣ ಇವುಗಳ ನಡುವಿನ ಸಂಬಂದದ ಹಲವು ದಾರಿಗಳು ಇದ್ದವು. ಈ ದಾರಿಗಳನ್ನು ನೀರದಾರಿ ಮತ್ತು ನೆಲದಾರಿ ಎಂದು ಗುಂಪಿಸಬಹುದು. ಮೊದಮೊದಲು ನೀರದಾರಿ ಹೆಚ್ಚು ಬಳಕೆಯಲ್ಲಿದ್ದರಬಹುದು. ಆನಂತರ ನೀರಿನ ಮೇಲಿನ ಈ ಉತ್ತರ-ದಕ್ಶಿಣಗಳ ಸಂಬಂದದ ಆಚೆಗೆ ನೆಲದ ಮೇಲಿನ ಸಂಬಂದಗಳು ಮುನ್ನೆಲೆಗೆ ಬರತೊಡಗಿದವು. ಇತಿಹಾಸಪರ‍್ವ ಕಾಲದಲ್ಲಿ ನಾಗರಿಕತೆ ಬೆಳೆದಿದ್ದ ಕಾಲದಲ್ಲಿ ನಂಬಿಕೆ, ಮತಪಂತಗಳು ಬೆಳೆದ ಕಾಲದಲ್ಲಿ ಉತ್ತರ ಮತ್ತು ದಕ್ಶಿಣ ಇವುಗಳ ತಿಳುವಳಿಕೆ ಪರಸ್ಪರರಿಗೆ ಇದ್ದಿತು. ಉತ್ತರದವರಿಗೆ ದಕ್ಶಿಣವೆಂದರೆ ಒಂದು ಬಗೆಯ ಕುತೂಹಲವಿದ್ದಿದ್ದಿರಬೇಕು. ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯಾದೆಯ ಹಲವು ಕಾರಣಗಳು ಕಂಡಿತ ಇದ್ದಿರಬಹುದು. ಈ ಎಲ್ಲ ಕಾರಣಗಳಿಂದ ಉತ್ತರವು ದಕ್ಶಿಣಕ್ಕೆ ನಿರಂತರ ಹರಿದುಬರುತ್ತಲಿದ್ದಿತು. ದಕ್ಶಿಣವೂ ಉತ್ತರಕ್ಕೆ ಹರಿದಿರಬಹುದೆನ್ನುವುದಕ್ಕೆ ಆದಾರಗಳೂ ಇವೆ, ಅವು ಈ ಬರವಣಿಗೆಯಲ್ಲಿ ಅಪ್ರಸ್ತುತ.

ಹೀಗೆ ಉತ್ತರದಿಂದ ದಕ್ಶಿಣಕ್ಕೆ ಹರಪ್ಪೋತ್ತರ ಚಲನೆಯಲ್ಲಿ ಪಾಗದವು ಹರಿದುಬಂದಿರುವುದು ಸ್ಪಶ್ಟ. ಬಹಳಶ್ಟು ಗುಂಪುಗಳಲ್ಲಿ ದಕ್ಶಿಣಕ್ಕೆ ಬಂದು ನೆಲೆ ನಿಂತಿರಬೇಕು. ಹೀಗೆ ಹರಿದುಬಂದವರಲ್ಲಿ ಬಾಶೆಯನ್ನು ಹೊತ್ತು ತಂದು ಇಲ್ಲಿ ಪ್ರಬಾವಿಯಾಗುವಶ್ಟು ಮಟ್ಟಿಗೆ ತಂದವರು ಯಾರು? ಇದು ಮುಕ್ಯವಾದ ಪ್ರಶ್ನೆ. ಸಾಮಾನ್ಯರು, ಸಣ್ಣಸಣ್ಣ ವ್ಯಕ್ತಿಗಳು ಬಂದು ಹೋದರೆ ಬಾಶೆಯ ಪ್ರಬಾವ ಅಶ್ಟು ಆಗಲು ಸಾದ್ಯವಿಲ್ಲ. ಈಗ ಗುಜರಾತಿ, ರಾಜಸ್ತಾನಿ ಮೊದಲಾದ ಬಾಶೆಗಳು ಇದ್ದ ಹಾಗೆ. ಕನ್ನಡ ಮಾತಾಡುವ ಪರಿಸರಕ್ಕೆ ಈ ಬಾಶೆಗಳು ಕಳೆದ ಕೆಲವು ನೂರು ವರುಶಗಳಿಂದಲೂ ಸಂರ‍್ಕವನ್ನು ಹೊಂದಿವೆ ಮತ್ತು ಕಡಿಮೆ ಎಂದರೂ ನಾಲ್ಕಯ್ದು ನೂರು ವರುಶಗಳ ಹಿಂದೆಯೆ ಈ ಬಾಶೆಯನ್ನಾಡುವವರು ಇಲ್ಲಿ ನೆಲೆಸಿದ್ದರು ಎನ್ನುವುದಕ್ಕೂ ಆದಾರಗಳು ಇವೆ. ಹದಿನೇಳನೆ ಶತಮಾನದಲ್ಲಿ ಸುರಪುರ ಸಂಸ್ತಾನದಲ್ಲಿ ದೊರೆಗೆ ಸಾಲ ಕೊಡುವಶ್ಟು ಪ್ರಬಾವಿಯಾಗಿದ್ದ ವ್ಯಕ್ತಿಯ ದಾಕಲೆ ಸಿಗುತ್ತದೆ. ಆದರೆ, ಕನ್ನಡದ ಮೇಲೆ ಈ ಬಾಶೆಗಳು ಯಾವುದೆ ಪ್ರಬಾವ ಬೀರಿರುವುದು ಕಾಣಿಸುವುದಿಲ್ಲ, ಇಲ್ಲವೆ ಇದುವರೆಗೆ ಯಾರೂ ಇಂತ ಪ್ರಬಾವವನ್ನು ವರದಿ ಮಾಡಿಲ್ಲ. ಕೆಲವು ಶಬ್ದಗಳು, ಬಳಕೆಗಳು ಬಂದಿರಬಹುದು ಮಾತ್ರ. ಹಾಗಾದರೆ, ಪಾಗದವು ಉತ್ತರದಿಂದ ದಕ್ಶಿಣಕ್ಕೆ ಹೀಗೆ ಬಂದಾಗ ಇಲ್ಲಿಗೆ ಪ್ರಬಾವಿಯಾಗಿ ಬರುವುದು ಯಾರ ಮೂಲಕ? ಇದು ಮುಕ್ಯವಾದ ಪ್ರಶ್ನೆ.

ಅದ್ಯಯನಗಳಿಲ್ಲದ ಈ ಕ್ಶೇತ್ರದಲ್ಲಿ ನನ್ನ ಅನುಮಾನವೆಂದರೆ ಮತಪಂತಗಳು ಈ ಪ್ರಬಾವಿ ಸ್ತಾನವನ್ನು ಪಡೆದುಕೊಂಡಿದ್ದಿರಬಹುದು. ನನ್ನ ತಿಳುವಳಿಕೆ ಪ್ರಕಾರ ಶಿವ ದಕ್ಶಿಣಕ್ಕೆ ಬಂದು ಇಲ್ಲಿ ಹೆಚ್ಚು ಪ್ರಬಾವ ಬೀರಿ ನೆಲೆಯೂರಿದ ಪಂತ. ಅದರಂತೆಯೆ ಜಯ್ನ ಮತ್ತು ಬವುದ್ದ ಕೂಡ ಕ್ರಿಸ್ತಪರ‍್ವ ಬಹು ಹಿಂದಿನ ಕಾಲದಲ್ಲಿಯೆ ಪ್ರಬಾವಿಯಾಗಿ ಈ ನೆಲದಲ್ಲಿ ಕಂಡುಬರುತ್ತವೆ. ಇವುಗಳ ಮೂಲಕವೆ ಕನ್ನಡಕ್ಕೆ ಪಾಗದದ ನಂಟು ಬೆಳೆದಿದೆ. ಮುಂದೆ ಇದು ಅಸೋಕನ ಕಾಲದಲ್ಲಿ ರಾಜ್ಯರಚನೆಯ ಪ್ರಬಾವವನ್ನೂ ಪಡೆದುಕೊಳ್ಳುತ್ತದೆ. ಈ ವೇಳೆಗೆ, ಅಂದರೆ ಕ್ರಿಸ್ತಪರ‍್ವದ ನಾಲ್ಕಾರು ಶತಮಾನಗಳಲ್ಲಿ ವ್ಯಾಪಕವಾದ ಕೊಡುಕೊಳೆ ನಡೆಯುತ್ತದೆ. ಇದರಿಂದಾಗಿ ಉತ್ತರದ ಮತಪಂತಗಳ ಜೊತೆಗೆ ತಾತ್ವಿಕತೆ, ಅದರ ಜೊತೆಗೆ ತತ್ವಶಾಸ್ತ್ರ, ಕಾವ್ಯಮೀಮಾಂಸೆ, ವ್ಯಾಕರಣ ಮೊದಲಾದ ವಿವಿದ ವಿಶಯಗಳಲ್ಲಿನ ವಿದ್ವತ್ತು ಕೂಡ ಹರಿದುಬರುತ್ತದೆ. ಕನಗನ ಹಳ್ಳಿಯಲ್ಲಿನ ಬವುದ್ದ ಸ್ತೂಪ, ಬೆಳ್ಗೊಳ, ಕೊಪಣದಂತ ಮಹತ್ವದ ಜಯ್ನ ಕೇಂದ್ರಗಳು, ಇನ್ನೂ ಹಲವೆಡೆ ಇದ್ದ ಬವುದ್ದ ಮತ್ತು ಜಯ್ನ ಕೇಂದ್ರಗಳು ಇದೆಲ್ಲವನ್ನೂ ಎತ್ತಿ ಹಿಡಿಯುತ್ತವೆ. ಅದರೊಟ್ಟಿಗೆ ಕ್ರಿಸ್ತಶಕದ ಎಡಬಲದಲ್ಲಿಯೆ ಕನ್ನಡದಲ್ಲಿ ದ್ವನಿವಿಗ್ನಾನ ಬೆಳೆದಿರುವುದಕ್ಕೆ ಆದಾರಗಳಿವೆ. ಕನಗನ ಹಳ್ಳಿಯ ಸ್ತೂಪ ವಿವಿದ ಬಗೆಯ ಗ್ನಾನಶಾಕೆಗಳು ಒಟ್ಟೊಟ್ಟಿಗೆ ಬೆಳೆದು ಬಂದಿರುವುದಕ್ಕೆ ದೊಡ್ಡ ಆದಾರಗಳನ್ನು ತೋರಿಸುತ್ತದೆ. ಅಲ್ಲದೆ, ಕನಗನ ಹಳ್ಳಿಯಲ್ಲಿನ ಶಾಸನಗಳ ಬರಹ ಅದಾಗಲೆ ಪಾಗದ ಮತ್ತು ದಕ್ಶಿಣದ ಕನ್ನಡ, ತೆಲುಗುಗಳು ಪರಸ್ಪರ ಸಂರ‍್ಕವನ್ನು ಹೊಂದಿದ್ದವು ಎಂದು ದಾಕಲೆಗಳನ್ನು ತೋರಿಸುತ್ತವೆ. ಹಾಗಾದರೆ, ಕ್ರಿಸ್ತಶಕದ ಕಾಲಕ್ಕೆ ಕನ್ನಡ ಮತ್ತು ಪಾಗದಗಳ ನಡುವೆ ಆಳವಾದ ಮತ್ತು ಅಗಲವಾದ ಸಂಬಂದ ಬೆಳೆದಿದ್ದಿತು ಎಂಬುದು ಇದರಿಂದ ಸ್ಪಶ್ಟವಾಗುತ್ತದೆ.

ಇಲ್ಲಿ, ಒಂದು ಸಮಸ್ಯೆಯನ್ನೂ ಪ್ರಸ್ತಾವಿಸಬೇಕು. ಇದು ಈ ಬರವಣಿಗೆಯ ಸಮಸ್ಯೆಯೂ ಆಗುತ್ತದೆ. ಅದೆಂದರೆ, ಬಾಶೆಗಳ ನಡುವಿನ ಸಂಬಂದದ ಬಗೆಗೆ ಮಾತನಾಡುವಾಗ ಬಾಶಿಕ ಆಕರಗಳನ್ನು ಹೆಚ್ಚಾಗಿ ಒದಗಿಸಬೇಕು. ಆದರೆ, ಈ ಬರಹ ಹಾಗೆ ಬಾಶಿಕ ಆಕರಗಳನ್ನು ಒದಗಿಸುತ್ತಿಲ್ಲ. ಇದಕ್ಕೆ ಮುಕ್ಯವಾದ ಕಾರಣವೆಂದರೆ ಹೇಳಿಕೊಳ್ಳುವಂತ ಅದ್ಯಯನಗಳು ಈ ಕ್ಶೇತ್ರದಲ್ಲಿ ಇಲ್ಲದಿರುವುದು. ಇನ್ನೊಂದು ಕನ್ನಡ ವಿದ್ವತ್ತಿನ ಬಹುದೊಡ್ಡ ಸಮಸ್ಯೆ ಮತ್ತು ತಪ್ಪು ಏನೆಂದರೆ ಕನ್ನಡ ಮತ್ತು ಉತ್ತರದ ನಡುವಿನ ಸಂಬಂದವನ್ನು ಕನ್ನಡ ಮತ್ತು ಸಂಸ್ಕೃತ ಇವುಗಳ ಸಂಬಂದ ಎಂದು ಮಾತ್ರ ಅರ‍್ತ ಮಾಡಿಕೊಂಡು ಬರೆಯುತ್ತಿರುವುದು. ವಾಸ್ತವದಲ್ಲಿ ಸಂಸ್ಕೃತದಿಂದ ಬಂದ ಪದಗಳು ಎಂದು ವಿವರಿಸುತ್ತಿರುವವುಗಳಲ್ಲಿ ಹೆಚ್ಚಿನ ಪದಗಳು ಪಾಗದದಿಂದಲೆ ಬಂದಿವೆ. ಇದಕ್ಕೆ ಹಲವು ಆದಾರಗಳು ಸಿಗಬಹುದು. ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಪದಗಳಲ್ಲಿ ದ್ವನಿ ಬದಲಾವಣೆಯನ್ನು ವಿವರಿಸುವುದಕ್ಕಿಂತ ಇವೆ ಪದಗಳನ್ನು ಪಾಗದದಿಂದ ಬಂದಿವೆ ಎಂದು ದ್ವನಿ ಬದಲಾವಣೆಯನ್ನು ವಿವರಿಸಿದರೆ ಹೆಚ್ಚು ಸರಳವೆನಿಸುತ್ತವೆ. ಹಾಗಾಗಿ, ಈ ಬದಲಾವಣೆಗಳನ್ನು ಅದ್ಯಯನ ಮಾಡಬೇಕಾದ ಅವಶ್ಯಕತೆ ಇದೆ. ಸಂಸ್ಕೃತದ ವಿಜಾತಿ ಒತ್ತಕ್ಕರಗಳು ಪಾಗದದಲ್ಲಿಯೆ ಸಜಾತಿ ಒತ್ತಕ್ಕರಗಳಾಗಿ ಬಳಕೆಯಲ್ಲಿದ್ದಿರಬೇಕು.

ಇದರಲ್ಲಿ ಇನ್ನೊಂದು ಸಮಸ್ಯೆಯೂ ಇದೆ. ಪಾಗದವನ್ನು ಯಾರು ಮಾತನಾಡುತ್ತಿದ್ದರು? ಪಾಗದವನ್ನು ಇಂಡೊರ‍್ಯನ್ ಮಾತುಗ ಸಮುದಾಯದವರೆ ಮಾತನಾಡುತ್ತಿದ್ದರೆ? ಇಲ್ಲವೆ ದ್ರಾವಿಡ ಮೊದಲಾಗಿ ಅಂದಿಗೆ ಬಾರತದಲ್ಲಿ ಇದ್ದ ವಿವಿದ ಮಾತುಗ ಸಮುದಾಯಗಳು ಮಾತನಾಡುತ್ತಿದ್ದವೆ ಎಂಬುದೂ ಅಸ್ಪಶ್ಟ. ನಮ್ಮ ಅದ್ಯಯನದ ದಾರಿಯಲ್ಲಿ ಇದು ದೊಡ್ಡ ಸಮಸ್ಯೆ.

ಈ ಅಂಕಣದ ಹಿಂದಿನ ಬರೆಹಗಳು:
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...