Date: 13-05-2023
Location: ಬೆಂಗಳೂರು
''ನಾಮಪದದ ಎಣಿಕೆಯನ್ನು ಮಾಡುವುದಕ್ಕೆ ನಾಮಪದಗಳ ಮೇಲೆ ಬರುವ ಬಹುವಚನ ಬೇರೆ. ವಾಕ್ಯದಲ್ಲಿನ ಕರ‍್ತ್ರುವಿನ ಗುಣಸ್ವಬಾವವನ್ನು ಹೊತ್ತುಕೊಂಡು ಕ್ರಿಯಾಪದದ ಮೇಲೆ ಬರುವ (ಲಿಂಗ-)ವಚನ ಪ್ರತ್ಯಯ ಬೇರೆ. ನಾಮಪದದ ಮೇಲೆ ಏಕವಚನಕ್ಕೆ ಬೇರೆ ಪ್ರತ್ಯಯವಿಲ್ಲ ಮತ್ತು ಬಹುವಚನಕ್ಕೆ ಪ್ರತ್ಯಯ ಇದೆ,'' ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕನ್ನಡದಲ್ಲಿ ವಚನ ವ್ಯವಸ್ತೆ' ಎಂಬ ವಿಚಾರ ಕುರಿತು ಬರೆದಿದ್ದಾರೆ.
ಕನ್ನಡದಲ್ಲಿ ವಾಕ್ಯದಲ್ಲಿ ಇರುವ ಕರ‍್ತ್ರುವಿನ ಗುಣಲಕ್ಶಣಗಳನ್ನು ಕ್ರಿಯಾಪದ ಹೊತ್ತುಕೊಳ್ಳುತ್ತದೆ. ಇದರಲ್ಲಿ ಈ ಹಿಂದಿನ ಬರವಣಿಗೆಯಲ್ಲಿ ನೋಡಿದಂತೆ ಲಿಂಗ ಅಂತಹದೊಂದು ಲಕ್ಶಣ, ಇನ್ನೊಂದು ವಚನ. ಈ ಹಿಂದೆ ನಾಮಪದಗಳ ಮೇಲೆ ಬರುವ ಬಹುವಚನ ಪ್ರತ್ಯಯದ ಕುರಿತು ಪರಿಚಯಿಸಿಕೊಂಡಿದೆ. ಇವತ್ತಿನ ಬರವಣಿಗೆಯಲ್ಲಿ ಕ್ರಿಯಾಪದದ ಮೇಲೆ ಬರುವ ವಚನ ಪ್ರತ್ಯಯಗಳ ಕುರಿತು ಮಾತನಾಡೋಣ.
ನಾಮಪದದ ಎಣಿಕೆಯನ್ನು ಮಾಡುವುದಕ್ಕೆ ನಾಮಪದಗಳ ಮೇಲೆ ಬರುವ ಬಹುವಚನ ಬೇರೆ. ವಾಕ್ಯದಲ್ಲಿನ ಕರ‍್ತ್ರುವಿನ ಗುಣಸ್ವಬಾವವನ್ನು ಹೊತ್ತುಕೊಂಡು ಕ್ರಿಯಾಪದದ ಮೇಲೆ ಬರುವ (ಲಿಂಗ-)ವಚನ ಪ್ರತ್ಯಯ ಬೇರೆ. ನಾಮಪದದ ಮೇಲೆ ಏಕವಚನಕ್ಕೆ ಬೇರೆ ಪ್ರತ್ಯಯವಿಲ್ಲ ಮತ್ತು ಬಹುವಚನಕ್ಕೆ ಪ್ರತ್ಯಯ ಇದೆ. ಆದರೆ, ಕರ‍್ತ್ರುವಿನ ಲಕ್ಶಣಗಳನ್ನು ಹೊರುವ ಕ್ರಿಯಾಪದದ ಮೇಲೆ ಏಕವಚನದಲ್ಲೂ ಬಹುವಚನದಲ್ಲೂ ಬೇರೆ ಬೇರೆ ಪ್ರತ್ಯಯಗಳು ಬಳಕೆಯಲ್ಲಿವೆ. ಆದರ, ಸಾಮಾನ್ಯವಾಗಿ ಈ ಪ್ರತ್ಯಯಗಳು ಪ್ರತ್ಯೇಕವಾಗಿ ವಚನವನ್ನು ಹೇಳುವುದಕ್ಕೆ ಬಳಕೆಯಾಗುವುದಿಲ್ಲ. ಬದಲಿಗ, ಪುರುಶ-ಲಿಂಗ-ವಚನ ಮೂರು ಅಂಶಗಳನ್ನು ಒಟ್ಟೊಟ್ಟಿಗೆ ವ್ಯಕ್ತಪಡಿಸುತ್ತದೆ.
ಈ ಬಳಕೆಯನ್ನು ಗಮನಿಸಿ,
ಅವಳು ಮನೆಗೆ ಬಂದಳು
ಅವಳು ಮನೆ+-ಗೆ ಬರು+-ದ್-+-ಅಳು
ಈ ವಾಕ್ಯದಲ್ಲಿ ಕ್ರಿಯಾಪದದ ಮೇಲೆ –ಅಳು ಎಂಬ ರೂಪ ಬಂದಿದೆ. ಇದು ಕರ‍್ತ್ರುವಿನ ಮೂರು ಗುಣಗಳನ್ನು ವ್ಯಕ್ತಪಡಿಸುತ್ತಿದೆ. ಈ ವಾಕ್ಯದಲ್ಲಿ ಕರ‍್ತ್ರುವಾಗಿರುವ ‘ಅವಳು’ ಇದು ಪ್ರತಮ ಪರುಶವೂ ಏಕವಚನವೂ ಸ್ತ್ರೀಲಿಂಗವೂ ಆಗಿದೆ. ಇದರಂತೆಯೆ ಉಳಿದ ಪ್ರತ್ಯಯಗಳನ್ನು ಅರಿತುಕೊಳ್ಳಬಹುದು. ಮುಂದೆ ಉಳಿದ ಉದಾಹರಣೆಗಳನ್ನು ನೋಡಬಹುದು. ಅದರಂತೆಯೆ, ಕೆಳಗಿನ ಬಳಕೆಗಳಲ್ಲಿ,
ಅವನು ಮನೆಗೆ ಬಂದನು
ಅವನು ಮನೆ+-ಗೆ ಬರು+-ದ್-+-ಅನು
ಇಲ್ಲಿ –ಅನು ಎಂಬುದು ಪ್ರತಮ ಪರುಶ, ಏಕವಚನ, ಪುಲ್ಲಿಂಗವಾಗಿದೆ.
ಅವರು ಮನೆಗೆ ಬಂದರು
ಅವರು ಮನೆ+-ಗೆ ಬರು+-ದ್-+-ಅರು
ವಾಕ್ಯದಲ್ಲಿ ವಚನವು ಬೇರೆಯಾಗಿದೆ. ಹಾಗಾಗಿ, -ಅರು ಎಂಬ ರೂಪವು ಪ್ರತಮ ಪುರುಶ ಬಹುವಚನ ಮಾನವ ಲಿಂಗ ಎಂದಾಗುತ್ತದೆ. ಹಾಗೆಯೆ, ಪುರುಶ ಬೇರೆಯಾದಾಗ ಬದಲಾಗುವ ಪ್ರತ್ಯಯ ರೂಪಗಳನ್ನೂ ಗಮನಿಸಬಹುದು.
ನಾವು ಮನೆಗೆ ಬಂದೆವು
ನಾವು ಮನೆ+-ಗೆ ಬರು+-ದ್-+-ಎವು
ನೀವು ಮನೆಗೆ ಬಂದಿರಿ
ನೀವು ಮನೆ+-ಗೆ ಬರು+-ದ್-+-ಇರಿ
ಇಲ್ಲಿ ಬಂದಿರುವ ಉತ್ತಮ ಪುರುಶಕ್ಕೆ ಏಕವಚನದಲ್ಲಿ –ಎ ಎಂಬ ರೂಪ ಮತ್ತು ಮದ್ಯಮ ಪುರುಶ ಬಹುವಚನಕ್ಕೆ –ಇರಿ ಎಂಬ ರೂಪ ಬಂದಿದೆ
ಕನ್ನಡದಲ್ಲಿ ಮಾನವ ಮತ್ತು ಮಾನವವಲ್ಲದ ಎಂಬ ಮೂಲಬೂತವಾದ ಎರಡು ಲಿಂಗಗಳು ಮತ್ತು ಮಾನವದಲ್ಲಿ ಸ್ತ್ರೀಲಿಂಗ-ಪುಲ್ಲಿಂಗ ಎಂಬ ಎರಡು ಲಿಂಗಗಳು ಇವೆ. ಇದಕ್ಕೆ ತಕ್ಕಂತೆ ವಚನಗಳ ಹಂಚಿಕೆ ಇರಬೇಕಾಗುತ್ತದೆ. ಯಾಕೆಂದರೆ, ಕ್ರಿಯಾಪದದ ಮೇಲೆ ಬರುವ ಲಿಂಗ ಮತ್ತು ವಚನ ಎರಡೂ ಒಟ್ಟೊಟ್ಟಿಗೆ ಬರುತ್ತವೆ. ಕನ್ನಡದಲ್ಲಿ ಮಾತ್ರವಲ್ಲದೆ ಜಗತ್ತಿನ ಹಲವು ಬಾಶೆಗಳಲ್ಲಿಯೂ ಲಿಂಗ-ವಚನ ಒಟ್ಟೊಟ್ಟಿಗೆ ಬರುವುದನ್ನು ಗಮನಿಸಬಹುದು. ಈ ಕೆಳಗೆ ಕನ್ನಡ ಮತ್ತು ಇಂಗ್ಲೀಶಿನ ಎರಡು ವಾಕ್ಯಗಳನ್ನು ಕೊಟ್ಟಿದೆ, ಗಮನಿಸಿ,
ಕನ್ನಡ ಇಂಗ್ಲೀಶು
ಅವಳು ಮನೆಗೆ ಬಂದಳು ಶೀ ಕೇಮ್ ಟು ಹೋಮ್
ಅವನು ಮನೆಗೆ ಬಂದನು ಹೀ ಕೇಮ್ ಟು ಹೋಮ್
ಮೇಲಿನ ಎರಡೂ ವಾಕ್ಯಗಳಲ್ಲಿ ಕನ್ನಡ ಮತ್ತು ಇಂಗ್ಲೀಶು ಎರಡರಲ್ಲಿಯೂ ಅವಳು-ಶೀ ಎಂಬ ಪದಗಳು ಒಟ್ಟೊಟ್ಟಿಗೆ ಏಕವಚನವೂ ಸ್ತ್ರೀಲಿಂಗವೂ ಆಗಿವೆ. ಅವನು-ಹೀ ಈ ಎರಡೂ ಒಟ್ಟೊಟ್ಟಿಗೆ ಏಕವಚನವೂ ಪುಲ್ಲಿಂಗವೂ ಆಗಿವೆ. ಇವುಗಳನ್ನು ಬೇರೆಯಾಗಿಸಲು ಸಾದ್ಯವಿಲ್ಲ. ಇನ್ನು ವಚನ ವಿನ್ಯಾಸವನ್ನು ಗಮನಿಸೋಣ.
ಈ ಮೇಲೆ ಹೇಳಿದಂತೆ ಕನ್ನಡದಲ್ಲಿ ಇರುವ ಮೂರು ಲಿಂಗಗಳಿಗೆ ಬರುವ ವಚನಗಳನ್ನು ಪರಿಕಿಸೋಣ. ಕನ್ನಡದಲ್ಲಿ ಏಕವಚನದಲ್ಲಿ ಮೂರು ಲಿಂಗಗಳು ಇವೆ. ಮಾನವದಲ್ಲಿ ಸ್ತ್ರೀಲಿಂಗ ಮತ್ತು ಪುಲ್ಲಿಂಗ ಎಂಬ ಎರಡು ಮತ್ತು
ನಪುಂಸಕ ಲಿಂಗ ಎಂಬ ಇನ್ನೊಂದು. ಈ ಮೂರು ಲಿಂಗಗಳಿಗೆ ಕನ್ನಡದಲ್ಲಿ ಪ್ರತ್ಯೇಕವಾದ ಮೂರು ವಚನಗಳ ರೂಪಗಳು ಬಳಕೆಯಲ್ಲಿವೆ. ಇದಕ್ಕೆದುರಾಗಿ ಬಹುವಚನದಲ್ಲಿ ಮಾನವ ಮತ್ತು ಮಾನವೇತರ ಎಂಬ ಎರಡು ಲಿಂಗಗಳು ಮಾತ್ರ ಕಾಣಿಸುತ್ತವೆ. ಅಂದರೆ ಬಹುವಚನದಲ್ಲಿ ಸ್ತ್ರೀಲಿಂಗ ಮತ್ತು ಪುಲ್ಲಿಂಗ ಎಂಬ ಪ್ರತ್ಯೇಕ ರೂಪಗಳು ಇಲ್ಲ. ಹಾಗಾಗಿ ಬಹುವಚನದಲ್ಲಿ ಎರಡು ವಚನ ರೂಪಗಳು ಮಾತ್ರ ಬಳಕೆಯಲ್ಲಿವೆ. ಈ ರೂಪಗಳಿಗೆ ಉದಾಹಣೆಗಳನ್ನು ಕೆಳಗೆ ಕೊಟ್ಟಿದೆ.
ಅವನು ಮನೆಗೆ ಬಂದನು -ಅನು
ಅವಳು ಮನೆಗೆ ಬಂದಳು -ಅಳು
ಅದು ಮನೆಗೆ ಬಂದಿತು -ಅದು (-ಅತು ಎಂಬ ರೂಪದಲ್ಲಿ ಇದು ಬಳಕೆಯಾಗುತ್ತದೆ)
ಅವರು ಮನೆಗೆ ಬಂದರು -ಅರು
ಅವು ಮನೆಗೆ ಬಂದವು -ಅವು
ಸಾಮಾನ್ಯವಾಗಿ ಕನ್ನಡದಲ್ಲಿ ಕರ‍್ತ್ರುವಿನ ವಚನವನ್ನು ವಾಕ್ಯದ ಕ್ರಿಯಾಪದ ಹೊತ್ತುಕೊಳ್ಳುತ್ತದೆ. ಹಾಗಾಗಿ, ಕರ‍್ತ್ರು ಬದಲಾಗುತ್ತಿದ್ದಂತೆ ಕ್ರಿಯಾಪದದ ರೂಪವೂ ಬದಲಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ ಅಪವಾದಗಳು ಇರುವುದಿಲ್ಲ. ಕರ‍್ತ್ರುವಿನ ಲಿಂಗದ ಪರಿಗಣನೆಯಲ್ಲಿ ಬದಲಾವಣೆ ಆದರೆ, ಅದು ಕ್ರಿಯಾಪದದ ರೂಪದ ಮೇಲೂ ಕಾಣಿಸುತ್ತದೆ. ಉದಾಹರಣೆಗೆ, ಕನ್ನಡದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಬಳಕೆಯಲ್ಲಿ ಕೆಲವೊಮ್ಮೆ ನಪುಂಸಕಲಿಂಗ ಬಳಕೆ ಆಗಬಹುದು. ಆತ್ಮೀಯ ಗೆಳೆಯರ ನಡುವೆ ನಪುಂಸಕಲಿಂಗದ ಬಳಕೆ ಆಗಬಹುದು.
ಅವನು ಬಂದ
ಅದು ಬಂತು
ಇಲ್ಲಿ ಕರ‍್ತ್ರುವಿನ ಲಿಂಗದ ಪರಿಗಣನೆ ಬದಲಾಗುತ್ತಿದ್ದಂತೆ ಅದರ ಪ್ರಬಾವ ಕ್ರಿಯಾಪದದಲ್ಲಿಯೂ ಕಂಡುಬರುತ್ತದೆ.
ದ್ರಾವಿಡದಲ್ಲಿ ವಚನ ವ್ಯವಸ್ತೆ ಹೆಚ್ಚೂ ಕಡಿಮೆ ಯಾವುದೆ ಬದಲಾವಣೆ ಇಲ್ಲದೆ ಒಂದೆ ತೆರನಾಗಿದೆ. ಆದರೆ, ಲಿಂಗವ್ಯವಸ್ತೆಯಲ್ಲಿ ವಿಬಿನ್ನ ಬಾಶೆಗಳು ವಿಬಿನ್ನ ರಚನೆಯನ್ನು ಹೊಂದಿವೆ. ಇದರಿಂದ ಒಂದು ಅಂಶ ಸ್ಪಶ್ಟವಾಗುತ್ತದೆ. ನಾಮಪದಗಳನ್ನು ಗುಂಪಿಸುವ ಅಂಶಗಳಲ್ಲಿ ಲಿಂಗ ಮತ್ತು ವಚನ ಇವು ಮುಕ್ಯವಾದವು. ಇದರಲ್ಲಿ ಲಿಂಗವು ವಿವಿದ ಬಾಶೆಗಳಲ್ಲಿ ಬಿನ್ನವಾಗಿದ್ದರೆ ವಚನ ವ್ಯವಸ್ತೆಯಲ್ಲಿ ಯಾವುದೆ ಬಗೆಯ ವ್ಯತ್ಯಾಸ ಕಾಣುವುದಿಲ್ಲ. ಇದರಿಂದ ಒಂದು ಮಹತ್ವದ ಅಂಶ ಗೊತ್ತಾಗುತ್ತದೆ. ಅದೆಂದರೆ, ದ್ರಾವಿಡದಲ್ಲಿ ವಚನ ವ್ಯವಸ್ತೆ ಬಹು ಹಳೆಯದು. ಮೂಲದ್ರಾವಿಡ
ಹಂತದಲ್ಲಿ ವ್ಯವಸ್ತಿತವಾಗಿ ಬೆಳೆದು ಬಳಕೆಯಲ್ಲಿದ್ದ ಇದು ಲಕ್ಶಣ ವಚನವಾಗಿರಬೇಕು. ಆದರೆ, ಲಿಂಗವ್ಯವಸ್ತೆ ವಚನ ವ್ಯವಸ್ತೆಯಶ್ಟು ವ್ಯವಸ್ತಿತವಾಗಿರಲಿಕ್ಕಿಲ್ಲ ಮತ್ತು ಲಿಂಗವ್ಯವಸ್ತೆ ವಚನ ವ್ಯವಸ್ತೆಯಶ್ಟು ಹಳೆಯದೂ ಆಗಿರಲಿಕ್ಕಿಲ್ಲ ಎಂಬುದು ಸ್ಪಶ್ಟವಾಗುತ್ತದೆ.
ಇಲ್ಲಿ ಒಂದು ಅನುಮಾನಕ್ಕೆ ಅವಕಾಶವಿದೆ. ಏಕವಚನದಲ್ಲಿ ಮೂರು ಲಿಂಗಗಳು ಮತ್ತು ಬಹುವಚನದಲ್ಲಿ ಎರಡು ಲಿಂಗಗಳು ಮಾತ್ರ ಯಾಕೆ ಎಂಬ ಪ್ರಶ್ನೆ ಬರುತ್ತದೆ. ಏಕವಚನ ಮತ್ತು ಬಹುವಚನಗಳಲ್ಲಿ ಎರಡೆರಡು ಲಿಂಗಗಳನ್ನು ಹೊಂದಿ ಹಂಚಿಕೆಯಲ್ಲಿ ವ್ಯತ್ಯಸ್ತವಾಗುವ ತೆಲುಗಿನಂತ ಬಾಶೆಗಳು, ಏಕವಚನ ಮತ್ತು ಬಹುವಚನಗಳಲ್ಲಿ ಎರಡೆರಡು ಲಿಂಗಗಳನ್ನು ಹೊಂದಿರುವ ಕುರುಕ್ ದಂತ ಬಾಶೆಗಳೂ ಏಕವಚನ ಮತ್ತು ಬಹುವಚನ ಎರಡರಲ್ಲೂ ಒಂದೊಂದೆ ಲಿಂಗವನ್ನು ಹೊಂದಿರುವ ಕೊರಚದಂತ ಬಾಶೆಗಳೂ, ಈ ಮೂರೂ ವಚನಗಳಲ್ಲಿ ಎರಡೆರಡು ಲಿಂಗಗಳನ್ನು ಹೊಂದಿರುವ ಪೆಂಗೊದಂತ ಬಾಶೆಗಳೂ ಇವೆ. ಇಶ್ಟು ವಿವಿದತೆಯನ್ನು ಲಿಂಗದಲ್ಲಿ ತೋರಿಸುವ ದ್ರಾವಿಡ ಬಾಶೆಗಳು ವಚನ ವ್ಯವಸ್ತೆಯಲ್ಲಿ ಹೆಚ್ಚು ನಿಯತವಾಗಿದೆ. ಹಾಗಾಗಿ, ವಚನ ವ್ಯವಸ್ತೆ ದ್ರಾವಿಡಕ್ಕೆ ಬಹು ಹಳೆಯದು ಎಂದು ಹೇಳಲು ಸಾದ್ಯವಿದೆ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.