ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

Date: 26-04-2024

Location: ಬೆಂಗಳೂರು


"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತಮಿಳು, ಮಲಯಾಳಂ, ಇರುಳ ಮೊದಲಾದ ಬಾಶೆಗಳೊಂದಿಗೆ ವಿಬಿನ್ನತೆಯನ್ನು ಬೆಳೆಸಿಕೊಂಡು ಬೆಳೆದಿದೆ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?’ ಕುರಿತು ಬರೆದಿರುವ ಲೇಖನ.

ಕನ್ನಡವು ಇಂದಿನ ದಕ್ಕನ್ ಪ್ರಸ್ತಬೂಮಿ ಪರಿಸರದಲ್ಲಿ ಕಳೆದ ಕೆಲವಾರು ಸಾವಿರ ವರುಶಗಳಿಂದ ಕನ್ನಡ ಬಳಕೆಯಲ್ಲಿರುವುದಕ್ಕೆ ಬೇಕಾದಶ್ಟು ಆದಾರಗಳು ಸಿಗುತ್ತವೆ. ಈ ಅಂಶಗಳನ್ನು ಬೇರೊಂದು ಕಡೆ ಮಾತಾಡಬಹುದು. ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತಮಿಳು, ಮಲಯಾಳಂ, ಇರುಳ ಮೊದಲಾದ ಬಾಶೆಗಳೊಂದಿಗೆ ವಿಬಿನ್ನತೆಯನ್ನು ಬೆಳೆಸಿಕೊಂಡು ಬೆಳೆದಿದೆ. ಆನಂತರ ಈ ಎಲ್ಲ ಬಾಶೆಗಳೊಂದಿಗೆ ಕನ್ನಡವು ಜೊತೆಜೊತೆಯಲ್ಲಿಯೆ ಬದುಕಿರುವುದರಿಂದ ಈ ಬಾಶೆಗಳ ಜೊತೆಗೆ ಸಂಬಂದವನ್ನೂ ಹೊಂದಿದ್ದಿತು. ಆದರೆ, ಇವುಗಳ ನಡುವಿನ ನಂಟನ್ನು ಬಿಡಿಸಿ ಮಾತಾಡುವಾಗ ಆ ಲಕ್ಶಣವು ಮೂಲದ್ರಾವಿಡದಿಂದ ಬಂದಿರಬಹುದೆ ಇಲ್ಲವೆ ಆನಂತರ ಈ ಸೋದರ ಬಾಶೆಗಳಿಂದ ಬಂದಿರಬಹುದೆ ಎಂದು ಹೇಳುವುದು ತುಸು ಕಶ್ಟ ಮತ್ತು ಹಾಗೆ ಹೇಳುವುದಕ್ಕೆ ಹೆಚ್ಚಿನ ಅದ್ಯಯನ ಬೇಕು. ಇಲ್ಲಿ ಪಟ್ಟಿಸಿದ ಬಾಶೆಗಳು ತೆಂಕುದ್ರಾವಿಡ-1 ಗುಂಪಿಗೆ ಸೇರುವಂತವು, ಇವುಗಳ ಜೊತೆಗೆ ತೆಂಕುದ್ರಾವಿಡ-2 ಗುಂಪಿಗೆ ಸೇರುವ ತೆಲುಗು ಕೂಡ ಕನ್ನಡದ ಜೊತೆಗೆ ಕೂಡುಬದುಕು ಸವೆಸಿದೆ. ಸಹಜವಾಗಿ ಇವೆರಡರ ನಡುವೆಯೂ ಸಾಕಶ್ಟು ಸಂಬಂದ ಇದೆ. ಇವುಗಳ ಹೊರತಾಗಿ, ದೂರದ ಬಾಶಾಸಂರ‍್ಕಗಳು ಕನ್ನಡಕ್ಕೆ ಯಾವಾಗ ಒದಗಿದ್ದವು? ಅವು ಯಾವ ಬಾಶೆಗಳು? ಇವೆಲ್ಲ ಇದುವರೆಗೆ ಕನ್ನಡದ ವಿದ್ವತ್ತು ಯೋಚನೆಯನ್ನೂ ಮಾಡಿರದ ವಲಯಗಳು. ಇಲ್ಲೆಲ್ಲ ಹೆಚ್ಚು ಹೆಚ್ಚು ಅದ್ಯಯನಗಳು ಬೇಕು. ಇಲ್ಲಿ, ಅಂತದೊಂದು ಅಂದಾಜು ತಿಳುವಳಿಕೆಯನ್ನು ಮಾತಾಡುವ ಪ್ರಯತ್ನವನ್ನು ಮಾಡಿದೆ.

ಶಿಲಾಯುಗದಲ್ಲಿ ಹತ್ತನ್ನೊಂದು ಲಕ್ಶ ವರುಶಗಳ ಹಿಂದಿನಿಂದ ಮನುಶ್ಯ ಪ್ರಾಣಿ ಕನ್ನಡ ಪರಿಸರದಲ್ಲಿ ಬದುಕಿದ್ದಕ್ಕೆ ಆದಾರಗಳನ್ನು ಸಂಶೋದನೆಗಳು ತೋರಿಸಿವೆ. ಬಾಶೆಯ ಬೆಳವಣಿಗೆ ಅವತ್ತರವತ್ತು ಸಾವಿರ ವರುಶಗಳ ಹಿಂದೆಯೆ ಆಗಿರಬಹುದೆಂಬ ತಿಳುವಳಿಕೆಯನ್ನೂ ಸಂಶೋದನೆಗಳು ತೋರಿಸಿವೆ. ಮನುಶ್ಯ ಪ್ರಾಣಿ ಆಪ್ರಿಕಾದಿಂದ ವಲಸೆ ಬಂದ ಸಿದ್ದಾಂತವನ್ನು ಹಲವು ವಿದ್ವಾಂಸರು ಒಪ್ಪುತ್ತಾರೆ. ಹೀಗೆ ಆಪ್ರಿಕಾದಿಂದ ಬಾರತಕ್ಕೆ ಬಂದ ಮನುಶ್ಯರ ವಲಸೆಯ ಅತಿ ಹಳೆಯ ನಿರ‍್ಶನ ದೊರೆಯುವುದು ಸುಮಾರು ಎಪ್ಪತ್ತು ಸಾವಿರ ವರುಶಗಳ ಹಿಂದೆ. ಎಪ್ಪತ್ತು ಸಾವಿರ ವರುಶಗಳ ಹಿಂದೆ ಬಂದ ಮನುಶ್ಯರು ಯಾರು, ಎಲ್ಲಿದ್ದರು, ಈಗ ಅವರ ವಂಶವಾಹಿ ಇದೆಯೆ ಇದಾವುದರ ಬಗೆಗೆ ಮಾಹಿತಿ ಇಲ್ಲ. ಆದರೆ, ನಮ್ಮ ತಿಳುವಳಿಕೆಯ ಪ್ರಕಾರ ಇಂದಿನ ಬಾರತಕ್ಕೆ ಅತಿ ಹಿಂದೆ ಬಂದ ಮನುಶ್ಯರ ವಲಸೆ ಇಂದು ಅಂಡಮಾನಿನಲ್ಲಿ ಕಾಣಸಿಗುವ ಹಲವು ಸಮುದಾಯಗಳು. ಸುಮಾರು ಅಯವತ್ತು ಸಾವಿರ ವರುಶಗಳ ಹಿಂದೆ ಅಂಡಮಾನಿನ ದ್ವೀಪಸಮೂಹಕ್ಕೆ ತಲುಪಿದ ಈ ಸಮುದಾಯ ಇಂದಿಗೂ ಅಲ್ಲಿಯೆ ನೆಲೆ ನಿಂತಿದೆ. ಹಾಗಾದರೆ, ಇಂದಿನ ಬಾರತದಲ್ಲಿ ಅತಿ ಪ್ರಾಚೀನ ಬಾಶೆ ಈ ಅಂಡಮಾನಿನ ಬಾಶೆಗಳಾಗಿವೆ.

ಇವು, ಈ ಬಾಶೆಗಳನ್ನಾಡುವ ಸಮುದಾಯಗಳು ಇಂದಿನ ಕನ್ನಡ ಪರಿಸರದಲ್ಲಿಯೂ ಬಂದ್ದಿದ್ದವೆ? ಗೊತ್ತಿಲ್ಲ. ನಾವು ಮುಕ್ಯವಾಗಿ ಇಂದಿನ ನೀಲಗಿರಿ ಪ್ರದೇಶವನ್ನು ಇಲ್ಲಿ ತುಸು ಗಮನಿಸಬೇಕು. ನೀಲಗಿರಿ ಜಗತ್ತಿನ ಅತ್ಯಂತ ಸೂಕ್ಶö್ಮ ಪರಿಸರಗಳಲ್ಲಿ ಒಂದಾಗಿದೆ. ಇಲ್ಲಿ ಅಂದಾಜು ಮೂವತ್ತು ಸಾವಿರ ವರುಶಗಳಿಂದ ಮನುಶ್ಯರು

ನೆಲೆಸಿದ್ದರು ಎಂಬುದನ್ನು ಅದ್ಯಯನಗಳು ತೋರಿಸಿವೆ. ಆದರೆ, ಇಂದು ಬದುಕಿರುವ ಮನುಶ್ಯರು ಅಂದಾಜು ಹತ್ತು ಸಾವಿರ ವರುಶಗಳಿಂದ ಇಲ್ಲಿ ಇದ್ದಾರೆ ಎಂಬುದು ಸ್ಪಶ್ಟವಿದೆ. ನೀಲಗಿರಿಯ ಮನುಶ್ಯವಸತಿ ಕನ್ನಡ ಪರಿಸರಕ್ಕೆ ಇಂದು ತುಂಬಾ ಹತ್ತಿರದಲ್ಲಿ ಇರುವುದು ಮಾತ್ರವಲ್ಲದೆ ಅದು ಕನ್ನಡ ಬಳಕೆಯಲ್ಲಿರುವ ಪರಿಸರವೂ ಆಗಿದ್ದಿತು. ಇಂದಿಗೂ ಕನ್ನಡ ನೀಲಗಿರಿಯಲ್ಲಿ ಬಳಕೆಯಲ್ಲಿದೆ. ನೀಲಗಿರಿಯಲ್ಲಿ ಮುಕ್ಯವಾಗಿ ಬಳಕೆಯಲ್ಲಿರುವ ತೆಂಕುದ್ರಾವಿಡ-1 ಗುಂಪಿನ ತೊದ, ಕೋತ ಬಾಶೆಗಳು ಇವುಗಳ ಜೊತೆಯಲ್ಲಿ ತುಳು, ಕೊಡವ, ಕುರುಬ ಮೊದಲಾದ ಬಾಶೆಗಳು ಕನ್ನಡ ಸ್ವತಂತ್ರಗೊಳ್ಳುವುದಕ್ಕಿಂತ ಮೊದಲೆ ಸ್ವತಂತ್ರವಾಗಿದ್ದವು. ಈ ಬಾಶೆಗಳು ಸ್ವತಂತ್ರವಾದಾಗ ಕನ್ನಡ ಇನ್ನೂ ತೆಂಕುದ್ರಾವಿಡ ಗುಂಪಿನ ಒಂದು ಒಳನುಡಿಯಾಗಿದ್ದಿತು. ಆಗಿನಿಂದಲೆ ಕನ್ನಡ ಇವುಗಳ ಸಂರ‍್ಕದಲ್ಲಿ ಇದ್ದಿತು. ಆದರೆ ಈ ಬಾಶೆಗಳ ನಡುವಿನ ಸಂರ‍್ಕದ ಬಗೆಗೆ ಹೆಚ್ಚು ತಿಳುವಳಿಕೆ ಇಲ್ಲ. ಇವುಗಳ ನಡುವೆ ಕಂಡುಬರುವ ಸಂಬಂದ ಸಹಜವಾಗಿ ಒಂದೆ ಮೂಲದಿಂದ ಬಂದ ಲಕ್ಶಣಗಳ ಹಂಚಿಕೆಯಲ್ಲದೆ ಆ ಎರಡು ಬಾಶೆಗಳ ನಡುವಿನ ಸಂಬಂದ ಎಂದು ತೋರಿಸುವುದು ದೊಡ್ಡ ಅದ್ಯಯನವನ್ನು ಬಯಸುತ್ತದೆ. ಆನಂತರ ತೆಂಕುದ್ರಾವಿಡ-1 ಗುಂಪಿನಲ್ಲಿ ಬೇರೆಯಾಗುವ ತಮಿಳು ಬಹುಮುಕ್ಯವಾದ ಬಾಶೆ. ಕನ್ನಡ ಮತ್ತು ತಮಿಳುಗಳು ರಾಚನಿಕವಾಗಿ ಬಹು ಹತ್ತಿರದ ಬಾಶೆಗಳಾಗಿದ್ದೂ ಪರಸ್ಪರ ಸಂಬಂದವನ್ನು ಹೊಂದಿರುವುದೂ ನಿಜ.

ಇವುಗಳ ಜೊತೆಜೊತೆಯಲ್ಲಿ ತೆಂಕುದ್ರಾವಿಡ-2 ಗುಂಪಿಗೆ ಸೇರುವ ತೆಲುಗು ಕೂಡ ಕನ್ನಡಕ್ಕಿಂತ ಮೊದಲು ಸ್ವತಂತ್ರವಾಗಿದ್ದಿತು. ಕನ್ನಡದ ಜೊತೆಗೆ ತೆಲುಗು ಅಂದಿನಿಂದ ಸಂರ‍್ಕ ಹೊಂದಿರುವುದು ಸ್ಪಶ್ಟವೆ ಆಗಿದ್ದರೂ ಇದು ಎಂತ ಸಂಬಂದವಾಗಿದ್ದಿತು ಎಂಬ ತಿಳುವಳಿಕೆ ಇಲ್ಲ. ಇಂದಿನ ಕರ‍್ನಾಟಕದ ಗಡಿಪ್ರದೇಶಗಳಲ್ಲಿ ಕನ್ನಡ ಮತ್ತು ತೆಲುಗುಗಳ ನಡುವೆ ಜಗತ್ತೆ ಬೆರಗಾಗುವಂತ ಸಂಬಂದ ಕಂಡುಬರುತ್ತದೆ.

ಇವುಗಳಲ್ಲದೆ, ಅಂದರೆ ಜೊತೆಜೊತೆಗೆ ಒಂದು ಮೂಲದಿಂದ ಬೆಳೆದ ಬಾಶೆಗಳಲ್ಲದೆ ಬೇರೆ ಯಾವ ಬಾಶೆಗಳ ಸಂಬಂದ ಕನ್ನಡಕ್ಕೆ ಒದಗಿದ್ದಿತು ಎಂಬುದು ಮುಕ್ಯವಾದ ವಿಚಾರ. ಹೀಗೆ ನೋಡುವಾಗ ಮತ್ತೆ ಶಿಲಾಯುಗದ ವಿವಿದ ಸಮುದಾಯಗಳ ಸಂಬಂದಗಳ ಬಗೆಗೆ ಗಮನ ಹರಿಸಬೇಕು. ಶಿಲಾಯುಗದ ಅದ್ಯಯನಗಳು ಬಾಶೆಯ ಬಗೆಗೆ ಮಾತನಾಡುವುದಿಲ್ಲ. ಮೂಲಬೂತವಾಗಿ ಬವುತಿಕ ಆದಾರಗಳನ್ನು ಅವಲಂಬಿಸುವ ಯಾವುದೆ ಅದ್ಯಯನಗಳಿಗೆ ಇದು ಬಹಳ ಕಶ್ಟದ ಕೆಲಸ.

ಬಹು ಹಿಂದೆ ಬಾಶೆ ಬಳಕೆಯಲ್ಲಿದ್ದಿತು ಎನ್ನುವುದಕ್ಕೆ ಆದಾರಗಳು ಮಾತ್ರ ದೊರೆಯುತ್ತವೆ. ಮನುಶ್ಯರ ಸ್ರುಜನಾತ್ಮಕ ಅಬಿವ್ಯಕ್ತಿಯ ಬಾಗವಾಗಿ ಶಿಲಾಯುಗದ ಕೆತ್ತನೆಗಳು ಬಂದಿರುವುದು ನಿಜವಾದರೂ ಅದು ಯಾವ ಬಾಶೆ ಎಂಬುದಕ್ಕೆ ಆದಾರಗಳು ದೊರೆಯಲಾರವು. ಹಾಗಾಗಿ, ಇಲ್ಲಿ ಕನ್ನಡದ ಇತಿಹಾಸದ ಅಂದರೆ, ಕನ್ನಡ ಬಾಶೆ ಎಶ್ಟು ಹಿಂದೆ ಇದ್ದಿರಬಹುದು ಎಂಬುದರ ಬಗೆಗೆ ಒಂದೆರಡು ಮಾತಾಡಬಹುದು. ಕನ್ನಡ ಎಶ್ಟು ಹಳೆಯದು ಎನ್ನುವುದರ ಬಗೆಗೆ ಈ ಸರಣಿಯಲ್ಲಿ ಈ ಹಿಂದೆ ಬರಹವನ್ನ ಮಾಡಿದೆ. ದ್ರಾವಿಡದಿಂದ ಇಲ್ಲವೆ ತೆಂಕುದ್ರಾವಿಡದಿಂದ ಸ್ವತಂತ್ರವಾದ ಹಂತವನ್ನು ಮೂಲಕನ್ನಡ ಎಂದು ಹೇಳಲಾಗುತ್ತದೆ. ಮೂಲಕನ್ನಡದ ಹಂತ ಅಂದಾಜು ಮೂರೂವರೆಯಿಂದ ನಾಲ್ಕು ಸಾವಿರ ವರುಶಗಳು. ಹಾಗಾದರೆ ಈ ಮೂರು ಸಾವಿರ ವರುಶಗಳಲ್ಲಿ, ಮುಕ್ಯವಾಗಿ ಕ್ರಿಸ್ತಪರ‍್ವದ ಕಾಲದಲ್ಲಿ ಯಾವಯಾವ ಬಾಶೆಗಳು ಕನ್ನಡದ ಜೊತೆಗೆ ಸಂಬಂದವನ್ನು ಪಡೆದುಕೊಂಡಿದ್ದಿರಬಹುದು ಎನ್ನುವುದು ತಿಳಿಯದು. ಒಂದು ಮುಕ್ಯವಾದ ಅಂಶ ಇಲ್ಲಿದೆ, ಮಾತನಾಡಬೇಕಿರುವುದು. ಅದನ್ನಿಲ್ಲಿ ಗಮನಿಸಬಹುದು.

ಶಿಲಾಯುಗದ ಕಾಲದಲ್ಲಿ ದಕ್ಕನ್ನಿನ ಪ್ರಸ್ತಬೂಮಿಯಲ್ಲಿ ಸಾಕಶ್ಟು ಮನುಶ್ಯವಸತಿ ನೆಲೆಗಳು ಇದ್ದವು, ಕನ್ನಡ ಪರಿಸರದಲ್ಲಿಯೂ ಇದ್ದವು. ಹಲವು ಶಿಲಾಯುಗದ ನೆಲೆಗಳು ಮತ್ತು ಶಿಲಾಯುಗದ ಸಂಸ್ಕುçತಿಗಳ ಅದ್ಯಯನವು ಬಾಶೆ ಬಳಕೆಯಲ್ಲಿದ್ದಿರುವುದನ್ನು ಸ್ಪಶ್ಟವಾಗಿ ತೋರಿಸುತ್ತವೆ. ಒಕ್ಕಲುತನ, ಸಂಸ್ಕೃತಿ, ವ್ಯಾಪಾರ (ವಸ್ತುವಿನಿಮಯ), ಎಂಜಿನಿಯರಿಂಗ್ ಮೊದಲಾದವುಗಳು ಬಾಶೆ ಇದ್ದುದಕ್ಕೆ ಆದಾರವನ್ನು ಕೊಡುತ್ತವೆ. ಆದರೆ ಕನ್ನಡವೆ ಇದ್ದಿತೆ ಎಂಬುದು ಪ್ರಶ್ನೆ. ಕನ್ನಡ ಪರಿಸರದಲ್ಲಿ ಕೆಲವು ಊರ ಹೆಸರುಗಳನ್ನು ಒಕ್ಕಲುತನದ ಆರಂಬದಲ್ಲಿ ಇಟ್ಟಿರುವುದು ಮತ್ತು ಈ ಹೆಸರುಗಳು ಕನ್ನಡದವೆ ಆಗಿರುವುದನ್ನು ಕಾಣಬಹುದು.

ನಾಲ್ಕಾರು ಸಾವಿರ ವರುಶಗಳ ಹಿಂದಿನಿಂದಲೂ ಈ ಪ್ರದೇಶ ಇಂದಿನ ಉತ್ತರ ಬಾರತ ಮತ್ತು ಇನ್ನೂ ಇತರ ಪ್ರದೇಶಗಳೊಂದಿಗೆ ಸಂಬಂದವನ್ನು ಹೊಂದಿದ್ದಿತು. ಹರಪ್ಪಾ ನಾಗರಿಕತೆಗೆ ಕಲ್ಲುಗಳನ್ನು ಇಂದಿನ ರಾಯಚೂರಿನ ಮಸ್ಕಿ ಮತ್ತು ಬಳ್ಳಾರಿಯ ಸಂಗನಕಲ್ಲು ಪರಿಸರಗಳಿಂದ ಕಳಿಸಲಾಗುತ್ತಿದ್ದಿತು ಎಂದು ವಿದ್ವಾಂಸರು ಮಾತನಾಡುತ್ತಾರೆ. ಇದು ವ್ಯಾಪಕವಾದ ಸಾಮಾಜಿಕ ಸಂಬಂದ ಎಂದು ಹೇಳಬಹುದು. ಹಾಗಾದರೆ, ಹರಪ್ಪ ಕಾಲದಲ್ಲಿ ಈ ಬಾಗದಲ್ಲಿ ಇದ್ದ ಬಾಶೆ ಹರಪ್ಪದ ಬಾಶೆಯೊಂದಿಗೆ ಸಂಬಂದವನ್ನು ಹೊಂದಿದ್ದಿತು ಎಂಬುದು ಸ್ಪಶ್ಟವಾಗುತ್ತದೆ. ಆ ವೇಳೆಗೆ ಕನ್ನಡ ಬೇರೆಯಾಗಿದ್ದಿತು ಇಲ್ಲವೆ ಬೇರೆಯಾಗುತ್ತಿದ್ದಿತು ಎಂಬುದು ತಿಳುವಳಿಕೆ. ಹಾಗಾದರೆ, ಕನ್ನಡಕ್ಕೆ ಒದಗಿದ ಹಳೆಯ ಬಾಶಾಸಂಬಂದಗಳಲ್ಲಿ ಹರಪ್ಪ ನಾಗರಿಕತೆಯ ಬಾಶೆ ಒಂದು ಮತ್ತು ಮುಕ್ಯವಾದುದು ಎಂದು ಹೇಳಬಹುದು. ಆದರೆ, ಹರಪ್ಪ ನಾಗರಿಕತೆಯಲ್ಲಿ ಬಳಕೆಯಲ್ಲಿದ್ದ ಬಾಶೆ ಯಾವುದು ಎಂಬುದು ನಮಗೆ ಗೊತ್ತಿಲ್ಲ, ಪರಸ್ಪರ ಬಾಶಿಕ ಪ್ರಬಾವ ಇದ್ದಿರಬಹುದೆ, ಗೊತ್ತಿಲ್ಲ.

ಇದರ ಜೊತೆಗೆ ಆನಂತರ ಪ್ರಾಕ್ರುತ ಬಾಶೆ ಕನ್ನಡದೊಂದಿಗೆ ಸಂಬಂದವನ್ನು ಬೆಳೆಸಿಕೊಂಡ ನಂತರ ಗ್ರೀಕಿನ ಸಂರ‍್ಕ ಕನ್ನಡಕ್ಕೆ ಇದ್ದಿತು ಎನ್ನುವುದು ಸ್ಪಶ್ಟವಿದೆ. ಗ್ರೀಕಿನ ಹಸ್ತಪ್ರತಿಯಲ್ಲಿ ಕ್ರಿಸ್ತಶಕದ ಮೊದಮೊದಲಲ್ಲೆ ಕನ್ನಡ ಪದಗಳು ಮಾತ್ರವಲ್ಲದೆ ವಾಕ್ಯಗಳೂ ಬಳಕೆಯಾಗಿವೆ. ಹಾಗೆಯೆ ಕನ್ನಡದ ಹೆಸರನ್ನು ಹೊಂದಿರುವ ಹಲವು ಊರುಗಳನ್ನು ಅದೆ ಕಾಲದಲ್ಲಿ ಗ್ರೀಕಿನಲ್ಲಿ ಉಲ್ಲೇಕಿಸಿದೆ. ಇದು ಅಂದಿಗೆ ಕನ್ನಡವು ಜಾಗತಿಕ ವ್ಯಾಪಾರ ಸಂಬಂದಗಳನ್ನು ಹೊಂದಿರುವುದನ್ನು ಎತ್ತಿ ಹೇಳುತ್ತದೆ. ಗ್ರೀಕಿನ ದಮಡಿ ಮೊದಲಾದ ಪದಗಳು ಕನ್ನಡದಲ್ಲಿ ಇಂದಿನವರೆಗೂ ಉಳಿದುಕೊಂಡಿರುವುದು ಕನ್ನಡ ಮತ್ತು ಗ್ರೀಕಿನ ನಡುವೆ ಬಾಶಿಕ ಸಂಬಂದ ಇರುವುದು ಸ್ಪಶ್ಟವಾಗುತ್ತದೆ. ಹಾಗಾದರೆ, ಕನ್ನಡಕ್ಕೆ ಒದಗಿದ ಹಳೆಯ ಬಾಶಾಸಂರ‍್ಕಗಳಲ್ಲಿ ಗ್ರೀಕು ಕೂಡ ಒಂದು. ಆದರೆ, ಎಶ್ಟು, ಹೇಗೆ ಎಂಬುದು ಅಸ್ಪಶ್ಟ.

ಇನ್ನು, ಮುಂದಿನ ಬರಹಗಳಲ್ಲಿ ಕನ್ನಡದ ಸಂರ‍್ಬದಲ್ಲಿ ಮಹತ್ವದ ಸಂಬಂದವನ್ನು ತೋರಿಸುವ ಬಾಶೆಗಳು ಮತ್ತು ಅವುಗಳ ಕನ್ನಡದೊಂದಿಗಿನ ನಂಟಿನ ಸ್ವರೂಪ ಇವುಗಳ ಕುರಿತು ಮಾತನಾಡಬಹುದು.

ಈ ಅಂಕಣದ ಹಿಂದಿನ ಬರೆಹಗಳು:
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...