ಕನ್ನಡ ಪದಕೋಶ ಎಶ್ಟು ದೊಡ್ಡದು?

Date: 03-12-2023

Location: ಬೆಂಗಳೂರು


''ನಮಗೆ ತಿಳಿದಿರುವ ಪ್ರಕಾರ ಸರಿ ಸುಮಾರು ಸಾವಿರ ವರುಶ ಹಳೆಯದಾಗಿರಬಹುದಾದ 'ರನ್ನ ಕಂದ' ಹೆಸರಿನ ಸಣ್ಣ ನಿಗಂಟೊಂದು ಬಹು ಹಳೆಯ ನಿಗಂಟು. ಆನಂತರ ಹಲವು ನಿಗಂಟುಗಳು ಬಂದಿವೆ. ಬ್ರಿಟೀಶ್ ಕಾಲದಲ್ಲಿ ಹೆಚ್ಚಿನ ಸಂಕೆಯ ನಿಗಂಟುಗಳು ಬಂದಿವೆ. ಆನಂತರ ಸ್ವತಂತ್ರ ಬಾರತದಲ್ಲಿ ಬಂದಿರುವ ಮತ್ತು ಬರುತ್ತಿರುವ ನಿಗಂಟುಗಳ ಸಂಕೆಯೂ, ಅವುಗಳ ಮಾದರಿಗಳೂ ವ್ಯಾಪಕವಾಗಿವೆ. ಕನ್ನಡ ನಿಗಂಟುಗಳನ್ನು ಬೇರೊಂದು ಸಲ ಪರಿಚಯ ಮಾಡಿಕೊಳ್ಳೋಣ,'' ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ ಅವರು ತಮ್ಮ 'ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ಕನ್ನಡ ಪದಕೋಶ ಎಶ್ಟು ದೊಡ್ಡದು?’ ಕುರಿತು ವಿಶ್ಲೇಷಿಸಿದ್ದಾರೆ.

ಕನ್ನಡ ನಿಗಂಟುಗಳು ಹಲವಾರು ಬಂದಿವೆ. ನಮಗೆ ತಿಳಿದಿರುವ ಪ್ರಕಾರ ಸರಿ ಸುಮಾರು ಸಾವಿರ ವರುಶ ಹಳೆಯದಾಗಿರಬಹುದಾದ 'ರನ್ನ ಕಂದ' ಹೆಸರಿನ ಸಣ್ಣ ನಿಗಂಟೊಂದು ಬಹು ಹಳೆಯ ನಿಗಂಟು. ಆನಂತರ ಹಲವು ನಿಗಂಟುಗಳು ಬಂದಿವೆ. ಬ್ರಿಟೀಶ್ ಕಾಲದಲ್ಲಿ ಹೆಚ್ಚಿನ ಸಂಕೆಯ ನಿಗಂಟುಗಳು ಬಂದಿವೆ. ಆನಂತರ ಸ್ವತಂತ್ರ ಬಾರತದಲ್ಲಿ ಬಂದಿರುವ ಮತ್ತು ಬರುತ್ತಿರುವ ನಿಗಂಟುಗಳ ಸಂಕೆಯೂ, ಅವುಗಳ ಮಾದರಿಗಳೂ ವ್ಯಾಪಕವಾಗಿವೆ. ಕನ್ನಡ ನಿಗಂಟುಗಳನ್ನು ಬೇರೊಂದು ಸಲ ಪರಿಚಯ ಮಾಡಿಕೊಳ್ಳೋಣ. ಇಂದು ಕನ್ನಡ ಪದಕೋಶ ಎಶ್ಟು ದೊಡ್ಡದು ಎಂದು ತಿಳಿದುಕೊಳ್ಳುವುದಕ್ಕೆ ಈ ನಿಗಂಟುಗಳು ಹೇಗೆ ಎಶ್ಟು ಸಹಾಯ ಮಾಡುತ್ತವೆ ಎನ್ನವುದನ್ನು ಅರಿಯುವ ಪ್ರಯತ್ನ ಮಾಡೋಣ. ಸಹಜವಾಗಿ ನಿಗಂಟುಗಳು ಪದಗಳ ಎಣಿಕೆಗೆ ಅನಿವಾರ‍್ಯದ ಸಹಾಯಕಗಳು.

ಕಿಟೆಲ್ ಮಾಡಿದ ಕನ್ನಡ-ಇಂಗ್ಲೀಶು ನಿಗಂಟು ಅದುವರೆಗಿನ ಕನ್ನಡದ ಬಲು ದೊಡ್ಡ ನಿಗಂಟು. ಕನ್ನಡ ಸಾಹಿತ್ಯ ಪರಿಶತ್ತಿನವರು ಪ್ರಕಟಿಸಿರುವ ಸಂಕ್ಶಿಪ್ತ ಕನ್ನಡ ನಿಗಂಟು ಕನ್ನಡದ ಹೆಚ್ಚು ಪದಗಳನ್ನು ಒಳಗೊಂಡಿರುವ ಕನ್ನಡ-ಕನ್ನಡ ನಿಗಂಟು. ಆನಂತರ ಸುಮಾರು ನಲವತ್ತು ವರುಶಗಳ ಕಾಲ ನಡೆದ ಯೋಜನೆಯ ಬಾಗವಾಗಿ ಕನ್ನಡ ಸಾಹಿತ್ಯ ಪರಿಶತ್ತಿನಿಂದ ಎಂಟು ಸಂಪುಟಗಳಲ್ಲಿ ಪ್ರಕಟವಾದ ಕನ್ನಡ ನಿಗಂಟು ಕನ್ನಡದ ಇದುವರೆಗಿನ ಅತಿದೊಡ್ಡ ನಿಗಂಟು. ಲಕ್ಶಾಂತರ ಪದಗಳನ್ನು ಒಳಗೊಂಡಿರುವ ಈ ನಿಗಂಟು ಕನ್ನಡ ಪದಕೋಶದ ವಾರಿದಿಯನ್ನು ಬಿಚ್ಚಿ ತೋರಿಸುತ್ತದೆ. ಆದರೆ, ಈ ಹಿಂದಿನ ಬರಹದಲ್ಲಿ ಮಾತನಾಡಿದಂತೆ ಪದಗಳ ಸಂಕೆಯನ್ನು ಗುರುತಿಸುವುದು ಇಲ್ಲವೆ ಎಣಿಸುವುದು ಅಸಾದ್ಯ. ಕನ್ನಡದಂತ ಬಾಶೆಗೆ ಇದು ಇನ್ನೂ ಅಸಾದ್ಯ. ಸುಮಾರು ಒಂದೂವರೆ ಲಕ್ಶ ಪದಗಳನ್ನು ಈ ಎಂಟು ಸಂಪುಟಗಳಲ್ಲಿ ಕೊಟ್ಟಿದೆ. ಇದು ಅಂದಾಜು ಲೆಕ್ಕ. ನಿಗಂಟಿನ ಸೂಕ್ಶ್ಮವಾದ ಅದ್ಯಯನವು ಈ ನಿಗಂಟನ್ನು ಇಟ್ಟುಕೊಂಡು ಕೂಡ ಪದಗಳನ್ನು ಎಣಿಸಲು ಸಾದ್ಯವಿಲ್ಲ ಎಂಬುದನ್ನು ತೋರಿಸುತ್ತದೆ. ಒಂದು ಪದ ಹಲವು ರೂಪಗಳಲ್ಲಿ ಬಂದಿದೆ, ಹಲವು ಪದಗಳು ಒಂದು ರೂಪದಲ್ಲಿ ಬಂದಿವೆ. ಹಲವಾರು ಪದಗಳ ಸ್ಪೆಲ್ಲಿಂಗ್ ಗೊತ್ತಿಲ್ಲ. ಈ ಎಲ್ಲ ಕಾರಣಗಳಿಂದ ಕನ್ನಡ ಪದಕೋಶದಲ್ಲಿನ ಪದಗಳ ಎಣಿಕೆಯನ್ನೂ ಅಂದಾಜು ಎಂದು ಹೇಳಬೇಕು.

ಆಕ್ಸ್ ಪರ‍್ಡ್ ಸಾಮಾನ್ಯವಾಗಿ ಇಂಗ್ಲೀಶಿನ ಪದಕೋಶವನ್ನು ನಿರಂತರ ವಿಸ್ತರಿಸುತ್ತಲೆ ಇರುತ್ತದೆ. ಆದರೆ, ಕನ್ನಡದ ಸಂದರ‍್ಬದಲ್ಲಿ ಇಂತ ಕೆಲಸಗಳನ್ನು ಯೋಚಿಸಲೂ ಆಗದು. ಹೀಗಾಗಿ ಬಹು ಹಿಂದೆ ಪ್ರಕಟವಾದ ಈ ಎಂಟು ಸಂಪುಟಗಳು ಸದ್ಯಕ್ಕೆ ಕನ್ನಡದ ದೊಡ್ಡ ಸಂಪುಟಗಳು. ಈ ಸಂಪುಟಗಳು ಹಲವಾರು ಮಿತಿಗಳನ್ನು ಹೊಂದಿವೆ. ಈ ಸಂಪುಟಗಳು ಪದಗಳನ್ನು ಸಂಗ್ರಹಿಸಲು ಅತಿ ಹೆಚ್ಚು ಅವಲಂಬಸಿರುವುದು ಸಾಹಿತ್ಯವನ್ನು. ಅದರಲ್ಲಿಯೂ ಹೆಚ್ಚಾಗಿ ಹಳಗನ್ನಡ ಸಾಹಿತ್ಯವನ್ನು. ಆದುನಿಕ ಕಾಲದ ಕೆಲವೆ ಕ್ರುತಿಗಳನ್ನು ಇವು ಅವಲೋಕಿಸಿವೆ. ಹಳಗನ್ನಡ ಕಾಲದಲ್ಲಿ ಬಂದ ಪ್ರಮುಕವಾದ ಶಾಸ್ತ್ರಗ್ರಂತಗಳನ್ನು ಪರಿಗಣಿಸವೆಯಾದರೂ ಮಿತಿಗಳು ಈ ವಿಚಾರದಲ್ಲಿಯೂ ಇವೆ. ಇನ್ನು ಆದುನಿಕ ಕಾಲದಲ್ಲಿ ಬಂದ ಕೆಲವೆ ಕ್ರುತಿಗಳನ್ನು ಪದಸಂಗ್ರಹಕ್ಕೆ ಅವಲೋಕಿಸಿರುವುದು ಬಹುದೊಡ್ಡ ಮಿತಿ. ಈ ಕೆಲಸ ಶುರುವಾಗಿದ್ದು ೧೯೭೦ರ ಸಂದರ‍್ಬದಲ್ಲಿ, ಅಂದರೆ ಅದಾಗಲೆ ಬಲುದೊಡ್ಡ ಪ್ರಮಾಣದ ಹೊಸಗನ್ನಡ ಸಾಹಿತ್ಯ ಬಂದಿತ್ತು. ನಿಜ. ಇಶ್ಟು ದೊಡ್ಡ ಪ್ರಮಾಣದ ಸಾಹಿತ್ಯವನ್ನು ಅವಲೋಕಿಸುವುದು ಅಸಾದ್ಯದ ಮಾತಾಗಿತ್ತು. ಯಾಕೆಂದರೆ ಆಗ ದೊಡ್ಡಮಟ್ಟದ ತಂತ್ರಗ್ನಾನ ಇರಲಿಲ್ಲ ಮತ್ತು ಇರುವಶ್ಟು ತಂತ್ರಗ್ನಾನವನ್ನು ಬಳಸಿಕೊಳ್ಳುವುದಕ್ಕೂ ಪರಿಶತ್ತಿಗೆ ಮತ್ತು ಅದರಲ್ಲಿ ತೊಡಗಿಕೊಂಡಿದ್ದ ವಿದ್ವಾಂಸರಿಗೆ ಆಗಿಲ್ಲ. ಹೀಗಾಗಿ ಆ ಕಾಲದಲ್ಲಿಯೆ, ತನ್ನ ಮಿತಿಯ ಒಳಗೆನೆ ಪರಿಶತ್ತು, ಮತ್ತು ನಿಗಂಟಿನ ಕೆಲಸದಲ್ಲಿ ತೊಡಗಿಕೊಂಡಿದ್ದ ವಿದ್ವಾಂಸರು ಇನ್ನೂ ಕೆಲಸವನ್ನು ವಿಸ್ತರಿಸಬಹುದಿತ್ತು. ಬಳಕೆ ಕನ್ನಡಗಳಿಂದಲೂ ಈ ನಿಗಂಟು ಯೋಜನೆ ಪದಗಳನ್ನು ಸಂಗ್ರಹಿಸಿದೆ. ಜನಪದ ಸಾಹಿತ್ಯವನ್ನೂ, ಕೆಲವು ಪ್ರಕಟಣೆಗಳನ್ನು ಅವಲೋಕಿಸಿದೆ. ಆದರೆ, ಸಹಜವಾಗಿಯೆ ಅತ್ಯಂತ ವ್ಯಾಪಕವಾದ ಪರಿಸರದಲ್ಲಿ ವಿಚಿತ್ರ ವಿವಿದತೆಯನ್ನು ಹೊಂದಿ ಬಳಕೆಯಲ್ಲಿರುವ ಕನ್ನಡಗಳಿಂದ ಮಾಹಿತಿಯನ್ನು ಸಂಗ್ರಹಿಸುವುದು ಬಲುಕಶ್ಟದ ಕೆಲಸ. ಹೀಗಾಗಿ ಈ ವಿಚಾರದಲ್ಲಿ ಯೋಜನೆ ಬಲು ದೊಡ್ಡ ಮಿತಿಯನ್ನು ಹೊಂದಿದ್ದಿತು. ಆದರೆ, ಇದಕ್ಕೆ ಕಾಲದ, ಶ್ರಮದ, ಹಣದ ಇನ್ನೂ ಮೊದಲಾದ ಮಿತಿಗಳೂ ಇರುತ್ತವೆಯಾದ್ದರಿಂದ ಯಾರನ್ನೂ ಯಾವುದನ್ನೂ ಆಕ್ಶೇಪಿಸುವುದು ಇಂದು ಸರಿಯಲ್ಲ. ವಾಸ್ತವದಲ್ಲಿ ಇದ್ದ ಎಲ್ಲ ಮಿತಿಗಳ ನಡುವೆ ಬಹು ದೊಡ್ಡ ಕೆಲಸ ಆಗಿದೆ ಎನ್ನುವುದು ನಿಜ. ಆದರೆ, ನಂತರ ಮುಂದೇನು? ಇದು ದೊಡ್ಡ ಪ್ರಶ್ನೆ.

ಈ ಎಲ್ಲ ಕಾರಣಗಳಿಂದ ಬಹುದೊಡ್ಡದಾಗಿರುವ ಕನ್ನಡ ಸಾಹಿತ್ಯ ಪರಿಶತ್ತಿನ ಕನ್ನಡ ನಿಗಂಟು ಕನ್ನಡ ಪದಕೋಶದ ಸಹಜ ಮತ್ತು ವ್ಯಾಪಕ ಪ್ರತಿನಿದಿ ಆಗಲಾರದು. ಈ ಅತಿ ಗಂಬೀರವಾದ ಆರೋಪಕ್ಕೆ ಪೂರಕವಾಗಿ ಕೆಲವು ಅಂಶಗಳನ್ನು ನಾನಿಲ್ಲಿ ತರುತ್ತೇನೆ. ಇಲ್ಲಿನ ಆಶಯ ಕನ್ನಡ ಪದಕೋಶವನ್ನು ತಿಳಿದುಕೊಳ್ಳುವುದಾಗಿದೆಯೆ ಹೊರತು ಯಾರನ್ನೊ ಯಾವುದನ್ನೊ ಆರೋಪ ಮಾಡುವುದಲ್ಲ. ಒಂದರ ಮಿತಿಯನ್ನು ಮಾತನಾಡಲು ಕಾರಣ ಅದರ ಮುಂದುವರಿಕೆಯ ಆಶಯವನ್ನು, ಅವಶ್ಯಕತೆಯನ್ನು ಹೇಳುವುದಾಗಿರುತ್ತದೆ.
ಈಗಾಗಲೆ ಹೇಳಿದಂತೆ, ಹಳಗನ್ನಡದ ಹಲವು ಕ್ರುತಿಗಳನ್ನು ನಿಗಂಟು ಅವಲೋಕಿಸಿದ್ದಿತಾದರೂ ಆನಂತರ ಇನ್ನೂ ಹಲವು ಕ್ರುತಿಗಳು ಪ್ರಕಟವಾಗಿವೆ ಮತ್ತು ಪ್ರಕಟಿತ ಕ್ರುತಿಗಳ ಹಲವಾರು ಬಿನ್ನವಿಬಿನ್ನ ಸಂಪಾದನೆಗಳೂ ಬಂದಿವೆ. ಇವೆಲ್ಲವೂ ವಿಬಿನ್ನ ಪದಗಳನ್ನು ಒಳಗೊಂಡಿವೆ. ಹಲವು ಬಗೆಯ ಶಾಸ್ತ್ರ ಕ್ರುತಿಗಳೂ ಪ್ರಕಟವಾಗಿವೆ. ಆದುನಿಕ ಕಾಲದಲ್ಲಿ ಅಸಾದ್ಯ ವಿವಿದತೆಯನ್ನು ತೋರಿಸುವ ಪ್ರಕಾರಗಳಲ್ಲಿ ಕ್ರುತಿಗಳು ಬಂದಿವೆ. ಇದರಲ್ಲಿ ಸಾಹಿತ್ಯ ಪ್ರಕಾರಗಳೂ ಶಾಸ್ತ್ರಪ್ರಕಾರಗಳೂ ಬರುತ್ತವೆ. ಆದುನಿಕ ಕಾಲದ ವಿದ್ವತ್ತಿನ ವ್ಯಾಪಕವಾದ ಬೆಳವಣಿಗೆಗೆ ತಕ್ಕಂತೆ ಆಯಾ ಕ್ಶೇತ್ರಗಳಲ್ಲಿ ದೊಡ್ಡ ಸಂಕೆಯ ಪಾರಿಬಾಶಿಕ ಪದಗಳು ಬಳಕೆಯಾಗಿವೆ. ಹೀಗಾಗಿ ಕನ್ನಡ ಪದಕೋಶ ಬಲುದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.

ಇದರೊಟ್ಟಿಗೆ ಹಲವು ಕನ್ನಡಗಳಲ್ಲಿ ಬಳಕೆಯಲ್ಲಿ ಇರುವ ಆದರೆ ಸಾಹಿತ್ಯ ಪರಿಶತ್ತಿನ ನಿಗಂಟಿನಲ್ಲಿ ಸೇರಿಲ್ಲದ ಪದಗಳ ಸಂಕೆಯೂ ದೊಡ್ಡ ಪ್ರಮಾಣದಲ್ಲಿಯೆ ಇದೆ. ಇಂತಾ ಕೆಲವು ಪದಗಳು ವಿವಿದ ಒಳನುಡಿಗಳಲ್ಲಿ ಬಂದಿರುವ ಸಾಹಿತ್ಯ ಕ್ರುತಿಗಳಲ್ಲಿ ಮತ್ತು ವಿವಿದ ಒಳನುಡಿಗೆ ಬಂದಿರುವ ನಿಗಂಟುಗಳಲ್ಲಿ ಈಗ ಬೆಳಕಿಗೆ ಬಂದಿವೆ. ಇನ್ನು, ಸಾಮಾಜಿಕ ಜೀವನದಲ್ಲಿ ಆಗಿರುವ ಹಲವಾರು ವಲಯಗಳಲ್ಲಿನ ಬೆಳವಣಿಗಗಳು ಕೂಡ ಕನ್ನಡ ಸಮಾಜದ ಪದಕೋಶದ ವಿಪರೀತ ವಿಸ್ತಾರಕ್ಕೆ ಕಾರಣವಾಗಿವೆ. ಅದು ಸಾರಿಗೆ, ಸಂಪರ‍್ಕ, ತಂತ್ರಗ್ನಾನ, ಶಿಕ್ಶಣ ಮೊದಲಾಗಿ ಎಲ್ಲ ವಲಯಗಳಲ್ಲಿ ಆಗಿರುವ ಬೆಳವಣಿಗೆ ಕಾರಣದಿಂದ ಪದಗಳು ವಿಪರೀತವಾಗಿ ಬೆಳೆದಿವೆ. ಈಗಾಗಲೆ ಬಳಕೆ ಕನ್ನಡವನ್ನು ಅಶ್ಟಾಗಿ ಬಳಸಿಕೊಂಡಿಲ್ಲ ಎಂಬುದನ್ನು ಹೇಳಿದೆ.

ಈ ಎಲ್ಲ ವಲಯಗಳಿಂದ ಪದಗಳನ್ನು ಸಂಗ್ರಹಿಸಿ ಕನ್ನಡ ಪದಕೋಶವನ್ನು ಕಂಡುಕೊಳ್ಳಬೇಕಿದೆ. ಒಂದು ಅಂಶವನ್ನು ಇಲ್ಲಿ ಗಮನಿಸಬೇಕು. ಇಲ್ಲಿ ಉಲ್ಲೇಕಿಸಿರುವ ಅಂಶಗಳು ಅಗಾದವೆನಿಸುತ್ತವೆ. ಆದರೆ, ಇಲ್ಲಿ ಉಲ್ಲೇಕಿಸಿದ ಅಂಶಗಳು ಕೇವಲ ಒಂದೆರಡು ಮಾತ್ರ, ಇನ್ನೂ ಹಲವಾರು ಅಂಶಗಳು, ಆಯಾಮಗಳು ಇದಕ್ಕೆ ಇವೆ. ಅವೆಲ್ಲವನ್ನೂ ಪರಿಗಣಿಸಬೇಕು. ಹಾಗಾದರೆ, ಸದ್ಯಕ್ಕೆ, ಇಂದಿಗೆ ಕನ್ನಡ ಪದಕೋಶ ಎಶ್ಟು ದೊಡ್ಡದಿರಬಹುದು? ಈ ಬರಹದ ಆರಂಬದ ಪ್ರಶ್ನೆ ಇದುವೆ ಆಗಿತ್ತು. ಈ ಪ್ರಶ್ನೆ ಕೊನೆಯಲ್ಲಿಯೂ ಉಳಿಯುತ್ತದೆ. ಮೊದಲಿಗೆ ಎತ್ತಿದ ಪ್ರಶ್ನೆಗೆ ಸಾಹಿತ್ಯ ಪರಿಶತ್ತಿನ ನಿಗಂಟನ್ನು ಇಟ್ಟುಕೊಂಡು ಮಾತಾಡಲಾಯಿತು. ಕೊನೆಗೆ ಎತ್ತಿದ ಅದೆ ಪ್ರಶ್ನೆಗೆ ಏನು ಸಮಾದಾನ ತರುವುದು. ಯಾವುದೆ ಸಮಾದಾನ ಸದ್ಯಕ್ಕೆ ಇಲ್ಲದಿರುವುದರಿಂದ ನನ್ನ ತಿಳುವಳಿಕೆಯ ಒಂದು ಸಾಲಿನ ಸಮಾದಾನವನ್ನು ತಂದು ಈ ಬರಹವನ್ನು ಮುಗಿಸೋಣ. ಈಗ ಇರುವ ಸಾಹಿತ್ಯ ಪರಿಶತ್ತಿನ ಎಂಟು ಸಂಪುಟಗಳಿಗಿಂತ ಕನಿಶ್ಟ ಹತ್ತು ಪಟ್ಟು ದೊಡ್ಡದಾದ ಪದಕೋಶ ಕನ್ನಡಕ್ಕೆ ಇದೆ ಎಂಬುದಕ್ಕೆ ಯಾವುದೆ ಅನುಮಾನ ಇಲ್ಲ. ಇದು ಸ್ಪಶ್ಟ.

ಈ ಅಂಕಣದ ಹಿಂದಿನ ಬರೆಹಗಳು:
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...