Date: 05-11-2023
Location: ಬೆಂಗಳೂರು
``ಬಾಶೆಯ ಎಲ್ಲ ಹಂತಗಳಲ್ಲಿಯೂ ಬದಲಾವಣೆಗಳು ಸಹಜವಾದರೂ ಕೆಲಕೆಲ ಒಳನುಡಿಗಳು ವಿಶಿಶ್ಟ ಬದಲಾವಣೆಗಳನ್ನು ಮಾಡಿಕೊಂಡಿರುತ್ತವೆ. ಇದಕ್ಕೆ ಆ ಒಳನುಡಿಯ, ಅದರ ಪರಿಸರದ ಯಾವುದೊ ವಿಶಿಶ್ಟ ಅಂಶವೆ ಕಾರಣವಾಗಿರಬಹುದು,'' ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ ಅವರು ತಮ್ಮ 'ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ ಕನ್ನಡ ಒಳನುಡಿಗಳು ಹೇಗೆ ಬಿನ್ನ?’ ಕುರಿತು ವಿಶ್ಲೇಷಿಸಿದ್ದಾರೆ.
ಕನ್ನಡದ ಒಳನುಡಿಗಳು ಪರಸ್ಪರ ಹೇಗೆ ಎಶ್ಟು ಬಿನ್ನವಾಗುತ್ತವೆ ಎಂಬುದು ಪ್ರಶ್ನೆ. ಇಡಿಯಾಗಿ ಒಂದು ಒಳನುಡಿಗಿಂತ ಇನ್ನೊಂದು ಒಳನುಡಿ ಬೇರೆಯಾಗಿರಲು ಸಾದ್ಯವೆ? ಹಾಗಾದರೆ, ಎಶ್ಟುಮಟ್ಟಿಗೆ ಬದಲಾವಣೆ ಇದ್ದರೆ ಬೇರೆ ಒಳನುಡಿ ಎನ್ನಬಹುದು? ಎಂಬೆಲ್ಲ ಪ್ರಶ್ನೆಗಳು ಹೆಚ್ಚು ಅದ್ಯಯನವನ್ನು ಬಯಸುತ್ತವೆ, ಬಾಶೆಯ ಎಲ್ಲ ಹಂತಗಳಲ್ಲಿಯೂ ಬದಲಾವಣೆಗಳು ಸಹಜವಾದರೂ ಕೆಲಕೆಲ ಒಳನುಡಿಗಳು ವಿಶಿಶ್ಟ ಬದಲಾವಣೆಗಳನ್ನು ಮಾಡಿಕೊಂಡಿರುತ್ತವೆ. ಇದಕ್ಕೆ ಆ ಒಳನುಡಿಯ, ಅದರ ಪರಿಸರದ ಯಾವುದೊ ವಿಶಿಶ್ಟ ಅಂಶವೆ ಕಾರಣವಾಗಿರಬಹುದು.
ಒಳನುಡಿಗಳನ್ನು ಹೇಗೆ ಗುರುತಿಸಲಾಗುತ್ತದೆ? ಅವುಗಳ ಗುರ‍್ತಿಕೆ ಏನು? ಅಂದರೆ ಒಳನುಡಿಗಳು ಪರಸ್ಪರ ಬದಲಾಗುತ್ತವೆ ಎಂದರೆ ಹೇಗೆ ಬದಲಾಗುತ್ತವೆ ಮತ್ತು ಎಶ್ಟು ಬದಲಾಗುತ್ತವೆ ಎಂಬುದು ಮುಕ್ಯವಾದ ಪ್ರಶ್ನೆಯಾಗುತ್ತದೆ. ಮುಂದುವರೆದು ಎಶ್ಟು ಬದಲಾವಣೆ ಕಂಡರೆ ಅದನ್ನು ಒಳನುಡಿ ಬಿನ್ನತೆ ಇಲ್ಲವೆ ಬಿನ್ನ ಒಳನುಡಿಗಳು ಎಂದು ಗುರುತಿಸುವುದಕ್ಕೆ ಸಾದ್ಯ ಎಂಬ ಪ್ರಶ್ನೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಈ ಪ್ರಶ್ನೆ ಹೆಚ್ಚು ಸಂಕೀರ‍್ಣವಾಗಿರುವಂತದ್ದು. ಮುಕ್ಯವಾಗಿ ಒಳನುಡಿಗಳು ಯಾವ ಯಾವ ರೀತಿಯ ಬಿನ್ನತೆಗಳನ್ನು ತೋರಿಸುತ್ತವೆ ಎಂಬುದನ್ನು ಇಲ್ಲಿ ತುಸು ಗಮನಿಸಬಹುದು.
ಸಾಮಾನ್ಯವಾಗಿ ಬಾಶೆಯಲ್ಲಿ ದ್ವನಿ, ಪದ, ವಾಕ್ಯ, ಅರ‍್ತ ಮತ್ತು ಶಯ್ಲಿ ಎಂಬ ಅಯ್ದು ಪ್ರದಾನ ಹಂತಗಳನ್ನು ಗುರುತಿಸಿಕೊಳ್ಳಬಹುದು. ಬಾಶಾವಿಗ್ನಾನದಲ್ಲಿ ದ್ವನಿ, ದ್ವನಿಮಾ (ದ್ವನಿಗೆ ಸಂಬಂದಿಸಿದ್ದು), ಆಕ್ರುತಿಮಾ (ಪದ-ಪ್ರತ್ಯಯಕ್ಕೆ ಸಂಬಂದಿಸಿದ್ದು), ವಾಕ್ಯ, ಅರ‍್ತ ಮತ್ತು ಸಂಕತನ ಎಂಬ ಆರು ಹಂತಗಳನ್ನು ಗುರುತಿಸಲಾಗುತ್ತದೆಯಾದರೂ ಸಾಮಾನ್ಯ ಅರ‍್ತಕ್ಕೆ ಮೇಲಿನಂತೆ ಹಂತಗಳನ್ನು ಇಟ್ಟುಕೊಂಡಿದೆ. ಇವುಗಳಲ್ಲಿ ವಾಕ್ಯ ಹಂತದಲ್ಲಿ ಹೆಚ್ಚಿನ ಬದಲಾವಣೆಗಳು ಕಾಣಿಸುವುದಿಲ್ಲ. ಹೆಚ್ಚಿನ ಒಳನುಡಿಗಳಲ್ಲಿ ಕಂಡುಬರುವ ವಾಕ್ಯ ರಚನೆ ನಿಯಮಗಳು ಕಡಿಮೆ ಇಲ್ಲವೆ ತೀರಾ ಕಡಿಮೆ ಬಿನ್ನತೆಗಳನ್ನು ತೋರಿಸುತ್ತದೆ. ಮುಕ್ಯವಾದ ಒಂದು ಬಿನ್ನ ರಚನೆಯನ್ನು ಹೇಳುವುದಾದರೆ, ಕರಾವಳಿ ಪರಿಸರದಲ್ಲಿ ನನಗೆ ಕೆಲಸಕ್ಕೆ ಹೋಗುವುದಿದೆ ಎಂಬ ವಾಕ್ಯ ಸಹಜ. ಉಳಿದ ಕನ್ನಡಗಳಲ್ಲಿ ಈ ರೀತಿಯಲ್ಲಿ ಚತುರ‍್ತಿ ವಿಬಕ್ತಿ ಆಗಿರುವ -ಗೆ ರೂಪವನ್ನು ಒಂದು ವಾಕ್ಯದಲ್ಲಿ ಎರಡು ಬಾರಿ ಬಳಸುವುದು ಸಾದ್ಯವಿಲ್ಲ. ಬೇರೆ ಕಡೆ ಈ ವಾಕ್ಯದ ರಚನೆ, ನಾನು ಕೆಲಸಕ್ಕೆ ಹೋಗಬೇಕಿದೆ ಎಂದಾಗುತ್ತದೆ. ಇನ್ನು ಅರ‍್ತ, ಪದ ಮತ್ತು ದ್ವನಿ ಹಂತದಲ್ಲಿ ಒಳನುಡಿಗಳ ನಡುವೆ ಸಾಕಶ್ಟು ವ್ಯತ್ಯಾಸಗಳನ್ನು ಗಮನಿಸಬಹುದು. ವಾಸ್ತವದಲ್ಲಿ ಒಳನುಡಿಗಳ ಬಿನ್ನತೆ ಎನ್ನವುದು ಈ ಮೂರು ಹಂತಗಳಲ್ಲಿಯೆ ಪ್ರದಾನವಾಗಿ ಇರುವುದು. ಇಲ್ಲಿ ಒಂದೆರಡು ಎತ್ತುಗೆಗಳನ್ನು ತೆಗೆದುಕೊಳ್ಳಬಹುದು.
ಮೂಲಬೂತವಾಗಿ ಇರುವ ‘ಅ’ ದ್ವನಿಯ ಉಚ್ಚರಣೆ ಉತ್ತರದ ಮತ್ತು ದಕ್ಶಿಣದ ಕನ್ನಡಗಳ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ. ರಾಯಚೂರು ಪರಿಸರದಲ್ಲಿ ಹ್ ದ್ವನಿ ಇಲ್ಲ, ಚಾಮರಾಜನಗರ ಪರಿಸರದಲ್ಲಿ ಶ್ ದ್ವನಿ ಇಲ್ಲ. ಕರಾವಳಿಯ ಕೆಲವು ಕನ್ನಡಗಳಲ್ಲಿ ¿õï ದ್ವನಿ ಬಳಕೆಯಲ್ಲಿ ಇದೆ. ಹೀಗೆ ಹಲವು ವ್ಯತ್ಯಾಸಗಳನ್ನು ಕಾಣಬಹುದು. ಇನ್ನು ಪದ ಹಂತದಲ್ಲಿ ನೋಡುವುದಾದರೆ ಪದಗಳು ಮತ್ತು ಪ್ರತ್ಯಯಗಳು ಈ ಎರಡರಲ್ಲಿಯೂ ಬಿನ್ನತೆಗಳನ್ನು ಕಾಣಬಹುದು. ವಿವಿದ ಒಳನುಡಿಗಳಲ್ಲಿ ಒಂದೆ ಪದ ವಿಬಿನ್ನ ರೂಪಗಳನ್ನು ಪಡೆದುಕೊಂಡಿರುತ್ತದೆ. ಮನಿ ಎನ್ನುವುದು ಕನ್ನಡದ ಹೆಚ್ಚಿನ ಒಳನುಡಿಗಳಲ್ಲಿ ಕಂಡುಬಂದರೆ, ತೆಂಗನ್ನಡದ ಕೆಲವು ಕನ್ನಡಗಳಲ್ಲಿ ಇದು ಮನೆ ಎಂದಾಗಿದೆ. ಚಾಮರಾಜನಗರ ಪರಿಸರದಲ್ಲಿ ಇದು ಮನ ಎಂದಾಗಿದ್ದರೆ, ಹುಣಸೂರು ಪರಿಸರದಲ್ಲಿ ಮನಯ್ ಎಂದಾಗಿದೆ. ಹೀಗೆ ಒಂದೆ ಪದ ವಿಬಿನ್ನ ರೂಪಗಳನ್ನು ಪಡೆದುಕೊಂಡಿರುತ್ತದೆ. ಇನ್ನು ಬಿನ್ನ ಪದಗಳು ವಿವಿದ ಕನ್ನಡಗಳಲ್ಲಿ ಬಳಕೆಯಲ್ಲಿರುವುದು ಸಾಕಶ್ಟು ಪ್ರಸಿದ್ದ. ಅದರಂತೆಯೆ ಅರ‍್ತದಲ್ಲಿರುವ ಬಿನ್ನತೆಯನ್ನೂ ಹೇಳಬಹುದು. ಪದಗಳಲ್ಲಿ ಬಿನ್ನತೆಗಳು ಇರುವಂತೆಯೆ
ಪ್ರತ್ಯಯಗಳಲ್ಲಿಯೂ ಬಿನ್ನತೆಗಳನ್ನು ಕಾಣಬಹುದು. ಸಪ್ತಮಿ ವಿಬಕ್ತಿ ರೂಪಗಳಲ್ಲಿ ಕಾಣುವ ಬಿನ್ನತೆಯನ್ನು ಇದಕ್ಕೆ ಉದಾಹರಣೆಯಾಗಿ ಹೇಳಬಹುದು.
ಇನ್ನು ತುಸು ಶಯ್ಲಿಯ ಬಗೆಗೂ ಮಾತನಾಡಬೇಕು. ಇದು ಒಳನುಡಿಗಳನ್ನು ಗುರುತಿಸುವುದಕ್ಕೆ ಹೆಚ್ಚು ಸಹಾಯಕವಾಗುವ ಅಂಶವಾಗಿದೆ. ಉಚ್ಚರಣೆ, ಒತ್ತು, ಲಯ ಈ ಮೊದಲಾದ ಅಂಶಗಳಲ್ಲಿ ಪರಸ್ಪರ ಒಳನುಡಿಗಳು ಬಿನ್ನವಾಗುತ್ತವೆ. ಕಾರವಾರದ ಕನ್ನಡ ಮತ್ತು ಬಳ್ಳಾರಿಯ ಕನ್ನಡಗಳನ್ನು ಪರಸ್ಪರ ಎದುರುಬದುರಾಗಿಸಿದರೆ ಅವೆರಡರ ನಡಿಗೆಯಲ್ಲಿಯೆ ಮೂಲಬೂತವಾದ ಬಿನ್ನತೆಗಳನ್ನು ಕಾಣಬಹುದು. ಇದು ಸರಳವಾಗಿ ಒಳನುಡಿಗಳ ನಡುವಿನ ವ್ಯತ್ಯಾಸವನ್ನು ಅರಿಯುವುದಕ್ಕೆ ಸಹಾಯಕವಾಗಬಹುದು.
ಹೀಗೆಯೆ ಇನ್ನೂ ಕೆಲವು ಅಂಶಗಳನ್ನು ಒಳನುಡಿಗಳ ನಡುವಿನ ಅಂಶಗಳಾಗಿ ನೋಡುವುದಕ್ಕೆ ಸಾದ್ಯವಿದೆ. ಬೇರೆ ಬಾಶೆಗಳ ಸಂಪರ‍್ಕ ಅವುಗಳಲ್ಲಿ ಮಹತ್ವದ ಅಂಶ. ಅಂದರೆ ಬೆಳಗಾವಿಯಲ್ಲಿ ಮರಾಟಿ ಸಂಪರ‍್ಕ ಹೆಚ್ಚಿದ್ದರೆ ತುಮಕೂರಿನಲ್ಲಿ ತೆಲುಗು ಮತ್ತು ಚಾಮರಾಜನಗರದಲ್ಲಿ ತಮಿಳು, ಮಂಗಳೂರಿನಲ್ಲಿ ತುಳು ಪ್ರಬಾವ ಹೆಚ್ಚಾಗಿ ಕಾಣಿಸುತ್ತದೆ.
ಇಂದಿನ ಕಾಲದ ಆದುನಿಕತೆ ಬೆಳವಣಿಗೆ ವಿಚಿತ್ರವಾದ ರೀತಿಯಲ್ಲಿ ಸ್ತಳೀಯತೆಯನ್ನು ಮುರಿದು ಕಟ್ಟುತ್ತಿದೆ. ವ್ಯಾಪಾರ ವ್ಯವಹಾರಗಳ ಬೆಳವಣಿಗೆ, ಶಿಕ್ಶಣ, ಸಂಪರ‍್ಕ ಮೊದಲಾದ ಕಾರಣಗಳಿಂದಾಗಿ ಪಾರಂಪರಿಕವಾಗಿ ಬಂದಿದ್ದ ಒಳನುಡಿಗಳು ಒಂದೆಡೆ ಇಲ್ಲವಾಗುವ ಬಯವನ್ನು ತೋರಿಸುತ್ತಿದ್ದರೆ ಇನ್ನೊಂದೆಡೆ ಹೊಸತಾದ ಮತ್ತು ಅತ್ಯಂತ ವಿಬಿನ್ನವಾದ ಬೆಳವಣಿಗೆಗಳು ಕಾಣಿಸುತ್ತಿವೆ. ಬೆಂಗಳೂರು ನಗರದಂತ ಕನ್ನಡದಲ್ಲಿ ಆಗಿರುವ ಬದಲಾವಣೆಗಳನ್ನು ಇಲ್ಲಿ ಗಮನಿಸಬಹುದು.
ಕನ್ನಡ ಒಳನುಡಿಗಳನ್ನು ನಾವಿಂದು ಸೂಕ್ತವಾಗಿ ಗುರುತಿಸಬೇಕಾಗಿದೆ. ಇದರಿಂದ ಕನ್ನಡ ಬಾಶೆಯ ಇತಿಹಾಸಿಕ ಬೆಳವಣಿಗೆ, ಕನ್ನಡದ ಪಸರಿಕೆ ಮೊದಲಾದವನ್ನು ತಿಳಿದುಕೊಳ್ಳುವುದಕ್ಕೆ ಅನುಕೂಲವಾಗುವುದು ಮಾತ್ರವಲ್ಲದೆ ಕನ್ನಡ ಮಾತಾಡುವ ಸಮುದಾಯವನ್ನು, ಸಮಾಜವನ್ನು ಚೆನ್ನಾಗಿ ತಿಳಿದುಕೊಳ್ಳುವುದಕ್ಕೆ ಇದು ಹೆಚ್ಚಿನ ಸಹಾಯ ಮಾಡುವಂತದ್ದು. ಯಾಕೆಂದರೆ ಬಾಶೆ ಮನುಶ್ಯರಿಗೆ ಬಾವನಾತ್ಮಕ, ಮಾನಸಿಕ, ಸಾಮಾಜಿಕ, ಸಾಂಸ್ಕ್ರುತಿಕ ಎಲ್ಲವೂ ಆಗಿರುತ್ತದೆ. ಹಾಗಾಗಿ, ಒಳನುಡಿಗಳನ್ನು ಅರಿತುಕೊಂಡರೆ, ಅವುಗಳಿಗೆ ಇರುವ ಗುರ‍್ತಿಕೆಯನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕ. ಇದು ಕನ್ನಡದವರನ್ನ ಅರಿತುಕೊಳ್ಳುವುದಕ್ಕೆ ಸಹಾಯಕ. ಈ ಎಲ್ಲ ಕಾರಣಗಳಿಂದ ಕನ್ನಡದ ಒಳನುಡಿಗಳನ್ನು ಅರಿತುಕೊಳ್ಳಬೇಕಿದೆ.
ಇಲ್ಲಿಯೆ ಇನ್ನೊಂದು ಮುಕ್ಯವಾದ ಮಾತನ್ನೂ ಆಡಬೇಕಿದೆ. ರಾಜಕೀಯ ಕೇಂದ್ರದ ಸುತ್ತ ಇರುವ ಪರಿಸರ ಅದೆ ನಾಡಿನ ಇನ್ನುಳಿದ ಪ್ರದೇಶಗಳ ಮೇಲೆ ದೊಡ್ಡಸ್ತಿಕೆ ತೋರಿಸುವುದು, ಉಳಿದವುಗಳನ್ನು ಎರಡನೆ ಸ್ತಾನಕ್ಕೆ ಇಳಿಸುವುದು ಮೊದಲಾದವು ನಡೆಯುತ್ತಿರುತ್ತವೆ. ಇವು ನಾಡಿನಲ್ಲಿ ಅಸಮಾನತೆಯ ಅನುಬವವನ್ನು ತರುತ್ತವೆ. ಈ ಅಸಮಾನತೆ ಅನುಬವ ಬಾಶೆಯಲ್ಲಿಯೂ ಕಂಡುಬರುತ್ತದೆ. ಅನವಶ್ಯಕವಾಗಿ ಮಯ್ಸೂರು ಕೇಂದ್ರಿತ ಒಳನುಡಿಗಳು ಪ್ರತಿಶ್ಟೆಯನ್ನು ಪಡೆದುಕೊಂಡಿವೆ. ಇದರಿಂದಾಗಿ ಉತ್ತರ ಕರ‍್ನಾಟಕದ ಒಳನುಡಿಗಳ ಬಗೆಗೆ ಅಸಹನೆ, ತಪ್ಪು ಎಂಬ ಮನೋಬಾವ, ಒರಟು ಎಂಬ ಅಸಹಿಶ್ಣುತೆ ಇವೆಲ್ಲ ತುಂಬಿಕೊಂಡಿವೆ. ಇವುಗಳು ಒಂದು ನಾಡಿನ ಜನತೆಯ ಸಾಮಾಜಿಕ ಬದುಕಿನಲ್ಲಿ ಅಸಮತೋಲನವನ್ನು ತರುವುದು ಮಾತ್ರವಲ್ಲದೆ ಪರಸ್ಪರರ ನಡುವೆ ಅವಮಾನದ, ಅನುಮಾನದ ಸಂಬಂದವನ್ನು ಬೆಳೆಯುವುದಕ್ಕೆ ಕಾರಣವಾಗುತ್ತವೆ. ಇದು ಯಾವತ್ತೂ ಒಂದು ನಾಡಿಗೆ ಒಳ್ಳೆಯದಲ್ಲ. ಈ ಮನೋಬಾವ ಬೆಳೆಯದಂತೆ ನೋಡಿಕೊಳ್ಳಬೇಕಿರುವುದು ಸಮಾಜದ ಜವಾಬ್ದಾರಿ. ಈಗ ಕರ‍್ನಾಟಕದ ಸಂದರ‍್ಬದಲ್ಲಿ ಬೆಳೆದಿರುವ ಈ ಮನೋಬವಾವನ್ನು
ಇಲ್ಲವಾಗಿಸುವ ಪ್ರಯತ್ನ ನಾವು ಮಾಡಬೇಕಿದೆ. ಪರಸ್ಪರರನ್ನು ಗವುರವಿಸುವುದೆ ಬಹುತ್ವ, ಇನ್ನೊಬ್ಬರನ್ನು ಒಪ್ಪಿಕೊಳ್ಳುವುದೆ ನಿಜವಾದ ಬಹುತ್ವ. ಪರಸ್ಪರ ಒಳನುಡಿಗಳನ್ನು ಗವುರವಿಸುವುದು, ಇನ್ನೊಂದು ಒಳನುಡಿಯನ್ನು ಒಪ್ಪಿಕೊಳ್ಳುವುದೆ ನಿಜವಾದ ಕನ್ನಡದ ಪ್ರೀತಿ.
ಈ ಅಂಕಣದ ಹಿಂದಿನ ಬರೆಹಗಳು:
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.