Date: 27-04-2021
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ನ್ಯೂ ಮೆಕ್ಸಿಕೊದ ಕಂಟೆಂಪೊರರಿ ಆರ್ಟ್ ಕಲಾವಿದ ನಾಮನ್ ಬ್ರೂಸ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದ: ನಾಮನ್ ಬ್ರೂಸ್ (Nauman Bruce)
ಜನನ: 06 ಡಿಸೆಂಬರ್, 1941
ಶಿಕ್ಷಣ: ಯೂನಿವರ್ಸಿಟಿ ಆಫ್ ವಿಸ್ಕಾನ್ಸಿನ್, ಮೆಡೆಸನ್; ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಡೇವಿಸ್.
ವಾಸ: ನ್ಯೂ ಮೆಕ್ಸಿಕೊ
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ನಿಯಾನ್ ಶಿಲ್ಪಗಳು, ಫೊಟೋಗ್ರಫಿ, ವೀಡಿಯೊ, ಪರ್ಫಾರ್ಮೆನ್ಸ್, ಪ್ರಿಂಟ್ ಮೇಕಿಂಗ್
ನಾಮನ್ ಬ್ರೂಸ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕಲೆಯ ಕಲಿಕೆ ಮುಗಿಸಿ ಹೊರಬಂದ ಬಳಿಕ ನಾಮನ್‍ಗೆ ಎದುರಾದ ಮೊದಲ ಪ್ರಶ್ನೆ ಏನುಮಾಡುವುದು? ಎಂಬುದು. “ನಾನು ಒಬ್ಬ ಕಲಾವಿದ ಎಂದಾದಮೇಲೆ ನಾನು ಸ್ಟುಡಿಯೋದಲ್ಲಿರುವಾಗ, ನಾನು ಮಾಡಿದ್ದೆಲ್ಲವೂ ಕಲೆ ಆಗಬೇಕಲ್ಲವೇ?” ಇಂತಹದೊಂದು ಪ್ರಶ್ನೆ ಮೂಡಿದಾಗ, ಕಲೆ ಒಂದು ಅಂತಿಮ ಉತ್ಪನ್ನ ಆಗದೇ ಒಂದು ನಿರಂತರ ಪ್ರಕ್ರಿಯೆ ಆಗಿ ಉಳಿಯುತ್ತದೆ. 60-70ರ ದಶಕದಲ್ಲಿ ಅಮೆರಿಕ ಕಂಡ ಮಹತ್ವದ ಕಲಾವಿದರಲ್ಲೊಬ್ಬರಾದ ನಾಮನ್ ಬ್ರೂಸ್, ತನ್ನದೆಂಬ ನಿರ್ದಿಷ್ಟ ಶೈಲಿಯಾಗಲೀ, ಅನನ್ಯವಾದ ಮತ್ತು ತನ್ನ ಕಲೆಗಳನ್ನೆಲ್ಲ ಜೋಡಿಸುವ ಒಂದು ಚಿಂತನಾಲಹರಿಯಾಗಲೀ ಇಲ್ಲದಿದ್ದರೂ, ಕಲೆಯನ್ನು ಗೀಳಿನಂತೆ ಹಚ್ಚಿಕೊಂಡು, ಏಕಾಂಗಿಯಾಗಿ ತಾನು ಬಳಸಿದ ವಸ್ತುಗಳನ್ನು, ಚಿಂತನಾ ಲಹರಿಗಳನ್ನು ಮತ್ತೆ ಮತ್ತೆ ತಡಕಿ ನೋಡಿ ಹೊಸ ಅನುಭವಗಳಿಗಾಗಿ ಹಾತೊರೆದವರು. ಅವರ ಈ ಪ್ರಕ್ರಿಯೆಯಲ್ಲಿ ಅವರು ಸ್ವತಃ ತನ್ನನ್ನು ಮಾತ್ರವಲ್ಲದೇ ತನ್ನ ಸಹಚರರು, ನೋಡುಗರನ್ನೂ ಒಳಗೊಳ್ಳಿಸಿ ಅವರ ಯೋಚನೆಗಳ ಸರಪಣಿಯಲ್ಲಿ ನಮ್ಮನ್ನು ತಪ್ಪಿಸಿಕೊಳ್ಳಲಾಗದಂತೆ ಬಂಧಿಸಿಡುತ್ತಾರೆ. ತನ್ನ ಸುದೀರ್ಘ ಕಲಾ ಬದುಕಿನಲ್ಲಿ ತನ್ನ ಕೈಗೆಟಕುವ ವಸ್ತುಗಳು ಮತ್ತು ಸಂಗತಿಗಳಿಂದಲೇ, ಸನ್ನಿವೇಶಗಳಿಂದಲೇ ಅಥವಾ ತನ್ನ ದೇಹವನ್ನೇ ಬಳಸಿ ಕಲಾಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾ ಬಂದಿದ್ದಾರೆ. ಒಬ್ಬ ವೀಡಿಯೊ ಆರ್ಟಿಸ್ಟ್ ಆಗಿ, ನಿಯಾನ್ ನಂತಹ ಜನಪ್ರಿಯ ವಸ್ತುಗಳನ್ನು ಬಳಸಿ, ಪರ್ಫಾರ್ಮೆನ್ಸ್ ಕಲಾವಿದರಾಗಿ, ಶಬ್ದಗಳೊಂದಿಗೆ ಆಡುತ್ತಾ ಅವರು ಹಾಕಿರುವ ಬುನಾದಿಯೇ ಮುಂದೆ ಪೋಸ್ಟ್ ಮಾಡರ್ನಿಸಂ ಆಗಿ ಬೆಳೆದುನಿಂತದ್ದು ಸುಳ್ಳಲ್ಲ. ಅವರೆಂದೂ ಏನೋ ಒಂದು ಅಂತಿಮ ಸತ್ಯವನ್ನು ಹೇಳುವ ಕಲಾ ಉತ್ಪನ್ನವನ್ನು ಕೊಡಲಿಲ್ಲ, ಬದಲಾಗಿ, ಕಲೆಯ ಪ್ರಕ್ರಿಯೆಯನ್ನು ಅದರ ವಾಸ್ತವ ಸ್ಥಿತಿಯಲ್ಲಿ ತೋರಿಸಿದರು.
ಇಂಡಿಯಾನಾದಲ್ಲಿ ಇಂಜಿನಿಯರ್ -ಸೇಲ್ಸ್‌ಮನ್ ಆಗಿದ್ದ ತಂದೆಯ ಕುಟುಂಬದಲ್ಲಿ ಬೆಳೆದು, ಅವರ ಉದ್ಯೋಗದ ಕಾರಣಕ್ಕೆ ತಂದೆಯ ಜೊತೆ ಹಲವು ಬಾರಿ ಊರು ಬದಲಾಯಿಸಿದ್ದರಿಂದ, ನಾಚಿಕೆ, ಏಕಾಕಿತನಗಳಲ್ಲೇ ಬೆಳೆದ ನಾಮನ್‌ಗೆ ಮೊದಲ ಸಂಗಾತಿ ಸಂಗೀತ. ಕಾಲೇಜಿಗೆ ಹೋಗುವ ವೇಳೆಗೆ ಕಲೆಯಲ್ಲಿ ಆಸಕ್ತಿಯನ್ನು ಮುಂದುವರಿಸಲು ತೀರ್ಮಾನಿಸಿದ ನಾಮನ್‌ಗೆ, ಕ್ಯಾಲಿಫೋರ್ನಿಯಾ ವಿವಿಯಲ್ಲಿ ಶಿಕ್ಷಕರು ಬಹಳ ಪ್ರಭಾವ ಬೀರುತ್ತಾರೆ. ಆಗಲೇ ಹಲವು ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಮ್ಡ ನಾಮನ್, 1965ರಲ್ಲಿ ಪೇಂಟಿಂಗ್ ಇನ್ನು ಮಾಡುವುದಿಲ್ಲ ಎಂದು ನಿರ್ಧರಿಸುತ್ತಾರೆ. ಅದಕ್ಕವರು ಕಂಡುಕೊಂಡ ಕಾರಣ, ಅದಕ್ಕೆ ಬಳಸುವ ಸಲಕರಣೆಗಳೇ ತನ್ನ ಕಲಾಭಿವ್ಯಕ್ತಿಗೆ ಅಡ್ಡಿ ಆಗುತ್ತಿವೆ ಎಂಬುದು! ತನ್ನಾಭಿವ್ಯಕ್ತಿಗೆ ಹೊಸ ಮಾಧ್ಯಮಗಳನ್ನು ಹುಡುಕಾಡತೊಡಗಿದ ನಾಮನ್‌ಗೆ ಮೊದಲು ದೊರೆತದ್ದು ಫೈಬರ್‌ಗ್ಲಾಸ್. ಉತ್ಪನ್ನಕ್ಕಿಂತ ಪ್ರಕ್ರಿಯೆ ಮುಖ್ಯ ಎಂಬ ಅವರ ನಿಲುವು ಹುಟ್ಟಿದ್ದೂ ಈ ಕಾಲದಲ್ಲೇ. 70ರ ದಶಕದಲ್ಲಿ ಹಲವು ಪ್ರಮುಖ ಕಲಾ ಪ್ರದರ್ಶಿನಿಗಳಲ್ಲಿ ಪಾಲ್ಗೊಂಡು ಹೆಸರು ಮಾಡಿದ ನಾಮನ್‌ಗೆ ಪ್ರೋತ್ಸಾಹ ದೊರೆತದ್ದು ಆಗಹೊಸ ಅಭಿವ್ಯಕ್ತಿಗಳತ್ತ ಮುಖ ಮಾಡಿದ್ದ ಯುರೋಪಿನಿಂದಲೇ ಹೊರತು ಅವರಿದ್ದ ಅಮೆರಿಕದ ಸಾಂಪ್ರದಾಯಿಕ ವಾತವರಣದಿಂದಲ್ಲ. ಆದರೆ ಈ ಆರಂಭಿಕ ಯಶಸ್ಸಿಗೆ, ವೈಯಕ್ತಿಕವಾಗಿ ಏಕಾಕಿತನ ಇಷ್ಟಪಡುವ ನಾಮನ್ ಪೂರಕವಾಗಿ ಪ್ರತಿಕ್ರಿಯಿಸದಿದ್ದುದರಿಂದ ಅವರ ಮಾರುಕಟ್ಟೆ ಸ್ಥಾಗಿತ್ಯ ಕಂಡಿತು. ಆಗವರು “Pay Attention” ಎಂದು ಚೀರುವ ಶಬ್ದಾಭಿವ್ಯಕ್ತಿಗಳಲ್ಲಿ ತೊಡಗಿಕೊಂಡರು. ತನ್ನ ಮನದಾಳದ ಧ್ವನಿಯನ್ನು ಶಿಲ್ಪಗಳಲ್ಲಿ ವ್ಯಕ್ತಗೊಳಿಸುವ ಈ ಆಟ ಅವರಿಗೆ ಹೊಸದೊಂದು ಲೋಕವನ್ನೇ ತೆರೆದುಕೊಟ್ಟು, ಶಬ್ದಗಳೇ ಮೂಲವಾಗಿರುವ ಇನ್ಸ್ಟಾಲೇಷನ್‌ಗಳನ್ನು ರಚಿಸಿದರು.
ಶಬ್ದಗಳು ಮತ್ತು ರಾಜಕೀಯ ಅಭಿವ್ಯಕ್ತಿಗಳ ಮೂಲಕವೇ ಜಗತ್ತಿನಾದ್ಯಂತ ಪ್ರಸಿದ್ಧರಾಗಿರುವ ನಾಮನ್ ಶಬ್ದಗಳನ್ನೂ ತನ್ನ ಕಲಾಕೃತಿಗಳಲ್ಲಿ ದುಡಿಸಿಕೊಂಡಿದ್ದಾರೆ. ಅವರ ಎರಡನೆಯ ಪತ್ನಿ ಸೂಸನ್ ರಾಥೆನ್‌ಬರ್ಗ್ ಕೂಡ ಪ್ರಮುಖ ಕಲಾವಿದೆ.
“I never saw being an artist as something that’s pure and separate from how you live the rest of your life, the politics of the situation,” (ನ್ಯೂಯಾರ್ಕ್ ಟೈಮ್ಸ್ ಸಂದರ್ಶನದಲ್ಲಿ, ಅಕ್ಟೋಬರ್, 2018) ಎಂದು ತನ್ನ ನಿಲುವನ್ನು ಸ್ಪಷ್ಟ ಪಡಿಸುವ ನಾಮನ್ “ಗ್ರೀನ್ ಲೈಟ್ ಕಾರಿಡಾರ್” (1970) ಕಲಾಕೃತಿಯಲ್ಲಿ ಜನರ ಮೇಲೆ ಪ್ರಭುತ್ವ ನಿಗಾ ಇರಿಸುವ ಸಂಗತಿಯನ್ನು ವ್ಯಕ್ತಪಡಿಸಿದ್ದಿದೆ. ಅದರ ಬಗ್ಗೆ ಅವರು ಅದೇ ಸಂದರ್ಶನದಲ್ಲಿ ಹೇಳಿದ್ದು ಹೀಗೆ: “I understood what was going on. But it was also more of an investigation of my own feelings about privacy.”
ನಾಮನ್ ಬ್ರೂಸ್ ಕುರಿತ ಹೈನ್ಸ್ ಪೀಟರ್ ಷ್ವರ್ಫೆಲ್ ಅವರ ಡಾಕ್ಯುಮೆಂಟರಿ ಚಿತ್ರ “Bruce-Nauman Make me think”:
MoMAದಲ್ಲಿ ನಾಮನ್ ಬ್ರೂಸ್ ಅವರ ರೆಟ್ರೊಸ್ಪೆಕ್ಟಿವ್ ಕಲಾಪ್ರದರ್ಶನದ ಬಗ್ಗೆ ಮಾತುಕತೆ:
ಚಿತ್ರ ಶೀರ್ಷಿಕೆಗಳು:
ನಾಮನ್ ಬ್ರೂಸ್ ಅವರ Animal Pyramid, (1989)
ನಾಮನ್ ಬ್ರೂಸ್ ಅವರ Cockeye Lips, (2006)
ನಾಮನ್ ಬ್ರೂಸ್ ಅವರ four pairs of heads (wax), (1991)
ನಾಮನ್ ಬ್ರೂಸ್ ಅವರ Green light corridor (1970)
ನಾಮನ್ ಬ್ರೂಸ್ ಅವರ Left or Standing, Standing or Left Standing, (1971)
ನಾಮನ್ ಬ್ರೂಸ್ ಅವರ Malice, 1980
ನಾಮನ್ ಬ್ರೂಸ್ ಅವರ Mapping the Studio I (Fat Chance John Cage), (2001) Photo- Stuart Tyson
ನಾಮನ್ ಬ್ರೂಸ್ ಅವರ one hundred fish fountain, (2005)
ನಾಮನ್ ಬ್ರೂಸ್ ಅವರ One hundred live and die (1984)
ನಾಮನ್ ಬ್ರೂಸ್ ಅವರ seven figures (1985)
ನಾಮನ್ ಬ್ರೂಸ್ ಅವರ The True Artist Helps the World by Revealing Mystic Truths, (1967)
ಈ ಅಂಕಣದ ಹಿಂದಿನ ಬರೆಹಗಳು:
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.