Date: 01-06-2021
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಆಸ್ಟ್ರೇಲಿಯಾ ಮೂಲದ ಕಂಟೆಂಪೊರರಿ ಆರ್ಟ್ ಕಲಾವಿದೆ ಫಿಯೋನಾ ಮಾರ್ಗರೆಟ್ ಹಾಲ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದೆ: ಫಿಯೋನಾ ಮಾರ್ಗರೆಟ್ ಹಾಲ್ (Fiona Margaret Hall)
ಜನನ: 16 ನವೆಂಬರ್, 1953
ಶಿಕ್ಷಣ: ನ್ಯಾಷನಲ್ ಆರ್ಟ್ ಸ್ಕೂಲ್, ಸಿಡ್ನಿ, ಆಸ್ಟ್ರೇಲಿಯಾ
ವಾಸ: ಸಿಡ್ನಿ, ಆಸ್ಟ್ರೇಲಿಯಾ
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ಸ್ಕಲ್ಪ್ಚರ್, ಪೇಂಟಿಂಗ್, ಇನ್ಸ್ಟಾಲೇಷನ್
ಫಿಯೊನಾ ಹಾಲ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಆಸ್ಟ್ರೇಲಿಯಾದ ಕಂಟೆಂಪೊರರಿ ಕಲಾವಿದರಲ್ಲಿ ಪ್ರಮುಖರೆಂದು ಗುರುತಿಸಲಾಗುವ ಫಿಯೋನಾ ಹಾಲ್ ಸಾಮಾನ್ಯ ದೈನಂದಿನ ಬಳಕೆಯ ವಸ್ತುಗಳನ್ನು ಸಮಕಾಲೀನ ಮತ್ತು ಚಾರಿತ್ರಿಕ ಹೊಳಹುಗಳಿರುವ ಜೈವಿಕ ಸ್ವರೂಪದ ಕಲಾಕೃತಿಗಳಾಗಿ ರಚಿಸುವ ಮೂಲಕ ಜಾಗತೀಕರಣ, ಕೊಳ್ಳುಬಾಕತನ, ಕೊಲೋನಿಯಲಿಸಂ ಮತ್ತು ಪರಿಸರದ ಚರ್ಚೆಗಳನ್ನು ಮುನ್ನೆಲೆಗೆ ತರುವ ಮೂಲಕ ಪ್ರಸಿದ್ಧರು. ಅವರು ತಮ್ಮ ಕಲಾಕೃತಿಗಳ ಬಗ್ಗೆ ಸಂದರ್ಶನವೊಂದರಲ್ಲಿ ಇತ್ತೀಚೆಗೆ ಹೀಗೆ ಹೇಳಿಕೊಂಡಿದ್ದರು: “I’m not someone who thinks that art necessarily changes the world. I would never have thought when I started out with my art practice that I would end up making work that was quite concertedly referencing some of these issues. But maybe as one gets older you gain a different kind of awareness, and the emphasis of your work changes.” (ದಿ ಗಾರ್ಡಿಯನ್‌ನಲ್ಲಿ ಸ್ಟೆಪ್ ಹಾರ್ಮನ್ ಅವರಿಗೆ ನೀಡಿದ ಸಂದರ್ಶನದಲ್ಲಿ. 2016,ಮೇ)
ಫಿಯೋನಾ, ಪ್ರಸಿದ್ಧ ರೇಡಿಯೊ ಫಿಸಿಕ್ಸ್ ವಿಜ್ಞಾನಿ ರೂಬಿ ಪಯ್ನ್-ಸ್ಕಾಟ್ (ತಾಯಿ) ಮತ್ತು ಟೆಲಿಫೋನ್ ತಾಂತ್ರಿಕ ಪರಿಣಿತ ವಿಲಿಯಂ ಹೋಲ್ಮನ್ ಹಾಲ್ (ತಂದೆ) ಅವರ ಮಗಳು. ಆಕೆಯ ಅಣ್ಣ ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞ ಪೀಟರ್ ಗಾವಿನ್ ಹಾಲ್. ಬಾಲ್ಯದಲ್ಲಿ ಹೆತ್ತವರೊಂದಿಗೆ ವಾರಾಂತ್ಯದಲ್ಲಿ ಮನೆಯಿಂದ ಹೊರಗೆ ನಡಿಗೆಗೆ ಹೋಗುತ್ತಿದ್ದಾಗ ಆದ ಪರಿಸರದ ಸಖ್ಯ ಫಿಯೋನಾ ಮೇಲೆ ಬಹಳ ಪ್ರಭಾವ ಬೀರಿತ್ತು. ಅದನ್ನು ಅವರ ಕಲಾಕೃತಿಗಳಲ್ಲಿ ಕಾಣಬಹುದು. ಕಲಿಕೆಯ ವೇಳೆ ಆರ್ಕಿಟೆಕ್ಟ್ ಆಗಬಯಸಿದ್ದ ಫಿಯೋನಾ, ಕಲೆಯಲ್ಲಿ ಮುಂದುವರಿಸಬಯಸಿದರು. ಸಿಡ್ನಿಯ ನ್ಯಾಷನಲ್ ಆರ್ಟ್ ಸ್ಕೂಲಿನಲ್ಲಿ ಕಲಿಯುವಾಗತನ್ನ ಶಿಕ್ಷಕರ ಪ್ರಭಾವದಿಂದಾಗಿ ಫೊಟೋಗ್ರಫಿ ಕಡೆ ಆಸಕ್ತಿ ಬೆಳೆಸಿಕೊಂಡರು.
ಕಲಿಕೆಯ ಬಳಿಕ, ಇಂಗ್ಲೆಂಡಿಗೆ ಹೋಗಿ ಸ್ವಲ್ಪ ಕಾಲ ನೆಲೆಸಿದ ಫಿಯೋನಾ, ಅಲ್ಲಿಂದ ಐರೋಪ್ಯ ದೇಶಗಳನ್ನು ಸುತ್ತಿ, ಅಲ್ಲಿ ಗ್ಯಾಲರಿಗಳಿಂದ ಪಡೆದ ಅನುಭವದ ಆಧಾರದಲ್ಲಿ ಸಮಕಾಲೀನ ಕಲೆಯಲ್ಲಿ ತನ್ನನ್ನು ತೊಡಗಿಸಿಕೊಂಡರು. 77ರಲ್ಲಿ ಲಂಡನ್‌ನಲ್ಲಿ ತನ್ನ ಮೊದಲ ಕಲಾಪ್ರದರ್ಶನ ನೀಡಿದ ಬಳಿಕ, ತಾಯಿಯ ಅನಾರೋಗ್ಯದ ಕಾರಣಕ್ಕೆ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ ಫಿಯೋನಾ, ಮೆಲ್ಬರ್ನ್ ನಗರದಲ್ಲಿ ತನ್ನ ಫೊಟೋಗ್ರಫಿ ಪ್ರದರ್ಶನ ನೀಡಿದರು. ಮುಂದೆ ಅಮೆರಿಕಕ್ಕೆ ತೆರಳಿ, ನ್ಯೂಯಾರ್ಕ್‌ನ ರೋಚೆಸ್ಟರ್‌ನಲ್ಲಿ ಕಲಾ ಸ್ನಾತಕ ಪದವಿ ಪಡೆದರು. 81ರಲ್ಲಿ ಅಲ್ಲಿಂದ ಹಿಂದಿರುಗಿದ ಬಳಿಕ ಅವರು ಫೊಟೋಗ್ರಫಿಯಿಂದ ಸಮಕಾಲೀನ ಕಲಾಕೃತಿಗಳಿಗೆ ಪಲ್ಲಟಗೊಂಡರು. ಅವರ ಹಲವಾರು ಪ್ರದರ್ಶನಗಳು ಆಸ್ಟ್ರೇಲಿಯಾ ಮತ್ತು ಜಗತ್ತಿನದ್ಯಂತ ನಡೆದವು. ಇಂದು ಆಸ್ಟ್ರೇಲಿಯಾದ ಹಲವು ಪ್ರಮುಖ ಮ್ಯೂಸಿಯಂಗಳಲ್ಲಿ ಅವರ ಕಲಾಕೃತಿಗಳ ಸಂಗ್ರಹ ಇದೆ.
ಅವರ ಪ್ರಮುಖ ಕಲಾಕೃತಿಗಳಲ್ಲಿ, Sardine cans ಸರಣಿ (Paradisus Terrestris), The Antipodean Suite, Morality Dolls - The Seven Deadly Sins, Illustrations to Dante's Divine Comedy, Fern Garden, A Folly for Mrs Macquarie, Wrong Way Time ಸೇರಿವೆ. ಅವರು ಹಲವು ಪ್ರಮುಖ ಜಾಗತಿಕ ಕಲಾಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಆಸ್ಟ್ರೇಲಿಯಾದ ಹಲವು ಪ್ರಮುಖ ಪುರಸ್ಕಾರಗಳನ್ನು ಗಳಿಸಿಕೊಂಡಿದ್ದಾರೆ.
ತನ್ನ ಹೆಚ್ಚಿನ ಕಲಾಕೃತಿಗಳು ಬಳಸುವ ಸಾಮಗ್ರಿಗಳು ಮತ್ತು ಅದು ಕಲಾಕೃತಿಯಾಗಿ ನಿಂತು ಏನನ್ನು ವಿಷದಪಡಿಸುತ್ತವೆ ಎಂಬುದರ ನಡುವೆ ಅಂತರ ಇಲ್ಲ.ಸಾಮಗ್ರಿ ತಾನೇ ತಾನಾಗಿ ಹೊತ್ತಿರುವ ಅರ್ಥ ಮತ್ತು ಅದನ್ನು ಕಲಾಕೃತಿಯಾಗಿಸಿ ಒಂದು ಸಿದ್ಧಾಂತಕ್ಕೆ ಒಗ್ಗಿಸಿದಾಗ ಅದು ಎರಡೂ ಅಂಶಗಳು ಸಮಾನವಾಗಿ ಮುಖ್ಯ ಅನ್ನಿಸುತ್ತವೆ.
ತನ್ನ ಕಲಾಕೃತಿಗಳ ಅಂದ, ಕುಸುರಿ ಮತ್ತು ಅದರ ತಾಂತ್ರಿಕ ನಾಜೂಕುತನದಿಂದಾಗಿ ಗಮನ ಸೆಳೆಯುತ್ತವೆ. ಈ ಅಂಶಗಳು ವೀಕ್ಷಕರನ್ನು ಕಲಾಕೃತಿಯೆಡೆಗೆ ಸೆಳೆಯುವ ಅಂಶಗಳಾಗಿದ್ದು, ಕಲಾಕೃತಿಯನ್ನು ಅನುಭವಿಸುವಾಗ ನೋಡುಗ ಅದನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅವರ ವಾದ.
ಫಿಯೋನಾ ಹಾಲ್ ಉಪನ್ಯಾಸ ಆರ್ಟ್ ಬಾಸೆಲ್‌ನಲ್ಲಿ:
ಫಿಯೋನಾ ಹಾಲ್ ಸಂದರ್ಶನ:
ಚಿತ್ರ ಶೀರ್ಷಿಕೆಗಳು:
ಫಿಯೋನಾ ಹಾಲ್ ಅವರ All The King's Men, (2014-15)
ಫಿಯೋನಾ ಹಾಲ್ ಅವರ Crust (2014–15)
ಫಿಯೋನಾ ಹಾಲ್ ಅವರ Far Side, (2013)
ಫಿಯೋನಾ ಹಾಲ್ ಅವರ Give a dog a bone, (1996)
ಫಿಯೋನಾ ಹಾಲ್ ಅವರ Man with Long Memory, (2013)
ಫಿಯೋನಾ ಹಾಲ್ ಅವರ nullius nebula, (2020)
ಫಿಯೋನಾ ಹಾಲ್ ಅವರ Poster Paradisus Terrestris (1989-90)(detail)
ಫಿಯೋನಾ ಹಾಲ್ ಅವರ The price is right, (1994)
ಫಿಯೋನಾ ಹಾಲ್ ಅವರ Untitled [Out of my tree], (2014)
ಫಿಯೋನಾ ಹಾಲ್ ಅವರ Untitled, (2015)
ಈ ಅಂಕಣದ ಹಿಂದಿನ ಬರೆಹಗಳು
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.