Date: 03-09-2023
Location: ಬೆಂಗಳೂರು
''ಅಡವಿಯ ಬುಡಕಟ್ಟು ಸಮುದಾಯದ ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳೊಂದಿಗೆ ಆಟ ಪಾಠಗಳ ಜೊತೆ ಜ್ಞಾನ ವಿಕಸನ. ವನಚೇತನ ಯಾವುದೇ ಶಾಲೆಗೆ ಹೋದರೂ ಅಲ್ಲಿನ ಶಾಲೆಗಳಲ್ಲಿ ಶಿಕ್ಷಣಕ್ಕೆ ಏನೆಲ್ಲಾ ಅಗತ್ಯ ಸೌಕರ್ಯಗಳ ಅವಶ್ಯಕತೆ ಇದೆ ಎಂಬುದನ್ನು ಶಾಲಾ ಶಿಕ್ಷಕರಿಂದ ಮನವಿ ಪತ್ರ ಪಡೆದುಕೊಂಡು ಕಾಡಂಚಿನ ಬುಡಕಟ್ಟು ಸಮುದಾಯದ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿರುವ ಶ್ರಮಿಕ ದಿನೇಶ್ ಹೊಳ್ಳ,” ಎನ್ನುತ್ತಾರೆ ಜ್ಯೋತಿ ಎಸ್. ಅವರು ತಮ್ಮ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ “ಪರಿಸರ ಪ್ರೇಮಿ, ಕಲಾವಿದ, ಸಾಹಿತಿ ದಿನೇಶ್ ಹೊಳ್ಳರ ‘ವನಚೇತನ’ದ ಕುರಿತು ಹಂಚಿಕೊಂಡಿದ್ದಾರೆ.
ನಮ್ಮ ಕೆಲಸ ಮಾಡಿಕೊಂಡು ನಮ್ಮ ಮನೆ, ಮಕ್ಕಳು ಕುಟುಂಬ ನೋಡಿಕೊಂಡು ಹೋಗುವುದೇ ಒಮ್ಮೊಮ್ಮೆ ಕಷ್ಟಕರ ಎನಿಸುವ ಈ ಕಾಲದಲ್ಲಿ ಸಮಾಜದ ಬಗ್ಗೆ, ಸಮಾಜದಿಂದ ತುಳಿತಕ್ಕೊಳಗಾದ ಜನರ ಬಗ್ಗೆ, ಅವರ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ದಿನೇಶ್ ಹೊಳ್ಳ ಅವರ ಪರಿಚಯ ಇಂದಿನ ನಿಮ್ಮ ಓದಿಗೆ. ಪರಿಸರ ಪ್ರೇಮಿ, ಕಲಾವಿದ, ಸಾಹಿತಿಯಾಗಿರುವ ದಿನೇಶ್ ಹೊಳ್ಳ ಅವರು ವನಚೇತನ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಕಾಡುಜನರ, ಬುಡಕಟ್ಚು ಸಮುದಾಯಗಳ ಮಕ್ಕಳ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ಈ ವನಚೇತನ ಕಾರ್ಯಕ್ರಮ ಹೇಗಿರತ್ತೆ? ಅದರ ಉದ್ದೇಶದ ಬಗ್ಗೆ ಅವರ ಮಾತುಗಳಲ್ಲಿ ತಿಳಿದುಕೊಳ್ಳೋಣ ಬನ್ನಿ.
'ನನ್ನ ಊರು ಮಂಗಳೂರು, ಅಪ್ಪ ಶಂಕರ ನಾರಾಯಣ ಹೊಳ್ಳ ಅಮ್ಮ ಯಮುನಾ ಹೊಳ್ಳ ವನಚೇತನ ಶುರುವಾಗಿದ್ದು 2006ರಲ್ಲಿ. ಅದು ಹೇಗೆಂದರೆ, ನಾವು ಕಾಡಿಗೆ ಚಾರಣಕ್ಕೆ ಅಂತ ಹೋದಾಗ ಕಾಡಿನಂಚಿನಲ್ಲಿರುವ ಬುಡಕಟ್ಟು ಸಮುದಾಯದವರು ಪಡುತ್ತಿರುವ ಕಷ್ಟಗಳು ಒಂದೊಂದಾಗಿ ತಿಳಿಯುತ್ತ ಬಂತು. ನಾವು ಅಂಕೋಲ, ಜೋಯಿಡ, ಯಲ್ಲಾಪುರ ಹಳಿಯಾಳದ ಕಡೆ ಹೋದಾಗ ಅಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ತಿಳಿಯಿತು. ಹಾಗಾಗಿ ಆ ಮಕ್ಕಳ ಜೊತೆಗೆ ಬೆರೆತು ಅವರ ಕಷ್ಟಗಳನ್ನೆಲ್ಲ ಒಂದೊಂದಾಗಿ ಅರಿತು ಅವರಿಗೆ ಅಗತ್ಯವಿರುವ ಶೈಕ್ಷಣಿಕ ಪರಿಕರಗಳು, ಶಾಲಾ ಬ್ಯಾಗ್, ರೈನ್ ಕೋಟ್ ಕೊಡುತ್ತ ಬಂದ್ವಿ. ಲಾಕ್ಡೌನ್ ಆದ ನಂತರ ಶಾಲೆಗಳೆಲ್ಲ ಬಂದ್ ಆದವು. ಶಾಲೆ ಇಲ್ಲ ಅಂತ ಹೇಳುವಾಗ ಮಕ್ಕಳಿಗೆ ಬೇಜಾರಾಗುತ್ತಿತ್ತು. ಸಿಟಿಗಳಲ್ಲಿ ಆನ್ಲೈನ್ ತರಗತಿಗಳು ನಡೆಯುತ್ತಿದ್ದವು. ಆಗ ನಾವು ಮರದ ಬುಡದಲ್ಲಿ, ಅಂಗಳದಲ್ಲಿ, ಕಾಡಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ ನಾವು ಅವರ ಆತ್ಮವಿಶ್ವಾಸ ಕುಗ್ಗದಂತೆ ಸ್ಫೂರ್ತಿ ತುಂಬುತ್ತಿದ್ದೆವು. ಅಡವಿ ಮಕ್ಕಳಲ್ಲಿ ಏನೆಲ್ಲಾ ಪ್ರತಿಭೆ ಇರುತ್ತದೆಯೋ ಅದನ್ನು ಆರ್ಟ್, ಕ್ರಾಫ್ಟ್, ಹಾಡು, ಡಾನ್ಸ್, ನಾಟಕ, ಗಾಳಿಪಟ ಮಾಡುವುದರ ಮೂಲಕ ಅವರಲ್ಲಿರುವ ಕಲೆಯನ್ನು ಗುರುತಿಸಿ ಅವರಿಗೆ ವಿವಿಧ ಚಟುವಟಿಕೆಗಳನ್ನು ಮಾಡಿಸುತ್ತೇವೆ. ಶಾಲೆಯಲ್ಲಿ ಏನ್ ಸಮಸ್ಯೆ ಇದೆ ಅಂತ ಅವರ ಟೀಚರ್ ಹೇಳ್ತಾ ಇದ್ದರು. ಶಾಲೆಗಳಿಗೆ ಮೂಲಭೂತ ಸೌಕರ್ಯಗಳು, ತರಗತಿಗಳು, ಶಾಲಾ ಬ್ಯಾಗ್, ಕುಡಿಯುವ ನೀರು ಇರಲಿಲ್ಲ. ಮಕ್ಕಳು ನೆಲದಲ್ಲಿ ಕುಳಿತುಕೊಳ್ಳುತ್ತಿದ್ದರು. ಈ ಸಮಸ್ಯೆಗಳನ್ನೆಲ್ಲ ಗುರುತಿಸಿ ಆ ಮಕ್ಕಳಿಗೆಲ್ಲ ಅನುಕೂಲ ಮಾಡಬೇಕು ಅಂತ ಬೆಂಚ್, ಕಪಾಟು, ಲೈಬ್ರರಿ ಮಾಡಿ ಪುಸ್ತಕಗಳನ್ನೆಲ್ಲ ಕೊಡಿಸಲು ಹಲವಾರು ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಿದೆ. ಇದಕ್ಕೆ ಮೊದಲು ಸ್ಪಂದಿಸಿದ್ದು ಮಂಗಳೂರಿನ MCF. ಅವರು ಪ್ರತೀವರ್ಷ ಫರ್ನಿಚರ್ಸ್ ಕೊಟ್ಟಿದ್ದಾರೆ. ನಂತರ ಬೆಂಗಳೂರಿನ ಎಚ್ಎಎಲ್ ನವರು ಶಾಲೆಗಳಿಗೆ ಬ್ಯಾಗ್ ಕಳಿಸ್ತೇವೆ ಅಂದ್ರು. ನೀವೇ ಬಂದು ವಿತರಿಸಬೇಕೆಂದು ಅವರಿಗೆ ವಿನಂತಿಸಿದಾಗ ಶಾಲೆಯ ಸಮಸ್ಯೆಗಳನ್ನು ನೋಡಿ ಮಂಜುನಾಥ್ ಮತ್ತು ಅವರ ಬಳಗದವರು ಬಂದು ಶಾಲೆಗೆ ಆಟದ ವಸ್ತುಗಳು, ಬ್ಲಾಕ್ ಬೊರ್ಡ್, ಗ್ರೀನ್ ಬೊರ್ಡ್ ಕೊಟ್ಟರು. ಮುಕುಂದ್ ದಾಮ್ ಲೇ ಅವರು ಈವರೆಗೆ ಮೂವತ್ತಾರು ಶಾಲೆಗಳಿಗೆ ಕಂಪ್ಯೂಟರ್ ಕೊಟ್ಟಿದ್ದಾರೆ. ವಾಸುದೇವ ಐತಾಳ್ ಎಂಬುವವರು ಅಮೇರಿಕಾದಲ್ಲಿ ಇದ್ದಾರೆ. ಮೊದಲಿನಿಂದಲೂ ನನ್ನ ಜೊತೆಗೆ ನಿರಂತರವಾಗಿ ಕೈ ಜೋಡಿಸಿದ್ದು ಇವರು. ಇಲ್ಲಿಯವರೆಗೆ ಐವತ್ತಾರು ಶಾಲೆಗಳಿಗೆ ವನಚೇತನದಿಂದಾಗಿ ಬೆಂಚುಗಳು ಬಂತು'.
'ಸೆಪ್ಟೆಂಬರ್ ನಿಂದ ಮಾರ್ಚ್ ವರೆಗೆ ಪ್ರತಿವರ್ಷ ವನಚೇತನ ಕಾರ್ಯಕ್ರಮ ಮಾಡುತ್ತೇನೆ. ಈ ಮಕ್ಕಳು ಕಲಿತು ಕೆಲಸ ತಗೋಬೇಕು. ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಇಲ್ಲಿನ ಮಕ್ಕಳಿಗೆ ಕಂಪ್ಯೂಟರ್ ಅಂದ್ರೆ ಏನಂತಲೇ ಗೊತ್ತಿಲ್ಲ. ಟಿವಿ ಡಿಜಿಟಲ್ ಸ್ಲೇಟ್ ನೋಡಿಲ್ಲ. ಅವರ ಮನೆಗಳಿಗೆ ಸೋಲಾರ್ ಲ್ಯಾಂಪ್ ಇತ್ಯಾದಿ ಅಗತ್ಯ ವಸ್ತುಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದೆವು. ಮಕ್ಕಳಿಗೆ ಆಟೋಟ, ವಿವಿಧ ಸ್ಪರ್ಧೆ ನಡೆಸಿ ಒಳ್ಳೊಳ್ಳೆ ಬಹುಮಾನಗಳನ್ನು ಕೊಟ್ಟು ಆ ಮಕ್ಕಳು ಶಾಲೆಗೆ ಬರಲು, ಶೈಕ್ಷಣಿಕವಾಗಿ ಮುಂದೆ ಬರಲು ಈ ವನಚೇತನ ಕಾರ್ಯಕ್ರಮದ ಮುಖಾಂತರ ಪ್ರೋತ್ಸಾಹ ಮಾಡುತ್ತಿದ್ದೇವೆ. ಈಗ ನಾವು ಹೋಗುವ ಹಾಡಿಗಳಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಓದುವ ಮಕ್ಕಳಿಗೆ ಮುಂದೆ ಕಲಿಯಲು ಆರ್ಥಿಕವಾಗಿ ನೆರವಾಗುತ್ತಿದ್ದೇವೆ. ಉತ್ತಮ ಶಾಲಾಕಾಲೇಜುಗಳಿಂದ ಅತಿಥಿ ಉಪನ್ಯಾಸಕರನ್ನು ಕರೆಸಿ ಪಾಠ ಮಾಡಿಸುತ್ತೇವೆ. ಸಹ್ಯಾದ್ರಿ ಸಂಚಯ ಅಸೋಸಿಯೇಷನ್ ಬೆಂಬಲದೊಂದಿಗೆ ಇಪ್ಪತೈದು ವರ್ಷದಿಂದ ಎತ್ತಿನ ಹೊಳೆ ಯೋಜನೆಗಳ ಬಗ್ಗೆ, ಪಶ್ಚಿಮ ಘಟ್ಟಗಳು, ಪಶ್ಚಿಮ ಘಟ್ಟ ಸ್ವಚ್ಛತಾ ಅಭಿಯಾನ, ಪಶ್ಚಿಮ ಘಟ್ಟ ಸುರಕ್ಷತಾ ಅಭಿಯಾನ, ಕಾಲೇಜು ಮಕ್ಕಳಲ್ಲಿ ಪರಿಸರ ಜಾಗೃತಿ ಅಭಿಯಾನ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದೇವೆ. ಇತ್ತೀಚಿನ ಸರ್ವೇ ಪ್ರಕಾರ ಈಗ ಮೂರು ವರ್ಷಗಳಲ್ಲಿ SSLCಯ ನಂತರ ಕಲಿಯುವವರ ಸಂಖ್ಯೆ ಹೆಚ್ಚಾಗಿದೆ ಎಂಬ ವಿಚಾರ ತಿಳಿದು ತುಂಬ ಖುಷಿಯಾಗಿದೆ. ಪೋಷಕರೆಲ್ಲ ಕೂಲಿ ಕೆಲಸಕ್ಕೆ ಹೋಗುವುದರೊಂದಿಗೆ ಅವರ ಮಕ್ಕಳು SSLC ಮುಗಿಸಿದ ಕೂಡಲೇ ಅವರನ್ನು ಕೂಲಿ ಕೆಲಸಕ್ಕೆ ಸೇರಿಸುವುದು ನಿಂತಿದೆ. ಪೋಷಕರು ಅವರ ಆಲೋಚನೆಗಳನ್ನು ಬದಲಾಯಿಸಿಕೊಂಡಿದ್ದಾರೆ. ನೀವು ಕಲಿತರೆ ನೀವು ಪ್ರಶ್ನಿಸುತ್ತೀರಿ. ನಿಮಗೆ ಸಿಗುವ ಅನುದಾನಗಳು, ಸವಲತ್ತುಗಳು ನಿಮಗೆ ಸಿಗುವಂತಾಗಬೇಕು. ನಿಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸ, ಕಲಿಕೆಗೆ ಏನೆಲ್ಲಾ ಸಮಸ್ಯೆಗಳಿದೆಯೋ ಅದಕ್ಕೆ ನಮ್ಮಿಂದಾಗುವ ಸಹಾಯ ಮಾಡುತ್ತೇವೆ ಎಂದು ಅವರಿಗೆ ತಿಳಿಹೇಳಿದ್ದೇವೆ. ಶಾಲೆಗಳಿಗೆ ಕಟ್ಟಡ ಕಟ್ಟಲು ಶಿಕ್ಷಣ ಇಲಾಖೆಗೆ ಸಾಕಷ್ಟು ಪತ್ರ ಬರೆದ್ವಿ. ಯಾವುದೇ ಸ್ಪಂದನೆ ಬರಲಿಲ್ಲ. ನನ್ನ ಸ್ನೇಹಿತ ವರ್ಗ ಮತ್ತು ಯಲ್ಲಾಪುರದ ರಾಜೇಶ್ವರಿ ಸಿದ್ದಿ, ಅನಂತ್ ಸಿದ್ದಿ, ಅಂಕೋಲದ ಮಂಜುನಾಥ್ ಗೌಡ, ಜೋಯಿಡಾದ ಯಶವಂತ ನಾಯ್ಕ ಇನ್ನೂ ಹಲವರ ಸಹಕಾರದೊಂದಿಗೆ ವನಚೇತನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ'.
'2006ರಿಂದ 2018ರವರೆಗೆ ಅಂತರಾಷ್ಟ್ರೀಯ ಗಾಳಿಪಟ ಹಬ್ಬಕ್ಕೆ ಹೋಗುತ್ತಿದ್ದೆ. ದೆಹಲಿ, ಇಟಲಿ, ಫ್ರಾನ್ಸ್ ಗೆ ಏಳು ಸಲ ಹೋಗಿದ್ದೇನೆ. ಅದು ಜಗತ್ತಿನಲ್ಲಿ ಗಾಳಿಪಟದ ದೊಡ್ಡ ಹಬ್ಬ. ಅಲ್ಲಿ ನಾನು ಮಾಡಿದ ಗಾಳಿಪಟ, ನನ್ನಲ್ಲಿರುವ ಕಲೆಯಿಂದ ಮಕ್ಕಳಿಗೆಲ್ಲ ಕಾರ್ಯಾಗಾರ ಮಾಡಿದ ನಂತರ, ಅಲ್ಲಿ ನನಗೆ ಕಲಾಪ್ರದರ್ಶನ ಮಾಡಲು ಅವಕಾಶ ಸಿಗತ್ತೆ. ಅಲ್ಲಿ ನನ್ನ ನಲವತ್ತೆರೆಡು ವರ್ಕ್ ಮಾರಾಟ ಆಗತ್ತೆ. ಯುಎಸ್ಎ, ಇಂಗ್ಲೆಂಡ್, ಆಸ್ರ್ಟೇಲಿಯಾ, ಜರ್ಮನಿಯ ಬೇರೆ ಬೇರೆ ದೇಶದವರು ಕೊಂಡುಕೊಳ್ಳುತ್ತಾರೆ. ಅದರಲ್ಲಿ 30% ಆದಾಯವನ್ನು ಮಕ್ಕಳ ವನಚೇತನ ಕಾರ್ಯಕ್ರಮಕ್ಕಾಗಿ ಮೀಸಲಿಟ್ಟಿದ್ದೆ. ಇಲ್ಲಿಯವರೆಗೆ ಒಟ್ಟು ನೂರಾಮೂವತ್ತಾರು ಶಾಲೆಗಳಲ್ಲಿ ವನಚೇತನ ಕಾರ್ಯಕ್ರಮ ಮಾಡಿ ಆ ಶಾಲೆಗೆ ಅಗತ್ಯವಿರುವ ಪರಿಕರಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದಕ್ಕೆ ಕಾರಣರಾದ, ಜೊತೆಯಾದ ನನ್ನೆಲ್ಲಾ ಸ್ನೇಹಿತ ವರ್ಗಕ್ಕೆ ತುಂಬು ಪ್ರೀತಿಯ ಧನ್ಯವಾದಗಳು'.
ಅಡವಿಯ ಬುಡಕಟ್ಟು ಸಮುದಾಯದ ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳೊಂದಿಗೆ ಆಟ ಪಾಠಗಳ ಜೊತೆ ಜ್ಞಾನ ವಿಕಸನ. ವನಚೇತನ ಯಾವುದೇ ಶಾಲೆಗೆ ಹೋದರೂ ಅಲ್ಲಿನ ಶಾಲೆಗಳಲ್ಲಿ ಶಿಕ್ಷಣಕ್ಕೆ ಏನೆಲ್ಲಾ ಅಗತ್ಯ ಸೌಕರ್ಯಗಳ ಅವಶ್ಯಕತೆ ಇದೆ ಎಂಬುದನ್ನು ಶಾಲಾ ಶಿಕ್ಷಕರಿಂದ ಮನವಿ ಪತ್ರ ಪಡೆದುಕೊಂಡು ಕಾಡಂಚಿನ ಬುಡಕಟ್ಟು ಸಮುದಾಯದ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿರುವ ಮಕ್ಕಳೊಂದಿಗೆ ಮಕ್ಕಳಾಗುವ ದಿನೇಶ್ ಹೊಳ್ಳ ಅವರಿಗೆ ಅಭಿನಂದನೆಗಳು. ಇವರ 'ವನಚೇತನ'ಕ್ಕೆ ನಿರಂತರ ನವಚೇತನ ದೊರೆತು ವಿಸ್ತಾರವಾಗಲಿ. ಅವರಿಗೆ ಸಿಗುತ್ತಿರುವ ಬೆಂಬಲ, ಸಹಕಾರ ಇನ್ನಷ್ಟು ಹೆಚ್ಚಾಗಲಿ. ಕಡೆಗಣನೆಗೆ ಒಳಗಾದ ಅಲ್ಲಿನ ಕಾಡಿನ, ಬುಡಕಟ್ಟು ಸಮುದಾಯಗಳ ಮಕ್ಕಳು ಸಂಸ್ಕಾರ, ಶಿಕ್ಷಣ, ಉದ್ಯೋಗ ಪಡೆದು ಸ್ವಾವಲಂಬಿಗಳಾಗಲಿ ಎಂಬುದು ನಮ್ಮ ಆಶಯ.
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಬರಹಗಳು:
ಸಮುದಾಯ, ಸಂಸ್ಕೃತಿಗಳ ಸಮ್ಮಿಶ್ರಣವೇ ಭಾರತ
ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಯಿಂದ ಹೊರಬಂದ ಮಂಜುಳ ಮಾಳ್ಗಿ
ಮಹಾಂತೇಶ್ ಅವರ ಹಾಡುಪಾಡು ಬದುಕಿನ ನೋಟ
ಗುರಿ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ಮುಟ್ಟುವುದೇ ಮುಖ್ಯ
ರಂಗಭೂಮಿ ನನ್ನ ಬದುಕನ್ನು ಚೆಂದವಾಗಿ ರೂಪಿಸಿದೆ: ಪ್ರಶಾಂತ್ ಕುಮಾರ್
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ
ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್
ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.